An unconventional News Portal.

  ...

  ಮಾಯಾವತಿಗೆ ಅವಮಾನ: ಹುದ್ದೆ ಕಿತ್ತುಕೊಂಡ ಬಿಜೆಪಿ

  ಬಿಎಸ್ಪಿ ನಾಯಕಿ ಮಾಯಾವತಿಯನ್ನು ವೇಶ್ಯೆಗಿಂತಲೂ ಕಡೆ ಎಂದು ಹೇಳಿ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ವಿವಾದ ಹುಟ್ಟುಹಾಕಿದ್ದಾರೆ. ಸದ್ಯ ಅವರನ್ನು ಉಪಾಧ್ಯಕ್ಷ ಹುದ್ದೆಯಿಂದ ಕಿತ್ತೊಗೆದಿರುವ ಬಿಜೆಪಿ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದೆ. ಒಂದು ವಾರದ ಹಿಂದೆ ಗುಜರಾತಿನಲ್ಲಾದ ದಲಿತರ ಮೇಲಿನ ಹಲ್ಲೆಯ ವಿರುದ್ಧ ಮಾಯಾವತಿ ಬಿಜೆಪಿಯನ್ನು ಕಟು ಶಬ್ದಗಳಿಂದ ಝಾಡಿಸಿದ್ದರು. ಈ ವೇಳೆ ಮಾಯವತಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ದಯಾಶಂಕರ್ ಸಿಂಗ್ ಎಲ್ಲೆ ಮೀರಿ ಮಾತನಾಡಿದ್ದರು. ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು “ಮಾಯಾವತಿ ಟಿಕೆಟು (ಚುನಾವಣಾ) […]

  July 20, 2016
  ...

  ‘ಹಂಡಿಭಾಗ್ ಆತ್ಮಹತ್ಯೆ ಪ್ರಕರಣ’: ಸರಣಿ ಬಂಧನ ಭೀತಿಯಲ್ಲಿ ಚಿಕ್ಕಮಗಳೂರು ಭಜರಂಗದಳ!

  ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ತನಿಖೆ ಚಿಕ್ಕಮಗಳೂರಿನ ಭಜರಂಗದಳದ ಒಳಗೆ ಭಯದ ವಾತಾವರಣವೊಂದನ್ನು ಹುಟ್ಟು ಹಾಕಿದೆ. ಕಳೆದ ಒಂದು ವಾರದಿಂದ ಮುಖ್ಯವಾಹಿನಿಯಿಂದ ‘ಹಂಡಿಭಾಗ್ ಆತ್ಮಹತ್ಯೆ ಪ್ರಕರಣ’ ನಾಪತ್ತೆಯಾಗಿತ್ತು. ಆದರೆ, ಸ್ಥಳೀಯ ಮಟ್ಟದಲ್ಲಿ ಸಿಐಡಿ ಅಧಿಕಾರಿಗಳು ಭಜರಂಗದಳದ ಪ್ರವೀಣ್ ಖಾಂಡ್ಯನನ್ನು ಕೇಂದ್ರವಾಗಿಟ್ಟುಕೊಂಡು ತನಿಖೆ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯ ಪೊಲೀಸರಿಂದ ಖಾಂಡ್ಯ ತಲೆ ಮರೆಸಿಕೊಂಡಿದ್ದಾನೆ. ಹೀಗಾಗಿ, ಆತನ ಸಹಚರರು, ಸಂಘಟನೆಯಲ್ಲಿ ಆತನ ಜತೆ ಆಪ್ತತೆ ಹೊಂದಿರುವವರನ್ನು ವಿಚಾರಣೆಗಾಗಿ ಕರೆತರಲಾಗುತ್ತಿದೆ. ಹೀಗೆ ಕರೆ ತಂದವರ ಪೈಕಿ ಎರಡು ದಿನಗಳ ಹಿಂದೆ ಭಜರಂಗದಳದಲ್ಲಿ 2 ದಶಕಗಳಿಂದ […]

  July 20, 2016
  ...

  ತಿರುಪತಿ ಲಡ್ಡು ಬಿಜಿನೆಸ್: ಬೆಳೆದು ನಿಂತ ‘ಪ್ರಸಾದೋದ್ಯಮ’ ನಿಯಂತ್ರಣಕ್ಕೆ ತಂತ್ರಜ್ಞಾನದ ನೆರವು!

