An unconventional News Portal.

    ...
    Mathura_2880150f
    ದೇಶ

    ‘ಅಯ್ಯೋ ರಾಮ…!’: ಒಂದು ರೂಪಾಯಿಗೆ 60 ಲೀಟರ್ ಪೆಟ್ರೊಲ್ ಕೊಡಬೇಕು ಎಂಬ ಬೇಡಿಕೆ ಇಟ್ಟವ ಹತನಾಗಿ ಹೋದ!

    ಮಥುರಾದಲ್ಲಿ ನಡೆದ ಖಾಕಿ- ಕಾವಿ ನಡುವಿನ ಸಂಘರ್ಷದ ಬೆನ್ನಲ್ಲೇ ವಿವಾದಿತ ಧಾರ್ಮಿಕ ಸಂಘದ ಸುತ್ತ ಕುತೂಹಲಕಾರಿ ವಿಚಾರಗಳು ಒಂದೊಂದಾಗಿ ಹೊರಬೀಳುತ್ತಿವೆ. 24 ಜನರ ಸಾವಿಗೆ ಕಾರಣವಾದ ಮಥುರಾ ಘಟನೆಯ ರೂವಾರಿ ರಾಮ್ ವೃಕ್ಷ ಯಾದವ್ ಯಾರು? ವಿಚಿತ್ರ ಸಿದ್ಧಾಂತಗಳನ್ನು ಮುಂದಿಡುತ್ತಿರುವ ಈತನ ಗುರಿ ಏನಾಗಿತ್ತು? ಅದನ್ನು ನಿಮ್ಮ ಮುಂದೆ ಇಡಲಿದೆ ಈ ವರದಿ. ಯಾರು ಈ ರಾಮ್ ವೃಕ್ಷ್ ಯಾದವ್? ಎಲ್ಲರಿಗೂ ಒಂದು ದಿಕ್ಕಾದರೆ ಈತನಿಗೇ ಇನ್ನೊಂದು ದಿಕ್ಕು. ತನ್ನದೇ ಪ್ರಪಂಚದಲ್ಲಿ ಬದುಕುತ್ತಿರುವವ, ಇಂದಿಗೂ ನೇತಾಜಿ ಸುಭಾಷ್..

    June 6, 2016
    ...
    petrol-prices-hike-1
    ದೇಶ

    ‘ದೇವರು ಕೊಟ್ಟರೂ, ಪೂಜಾರಿಗಳು ಕೊಡುವುದಿಲ್ಲ’: ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಪೆಟ್ರೋಲ್ ಬೆಲೆ ಯಾಕೆ ಏರುತ್ತಿದೆ?

    ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯುತ್ತಿದ್ದರೂ ನಮ್ಮಲ್ಲಿ ಯಾಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ? ಇದು ಇವತ್ತು ಹೊರಗಿನ ವಿದ್ಯಮಾನಗಳ ಕುರಿತು ಕನಿಷ್ಟ ಜ್ಞಾನ ಇರುವ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಪ್ರಶ್ನೆ. ಕಚ್ಚಾ ತೈಲ ಉತ್ಪಾದನಾ ರಾಷ್ಟ್ರಗಳ ಜತೆಗೆ ಅಭಿವೃದ್ಧಿ ಹೊಂದಿರುವ ದೇಶಗಳೂ ಪೈಪೋಟಿಗೆ ಬಿದ್ದಂತೆ ಭೂಮಿಯಾಳದಿಂದ ತೈಲವನ್ನು ಹೊರತೆಗೆಯುತ್ತಿವೆ. ಹೀಗಾಗಿ 2014ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ ಇದ್ದ 106 ಡಾಲರ್ (7093.51 ರೂಪಾಯಿಗಳು) ಇಂದು 26 ಡಾಲರ್ (1739.92 ರೂಪಾಯಿ)ಗೆ..

