An unconventional News Portal.

    ...
    12924376_10154018780480692_7699217253194751731_n
    ಪತ್ರಿಕೆ

    ವಿಶ್ವೇಶ್ವರ ಭಟ್ಟರ ‘ಸುದ್ದಿ ಮನೆ’ಯಿಂದ ಹೊರಬಿದ್ದ ಭಡ್ತಿ: ಆಟದ ನಡುವೆಯೇ ಮತ್ತೊಂದು ವಿಕೆಟ್ ಔಟ್!

    ವಿಶ್ವೇಶ್ವರ ಭಟ್ಟರ ‘ಸುದ್ದಿ ಮನೆ’ಯಿಂದ ನಿರೀಕ್ಷಿತ ಸುದ್ದಿಯೊಂದು ಹೊರಬಿದ್ದಿದೆ. ಭಟ್ಟರ ಒಡನಾಡಿ, ಅವರ ಹೊಸ ಪತ್ರಿಕೆ ‘ವಿಶ್ವವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕ ರಾಧಾಕೃಷ್ಣ ಭಡ್ತಿ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿಶ್ವೇಶ್ವರ ಭಟ್ಟರ ನಿಕಟ ವಲಯದಲ್ಲಿ ಗುರುತಿಸಿಕೊಂಡವರಲ್ಲಿ ರಾಧಾಕೃಷ್ಣ ಭಡ್ತಿ ಕೂಡಾ ಒಬ್ಬರು. ಕೆಲವು ಪುಸ್ತಕಗಳನ್ನೂ ಬರೆದಿರುವ ರಾಧಾಕೃಷ್ಣ ಭಡ್ತಿ ಒಂದು ಕಾಲದಲ್ಲಿ ‘ವಿಜಯ ಕರ್ನಾಟಕ’ದಲ್ಲಿ ಹೆಸರು ಮಾಡಿದವರು. ‘ವಿಜಯ ಕರ್ನಾಟಕ’ದಿಂದ ವಿಶ್ವೇಶ್ವರ ಭಟ್ ಆಂಡ್ ಟೀಮ್ ಹೊರ ಬಿದ್ದಾಗ ಅದರಲ್ಲಿ ಭಡ್ತಿ ಕೂಡಾ ಇದ್ದರು…

    June 9, 2016
    ...
    rajya-sabha-1
    ದೇಶ

    ರಾಜ್ಯಸಭಾ ಚುನಾವಣೆಯ ಕಷ್ಟಕರ ‘ಅಂಕ ಗಣಿತ’: ಅರ್ಥ ಮಾಡಿಕೊಳ್ಳಲು 3 ಸರಳ ಸೂತ್ರಗಳು!

    ರಾಜ್ಯಸಭೆ ಚುನಾವಣೆ ‘ಕುದುರೆ ವ್ಯಾಪಾರ’ದ ಹಿನ್ನೆಲೆಯಲ್ಲಿ ದೇಶದ ಸುದ್ದಿಕೇಂದ್ರಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂ. 11ರಂದು ನಡೆಯುವ ಪರೋಕ್ಷ ಮತದಾನದ ಮೂಲಕ ನಾಲ್ವರನ್ನು ರಾಜ್ಯದ ಚುನಾಯಿತ ಶಾಸಕರು ಮೇಲ್ಮನೆಗೆ ಕಳುಹಿಸಿ ಕೊಡಲಿದ್ದಾರೆ. ಈ ಸಮಯದಲ್ಲಿ ರಾಜ್ಯಸಭಾ ಚುನಾವಣೆಯ ಹೇಗೆ ನಡೆಯುತ್ತದೆ? ಇಲ್ಲಿನ ‘ಮ್ಯಾಜಿಕ್ ನಂಬರ್’ ಹಿಂದಿರುವ ಫಾರ್ಮುಲಾ ಏನು? ಮತ್ತಿತರ ವಿಚಾರಗಳನ್ನು ಅತ್ಯಂತ ಸರಳವಾಗಿ ವಿವರಿಸುವ ಪ್ರಯತ್ನವನ್ನು ‘ಸಮಾಚಾರ’ ಇಲ್ಲಿ ಮಾಡಿದೆ. ಸಾಮಾನ್ಯವಾಗಿ ಚುನಾವಣೆ ಎಂದರೆ ಯಾರು ಹೆಚ್ಚು ಮತಗಳನ್ನು ಪಡೆಯುತ್ತಾರೋ, ಅವರು ಗೆದ್ದಂತೆ. ವಿಧಾನಸಭೆ ಅಥವಾ..

