An unconventional News Portal.

  ...

  ಪೆಟ್ರೊಲ್ ಬೆಲೆ ಲೀಟರ್ ಮೇಲೆ 2. 25 ರೂ, ಡೀಸೆಲ್ 42 ಪೈಸೆ ಇಳಿಕೆ

  ಕೇಂದ್ರ ಸರಕಾರ ಪೆಟ್ರೊಲ್ ಹಾಗೂ ಡೀಸೆಲ್ ಇಂಧನಗಳ ಬೆಲೆಯನ್ನು ಇಳಿಕೆ ಮಾಡಿದೆ. ಲೀಟರ್ ಪೆಟ್ರೊಲ್ ಬೆಲೆಯನ್ನು 2. 25 ರೂಪಾಯಿ ಇಳಿಸಿರುವ ಸರಕಾರ, ಡೀಸೆಲ್ ಬೆಲೆಯಲ್ಲಿ 42 ಪೈಸೆಯಷ್ಟೆ ಇಳಿಕೆ ಮಾಡಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಪಟ್ಟಿ ಜಾರಿಗೆ ಬರಲಿವೆ. ಇತ್ತೀಚೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ದೇಶದಲ್ಲಿ ಮಾತ್ರ ಇಂಧನ ದರ ಏರುಗತಿಯಲ್ಲಿ ಸಾಗುತ್ತಿತ್ತು. ಸಾರ್ವಜನಿಕ ತೈಲ ಕಂಪನಿಗಳು ಸಗಟು ವ್ಯಾಪಾರದ ದರವನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಪೆಟ್ರೊಲ್ ಮೇಲಿನ ದರ ಇಳಿಕೆಯಾಗಿದೆ ಎಂದು ಪ್ರಾಥಮಿಕ […]

  July 15, 2016
  ...

  ಕ್ರೀಯಾಶೀಲ ಕೀಟಲೆಗಳಿಗೆ ಆಹಾರವಾದ ‘ಬಾಬಾ ಭಂಗಿ’: ನೋಡಿ ನಕ್ಕು ಬಿಡಿ!

  ಯೋಗಗುರು ಬಾಬಾ ರಾಮ್ ದೇವ್ ಕುರಿತು ಇತ್ತೀಚಿನ ‘ಇಂಡಿಯಾ ಟುಡೆ’ ಮುಖಪುಟ ವರದಿಯಲ್ಲಿ ಬಳಸಿರುವ ಫೊಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಗಡಲನ್ನೇ ಸೃಷ್ಟಿಸಿದೆ. ಯೋಗಗುರು ಬೆಳದು ಬಂದ ಹಾದಿ ಹಾಗೂ ಆತನ ಆರ್ಥಿಕ ಚಟುವಟಿಕೆಗಳ ಕುರಿತು ವಿಸ್ತೃತ ವರದಿಯ ಜತೆಗೆ, ರಾಮ್ದೇವ್ ಎರಡು ಕಾಲುಗಳ ನಡುವೆ ತಲೆಯನ್ನು ಇಟ್ಟು ಯೋಗಾಸನ ಮಾಡುತ್ತಿರುವ ಚಿತ್ರವನ್ನು ಮ್ಯಾಗಜಿನ್ ಮುಖಪುಟದಲ್ಲಿ ಪ್ರಕಟಿಸಿತ್ತು. ಈ ಚಿತ್ರವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರು ನಡೆಸಿರುವ ಕ್ರೀಯಾಶೀಲ ಕೀಟಲೆಗಳೀಗ ವೈರಲ್ ಆಗಿವೆ. ರಿಯೋ ಓಲಂಪಿಕ್ಸ್ಗೆ ಬಾಬಾ ತಯಾರಿ […]

  July 15, 2016
  ...

  ಕಳೆದ 2 ವರ್ಷಗಳಲ್ಲಿ ದಿನಕ್ಕೆರಡು ರೈತರ ಆತ್ಮಹತ್ಯೆ: ಕೃಷಿ ಸಚಿವ

  ಕಳೆದ ಎರಡು ವರ್ಷಗಳ ಅಂತರದಲ್ಲಿ ರಾಜ್ಯದಲ್ಲಿ 1694 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ರೈತರ ಪತ್ನಿಯರಿಗೆ ನೀಡುವ ವಿಧವಾ ಮಾಸಾಶನವನ್ನು 500ರೂಪಾಯಿಗಳಿಂದ 2 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ಶುಕ್ರವಾರ ತಿಳಿಸಿದ್ದಾರೆ. ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2014-15ನೇ ಸಾಲಿನಲ್ಲಿ 122, 2015-16ನೇ ಸಾಲಿನಲ್ಲಿ 1407 ಹಾಗೂ ಪ್ರಸಕ್ತ ಸಾಲಿನಲ್ಲಿ 165 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014-15ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರತಿ ರೈತ ಕುಟುಂಬಕ್ಕೆ ಒಂದು ಲಕ್ಷದಂತೆ […]

  July 15, 2016
  ...

