An unconventional News Portal.

    ...

    ತಂದೆಯ ಹುಟ್ಟು ಕುರುಡಿಗೆ ಮಗಳ ಮುಗ್ಧತೆಯೇ ಆಸರೆ: ಜಗತ್ತಿನ ಗಮನ ಸೆಳೆಯುತ್ತಿರುವ ಪುಟ್ಟ ಪೋರಿ ಜನ್ನಿ!

    ಆಕೆಗಿನ್ನೂ ಐದರ ಹರೆಯ. ಒಂದರೆ ಕ್ಷಣವೂ ಕೂತಲ್ಲಿ ಕೂರದೆ ನಿಂತಲ್ಲಿ ನಿಲ್ಲದ ಸದಾ ಕೀಟಲೆ ಮಾಡುತ್ತಾ ಎಲ್ಲಾ ಪುಟಾಣಿಗಳಂತೇ ಇರುತ್ತಾಳೆ. ಆದರೆ, ಆಕೆ ಎಲ್ಲಾ ಮಕ್ಕಳಂತಲ್ಲ. ತನಗೇ ಅರಿವಿಲ್ಲದೆ ಆಕೆ ಮಾಡುತ್ತಿರುವ ಕಾರ್ಯ ಈಗ ಜಗತ್ತನ್ನೇ ಆಕೆಯತ್ತ ತಿರುಗಿ ನೋಡುವಂತೆ ಮಾಡಿದೆ. ಫಿಲಿಫೈನ್ಸ್ ನ ಈ ಪುಟಾಣಿಯ ಹೆಸರು ಜೆನ್ನಿ, ಇವಳ ತಂದೆ ನೆಲ್ಸನ್ ಪೇಪೆ. ಜಗತ್ತಿನ ಅರಿವಿಲ್ಲದ ಮುದ್ದು ಮಗಳು ಮತ್ತು ಜಗತ್ತನ್ನು ಕಾಣದ ಹುಟ್ಟು ಕುರುಡ ತಂದೆ. ಹಾಗಿದ್ರೂ ಈ ತಂದೆ ಮಗಳ ಜೋಡಿಯ […]

    July 9, 2016
    ...

    ಕುಂಟು ನೆಪ ಬಿಟ್ಟು ಒತ್ತಡವಿಲ್ಲದೆ ಬದುಕಲು ಎಂಟು ದಾರಿಗಳು!

    ಆಧುನಿಕ ಯುಗದಲ್ಲಿ ಕಾಲದ ಜೊತೆ ಓಟಕ್ಕಿಳಿದಿರುವ ಮನುಷ್ಯ ವಿಪರೀತ ಒತ್ತಡಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಸ್ಪರ್ಧಾತ್ಮಕವಾಗಿರುವ ಈ ಸಮಯದಲ್ಲಿ ಪ್ರತಿಯೊಬ್ಬರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಇದು ಅನಿವಾರ್ಯ ಕೂಡ. ಇವತ್ತು ಖಾಸಗೀ ಜೀವನಕ್ಕೂ ಸಮಯವನ್ನು ನೀಡಲಾಗದ ಪರಿಸ್ಥಿತಿಯಿದೆ. ಇದರಿಂದಾಗಿ ಮಾನಸಿಕ ಒತ್ತಡಗಳು ಸಹಜವಾಗಿಯೇ ಹೆಚ್ಚಾಗುತ್ತಿವೆ. ಇದರ ಪರಿಣಾಮ ದೈಹಿಕ ಆರೋಗ್ಯದ ಮೇಲೂ ಬೀಳುತ್ತದೆ. ಹೀಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಅದಕ್ಕಾಗಿ ಒಂದಷ್ಟು ಟಿಪ್ಸ್ ಇಲ್ಲಿದೆ. ಆರೋಗ್ಯಪೂರ್ಣ ಆಹಾರ ಸೇವನೆ: ಆಹಾರಕ್ಕೆ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಿದೆ. ದೈಹಿಕ […]

    July 9, 2016
    ...

