An unconventional News Portal.

  ...
  IMG-20160719-WA0007
  ಸುದ್ದಿ ಸಾರ

  ಬೆಂಗಳೂರಿನಲ್ಲಿ ಮಹಿಳಾ ಪಿಎಸ್ಐ ಆತ್ಮಹತ್ಯೆಗೆ ಯತ್ನ

  ರಾಜ್ಯ ಪೊಲೀಸ್ ಇಲಾಖೆಯಿಂದ ಮತ್ತೊಂದು ಆತ್ಮಹತ್ಯೆ ಸಂಬಂಧಿತ ಪ್ರಕರಣ ಕೇಳಿ ಬಂದಿದೆ. ಬೆಂಗಳೂರಿನ ವಿಜಯನಗರ ಠಾಣಾ ಮಹಿಳಾ ಪಿಎಸ್ಐ ರೂಪಾ ತಂಬದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳಾರ ಮಧ್ಯಾಹ್ನ ನಡೆದಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಸಬ್‍ಇನ್‍ಸ್ಪೆಕ್ಟರ್ ಆಗಿರುವ ರೂಪಾ ತಂಬದ ಠಾಣೆಯಲ್ಲೇ 23 ಮಾತ್ರಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಠಾಣಾಧಿಕಾರಿ ಸಂಜೀವ್ ಗೌಡ ಮತ್ತು ರೂಪಾ ನಡುವಿನ ವೃತ್ತಿ ಸಂಬಂಧಿತ ಮನಸ್ತಾಪವೇ ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿವೆ. ಮೊಬೈಲ್ ಕಳವು ಪ್ರಕರಣವೊಂದರಲ್ಲಿ ಎಫ್ಐಆರ್ ದಾಖಲಿಸದ..

  July 19, 2016
  ...
  Siddaramaiah_Parameshwara-3x2_0
  ಸುದ್ದಿ ಸಾರ

  ‘ನಾವೂ ಜನರ ಬಳಿ ಹೋಗುತ್ತೇವೆ’: ಪತ್ರಿಕಾಗೋಷ್ಠಿಯ ಪೂರ್ಣಪಾಠ

  ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡರು… ಇದು ಸೋಮವಾರ ನಡೆದ ಮಹತ್ವದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟ ನುಡಿಗಳು. ಪ್ರತಿಪಕ್ಷಗಳಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎನ್ನುತ್ತಲೇ ಮಾತು ಶುರು ಮಾಡಿದ ಅವರು ಅಂಕಿ ಅಂಶಗಳನ್ನು ಮುಂದಿಡುತ್ತಾ, ಸರಕಾರದ ನಿಲುವುಗಳನ್ನು ಸಮರ್ಥಿಸಿಕೊಂಡರು…

  July 19, 2016
  ...
  pellet-gun-aj
  ಸಮಾಚಾರ +

  ಕಾಶ್ಮೀರದಲ್ಲಿ ‘ಪೆಲೆಟ್ ಗನ್’ ಸೃಷ್ಟಿಸಿರುವ ಅಂಧಕಾರ; ನಿಲ್ಲದ ಹಿಂಸಾಚಾರ

  ಪ್ರತ್ಯೇಕತಾವಾದಿ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವನಿ ಸಾವಿನ ಬೆನ್ನಿಗೆ ಹತ್ತಿಕೊಂಡು ಬೆಂಕಿ ಕಾಶ್ಮೀರದ ಕಣಿವೆಯಲ್ಲಿ ಆರುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ 11 ದಿನಗಳಲ್ಲಿ ಕಾಶ್ಮೀರದಲ್ಲಿ ಬದುಕು ಮೂರಾಬಟ್ಟೆಯಾಗಿದೆ. 40 ಜನ ಜೀವ ಕಳೆದುಕೊಂಡಿದ್ದರೆ ಕಣ್ಣು, ಕೈ, ಕಾಲು ಕಳೆದುಕೊಂಡವರಿಗೆ ಲೆಕ್ಕವೇ ಇಲ್ಲ. ಸೈನಿಕರ ಪೆಲೆಟ್ ಗನ್ನಿಗೆ ಕಣ್ಣು ಕಳೆದುಕೊಂಡವರು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ರುದ್ರತಾಂಡವದ ಹಿಂದಿನ ಕಥೆಯನ್ನು ಬಿಚ್ಚಿಡುವ ವರದಿ ಇಲ್ಲಿದೆ. ಇನ್ಶಾ ಮುಸ್ತಾಕ್.. 14 ವರ್ಷದ ತರುಣಿ; ದಕ್ಷಿಣ ಕಾಶ್ಮಿರದವಳು. ಸದ್ಯ ಈಕೆ..

