An unconventional News Portal.

  ...
  quandeel balooch
  ವಿದೇಶ

  ಮುಕ್ತ ಸಮಾಜದ ಕನಸು ಕಂಡಿದ್ದ ಈಕೆ ಪಾಲಿಗೆ ಧರ್ಮಾಂಧ ಅಣ್ಣನೇ ಕಂಟಕನಾದ!

  ಪಾಕಿಸ್ತಾನದಲ್ಲಿ ಭಾರಿ ವಿವಾದ ಹುಟ್ಟು ಹಾಕಿದ್ದ ಸೆಲೆಬ್ರಿಟಿ ಕ್ವಾಂಡಿಲ್ ಬಲೋಚ್ ದುರಂತ ಅಂತ್ಯ ಕಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪೋಸ್ಟ್ ಗಳು ಮತ್ತು ಹಸಿಬಿಸಿ ಚಿತ್ರಗಳಿಂದಲೇ ಸುದ್ದಿಯಾಗಿದ್ದ ಆಕೆಯನ್ನು ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ. ‘ಕ್ವಾಂಡಿಲ್ ಬಲೋಚ್ರನ್ನು ಆಕೆಯ ಸಹೋದರನೇ ಕೊಲೆ ಮಾಡಿದ್ದಾನೆ. ಇದೊಂದು ‘ಮರ್ಯಾದಾ ಹತ್ಯೆ’ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. 26 ವರ್ಷದ ಕ್ವಾಂಡಿಲ್ ಬಲೋಚ್ ತನ್ನ ಪೋಸ್ಟ್ ಗಳು ಮತ್ತು ಗಮನ ಸೆಳೆಯುವ ಚಿತ್ರಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಿದ್ದಾಕೆ. ಕಳೆದ ಟಿ-20 ವಿಶ್ವಕಪ್ ವೇಳೆ..

  July 16, 2016
  ...
  yCARpcoPjHM7U6XCJ386U21NAjVxIjeG
  ಸಮಾಚಾರ +

  ಮೂಲಭೂತವಾದಿ ನಾಯಕನ ಕೈಗೆ ದೇಶ ಕೊಟ್ಟರೆ ಏನಾಗುತ್ತದೆ? ಟರ್ಕಿ ಸಾಗಿ ಬಂದ ಹಾದಿಯಲ್ಲಿ…

  ಇಸ್ಲಾಂ ಬಹುಸಂಖ್ಯಾತ ದೇಶಗಳ ಜಗತ್ತಿನಲ್ಲಿ ಮೊದಲಿನಿಂದಲೂ ಟರ್ಕಿಗೆ ವಿಶಿಷ್ಟ ಸ್ಥಾನ. ಗಣರಾಜ್ಯವನ್ನು ಅಳವಡಿಸಿಕೊಂಡು ಯಶಸ್ಸು ಕಂಡ ಮುಸ್ಲಿಂ ದೇಶ ಎನ್ನುವ ಕಾರಣಕ್ಕೆ ಈ ದೇಶದತ್ತ ಹೆಚ್ಚಿನವರು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಸಿರಿಯಾ, ಇರಾಕ್ನಂತ ಯುದ್ಧ ಪೀಡಿತ ದೇಶಗಳೊಂದಿಗೆ ಗಡಿ ಹಂಚಿಕೊಂಡೂ ಸುಸ್ಥಿರವಾಗಿ ನಿಂತಿದ್ದು ಟರ್ಕಿಯ ಕಡಿಮೆ ಸಾಧನೆ ಏನಲ್ಲ. ಆದರೆ ಇದೀಗ ಟರ್ಕಿ ಅಸ್ಥಿರಗೊಳ್ಳುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಶುಕ್ರವಾರದ ಸೇನಾ ಕ್ಷಿಪ್ರ ಕ್ರಾಂತಿ ಅದರ ಭಾಗ ಅಷ್ಟೆ. ಮಧ್ಯ ಪೂರ್ವ ದೇಶಗಳು ಆಂತರಿಕ ಕಲಹದಿಂದ ನಲುಗುತ್ತಿದ್ದಾಗ ಎಲ್ಲರೂ ಟರ್ಕಿಯನ್ನು..

  July 16, 2016
  ...
  A man stands in front of a Turkish army tank at Ataturk airport in Istanbul, Turkey July 16, 2016.  REUTERS/IHLAS News Agency
  ಸುದ್ದಿ ಸಾರ