    June 9, 2016
    ...
    anupama-3
    ವಿಚಾರ

    ಸ್ಟೇಟಸ್ ಅಪ್ ಡೇಟ್ ಮಾಡ್ತೀರೋರು ಅವರೇ ಆದರೂ; ಕಾಮೆಂಟ್ ಮಾಡುವುದು, ಬಿಡುವುದು ನಮ್ಮ ಕೈಯಲ್ಲೇ ಇದೆಯಲ್ಲಾ?

    ನಮ್ಮೆಲ್ಲರೊಳಗೊಂದು ಮನಸ್ಥಿತಿ ಇದೆ. ಅದು ಈ ಕಾಲಘಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಬಗೆಗೆ ಸಂಬಂಧಿಸಿದ್ದು. ಯಾವುದಾದರೂ ಸಮಸ್ಯೆಯೊಂದು ಮುಖ್ಯವಾಹಿನಿಗೆ ಅಪ್ಪಳಿಸುತ್ತಿದ್ದಂತೆ, ನಮ್ಮೆಲ್ಲರೊಳಗೂ ಅಭಿಪ್ರಾಯವೊಂದು ರೂಪುಗೊಳ್ಳುತ್ತದೆ ಮತ್ತದು ಎಲ್ಲರಿಗೂ ತಿಳಿಯಬೇಕು ಎಂದು ಬಯಸುತ್ತದೆ. ಪೊಲೀಸರ ಪ್ರತಿಭಟನೆ ಇರಲಿ, ಗಾರ್ಮೆಂಟ್ಸ್ ಫ್ಯಾಕ್ಟರಿ ಮಹಿಳೆಯಯ ಹೋರಾಟ ಇರಲಿ, ನಟನೊಬ್ಬನ ವಿಚ್ಚೇದನ ಪ್ರಕರಣ ಇರಲಿ ಅಥವಾ ಈಗಿನ ಅನುಪಮ ಶೆಣೈ ರಾಜೀನಾಮೆ ಇರಲಿ. ಪ್ರತಿಯೊಂದಕ್ಕೂ ನಮ್ಮದೊಂದು ಅಭಿಪ್ರಾಯವನ್ನು ಹರಿಯಬಿಡುತ್ತೇವೆ. ಈ ಅಭಿಪ್ರಾಯಗಳಲ್ಲಿ ಸಮಾಜ ವಿಜ್ಞಾನಿಗಳ ಒಳನೋಟಗಳಿರುತ್ತವೆ, ಕಾನೂನು ತಜ್ಞರಂತೆ ಸಲಹೆಗಳಿರುತ್ತವೆ. ಎಲ್ಲೋ ಕೆಲವು ಕಡೆ ಮನಃಶಾಸ್ತ್ರಜ್ಞರಂತೆ..

    June 8, 2016
    ...
    kpsc-hunger-strike-1
    KPSC NEWS

    ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ FDA ಅಭ್ಯರ್ಥಿಗಳು: ಮರು ಪರೀಕ್ಷೆ ಆಗ್ರಹ ಮುಂದಿಟ್ಟ ಪ್ರತಿಭಟನಾಕಾರರು

    ಎಫ್ಡಿಎ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಅರ್ಹತಾ ಪಟ್ಟಿಯ ಆಯ್ಕೆ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಬುಧವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಭ್ಯರ್ಥಿಗಳು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರಕಾರ ಎಫ್ಡಿಎ ಮರುಪರೀಕ್ಷೆ ಸಂಬಂಧ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹ ಮುಂದಿಟ್ಟಿದ್ದಾರೆ. ಈ ಹಿಂದೆ ಇದೇ ಅಭ್ಯರ್ಥಿಗಳು ಒಂದು ದಿನ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಸಿಎಂ ಎಫ್ಡಿಎ..