    ಕೇರಳದ 15 ಯುವಕರು ಐಸಿಲ್ ಸೇರಿರುವ ಶಂಕೆ

    ದೇವರ ನಾಡು ಕೇರಳದಿಂದ ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿರುವ 15 ಯುವಕರು ಐಸಿಲ್ ಸೇರ್ಪಡೆಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತಂತೆ ಕೇರಳ ರಾಜ್ಯ ಸರಕಾರ ತುರ್ತು ತನಿಖೆಗೆ ಆದೇಶ ನೀಡಿದೆ. ಕೇರಳದ ಕಾಸರಗೋಡು, ಪಾಲಕ್ಕಾಡ್ ಜಿಲ್ಲೆಗಳಿಂದ ಶಿಕ್ಷಣಕ್ಕಾಗಿ ವಿದೇಶಕ್ಕೆ 15 ಮಂದಿ ತೆರಳಿದ್ದರು. ಇವರೆಲ್ಲಾ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಇವರಲ್ಲಿ ಪುಟ್ಟ ಮಕ್ಕಳಿರುವ ದಂಪತಿ ಕೂಡ ಸೇರಿರುವ ಶಂಕೆ ವ್ಯಕ್ತವಾಗಿದೆ. ಉದ್ಯೋಗಕ್ಕಾಗಿ ಅಬ್ದುಲ್ ರಷೀದ್ ಎಂಬಾತ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮುಂಬೈಗೆ ಹೋಗಿದ್ದವರ ಸುಳಿವೇ ಇಲ್ಲ […]

    July 9, 2016
    ...

    ಮುಖ್ಯಮಂತ್ರಿ ವಿರುದ್ಧ ಮತ್ತೆ ಪೂಜಾರಿ ಗುಡುಗು

    ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಕೆಪಿಸಿಸಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮುಖ್ಯಮಂತ್ರಿ ವಿರುದ್ದ ಗುಡುಗಿದ್ದಾರೆ. ಡಿವೈಎಸ್ಪಿ ತನ್ನ ಸಾವಿಗೂ ಮುನ್ನ ನೀಡಿದ ಹೇಳಿಕೆಯಲ್ಲಿ ಮಹತ್ವವಿದೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ. ಡಿವೈಎಸ್ಪಿ ಗಣಪತಿ ತಮ್ಮ ಸಾವಿಗೂ ಮುನ್ನ ನೀಡಿರುವ ಹೇಳಿಕೆಗೆ ಸುಪ್ರೀಂ ಕೋರ್ಟ್ ಮಾನ್ಯತೆ ಇದೆ. ಈ ಹೇಳಿಕೆಯ ಪ್ರಕಾರ ಎಫ್ಐಆರ್ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ರಾಜ್ಯ ಸರಕಾರ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಪಕ್ಷದ […]

    July 9, 2016
    ...

    ಭಾರತದ ದೊಡ್ಡ ಉದ್ಯಮಗಳಿಗೆ ತಟ್ಟಿದ ‘ಬ್ರೆಕ್ಸಿಟ್’ ಬಿಸಿ: ನೀತಿ ಪರಿಶೀಲನೆಗೆ ಮುಂದಾದ ಕೇಂದ್ರ

    ಭಾರತದ ಮೇಲೆ ‘ಬ್ರೆಕ್ಸಿಟ್’ನ ಮೊದಲ ಪರಿಣಾಮಗಳು ಕಾಣತೊಡಗಿವೆ. ಭಾರತ ಈಗಾಗಲೇ ಯುರೋಪ್ ಯೂನಿಯನ್ ಜೊತೆ ವಾಣಿಜ್ಯ ಒಪ್ಪಂದಕ್ಕಾಗಿ ಸಂಧಾನ ನಡೆಸಿತ್ತು. ಇದೀಗ ಬ್ರಿಟನ್ ಒಕ್ಕೂಟದಿಂದ ಹೊರ ಬಂದಿರುವುದರಿಂದ “ಆ ದೇಶದ ಜೊತೆ ನಮ್ಮ ಸಂಧಾನದ ಸ್ಟ್ರಾಟೆಜಿಯನ್ನು ಮರು ಸ್ಥಾಪಿಸಬೇಕಿದೆ,” ಎಂದು ನಿರ್ಮಲಾ ಸೀತರಾಮನ್ ಶುಕ್ರವಾರ ಹೇಳಿದ್ದಾರೆ. “ಯುರೋಪಿಯನ್ ಯೂನಿಯನ್ನಿಂದ ಬ್ರಿಟನ್ ಹೊರ ಬಂದ ಬಳಿಕ ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ಮಾರುಕಟ್ಟೆ ಒಪ್ಪಂದಕ್ಕಿರುವ  ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ,” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ […]

    July 9, 2016
    ...

