An unconventional News Portal.

  ...

  ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ: ಪತ್ನಿಯಿಂದ ಮಡಿಕೇರಿಯಲ್ಲಿ ಕೇಸು ದಾಖಲು

  ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪಾವನಾ ಕೇಸು ದಾಖಲಿಸಿದ್ದಾರೆ. ಮಡಿಕೇರಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್, ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣಬ್ ಮೊಹಾಂತಿ ಕಿರುಕುಳ ಹಾಗೂ ಮಾನಸಿಕ ಚಿತ್ರಹಿಂಸೆಯಿಂದಲೇ ನನ್ನ ಪತಿ ಜೀವವನ್ನು ಅಂತ್ಯಗೊಳಿಸಿದ್ದಾರೆ. ಇವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನನಗೂ ಮತ್ತು ನನ್ನ ಮಕ್ಕಳಿಗೂ ನ್ಯಾಯ ಒದಗಿಸಬೇಕು. ಎಂದು ಕೋರಿಕೊಂಡಿದ್ದಾರೆ. ಪತ್ರದಲ್ಲಿ ಪತಿ ಅನುಭವಿಸುತ್ತಿದ್ದ ಕಿರುಕುಳ ಮತ್ತು ಹಿಂಸೆಯನ್ನು ದಾಖಲಿಸಿದ್ದಾರೆ. ಮೊದಲಿಗೆ ಸಿಐಡಿ […]

  July 11, 2016
  ...

  ‘ಬಾಳಿಗ ಫೈಲ್ಸ್’: ಹತ್ಯೆಯಾದ ಮಾಹಿತಿ ಹಕ್ಕು ಹೋರಾಟಗಾರನ ಕಣಜದಿಂದ ಸ್ಫೋಟಕ ದಾಖಲೆಗಳ ಬಹಿರಂಗ!

  ವಿನಾಯಕ ಪಾಂಡುರಂಗ ಬಾಳಿಗ… ಮಾರ್ಚ್ 21, 2016ರ ಮುಂಜಾನೆ ಮಂಗಳೂರಿನ ಕೋಡಿಯಾಲ್ ಬೈಲಿನಲ್ಲಿರುವ ತಮ್ಮ ಮನೆಯ ಬಳಿಯೇ ಕೊಲೆಯಾಗಿ ಹೋದ ನಂತರ ಹೊರಜಗತ್ತಿಗೆ ಪರಿಚಿತವಾದ ಹೆಸರು. ಅವರ ಐಡೆಂಟಿಟಿ ಇರುವುದೇ ಮಾಹಿತಿ ಹಕ್ಕು ಕಾಯ್ದೆಯನ್ನು ಭ್ರಷ್ಟಾಚಾರದ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದ ರೀತಿಯಲ್ಲಿ. ಅವರ ಕೊಲೆ ನಡೆದ ನಂತರ ಮಂಗಳೂರಿನ ಬರ್ಕೆ ಪೊಲೀಸರು ಅವರ ಮನೆಯಲ್ಲಿದ್ದ ಸಾವಿರಾರು ಪುಟಗಳ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಸುಮಾರು 7 ಸಾವಿರ ಪುಟಗಳಿರಬಹುದು ಎಂಬುದು ಒಂದು ಅಂದಾಜು. ಅವುಗಳಲ್ಲಿ ಸುಮಾರು ಒಂದು ದಶಕಗಳ ಕಾಲ ಬಾಳಿಗ […]

  July 11, 2016
  ...

  ವನಿ ಎಂಬ 21ರ ತರುಣ: ನಮ್ಮ ಪಾಲಿನ ಈ ಭಯೋತ್ಪಾದಕ ಕಾಶ್ಮೀರಿಗಳ ಕಣ್ಣಲ್ಲಿ ಹೀರೊ ಆಗಿದ್ದೇಕೆ?