    June 8, 2016
    ...
    kpsc-kagodu-1
    KPSC NEWS

    ಕೆಪಿಎಸ್ಸಿ ಅದ್ಯಕ್ಷ ಸ್ಥಾನಕ್ಕೆ ಕಳಂಕಿತ ಅಧಿಕಾರಿ ಶಾಮ್ ಭಟ್: ಸರಕಾರದ ನಡೆಗೆ ಸ್ಪೀಕರ್ ಕಾಗೋಡು ಗರಂ

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಶಾಮ್‍ ಭಟ್ ಅವರ ಹೆಸರನ್ನು ಶಿಫಾರಸು ಮಾಡಿರುವ ಸರ್ಕಾರದ ಕ್ರಮಕ್ಕೆ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, “ಕಳಂಕವನ್ನು ಹೊತ್ತುಕೊಂಡಿರುವ ಅಧಿಕಾರಿ ಶಾಮ್‍ ಭಟ್ ಹೆಸರನ್ನು ಶಿಫಾರಸು ಮಾಡಿರುವ ಕ್ರಮ ಸರಿಯಲ್ಲ,” ಎಂದು ಗರಂ ಆಗಿ ನುಡಿದರು. “ರಾಜ್ಯಪಾಲರು ಅವರ ಹೆಸರನ್ನು ಅಂಗೀಕರಿಸುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇವರ ಹೆಸರನ್ನು ಶಿಫಾರಸು..

    June 8, 2016
    ...
    shrinivas-hasana-1
    ರಾಜ್ಯ

    ‘ಪರ್ಯಾಯದ ಹುಡುಕಾಟ’: ಪೊಲೀಸ್ ಇಲಾಖೆಯಿಂದ ಬೇಸತ್ತು ಚುನಾವಣೆ ನಿಂತಾತ ಈಗ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ!

    ಅರಕಲಗೂಡು ಜಯಕುಮಾರ್ ಪೊಲೀಸ್ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿಗಳು ಪ್ರತಿಭಟನೆಗೆ ಮುಂದಾದ ಬೆಳವಣಿಗೆ ಹಸಿರಾಗಿದೆ. ಇದರ ನಡುವೆಯೇ, ಅದೇ ಪೊಲೀಸ್ ಇಲಾಖೆಯ ಒತ್ತಡದ ಕೆಲಸ, ಅಗೌರವಯುತ ಜೀವನದಿಂದ ಬೇಸತ್ತು ಹೊರಬಂದು ರಾಜಕೀಯ ಅಖಾಡಕ್ಕೆ ಇಳಿದವರನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಇವರು ರಾಜಕೀಯ ಅಖಾಡಕ್ಕೆ ಇಳಿದದ್ದು ಮಾತ್ರವಲ್ಲ, ಪ್ರಾಮಾಣಿಕರು ಎಂಬ ಹೆಸರನ್ನು ಉಳಿಸಿಕೊಂಡಿರುವ ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಅವರ ಮಾರ್ಗದರ್ಶನದಲ್ಲಿ ಚುನಾವಣೆಯನ್ನೂ ಗೆದ್ದು ಬಂದಿದ್ದಾರೆ. ಹಾಸನ ಜಿಲ್ಲಾ ಪಂಚಾಯ್ತಿಯ ಹಾಲಿ ಉಪಾಧ್ಯಕ್ಷ ಶ್ರೀನಿವಾಸ್ ಹಿಂದೊಮ್ಮೆ ಪೊಲೀಸ್ ಸಿಬ್ಬಂದಿಯಾಗಿದ್ದವರು. 17..

