An unconventional News Portal.

    ...
    rajya-sabha-1
    ಸುದ್ದಿ ಸಾರ

    ಕಾಂಗ್ರೆಸ್ಗೆ ಗೆಲುವಿನ ನಗೆ, ಬಿಜೆಪಿಗೆ ಸಮಾಧಾನ, ಜೆಡಿಎಸ್ಗೆ ಮಾತ್ರ ನಿರೀಕ್ಷಿತ ಆಘಾತ

    ಇಂದು (ಶನಿವಾರ) ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಒಂದು ಸ್ಥಾನ ಮತ್ತು ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದು ಎಂದಿನಂತೆ ಜೆಡಿಎಸ್ ಮುಖಭಂಗ ಅನುಭವಿಸಿದೆ.  ಜೆಡಿಎಸ್ ಪಕ್ಷದ ಎಂಟು ಶಾಸಕರು ವಿಪ್ ಉಲ್ಲಂಘಿಸಿ ಮತ ಚಲಾಯಿಸುವ ಮೂಲಕ  ಕಾಂಗ್ರೆಸ್‍ನ ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿಯನ್ನು ಗೆಲ್ಲಿಸಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಏನು? ಎಲ್ಲರಿಗೂ ಗೊತ್ತಿರುವಂತೆ ಮತ್ತದೇ ಕುದುರೆ ವ್ಯಾಪಾರ. ಕಾಂಗ್ರೆಸ್ ಪಕ್ಷದ ಹೆಚ್ಚುವರಿ ಮತಗಳು, ಪಕ್ಷೇತರರ ಮತಗಳು, ಜೆಡಿಎಸ್ ಬಂಡಾಯ ಮತಗಳನ್ನು ಒಟ್ಟಾಗಿಸಿ ರಾಮಮೂರ್ತಿ ಭರ್ಜರಿ 52 ಮತಗಳಿಂದ ಗೆಲ್ಲುವ..

    June 11, 2016
    ...
    Terror
    ರಾಜ್ಯ

    ಮಾಡದ ತಪ್ಪಿಗೆ 23 ವರ್ಷ ಜೈಲು: ಮಗನ ಬಿಡುಗಡೆಗಾಗಿ ಗುಲ್ಬರ್ಗದ ಈ ತಾಯಿ ಹಾಕಿದ ಕಣ್ಣೀರು ಹುಸಿಹೋಗಲಿಲ್ಲ!

    ಕಳೆದ ತಿಂಗಳು ಆತನಿಗೆ ಸಂಭ್ರಮವೋ ಸಂಭ್ರಮ. ಗಿಳಿಮರಿಯನ್ನು ಗೂಡಿನಿಂದ ಬಿಟ್ಟ ಸಂತೋಷ ಅವರ ಮುಖದಲ್ಲಿತ್ತು. ನಮ್ಮದೇ ಗುಲ್ಬರ್ಗ ಮೂಲದ ನಿಸಾರ್ ಉದ್ದೀನ್ ಅಹಮದ್ ಕಥೆ ಇದು. ಒಂದೇ ಒಂದು ಸುಳ್ಳು ಆರೋಪ ಇವರನ್ನು 23 ವರ್ಷ ಜೈಲು ಶಿಕ್ಷೆಗೆ ದೂಡಿತು. ಕೊನೆಗೂ ಆರೋಪ ಸಾಬೀತಾಗದೆ ಕಳೆದ ತಿಂಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಳ್ಳು ಆರೋಪಕ್ಕೆ ಬಲಿಯಾಗಿ ತನ್ನ ಬದುಕಿನ ಅಮೂಲ್ಯ ದಿನಗಳನ್ನು ಜೈಲಿನಲ್ಲಿ ಕಳೆದ ನತದೃಷ್ಟನ ಕತೆಯನ್ನು ಕರ್ನಾಟಕದ ಮೂಲದ ಹಿರಿಯ ಪತ್ರಕರ್ತ ಇಮ್ರಾನ್ ಖುರೇಶಿ ಬಿಬಿಸಿ- ಹಿಂದಿಗಾಗಿ ವರದಿ ಮಾಡಿದ್ದಾರೆ. ಅದರ..

    June 11, 2016
    ...
    kpsc-1
    KPSC NEWS

    FDA ಮರುಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ವಿಚಾರ: ಆಕ್ರೋಶ, ಅಭಿವ್ಯಕ್ತಿ ಹಾಗೂ ಭ್ರಮನಿರಸನ!