  ಹಬ್ಬದ ಸಂಭ್ರಮದ ಮೇಲೆ ಎರಗಿದ 19 ಟನ್ ತೂಕದ ಟ್ರಕ್: 84 ಸಾವು; ನೂರಾರು ಮಂದಿಗೆ ಗಾಯ

  ಪ್ಯಾರೀಸ್ ಕ್ರಾಂತಿ ನೆನಪಿನಲ್ಲಿ ಫ್ರಾನ್ಸ್ ದೇಶದಲ್ಲಿಆಚರಿಸುವ ಬ್ಯಾಸ್ಟೈಲ್ ಹಬ್ಬದ ದಿನ, ಗುರುವಾರ ತಡರಾತ್ರಿ ರಿವೇರಾ ನಗರದ ನೈಸ್ ಪ್ರದೇಶದಲ್ಲಿ ಸಂಭ್ರಮಾಚಾರಣೆ ನಿರತ ಜನರ ಮೇಲೆ ಟ್ರಕ್ ನುಗ್ಗಿಸಿದ ಪರಿಣಾಮ 84 ಜನ ಸಾವನ್ನಪ್ಪಿದ್ದಾರೆ; ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ನಗರದಲ್ಲಿ ಹಬ್ಬದ ಸಂಭ್ರಮಾಚರಣೆ ನಿರತ ಜನರ ಮೇಲೆ ಏಕಾಏಕಿ ಟ್ರಕ್ ನುಗ್ಗಿಸಲಾಗಿತ್ತು. ನಂತರ ಚಾಲಕ ಗುಂಡಿನ ದಾಳಿ ಆರಂಭಿಸುತ್ತಿದ್ದಂತೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದರು. ದಾಳಿಕೋರನನ್ನು 30 ವರ್ಷದ ಫ್ರೆಂಚ್- ಟ್ಯುನಿಸೀಯ ಪ್ರಜೆ ಎಂದು ಗುರುತಿಸಲಾಗಿದೆ. ಈತನ ಮೇಲೆ […]

  July 15, 2016
  ...

  ಬದಲಾಗುತ್ತಿದ್ದ ಕೊಡವರ ನಾಡಿನಲ್ಲಿ ಕೇಸರಿ ಝಂಡಾ ಮತ್ತು ಗುರುವಾರದ ‘ಬಂದ್ ಶಾಸ್ತ್ರ’ ಮುಗಿಸಿದ ಬಿಜೆಪಿ ನಾಯಕರು!

  ನಿರೀಕ್ಷೆಯಂತೆ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಮಾಧ್ಯಮಗಳೆದುರಿನ ಬಂದ್ ‘ಶಾಸ್ತ್ರ’ವನ್ನು ಗುರುವಾರ ಮುಗಿಸಿತು. ಇದರೊಂದಿಗೆ ಕಾಂಗ್ರೆಸ್ ಸಮಾಧಾನದ ನಿಟ್ಟುಸಿರು ಬಿಟ್ಟಿತು. ಸಂಘ ಪರಿವಾರದ ಕೃಪಾಪೋಷಿತ ಬಂದ್ ಅದರ ಶಕ್ತಿ ಪ್ರದರ್ಶನಕ್ಕೆ ಮೀಸಲಾಗಿದ್ದು ‘ಗಣಪತಿ ಆತ್ಮಹತ್ಯೆ ಪ್ರಕರಣ’ದ ವಿಶೇಷ. ‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ಕೆ.ಜೆ ಜಾರ್ಜ್ ಬಂಧಿಸಬೇಕು’ ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಜುಲೈ 14ರಂದು ಕರೆ ನೀಡಿದ್ದ ಕೊಡಗು ಜಿಲ್ಲಾ ಬಂದ್ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ರಾಜ್ಯಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯೂ […]

  July 15, 2016

Top