    June 7, 2016
    ...
    Img copy
    ಟಿವಿ

    ಗಂಡ ಹೆಂಡತಿಯ ‘ಪಬ್ಲಿಕ್’ ಜಗಳದಲ್ಲಿ ಏರಿದ್ದು ಟಿಆರ್ಪಿ; ಬಡವಾಗಿದ್ದು ‘ಉತ್ತಮ ಸಮಾಜ’!

    ಇದೊಂದು ವಿಷ ಚಕ್ರ. ಹತ್ತು ವರ್ಷಗಳ ಹಿಂದೆ ಕಾರಣವಿಲ್ಲದೆ ಟಿವಿ ಚಾನಲ್ ಒಂದು ನಡೆಸಿದ ಪ್ರಯೋಗದ ಯಶಸ್ಸು ತಂದಿಟ್ಟ ಫಜೀತಿ ಇದು. ಇವತ್ತು ಉಗುಳಿದರೆ ಟಿಆರ್ಪಿ ಎಂಬ ತುಪ್ಪ ಹೋಗುತ್ತದೆ, ನುಂಗಿದರೆ ಜನರ ಛೀಮಾರಿಯಿಂದ ಗಂಟಲು ಸುಡುತ್ತಿದೆ. ಒಟ್ಟಿನಲ್ಲಿ, ಇದು ಸೆರಗಿನಲ್ಲಿ ಕಟ್ಟಿಕೊಂಡಿರುವ ಕೆಂಡ. ಇವತ್ತಲ್ಲ ನಾಳೆ ಉಟ್ಟುಕೊಂಡಿರುವ ಸೀರೆ ಸುಟ್ಟು, ಬೆತ್ತಲಾಗುವುದರಲ್ಲಿ ಅನುಮಾನವಿಲ್ಲ. ಅಂದಾಗೆ, ಇದೇನಿದು ಸ್ವಗತ ಅಂತ ಆಲೋಚನೆ ಮಾಡುತ್ತಿದ್ದೀರಾ? ನಾವು ಹೇಳಲು ಹೊರಟಿರುವ ವಿಚಾರ ಈ ಸುದ್ದಿ ವಾಹಿನಿಗಳಲ್ಲಿ, ಮನೋರಂಜನೆ ವಾಹಿನಿಗಳಲ್ಲಿ ಬರುವ..

    June 7, 2016
    ...
    KNP
    ರಾಜ್ಯ

    ಮಳೆ ನಿಂತು ಹೋದ ಮೇಲೆ; ಸಿಎಂ ಸಿದ್ದರಾಮಯ್ಯ ಬೀದಿಗೆ ಇಳಿಯಲಿ: ನಗರವಾಸಿಗಳ ಸಂಕಟ ಅರಿಯಲಿ!

    ಮಳೆಗಾಲ… ರಾಜ್ಯದ ಯಾವ ಭಾಗದಲ್ಲೂ ಸೃಷ್ಟಿಸದ ನರಕವೊಂದು ಮಹಾನಗರ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಸುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ತಾಪಮಾನದಿಂದ ಕಂಗೆಡುವ ಇಲ್ಲಿನ ಜನ ಒಂದು ದೊಡ್ಡ ಮಳೆಗೆ ಹೈರಾಣಾಗಿ ಹೋಗುತ್ತಾರೆ. ಅದಕ್ಕೆ ಇಲ್ಲಿನ ಟ್ರಾಫಿಕ್ ಸಮಸ್ಯೆ, ಕಸದ ಸಮಸ್ಯೆ, ನೀರಿನ ಸಮಸ್ಯೆ ಜತೆಗೆ ಮಳೆ ನಿರ್ವಹಣೆಯಲ್ಲೂ ಸ್ಥಳೀಯ ಆಡಳಿತದ ಹೊಣೆಗೇಡಿತನಗಳು ಸೃಷ್ಟಿಸಿರುವ ಸಮಸ್ಯೆ ಕಾರಣ. ಸೋಮವಾರ ಸಂಜೆ ವೇಳೆಗೆ ಬೆಂಗಳೂರು ನಗರ ಭಾರೀ ಮಳೆಗೆ ಸಾಕ್ಷಿಯಾಯ್ತು. ಇಳಿಜಾರಿನ ಪ್ರದೇಶಗಳಲ್ಲಿ ಪ್ರವಾಹದಂತೆ ನೀರು ನುಗ್ಗಿತು…