    ಕಣಿವೆ ರಾಜ್ಯದಲ್ಲಿ ಕರ್ಪ್ಯೂ; ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಸ್ಥಗಿತ

    ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಶುಕ್ರವಾರ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಗೆ ಸೇರಿದ ಕೋಕೆರ್‌ ನಾಗ್‌ ಪ್ರದೇಶದಲ್ಲಿ ಹಿಜ್ಬುಲ್‌ ಮುಜಾಹಿದ್ದಿನ್‌ ಉಗ್ರನ್ನು ಎನ್‍ಕೌಂಟರ್ನಲ್ಲಿ ಹೊಡೆದುರುಳಿಸಿಲಾಗಿದೆ. ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್‌ ವನಿ ಸಾವನ್ನಪ್ಪಿದ್ದು, ಇದಾದ ಬೆನ್ನಿಗೆ ರಾಜ್ಯದಾದ್ಯಂತ ಪ್ರತಿಭಟನೆಗಳು ಎದ್ದಿವೆ. ಶ್ರೀನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ. “ಸುರಕ್ಷತೆಯ ಕಾರಣಕ್ಕೆ ಅಮರಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಯಾವುದೇ ಯಾತ್ರಾರ್ಥಿಗಳನ್ನು ಕಾಶ್ಮೀರ ಕಣಿವೆಯತ್ತ ಬಿಡಲಾಗುವುದಿಲ್ಲ,” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಬೆನ್ನಿಗೆ ಭಾರೀ ಪ್ರತಿಭಟನೆಗಳು ಎದ್ದಿದ್ದು, […]

    July 9, 2016
    ...

    ಇವು ನಮ್ಮ ದೇಶದ ಗಣ್ಯ ವ್ಯಕ್ತಿಗಳು ನಿತ್ಯ ಬಳಸುವ ಕಾರುಗಳು!

    ಜೀವನದಲ್ಲಿ ಒಮ್ಮೆಯಾದರು ದುಬಾರಿ ಕಾರನ್ನು ಕೊಂಡುಕೊಳ್ಳಬೇಕು ಅನ್ನೋ ಮಹದಾಸೆ ಹುಟ್ಟಿಸಿದ ಆರ್ಥಿಕ ನೀತಿಗಳು ಜಾರಿಯಾಗಿ 25 ವರ್ಷಗಳು ಕಳೆದಿವೆ. ನಮ್ಮ  ರಾಜಕಾರಣಿಗಳಿಂದ ಹಿಡಿದು ಉದ್ಯಮಿಗಳವರೆಗೆ, ಕ್ರೀಡಾಪಟುಗಳಿಂದ ಹಿಡಿದು ಬಾಲಿವುಡ್ ಸ್ಟಾರ್ ಗಳೆಲ್ಲಾ ಐಷಾರಾಮಿ ಕಾರಿನ ಒಡೆಯರು. ಇವರಿಗೆ ತಮ್ಮ ಪ್ರಯಾಣ ಸುಖಕರವಾಗಿರುವುದರ ಜೊತೆಗೆ ತಮ್ಮ ರಕ್ಷಣೆಯೂ ಮುಖ್ಯವಾಗಿರುತ್ತದೆ. ಹಾಗಾಗಿ ತಮ್ಮಹೈ ಎಂಡ್ ಕಾರುಗಳಲ್ಲಿ ಅವರ ನಿತ್ಯ ತೇರು ಸಾಗುತ್ತಿರುತ್ತದೆ. ಭಾರತದಲ್ಲಿರುವ ಕೆಲವು ಗಣ್ಯ ವ್ಯಕ್ತಿಗಳು ತಮ್ಮ ದಿನ ನಿತ್ಯದ ರೈಡ್ ಗೆ ಬಳಸೋ ಕಾರುಗಳು ಕಾರುಗಳ ಯಾವವು ಎಂಬ ವಿವರ […]

    July 9, 2016
    ...

    ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಐಡಿಯಿಂದ ತನಿಖೆ ಚುರುಕು

    ಆತ್ಮಹತ್ಯೆಗೆ ಶರಣಾದ ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಸಿಐಡಿ ತಂಡ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಸತ್ಯಾಸತ್ಯತೆಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಸಿಐಡಿ ಕಾರ್ಯಪ್ರವೃತ್ತವಾಗಿದ್ದು, ಕುಟುಂಬ ಸದಸ್ಯರ ವಿಭಿನ್ನ ಹೇಳಿಕೆಗಳಿಂದ ಏರ್ಪಟ್ಟಿದ್ದ ಗೊಂದಲಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಇಡೀ ದಿನ ಮಂಗಳೂರು, ಮಡಿಕೇರಿ ಸೇರಿದಂತೆ ಹಲವೆಡೆ ಶೋಧ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಎಸ್‍ಪಿ ಕುಮಾರಸ್ವಾಮಿ ತಂಡ ಶನಿವಾರ ಗಣಪತಿಯವರ ಪತ್ನಿ ಪಾವನಾ ಮತ್ತು ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ, ಗಣಪತಿಯವರ ತಂದೆ ಕುಶಾಲಪ್ಪ […]

    July 9, 2016
    ...