    ಜುಲೈ 8, 2016.. ಬೆಳಗ್ಗೆ 4. 30ರ ನಸುಕನ ವೇಳೆಯಲ್ಲಿ ಕಾಶ್ಮೀರಾದ ಆ ಪುಟ್ಟ ಹಳ್ಳಿಯ ಮಿಲಿಟರಿ ಪಡೆಗಳಿಂದ ಸುತ್ತುವರಿದಿತ್ತು. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿ ಹಾಗೂ ಆತನ ಸಹಚರರ ಚಹರೆಗಳನ್ನು ಮಿಲಿಟರಿ ಬಂದೂಕುಗಳು ಹುಡುಕಲು ಶುರುಮಾಡಿದವು. ಊರಿನ ಜನ ಕೈಲಿ ಕಲ್ಲುಗಳನ್ನು ಹಿಡಿದುಕೊಂಡು ಸೇನೆಯ ವಿರುದ್ಧ ಅಖಾಡಕ್ಕೆ ಇಳಿದರು. ಎರಡೂವರೆ ಗಂಟೆಗಳ ಈ ಕಾರ್ಯಚರಣೆ, ಅದಕ್ಕೆ ಸ್ಥಳೀಯ ವಿರೋಧ, ಕೊನೆಯಲ್ಲಿ ಮೂರು ಹೆಣಗಳು. ಅದರಲ್ಲಿ ಒಂದು ವನಿಯದ್ದು. ಆತನ ವಯಸ್ಸು ಕೇವಲ […]

  July 11, 2016
  ...

  72 ಗಂಟೆಗಳಲ್ಲಿ 22 ಬಲಿ: ಕಾಶ್ಮೀರಾದಲ್ಲಿ ಮುಂದುವರಿದ ಜನ- ಸೇನೆ ಮುಖಾಮುಖಿ

  ಕಣಿವೆ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರ 72 ಗಂಟೆಗಳು ಕಳೆದ ನಂತರವೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮೂರನೇ ದಿನವಾದ ಸೋಮವಾರವೂ ಪ್ರತಿಭಟನಾಕಾರರು ಮತ್ತು ರಕ್ಷಣಾ ಪಡೆಗಳ ನಡುವೆ ಘರ್ಷಣೆ ಮುಂದುವರಿದಿದೆ. ಈವರೆಗೆ ಸತ್ತವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೇರಿದ್ದ ಕರ್ಫ್ಯೂ ರೀತಿಯ ನಿರ್ಬಂಧವ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಶನಿವಾರ ಹಿಂಸಾಚಾರಕ್ಕೆ ಒಟ್ಟು 12 ಜನ ಸಾವನ್ನಪ್ಪಿದ್ದರೆ, ಭಾನುವಾರ ಬೆಳಗ್ಗೆಯಿಂದ ಇಲ್ಲೀವರಗೆ 10 ಜನ ಅಸುನೀಗಿದ್ದಾರೆ. ಸಾವಿಗೀಡಾದವರಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ. ಗುಂಪೊಂದು ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿದ್ದರೆ, ಉಳಿದವರೆಲ್ಲ ಸೇನೆಯ […]

  July 11, 2016
  ...

  ಇ ಕಾಮರ್ಸ್ ವೆಬ್ ತಾಣ ಬಳಸಿ ಬೈಕ್ ದರೋಡೆ ಮಾಡಿದ ಬಾಲಕ!

  ಇ- ಕಾಮರ್ಸ್ ವೆಬ್ಸೈಟ್ ಜಾಹೀರಾತುಗಳನ್ನು ಬಳಸಿಕೊಂಡು ಕಳ್ಳತನ ಮಾಡಿದ ಆರೋಪದ ಮೇಲೆ ದಿಲ್ಲಿಯ ಬಾಲಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಇಲ್ಲಿನ ಉತ್ತಮ ನಗರ ನಿವಾಸಿ ಅನ್ವರ್ ಎಂಬಾತ ತನ್ನ ಸ್ಪೋರ್ಟ್ಸ್ ಬೈಕ್ ಮಾರಾಟ ಮಾಡಲು ಇ- ಕಾಮರ್ಸ್ ವೆಬ್ ತಾಣದಲ್ಲಿ ಜಾಹೀರಾತನ್ನು ಪ್ರಕಟಿಸಿದ್ದ. ಇದಕ್ಕೆ ಕರೆ ಮಾಡಿದ್ದ ಇಬ್ಬರು ಬಾಲಕರು ಬೈಕ್ ಖರೀದಿಸುವುದಾಗಿ ಹೇಳಿಕೊಂಡಿದ್ದರು. ಅನ್ವರ್ ಬೈಕ್ ತಂದು ತೋರಿಸುತ್ತಲೇ ಟೆಸ್ಟ್ ರೈಡ್ ತೆಗೆದುಕೊಂಡ ಹೋದ ಬಾಲಕರು ನಾಪತ್ತೆಯಾಗಿದ್ದರು. ಈ ಕುರಿತು ಎರಡು ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಲಾಗಿತ್ತು. […]

  July 11, 2016
  ...