  ಟರ್ಕಿಯಲ್ಲಿ ಮಧ್ಯರಾತ್ರಿ ಕ್ಷಿಪ್ರ ಕ್ರಾಂತಿ: ಸೇನೆಯ ನಾಟಕೀಯ ನಡೆಗೆ 265ಕ್ಕೂ ಹೆಚ್ಚು ಸಾವು

  ಟರ್ಕಿಯಲ್ಲಿ ಸರಕಾರ ಉರುಳಿಸಲು ಅಲ್ಲಿನ ಸೇನೆ ನಡೆಸಿದ ನಾಟಕೀಯ ಕ್ಷಿಪ್ರ ಕ್ರಾಂತಿಗೆ 265ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಶುಕ್ರವಾರ ತಡರಾತ್ರಿ ಮಿಲಿಟರಿಯ ಒಂದು ಗುಂಪು ಅಧಿಕೃತವಾಗಿ ಸೇನಾ ನಿಯಮಗಳನ್ನು ಅಂದರೆ ಕ್ಷಿಪ್ರ ಕ್ರಾಂತಿಯನ್ನು ಘೋಷಿಸಿತು. ನಾವು “ದೇಶದ ನಿಯಂತ್ರಣವನ್ನು ತೆಗೆದುಕೊಳ್ಳುತ್ತೇವೆ,” ಎಂಬ ಘೋಷಣೆ ಹೊರಡಿಸಿತು. ಇದಾದ ಬೆನ್ನಿಗೆ ಟರ್ಕಿಯ ವಾಣಿಜ್ಯ ನಗರ ಇಸ್ತಾಂಬುಲ್ನ ಮುಖ್ಯ ವಿಮಾನ ನಿಲ್ದಾಣ ಅಟಾಟರ್ಕ್ ಮುಚ್ಚಲಾಯಿತು. ಯುದ್ಧ ವಿಮಾನಗಳು ಆಗಸದಲ್ಲಿ ಕಾಣಿಸಿಕೊಳ್ಳಲಾರಂಭಿಸಿದವು. ಇದೇ ವೇಳೆ ಪ್ರಮುಖ ಸೇತುವೆಗಳನ್ನು ಕ್ರಾಂತಿಗೆ ಕೈ..

  July 16, 2016
  ...
  13681049_1704017076529063_7672560418485994980_n
  ಟಿವಿ

  ಸಾವಿಗೂ ಮುನ್ನ ಡಿವೈಎಸ್ಪಿ ಗಣಪತಿ ನೀಡಿದ Exclusive ಟಿವಿ ಸಂದರ್ಶನದ ‘ಮಿಸ್ಟರಿ’ ಬಯಲು!

  ”ಯಾವುದಾದರೂ ಒಂದು ಒಳ್ಳೆ ಟಿವಿ ಚಾನಲ್ ಕಚೇರಿಗೆ ಕರೆದುಕೊಂಡು ಹೋಗು…” ಇದು ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆಗೂ ಮುನ್ನ ಮಡಿಕೇರಿಯ ವಿನಾಯಕ ಲಾಡ್ಜ್ ಮುಂಭಾಗ ಹತ್ತಿದ ಆಟೋ ಚಾಲಕನಿಗೆ ಹೇಳಿದ ಮಾತು. ಹೀಗೆ, ಗಣಪತಿ ತಮ್ಮ ‘ಡೈಯಿಂಗ್ ಡಿಕ್ಲರೇಶನ್’ ದಾಖಲಿಸಲು ಆಯ್ಕೆ ಮಾಡಿಕೊಂಡ ‘ಟಿವಿ ವನ್’ ಕಚೇರಿಗೆ ತಲುಪಿದರು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇವತ್ತಿಗೂ ಹಲವು ಪ್ರಶ್ನೆಗಳು ಉಳಿದು ಹೋಗಿವೆ. ಅವುಗಳಲ್ಲಿ ಒಂದು, ಗಣಪತಿ ಸಾವಿಗೂ ಮುನ್ನ ಸಂದರ್ಶನ ನೀಡಲು, ತಮ್ಮೊಳಗಿನ ಒತ್ತಡಗಳನ್ನು ಬಿಚ್ಚಿಡಲು ಸ್ಥಳೀಯ ವಾಹಿನಿಯನ್ನು..

  July 16, 2016
  ...
  baliga-files
  BALIGA FILES

  ‘ಬಾಳಿಗ ಫೈಲ್ಸ್’: ಅನಧಿಕೃತ ಪಾರ್ಕಿಂಗ್ ವಿಚಾರವನ್ನು ಬೆನ್ನತ್ತಿದ್ದ ಬಾಳಿಗ ಬಲಾಢ್ಯರ ಅಕ್ರಮಗಳನ್ನು ಬಯಲಿಗೆಳೆಯುವ ಹಾದಿಯಲ್ಲಿದ್ದರು!

  ಮಂಗಳೂರಿನಲ್ಲಿ ಹತ್ಯೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ್ ಬಾಳಿಗ ಅವರ ಆಸಕ್ತಿ ಮತ್ತು ಹೋರಾಟದ ವ್ಯಾಪ್ತಿ ಕೇವಲ ವೆಂಕಟರಮಣ ದೇವಸ್ಥಾನ ಮತ್ತು ಕಾಶಿ ಮಠಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ. ಯಾಕೆ ಎಂದರೆ, ನಾಲ್ಕು ವರ್ಷಗಳ ಹಿಂದೆ ಬಾಳಿಗ ತಮ್ಮ ಕೋಡಿಯಾಲ್ ಬೈಲ್ ಮನೆ ಹಾದಿಯನ್ನು ಸಂಪರ್ಕಿಸುವ ರಸ್ತೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳು, ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಸಮುದಾಯ ಭವನಗಳ ವಿರುದ್ಧ ಸಮರವನ್ನು ಶುರು ಮಾಡಿದ್ದರು. ಅಲ್ಲಿ ನಡೆಯುತ್ತಿದ್ದ ಅಕ್ರಮ ಪಾರ್ಕಿಂಗ್ ಪ್ರಶ್ನೆ ಮಾಡಲು ಹೋಗಿ ಹಲವು ಅಕ್ರಮಗಳನ್ನು ಬಯಲಿಗೆಳೆಯುವ ಹಂತದಲ್ಲಿ ಅವರಿದ್ದರು ಎನ್ನುತ್ತವೆ..

  July 16, 2016

Top