An unconventional News Portal.

  ...
  Bill and Hillary clinton
  ಫೋಕಸ್

  ಇದು ‘ಪತಿ- ಪತ್ನಿ’ ಸಂಬಂಧ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆಯಲ್ಲಿ ಮರುಕಳಿಸಿದ ಅನುಬಂಧ!

  ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣ ನಿಧಾನವಾಗಿ ಕಾವೇರುತ್ತಿದೆ. ಬಲಾಢ್ಯ ರಾಷ್ಟ್ರದ ಮೊದಲ ಅಧ್ಯಕ್ಷೆಯಾಗಲು ಹೊರಟಿರುವ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಖಾಡಕ್ಕಿಳಿದಿದ್ದಾರೆ. ಪತಿ-ಪತ್ನಿಯರ ಜುಗಲ್ ಬಂದಿ ಪ್ರಚಾರ ಅಮೆರಿಕಾದಲ್ಲೀಗ ಸದ್ದು ಮಾಡುತ್ತಿದೆ. ಚುನಾವಣೆ ಸಮೀಪಿಸುತ್ತಿದೆ. ರಿಪಬ್ಲಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಆಕ್ರಮಣಕಾರಿ ಪ್ರಚಾರಕ್ಕಿಳಿದಿದ್ದರೆ, ಆಡಳಿತರೂಢ ಡೆಮಾಕ್ರಾಟಿಕ್ ಪಕ್ಷದ ಪರವಾಗಿ ಹಿಲರಿ ಕ್ಲಿಂಟನ್ ಕಣಕ್ಕಿಳಿದ್ದಿದ್ದಾರೆ. ತಮ್ಮ ಸಹೋದ್ಯೋಗಿ ಪರ ಪ್ರಚಾರಕ್ಕೆ ಸ್ವತಃ ಅಧ್ಯಕ್ಷ ಬರಾಕ್ ಒಬಾಮ ಪ್ರಚಾರಕ್ಕಿಳಿದಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಸುದ್ದಿಯಾಗುತ್ತಿರುವುದು..

  July 27, 2016
  ...
  Siddaramayya family photo
  ರಾಜ್ಯ

  ಬೆಲ್ಜಿಯಂನಲ್ಲಿ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: ಸಿಎಂ ಪ್ರೀತಿಯ ಪುತ್ರನಿಗೆ ಏನಾಯಿತು?

  ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ವಿದೇಶದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಮಾಹಿತಿ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ರಾಕೇಶ್ ಬೆಲ್ಜಿಯಂಗೆ ಹೋಗಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈಗಾಗಲೇ ಇಬ್ಬರು ವೈದ್ಯರ ಜತೆ ಸಿಎಂ ಪತ್ನಿ ಪಾರ್ವತಮ್ಮ ಬೆಲ್ಜಿಯಂ ತಲುಪಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಆತಂಕ್ಕೆ ಒಳಗಾಗಿದ್ದು, ತಮ್ಮ ಪ್ರೀತಿಯ ಪುತ್ರನ ಅನಾರೋಗ್ಯದ ಬಗ್ಗೆ ಕಳವಳಕ್ಕೆ ಈಡಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅವರೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ ಸಹಾಯ ಯಾಚಿಸಿದ್ದಾರೆ. ನಂತರ, ಬೆಲ್ಜಿಯಂನಲ್ಲಿರುವ..

  July 27, 2016
  ...
  irom-sharmila-1
  ದೇಶ

  ಚುನಾವಣಾ ಅಖಾಡಕ್ಕೆ ಶರ್ಮಿಳಾ: 16 ವರ್ಷಗಳ ಉಪವಾಸಕ್ಕೆ ಅಂತ್ಯ ಹಾಡಿದ ‘ಉಕ್ಕಿನ ಮಹಿಳೆ’!

  ಹರ್ಷಕುಮಾರ್ ಕುಗ್ವೆ ಮಣಿಪುರದ ‘ಐರನ್ ಲೇಡಿ’ ಎಂದೇ ಕರೆಯಲಾಗುವ ಇರೋಮ್ ಶರ್ಮಿಳಾ ಇದೇ ಆಗಸ್ಟ್ 9 ರಂದು ತನ್ನ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾಳೆ. ಇದು ದೇಶದಲ್ಲಿ; ವಿಶೇಷವಾಗಿ ಮಣಿಪುರದಲ್ಲಿ ಸಂಚಲನ ಮೂಡಿಸಿದೆ. ಯಾಕೆಂದರೆ ತನ್ನ ಈ ಉಪವಾಸದ ಕಾರಣದಿಂದಾಗಿಯೇ ಜಗತ್ತಿನ ಜನರ ಗಮನ ಸೆಳೆದಾಕೆ ಇರೋಮ್ ಶರ್ಮಿಳಾ. ತಾನು ನಡೆಸಿಕೊಂಡು ಬಂದಿದ್ದ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮೊದಲೇ ಉಪವಾಸ ಸತ್ಯಾಗ್ರಹ ಕೈ ಬಿಡುವ ನಿರ್ಧಾರ ಕೈಗೊಂಡಿರುವುದು ಹಲವರ ಹುಬ್ಬೇರಲು ಕಾರಣವಾಗಿದೆ. ತನ್ನ ಉಪವಾಸ..

  July 27, 2016
  ...
  solar impulse 2
  ಪಾಸಿಟಿವ್

  ಹನಿ ಪೆಟ್ರೋಲ್ ಬಳಸದೆ ವಿಮಾನ ಓಡಿಸಿದರು; ವಿಶ್ವಕ್ಕೆ ಸಂದೇಶ ಸಾರಿದರು!

  ಬಹುನಿರೀಕ್ಷಿತ ‘ಸೋಲಾರ್ ಇಂಪಲ್ಸ್’ ಮಂಗಳವಾರ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಳಿಯುವುದರೊಂದಿಗೆ ವಿಶಿಷ್ಟ ದಾಖಲೆಯೊಂದು ನಿರ್ಮಾಣವಾಯಿತು. ಬಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬಾರ್ಶ್‍ಬರ್ಗ್ ಹನಿ ಪಟ್ರೋಲನ್ನೂ ಬಳಸದೆ, ಕೇವಲ ಸೂರ್ಯನ ಶಕ್ತಿಯ ಬಳಸಿ ವಿಮಾನದಲ್ಲಿ ವಿಶ್ವಪರ್ಯಟನೆ ಮಾಡಿ ಹುಬ್ಬೇರಿಸುವ ಸಾಧನೆ ಮಾಡಿದರು. 500ಕ್ಕೂ ಹೆಚ್ಚು ದಿನಗಳ 35,400 ಕಿಲೋಮೀಟರುಗಳ ಅವರ ಪಯಣದ ಕತೆ ಇದು. ಸೂರ್ಯನ ಬೆಳಕಿನಲ್ಲಿ ಕಾರು, ಆಟೋ ರಿಕ್ಷಾಗಳು ಓಡುವುದಾದರೆ; ವಿಮಾನ ಯಾಕೆ ಓಡಾಡಬಾರದು ಎಂದು ಪ್ರಶ್ನೆ ಹಾಕಿಕೊಂಡವರು ಬಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬಾರ್ಶ್‍ಬರ್ಗ್. ಬಾರ್ಶ್‍ಬರ್ಗ್ ಸ್ವಿಡ್ಜರ್ಲಾಂಡಿನ ಖ್ಯಾತ ಉದ್ಯಮಿ..

  July 27, 2016

Top