    June 7, 2016
    ...
    Mathura_2880150f
    ದೇಶ

    ‘ಅಯ್ಯೋ ರಾಮ…!’: ಒಂದು ರೂಪಾಯಿಗೆ 60 ಲೀಟರ್ ಪೆಟ್ರೊಲ್ ಕೊಡಬೇಕು ಎಂಬ ಬೇಡಿಕೆ ಇಟ್ಟವ ಹತನಾಗಿ ಹೋದ!

    ಮಥುರಾದಲ್ಲಿ ನಡೆದ ಖಾಕಿ- ಕಾವಿ ನಡುವಿನ ಸಂಘರ್ಷದ ಬೆನ್ನಲ್ಲೇ ವಿವಾದಿತ ಧಾರ್ಮಿಕ ಸಂಘದ ಸುತ್ತ ಕುತೂಹಲಕಾರಿ ವಿಚಾರಗಳು ಒಂದೊಂದಾಗಿ ಹೊರಬೀಳುತ್ತಿವೆ. 24 ಜನರ ಸಾವಿಗೆ ಕಾರಣವಾದ ಮಥುರಾ ಘಟನೆಯ ರೂವಾರಿ ರಾಮ್ ವೃಕ್ಷ ಯಾದವ್ ಯಾರು? ವಿಚಿತ್ರ ಸಿದ್ಧಾಂತಗಳನ್ನು ಮುಂದಿಡುತ್ತಿರುವ ಈತನ ಗುರಿ ಏನಾಗಿತ್ತು? ಅದನ್ನು ನಿಮ್ಮ ಮುಂದೆ ಇಡಲಿದೆ ಈ ವರದಿ. ಯಾರು ಈ ರಾಮ್ ವೃಕ್ಷ್ ಯಾದವ್? ಎಲ್ಲರಿಗೂ ಒಂದು ದಿಕ್ಕಾದರೆ ಈತನಿಗೇ ಇನ್ನೊಂದು ದಿಕ್ಕು. ತನ್ನದೇ ಪ್ರಪಂಚದಲ್ಲಿ ಬದುಕುತ್ತಿರುವವ, ಇಂದಿಗೂ ನೇತಾಜಿ ಸುಭಾಷ್..

    June 6, 2016
    ...
    petrol-prices-hike-1
    ದೇಶ

    ‘ದೇವರು ಕೊಟ್ಟರೂ, ಪೂಜಾರಿಗಳು ಕೊಡುವುದಿಲ್ಲ’: ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಪೆಟ್ರೋಲ್ ಬೆಲೆ ಯಾಕೆ ಏರುತ್ತಿದೆ?

    ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯುತ್ತಿದ್ದರೂ ನಮ್ಮಲ್ಲಿ ಯಾಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ? ಇದು ಇವತ್ತು ಹೊರಗಿನ ವಿದ್ಯಮಾನಗಳ ಕುರಿತು ಕನಿಷ್ಟ ಜ್ಞಾನ ಇರುವ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಪ್ರಶ್ನೆ. ಕಚ್ಚಾ ತೈಲ ಉತ್ಪಾದನಾ ರಾಷ್ಟ್ರಗಳ ಜತೆಗೆ ಅಭಿವೃದ್ಧಿ ಹೊಂದಿರುವ ದೇಶಗಳೂ ಪೈಪೋಟಿಗೆ ಬಿದ್ದಂತೆ ಭೂಮಿಯಾಳದಿಂದ ತೈಲವನ್ನು ಹೊರತೆಗೆಯುತ್ತಿವೆ. ಹೀಗಾಗಿ 2014ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ ಇದ್ದ 106 ಡಾಲರ್ (7093.51 ರೂಪಾಯಿಗಳು) ಇಂದು 26 ಡಾಲರ್ (1739.92 ರೂಪಾಯಿ)ಗೆ..

    June 6, 2016

Top