    ಎಫ್ಡಿಎ ಮರುಪರೀಕ್ಷೆಗೆ ಆಗ್ರಹಿಸಿ ಆರಂಭಗೊಂಡಿದ್ದ ಪ್ರತಿಭಟನೆ ತಾರ್ಕಿಕ ಅಂತ್ಯಕ್ಕೆ ಮುನ್ನವೇ ಭ್ರಮನಿರಸನವನ್ನು ಹುಟ್ಟು ಹಾಕಿದೆ. ಸಹಜ ಆಕ್ರೋಶದ ಅಭಿವ್ಯಕ್ತಿಯ ರೂಪವಾಗಿ ಸಾಮಾಜಿಕ ಜಾಲತಾಣದಲ್ಲಿ ಮೊಳಕೆಯೊಡೆದಿದ್ದ ಪ್ರತಿಭಟನೆ ಮೂರು ಹಂತಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಕಾವನ್ನು ಕಾಯ್ದುಕೊಂಡಿತ್ತು. ಮೊದಲು ‘ಕೆಪಿಎಸ್ಸಿ ಚಲೋ’ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ, ನಂತರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಕಾಲಿಟ್ಟಿತ್ತು. ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಜೂ. 9ರಂದು ನಡೆಸಲು ಕೆಲವು ಅಭ್ಯರ್ಥಿಗಳು ಮುಂದಾಗಿದ್ದರು ಕೂಡ. ಆದರೆ, ಪ್ರತಿಭಟನೆಗೆ ಒಂದು ದಿನ ಅನುಮತಿ ನೀಡಿದ್ದ ಪೊಲೀಸರು,..

    June 11, 2016
    ...
    sting
    ಮೀಡಿಯಾ 2.0

    ‘ಸ್ಟಿಂಗ್ ಆಪರೇಷನ್’ ಸುತ್ತ ಹುಟ್ಟಿಕೊಂಡಿರುವ ಜಿಜ್ಞಾಸೆ: ಪತ್ರಿಕೋದ್ಯಮಕ್ಕೆ ಇದರಿಂದ ಲಾಭನಾ? ನಷ್ಟನಾ?

    ಕುಟುಕು ಕಾರ್ಯಾಚರಣೆ.. ಪತ್ರಿಕೋದ್ಯಮಕ್ಕೆ ಒಳ್ಳೆದೋ, ಕೆಟ್ಟದ್ದೋ? ಅಥವಾ ಪತ್ರಿಕೋದ್ಯಮನೇ ಅಲ್ವಾ? ಪತ್ರಿಕೋದ್ಯಮದಲ್ಲಿಯೇ ಈ ಪ್ರಶ್ನೆಗಳಿಗೆ ಒಂದೇ ಉತ್ತರ ಸಿಗುವುದಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರ ‘ಕುದುರೆ ವ್ಯಾಪಾರ’ಕ್ಕೆ ಸಂಬಂಧಿಸಿದಂತೆ ಎರಡು ರಾಷ್ಟ್ರೀಯ ವಾಹಿನಿಗಳು ಕುಟುಕು ಕಾರ್ಯಾಚರಣೆ ನಡೆಸಿದ್ದವು. ಅದರಲ್ಲೂ ‘ಟೈಮ್ಸ್ ನೌ’ ವಾಹಿನಿಯ ಕುಟುಕು ಕಾರ್ಯಾಚರಣೆ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಕುಟುಕು ಕಾರ್ಯಾಚರಣೆ ಸುತ್ತಾ ಚರ್ಚೆಯೊಂದು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಕುಟುಕು ಕಾರ್ಯಾಚರಣೆ ಹಾಗೂ ತನಿಖಾ ಪತ್ರಿಕೋದ್ಯಮದ ಕುರಿತು ಇರುವ ಜಿಜ್ಞಾಸೆಗಳನ್ನು ನಿಮ್ಮ ಮುಂದಿಡುತ್ತಿದೆ. ಸ್ಟಿಂಗ್..

    June 11, 2016
    ...
    INS-Vikramaditya-2
    ರಾಜ್ಯ

    ಐಎಸ್ಎಸ್ ವಿಕ್ರಮಾದಿತ್ಯದಲ್ಲಿ ವಿಷಾನಿಲ ಸೋರಿಕೆ: ಮೋದಿ ಉದ್ಘಾಟಿಸಿದ ಸಮರನೌಕೆಯಲ್ಲಿ ಮೊದಲ ದುರಂತ

    ಭಾರತೀಯ ನೌಕಾ ಪಡೆಗೆ ಸೇರಿದ ‘ಐಎನ್ಎಸ್ ವಿಕ್ರಮಾದಿತ್ಯ’ ಸಮರ ನೌಕೆಯಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ಇದು ಕಾರವಾರ ನೌಕಾನೆಲೆಯ ವ್ಯಾಪ್ತಿಯೊಳಗೆ ನಡೆದಿರುವ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಸುತ್ತಾಟದ ನಂತರ ಕಾರವಾರ ನೌಕಾನೆಲೆಯ ವ್ಯಾಪ್ತಿಯಲ್ಲಿ ನೌಕೆಯು ಬಂದು ನಿಂತಿತ್ತು. ಈ ಸಮಯದಲ್ಲಿ ಬಿಡಿ ಭಾಗಗಳ ರಿಪೇರಿ ಕಾರ್ಯ ನಡೆಸುತ್ತಿದ್ದಾಗ ಈ ದುರಂತ ಘಟಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಈ ಕುರಿತು ನೌಕಾಪಡೆಯ ವಕ್ತಾರರು ಮಾಹಿತಿ ನೀಡಿದ್ದು, “ಸ್ಥಳೀಯರೊಬ್ಬರು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ…

    June 11, 2016

Top