  ಮನುಷ್ಯನ ನಾಗರಿಕತೆಯ ಬೆಳವಣಿಗೆಯಲ್ಲಿ ಕಂಡುಕೊಂಡ ಹಲವು ಉದ್ಯಮಗಳಲ್ಲಿ ಆಹಾರ ಕೂಡ ಒಂದು. ಅದೇ ಆಹಾರೋದ್ಯಮಕ್ಕೆ, ಧಾರ್ಮಿಕ ಭಾವನೆಗಳೂ ಬೆರೆತು ಹೋದರೆ ಏನಾಗಬಹುದು? ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ಇವತ್ತಿನ ತಿರುಪತಿ ಲಡ್ಡು ಮತ್ತು ಅದರ ಹಿಂದಿನ ಕತೆಯನ್ನು ನೋಡಬೇಕಿದೆ. ತಿರುಪತಿ ಲಡ್ಡು, ಅದರ ಇತಿಹಾಸ, ಇವತ್ತು ಅಗಾಧ ಪ್ರಮಾಣದಲ್ಲಿ ಬೆಳೆದಿರುವ ಮಾರುಕಟ್ಟೆ, ಅದನ್ನು ನಿಭಾಯಿಸಲು ದೇವಸ್ಥಾನ ಮಂಡಳಿ ನಡೆಸುತ್ತಿರುವ ತಂತ್ರಜ್ಞಾನದ ಕಸರತ್ತುಗಳ ಸುತ್ತ ಭಿನ್ನ ಒಳನೋಟಗಳನ್ನು ಇಲ್ಲಿ ಕಟ್ಟಿ ಕೊಡಲಾಗಿದೆ. ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಭಾರತದಲ್ಲೇ ಜನಪ್ರಿಯ. ಇದರ ರುಚಿಗೆ […]

  July 20, 2016
  ...

  ಆಮ್ ಆದ್ಮಿ ಕುಲುಮೆಯೊಳಗೆ ಅಸಮಾಧಾನದ ಕುದಿ: ಹೊರಬಿದ್ದ ನಾಯಕರ ನಡುವಿನ ‘ಶೀತಲ ಸಮರ’

  ಅತ್ತ ಪಂಜಾಬ್ ಚುನಾವಣೆಯ ಕಾವು ಏರುತ್ತಿರುವ ಹೊತ್ತಿಗೆ ಕರ್ನಾಟಕದ ಆಮ್ ಆದ್ಮಿ ಪಕ್ಷದೊಳಗೆ ಅಸಮಾಧಾನ ಹೊಗೆಯಾಡಲು ಶುರುವಾಗಿದೆ. ಪಕ್ಷದ ರಾಜ್ಯ ಸಹಸಂಚಾಲಕ ರವಿಕೃಷ್ಣಾ ರೆಡ್ಡಿ ಅವರಿಗೆ ಪಕ್ಷದ ಹೊಣೆಗಾರಿಕೆಯಿಂದ ಕೆಲವು ದಿನಗಳ ಮಟ್ಟಿಗೆ ಹೊರಗಿಡಲು ಪಕ್ಷದ ರಾಜ್ಯ ಸಮಿತಿ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ಧಾರವಾಡದಲ್ಲಿ ‘ಪರ್ಯಾಯ ಚಳವಳಿ’ ಹುಟ್ಟು ಹಾಕಲು ನಡೆದ ಸಮಾರಂಭ ಮತ್ತು ಅದರಲ್ಲಿ ಪಾಲ್ಗೊಳ್ಳುವಿಕೆಯ ವಿಚಾರ. ಪಕ್ಷದ ಈ ಆಂತರಿಕ ಬೇಗುದಿಯನ್ನು ಸ್ವತಃ ರವಿಕೃಷ್ಣಾ ರೆಡ್ಡಿ ಬಹಿರಂಗಪಡಿಸಿದ್ದಾರೆ. ಸದ್ಯ ಈ ಹೊಸ ಬೆಳವಣಿಗೆಯನ್ನು […]

  July 20, 2016

Top