  ಫ್ರಾನ್ಸ್ ವಿರುದ್ಧ ‘ಯುರೋ – 2016’ ಯುದ್ಧ ಗೆದ್ದ ಪೊರ್ಚುಗಲ್

  ಬಹು ನಿರೀಕ್ಷಿತ ‘ಯುರೋ ಕಪ್ -2016’ ಪೊರ್ಚುಗಲ್ ಪಾಲಾಗಿದೆ. ಭಾನುವಾರ (ಫ್ರಾನ್ಸ್ ಕಾಲಮಾನ) ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ನೇತೃತ್ವದ ಪೊರ್ಚುಗಲ್ ಅತಿಥೇಯ ಫ್ರಾನ್ಸ್ ವಿರುದ್ಧ 1-0 ಗೋಲ್ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿತು. ಈ ಮೂಲಕ ಯುರೋಪಿಯನ್ ಫೂಟ್ಬಾಲ್ ಜಗತ್ತಿನ ಹೊಸ ಅಧಿಪತಿಯಾಗಿ ಪೊರ್ಚುಗಲ್ ಮೂಡಿ ಬಂತು. ಪ್ಯಾರಿಸ್ನ ‘ಸ್ಟೇಡ್ ಡೆ ಫ್ರಾನ್ಸ್’ ಮೈದಾನದಲ್ಲಿ ಫೂಟ್ಬಾಲ್ ಫೈನಲ್ ಆರಂಭವಾಗಿತ್ತು. ಎಲ್ಲರ ಕಣ್ಣು ಇದ್ದಿದ್ದು ಪೋರ್ಚುಗಲ್ ನಾಯಕ ಕ್ರಿಶ್ಚಿಯಾನೋ ರೊನಾಲ್ಡೋ ಮೇಲೆ; ಸ್ಟಾರ್ […]

  July 11, 2016
  ...

  ರೈಲ್ವೆ ಟಿಕೆಟ್ ದರಕ್ಕೆ ಇಳಿದ ಏರ್ ಇಂಡಿಯಾ ಟಿಕೆಟ್ ಬೆಲೆ: ದಿಲ್ಲಿ- ಬೆಂಗಳೂರು ಮಾರ್ಗದಲ್ಲಿ ‘ಸೂಪರ್ ಸೇವರ್’!

  ಇನ್ನು ಮುಂದೆ ದಿಲ್ಲಿ- ಬೆಂಗಳೂರು ನಡುವಿನ ಏರ್ ಇಂಡಿಯಾ ವಿಮಾನಯಾನ ದರದಲ್ಲಿ ಭಾರಿ ಇಳಿಕೆಯಾಗಲಿದೆ. ಕೊನೆಯ ನಾಲ್ಕು ಗಂಟೆಗಳ ಅವಧಿಯಲ್ಲಿ ನಿಗದಿತ ಸೀಟುಗಳಿಗೆ ರಾಜಧಾನಿ ಎಕ್ಸ್ಪ್ರೆಸ್ ರೈಲಿನ 2 ಟೈರ್ ಎಸಿ ಬೋಗಿಗಳ ಟಿಕೆಟ್ ದರವನ್ನು ಏರ್ ಇಂಡಿಯಾ ಪ್ರಕಟಿಸಿದೆ. ವಿಮಾನಯಾನ ಕ್ಷೇತ್ರದಲ್ಲಿ ದರ ಪೈಪೋಟಿ ಹಾಗೂ ಸಂಸ್ಥೆಯ ಸದ್ಯದ ಆರ್ಥಿಕ ಪರಿಸ್ಥತಿಯ ಹಿನ್ನೆಲೆಯಲ್ಲಿ, ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಮೊದಲ ಹಂತದಲ್ಲಿ ನಾಲ್ಕು ಪ್ರಮುಖ ಮಾರ್ಗಗಳ ನಡುವಿನ ಪ್ರಯಾಣ ದರವನ್ನು ಕಡಿತಗೊಳಿಸಲು ಮುಂದಾಗಿದೆ. ದಿಲ್ಲಿ- ಮುಂಬೈ, ದಿಲ್ಲಿ- ಚೆನ್ನೈ, ದಿಲ್ಲಿ- ಕೋಲ್ಕತ್ತಾ […]

  July 11, 2016

Top