    ಜಗತ್ತಿನ ಬಲಿಷ್ಠ ಪೊಲೀಸ್ ಪಡೆಯ ಸಿಬ್ಬಂದಿಯನ್ನು ಹೊಡೆದುರುಳಿಸಿದಾತ ಮಿಲಿಟರಿ ಸ್ನೈಪರ್ ಆಗಿದ್ದ!

    ಗುರುವಾರ ಅಮೆರಿಕಾ ಪೊಲೀಸರ ಪಾಲಿನ ಕರಾಳ ದಿನ. ವಿಶ್ವದಲ್ಲೇ ಬಲಿಷ್ಠ ಪೊಲೀಸ್ ಪಡೆ ಬೆಚ್ಚಿ ಬಿದ್ದ ದಿನ. ತಮ್ಮನ್ನು ಯಾರು ಮುಟ್ಟಲಾರರು ಎಂದುಕೊಂಡಿದ್ದ ಪೊಲೀಸರಿಗೆ ಒಂದು ಕಡೆ ಅಘಾತ; ಇನ್ನೊಂದು ಕಡೆ ಮರ್ಯಾದೆಯ ಪ್ರಶ್ನೆ. ಗುರುವಾರ ರಾತ್ರಿ ಅಮೆರಿಕಾದ ದಲ್ಲಾಸ್ ನಗರದಲ್ಲಿ ಕರಿಯ ಜನಾಂಗದವರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇತ್ತೀಚೆಗೆ ಕಪ್ಪು ಜನಾಂಗದವರನ್ನು ಪೊಲೀಸರು ಹತ್ಯೆ ಮಾಡಿದ್ದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭ ಸ್ನೈಪರ್ಸ್ಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಪೊಲೀಸರು […]

    July 9, 2016
    ...

    ‘ಕ್ರೈಂ ಸ್ಟೋರಿ’ಯಲ್ಲಿ ರಕ್ತಪಾತ ನೋಡಿಯೇ ಮಲಗುತ್ತಿದ್ದ ವೀಕ್ಷಕರೆಲ್ಲಾ ಎಲ್ಲಿ ಮಾಯವಾದರು?

    ಕೆಲವು ವರ್ಷಗಳ ಹಿಂದಿನ ನಮ್ಮಲ್ಲಿ ಕತ್ತಲಾಗುತ್ತಿದ್ದಂತೆ ಮನೆ ಮನೆಗಳ ಟಿವಿ ಪರದೆಗಳ ಮೇಲೆ ರಕ್ತ ಚಿಮ್ಮುತ್ತಿತ್ತು. ಗಡುಸಾದ ಗಂಡು ದನಿಗಳು ಯಾರನ್ನು ಹೇಗೆ ಎಲ್ಲಿ ಕೊಚ್ಚಿದರು ಎಂದು ಕಾವ್ಯಾತ್ಮಕವಾಗಿ ವಿವರಿಸುತ್ತಿದ್ದವು. ಅದರ ಹಿನ್ನೆಲೆಯಲ್ಲಿ ಮೂಡಿ ಬರುತ್ತಿದ್ದ ಸಂಗೀತ ಕಿವಿಯ ತಮಟೆಗಳನ್ನು ಅಪ್ಪಳಿಸಿ, ರಕ್ತ ಬಿಸಿಯಾಗುವಂತೆ ಮಾಡುತ್ತಿತ್ತು. ‘ಇನ್ನಾದರೂ ಪೊಲೀಸರು ಬಳೆ ಕಳಚಿಟ್ಟು ಗಂಡಸರಾಗಲಿ’ ಎಂಬ ಅಭಿರುಚಿಗಳಿಂದ ಕೂಡಿರುವ, ಅನೂಹ್ಯವಾದ ಸಂದೇಶವನ್ನು ಸಾರುವ ಬರವಣಿಗೆ ಅಡುಗೆ ಮನೆಯಿಂದ ಹಿಡಿದು, ಕಚೇರಿಯ ಟೇಬಲ್ಲುಗಳವರೆಗೆ ಚರ್ಚೆಯ ವಸ್ತುವಾಗಿರುತ್ತಿತ್ತು. ಸೀನ್ ಕಟ್ ಮಾಡಿ […]

    July 9, 2016

Top