An unconventional News Portal.

    ...
    Auto copy
    ರಾಜ್ಯ

    ‘ಬಸ್ ಬಂದ್’: ವೃತ್ತಿಪರತೆ ಮೆರೆದ ಆಟೋ ಚಾಲಕರು; ‘ಓಲಾ’, ‘ಉಬರ್’, ‘ರೆಡ್ ಬಸ್’ಗಳಿಗೂ ದಕ್ಕದ ಲಾಭ!

    ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸೋಮವಾರದ ಬಂದ್ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿತು. ಆದರೆ ಇಂತಹ ಸಂದರ್ಭಗಳಲ್ಲಿ ‘ಸುಲಿಗೆ’ಗೆ ಇಳಿಯುತ್ತಾರೆ ಎಂದು ಈವರೆಗೆ ಆರೋಪ ಹೊತ್ತುಕೊಂಡಿದ್ದ ಆಟೋ ಚಾಲಕರು ಸಮಚಿತ್ತದ ನಡವಳಿಕೆ ಗಮನಾರ್ಹವಾಗಿತ್ತು. ‘ಸುಲಿಗೆ’ಗೆ ಅನ್ವರ್ಥ ನಾಮ ಎಂದೇ ಗುರುತಿಸಿಕೊಂಡಿದ್ದ ಆಟೋ ಚಾಲಕರು ಎಂದಿನ ದರದಲ್ಲಿ ರಿಕ್ಷಾ ಓಡಿಸಿ ಮಾನವೀಯತೆ ಮೆರೆದರೆ, ಉಳಿದ ಖಾಸಗಿ ಸಾರಿಗೆಗಳೂ ಇದೇ ದಾರಿ ಹಿಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಬಾರಿಯ ಬಂದ್ ವಿಶೇಷ. ಸೋಮವಾರ ಬೆಳಗ್ಗೆ ಬೆಂಗಳೂರಿನ ರಸ್ತೆಗಳಿಗೆ ಇಳಿದವರಿಗೆ ಬಸ್ಸುಗಳ ಬದಲಾಗಿ ಎಲ್ಲಿ ನೋಡಿದರೂ ಆಟೋಗಳೇ ಕಾಣಿಸುತ್ತಿದ್ದವು…

    July 25, 2016
    ...
    KSRTC Strike
    ರಾಜ್ಯ

    ಮಂಗಳವಾರವೂ ‘ಬಸ್ ಬಂದ್’: ನಡೆಯದ ದ್ವಿಪಕ್ಷೀಯ ಮಾತುಕತೆ; ಸಂಕಷ್ಟಗಳ ಮುಂದುವರಿಕೆ

    ಸರಕಾರಿ ಸಾರಿಗೆ ಸಂಸ್ಥೆಗಳ ಕಾರ್ಮಿಕ ಒಕ್ಕೂಟಗಳು ಕರೆ ನೀಡಿರುವ ‘ಬಸ್ ಬಂದ್’ ಮಂಗಳವಾರವೂ ಮುಂದುವರಿಯಲಿದೆ. ಸೋಮವಾರ ಸಂಜೆವರೆಗೆ ಸರಕಾರದ ಮಟ್ಟದಲ್ಲಿ ಕಾರ್ಮಿಕರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಿತು. ಆದರೆ, ಸರಕಾರ ಮತ್ತು ಕಾರ್ಮಿಕ ಸಂಘಟನೆಗಳ ಜತೆಯಲ್ಲಿ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ. ರಾಜ್ಯಾದ್ಯಂತ ಸರಕಾರಿ ಬಸ್ ಸೇವೆ ಸೋಮವಾರ ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು, ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರದಾಡುವಂತಾಗಿತ್ತು. ಇದೇ ಸ್ಥಿತಿ ಮಂಗಳವಾರವೂ ಮುಂದುವರಿಯುವ ಸಾಧ್ಯತೆಗಳೀಗ ನಿಚ್ಚಳವಾಗಿವೆ. ಯಾರ ಜತೆ..

    July 25, 2016
    ...
    bus-strike-shanthinagar-1
    ರಾಜ್ಯ

    ‘ಬಸ್ ಬಂದ್’: ಸಾರಿಗೆ ಮುಷ್ಕರದ ಹಿಂದಿರುವ ‘ಸುತ್ತೋಲೆ 758’ ಮತ್ತು ಇತರೆ 9 ಕಾರಣಗಳು!

    ರಾಜ್ಯದ ನಾಲ್ಕು ಸರಕಾರಿ ಬಸ್ ಸಾರಿಗೆ ನಿಗಮಗಳಲ್ಲಿ ನೌಕರರು ಹಾಗೂ ಸಿಬ್ಬಂದಿಗಳು ಕರೆ ನೀಡಿರುವ ‘ಬಸ್ ಬಂದ್’ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಸೋಮವಾರ ಮುಂಜಾನೆ ಹೊತ್ತಿಗೆ ಬೆಂಗಳೂರಿನಲ್ಲಿ ಬಿಎಂಟಿಸಿಯ ಎಲ್ಲಾ ಬಸ್ಗಳು ರಸ್ತೆಯಿಂದ ಹೊರಗುಳಿದಿವೆ. ಕೆಎಸ್ಆರ್ಟಿಸಿ ಬಸ್ಸುಗಳು ಪರಿಸ್ಥಿತಿ ಕೂಡ ಇದೇ ಇದೆ. ಉತ್ತರ ಕರ್ನಾಟಕದಲ್ಲಿಯೂ ಸರಕಾರಿ ಬಸ್ಗಳನ್ನು ರಸ್ತೆಗೆ ಇಳಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಒಟ್ಟಾರೆ, ರಾಜ್ಯದ ಎಲ್ಲಾ ಭಾಗಗಳಿಂದ ಸದ್ಯಕ್ಕೆ ಬರುತ್ತಿರುವ ಮಾಹಿತಿ ನೋಡಿದರೆ, ‘ಬಸ್ ಬಂದ್’ ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಭಾನುವಾರ ಸಂಜೆ ಹೊತ್ತಿಗೇ ಬಂದ್..

    July 25, 2016

Top