An unconventional News Portal.

  ...

  ಗುಜರಾತ್ ದಲಿತರ ಮೇಲಿನ ಹಲ್ಲೆ ಪ್ರಕರಣ: ಟೀಕೆಗೆ ಒಳಗಾದ ಪ್ರಧಾನಿ ‘ಮೋದಿ ಮೌನ’!

  ಗುಜಾರಾತಿನಲ್ಲಿ ದಲಿತರ ಮೇಲೆ ಗೋ ರಕ್ಷಕರು ನಡೆಸಿದ ಹಲ್ಲೆ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ. ದೇಶಾದ್ಯಂತ ವ್ಯಾಪಕ ಖಂಡಿನೆಗೆ ಒಳಗಾಗಿದೆ. ಹೀಗಿದ್ದೂ ಪ್ರಧಾನಿ ಮೋದಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಈ ವಿದ್ಯಮಾನಕ್ಕೆ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಗುಜರಾತಿನ ಉನಾದಲ್ಲಿ ನಾಲ್ವರು ದಲಿತ ಯುವಕರ ಮೇಲೆ ಹಲ್ಲೆ ನಡೆದು ಎರಡು ವಾರವಾಗುತ್ತಾ ಬಂದಿದೆ. ಒಂದು ಕಾಲಕ್ಕೆ ಗುಜರಾತ್ ರಾಜ್ಯವನ್ನು ಇಟ್ಟುಕೊಂಡು ಪ್ರಧಾನಿ ಮೋದಿ ಇಡೀ ದೇಶಕ್ಕೆ ‘ಮಾದರಿ […]

  July 23, 2016
  ...

  ‘ಒನ್ ಇಂಡಿಯಾ’ದಲ್ಲಿ ‘ಡೈಲಿಹಂಟ್’ ಹೂಡಿಕೆ: ಏನಿದು ಆನ್ಲೈನ್ ಲೆಕ್ಕಾಚಾರ?

  ದೇಶದಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ದಿಗ್ಗಜ ಕಂಪೆನಿಗಳೆರಡು ಕೈ ಜೋಡಿಸಿವೆ. ಆ್ಯಪ್ಗಳಲ್ಲಿ ಸುದ್ದಿ ನೀಡುವಲ್ಲಿ ನಿಸ್ಸೀಮವಾಗಿರುವ ಡೈಲಿಹಂಟ್, ಕರ್ನಾಟಕ ಮೂಲದ ಆನ್‌ಲೈನ್‌ ಲೀಡಿಂಗ್ ಕಂಪೆನಿ ‘ಒನ್ ಇಂಡಿಯಾ’ದಲ್ಲಿ ಹೂಡಿಕೆ ಮಾಡಿದೆ. ಸದ್ಯ ಆನ್‌ಲೈನಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಕನ್ನಡ ಸೇರಿದಂತೆ ಭಾರತದ ಪತ್ರಿಕೋದ್ಯಮ ಭವಿಷ್ಯದ ಬಗ್ಗೆ ಮುನ್ನೋಟ ನೀಡುತ್ತಿವೆ. ಕಳೆದೊಂದು ವರ್ಷದಿಂದ ದೇಶದಲ್ಲಿ ಹೊಸ ಹೊಸ ನ್ಯೂಸ್ ಪೋರ್ಟಲ್ಗಳು ಯಶಸ್ಸಿನತ್ತ ಮುನ್ನಡೆಯುತ್ತಿವೆ. ಈ ಕುರಿತು ರಾಯಟರ್ಸ್ ನಡೆಸಿದ ಸಂಶೋಧನೆ ಕುರಿತಾದ ಲೇಖನವೊಂದನ್ನು ಈ ಹಿಂದೆ ‘ಸಮಾಚಾರ’ ಪ್ರಕಟಿಸಿತ್ತು. […]

  July 23, 2016
  ...

  ಕಾಣೆಯಾದ ಭಾರತೀಯ ವಾಯು ಸೇನೆ ವಿಮಾನ: ‘ಹುಡುಕಾಟ’ದ ಹಿಂದಿನ ಇಂಟರೆಸ್ಟಿಂಗ್ ಕತೆಗಳು!

  ವಾಯು ಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ಬೆಳಗ್ಗೆಯಿಂದ ನಾಪತ್ತೆಯಾಗಿದೆ. ನಾಪತ್ತೆಯಾಗುವ ಮೊದಲು ಈ ವಿಮಾನ ಬಂಗಾಳಕೊಲ್ಲಿಯ ಮೇಲೆ ಹಾರಾಡುತ್ತಿತ್ತು. ಎಲ್ಲಾ ವಿಮಾನಗಳು ನಾಪತ್ತೆಯಾದಾಗಲೂ ಚಾಲ್ತಿಗೆ ಬರುವಂತೆ ಇಲ್ಲೂ ಊಹಾಪೋಹ ಅನುಮಾನಗಳು ಚಾಲ್ತಿಗೆ ಬಂದಿವೆ. ಚೆನ್ನೈನಿಂದ ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್’ಗೆ 4 ಅಧಿಕಾರಿಗಳು ಹಾಗೂ 29 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಎನ್-32 ವಿಮಾನ ಬಂಗಾಳ ಕೊಲ್ಲಿ ಸಮುದ್ರದ ಮೇಲೆ ಹಾರಾಡುತ್ತಿದ್ದಾಗ ಸಂಪರ್ಕ ತಪ್ಪಿ ಕಣ್ಮರೆಯಾಗಿದೆ. ಸದ್ಯ ಇಲ್ಲಿವರೆಗೆ ಇದರ ಹಣೆಬರಹ ವರದಿಯಾಗಿಲ್ಲ. ಹಾರಾಟದ ವೇಳೆಯಲ್ಲಿಯೇ ತಂತ್ರಜ್ಞಾನದ ಸಂಪರ್ಕಗಳನ್ನು ಮೀರಿ […]

  July 23, 2016

Top