  July 19, 2016
  ...
  quandeel balooch
  ಸುದ್ದಿ ಸಾರ

  ಕಂಡೀಲ್ ಬಲೋಚ್ ಅಣ್ಣನಿಗಿಲ್ಲ ಕ್ಷಮಾದಾನ

  ಮೂರು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಸ್ವಂತ ಅಣ್ಣನಿಂದಲೇ ‘ಮರ್ಯಾದಾ ಹತ್ಯೆ’ಗೆ ಒಳಗಾದ ಕಂಡೀಲ್ ಬಲೋಚ್ ಪ್ರಕರಣದಲ್ಲಿ ಸರಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಕೊಲೆ ಆರೋಪವನ್ನು ಒಪ್ಪಿಕೊಂಡಿರುವ ಆಕೆಯ ಅಣ್ಣನಿಗೆ ಕುಟುಂಬ ಕ್ಷಮಾದಾನ ನೀಡಲು ಅವಕಾಶ ನೀಡದಿರಲು ತೀರ್ಮಾನಿಸಿದೆ. ಪಂಜಾಬ್ ಪ್ರಾಂಥ್ಯದಲ್ಲಿ ನಡೆದ ಬಹುತೇಕ ಮರ್ಯಾದೆ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾದವರಿಗೆ ಕುಟುಂಬದವರು ಕ್ಷಮಾದಾನ ನೀಡಿದರೆ ಬಿಟ್ಟು ಕಳುಹಿಸುವ ಕಾನೂನು ಜಾರಿಯಲ್ಲಿತ್ತು. ಆದರೆ, ಇದೀಗ ಕಂಡಿಲ್ ಪ್ರಕರಣ ವಿಶ್ವದ ಗಮನಸೆಳೆದಿರುವ ಹಿನ್ನೆಲೆಯಲ್ಲಿ ಆರೋಪಿ ಅಣ್ಣನಿಗೆ ಕುಟುಂಬದವರು ಕ್ಷಮಾದಾನ ನೀಡದಂತೆ ತಡೆಯಲಾಗಿದೆ..

  July 19, 2016
  ...
  Karnataka-Village_Golitottu copy
  ರಾಜ್ಯ

  ವಾಟ್ಸಾಪ್ ಗುಂಪಿಗೆ ಸಾರ್ವಜನಿಕ ಸೇವೆಯ ಸ್ಪರ್ಶ ನೀಡಿದ ಪಿಡಿಓ: ಪುಟ್ಟ ಹಳ್ಳಿಯಲ್ಲಿ ‘ತಿರುಪತಿ ಲೀಲೆ’!

  ಜನಸಂಪರ್ಕಕ್ಕೆ ವಾಟ್ಸಾಪ್ ಮೊರೆ ಹೋದ ದಕ್ಷಿಣ ಕನ್ನಡದ ಗೋಳಿತೊಟ್ಟು ಗ್ರಾಮ ಪಂಚಾಯ್ತಿಯ ಕಥೆ ಇದು. ಸರಕಾರ ಮತ್ತು ಜನರ ಮಧ್ಯೆ ಸಂಪರ್ಕ ಸೇತುವೆಯಾಗಿ ಇಲ್ಲಿ ವಾಟ್ಸಾಪ್ ಬಳಕೆಯಾಗುತ್ತಿದೆ. ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಜನರನ್ನು ತಲುಪಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮಾದರಿಯನ್ನು ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ನೆಲ್ಯಾಡಿ ಸಮೀಪದ ಸಣ್ಣ ಗ್ರಾಮ ಗೋಳಿತೊಟ್ಟು. ಸುಮಾರು 1800 ಜನ ಸಂಖ್ಯೆ ಇರುವ ಮೂರು ಹಳ್ಳಿಗಳನ್ನು ಒಳಗೊಂಡ ಗ್ರಾಮವಿದು. ಎಲ್ಲಾ..

  July 19, 2016
  ...
  13096199_1131281666922658_8171963303374800231_n
  ಪತ್ರಿಕೆ

  ಜೈಲು ಸೇರ್ತಾರಾ ರವಿ ಬೆಳೆಗೆರೆ?: ಹಕ್ಕುಚ್ಯುತಿ ಕಾನೂನಿನ ಬಗ್ಗೆ ಒಂದಿಷ್ಟು ಮಾಹಿತಿ…

  ಪತ್ರಕರ್ತ, ಖ್ಯಾತ ಲೇಖಕ ರವಿ ಬೆಳೆಗೆರೆ ಜೈಲಿಗೆ ಹೋಗಲಿದ್ದಾರಾ? ಹೀಗೊಂದು ಸುದ್ದಿ ಸೋಮವಾರವಿಡೀ ಓಡಾಡಿತು. ಸಚಿವ ಜಾರ್ಜ್ ರಾಜೀನಾಮೆ ಸುದ್ದಿ ಹೊರಬೀಳುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ, ಒಂದೆರಡು ನ್ಯೂಸ್ ಪೋರ್ಟಲ್ಗಳಲ್ಲಿ ರವಿ ಬೆಳೆಗರೆ ವಿರುದ್ಧ ಹಕ್ಕು ಬಾಧ್ಯತಾ ಸಮಿತಿ ಜೈಲು ಶಿಕ್ಷೆಯನ್ನು ಆದೇಶಿಸಿದೆ ಎಂದು ಸುದ್ದಿಯಾಯಿತು. ಆದೇಶ ನೀಡಲು ಹಕ್ಕು ಬಾಧ್ಯತಾ ಸಮಿತಿ ಏನು ನ್ಯಾಯಾಲಯನಾ? ಸರಕಾರನಾ? ಅದಕ್ಕೆ ಹಕ್ಕಿದೆಯಾ? ಇಷ್ಟಕ್ಕೂ ಹಕ್ಕು ಚ್ಯುತಿ ಅಂದರೇನು? ಈ ಎಲ್ಲಾ ಪ್ರಶ್ನೆಗಳಿಗಿಲ್ಲಿ ಉತ್ತರ ಇದೆ. ಶಾಸಕರೊಬ್ಬರ ವಿರುದ್ದ ರವಿ..

  July 19, 2016

Top