    June 6, 2016
    ...
    kpsc-bangalore-1
    KPSC NEWS

    FDA ಮರುಪರೀಕ್ಷೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ: ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ದಾಖಲೆಗಳಿಲ್ಲಎಂದ ಕೆಪಿಎಸ್ಸಿ

    ವಿವಾದಕ್ಕೆ ಕಾರಣವಾಗಿರುವ FDA ಮರು ಪರೀಕ್ಷೆಗೆ ಆಗ್ರಹಿಸಿ ಜೂ. 8ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಅಭ್ಯರ್ಥಿಗಳು ತೀರ್ಮಾನಿಸಿದ್ದಾರೆ. ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಮನವಿಯನ್ನು ಸ್ವೀಕರಿಸಿದ್ದರು. ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸೂಕ್ತ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಕಳೆದ ತಿಂಗಳು ಹೇಳಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ,” ಎಂದು ಮಾಹಿತಿ ನೀಡಿದರು. ಈ..

    June 6, 2016
    ...
    neetu1-1458555522-800
    ಪಾಸಿಟಿವ್

    ಬದುಕಿನ ಎಲ್ಲಾ ಆಯಾಮಗಳಲ್ಲಿ ‘ಕುಸ್ತಿ’ ಮಾಡುತ್ತಲೇ ಸಮಸ್ಯೆಗಳನ್ನು ಮೆಟ್ಟಿ ನಿಂತಾಕೆ ಸರ್ಕಾರ್!

    ಆಕೆಗೆ ಆಗ ಹದಿನೈದು ವರ್ಷ. ಆ ಪುಟ್ಟ ವಯಸ್ಸನಲ್ಲಿ ಆಕೆ ಎರಡೆರಡು ಮದುವೆಗಳನ್ನು ನೋಡಬೇಕಾಯಿತು. ಮಾತ್ರವಲ್ಲ ಆ ವಯಸ್ಸಿಗಾಗಲೇ ಆಕೆ ಎರಡು ಮಕ್ಕಳನ್ನು ಹೆತ್ತಿದ್ದರಿಂದ ಅವರನ್ನು ಸಾಕುವ ಜವಾಬ್ದಾರಿಯೂ ಆಕೆಯ ಹೆಗಲೇರಿತ್ತು. ಅಷ್ಟಾಗಿದ್ದರೆ ಇಲ್ಲಿ ನಾವಿವತ್ತು ಈ ಸ್ಟೋರಿಯನ್ನು ನಿಮ್ಮ ಮುಂದಿಡಲು ಕಾರಣಗಳೇ ಇರುತ್ತಿರಲಿಲ್ಲ. ಆ ಛಲಗಾತಿ ಬಳಿಕ ತೆಗೆದುಕೊಂಡ ನಿರ್ಧಾರ ಹಾಗೂ ನಂತರ ಸಾಧಿಸಿದ ಮೈಲಿಗಲ್ಲು ಬಾಕ್ಸಿಂಗ್ ಲೋಕದ ‘ದಿ ಗ್ರೆಟೆಸ್ಟ್’ ಮಹಮದ್ ಅಲಿ ನಮ್ಮನ್ನಗಲಿದ ಈ ಸಮಯದಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುವಂತದ್ದು. ಆಕೆಯ ಹೆಸರು ನೀತು ಸರ್ಕಾರ್. ಊರು..

    June 6, 2016
    ...
    2e6892572ac94430b5acbbc1791c8b81_18
    ಪತ್ರಿಕೆ

    ಅಂತರಾಳದ ಕಣ್ಣುಗಳಲ್ಲಿಯೇ ಪ್ರಪಂಚವನ್ನು ಅರಿಯುವ ಈಕೆ ನಮ್ಮ ನಡುವಿನ ಅಪರೂಪದ ಪತ್ರಕರ್ತೆ!

    ಪತ್ರಕರ್ತರಾದವರಿಗೆ, ಅದರಲ್ಲೂ ವರದಿಗಾರರಿಗೆ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡುತ್ತಿರಬೇಕು ಎಂಬುದು ಪತ್ರಿಕೋದ್ಯಮದಲ್ಲಿ ಚಾಲ್ತಿಯಲ್ಲಿರುವ ಮಾತು. ಸುದ್ದಿಗಳನ್ನು ಗ್ರಹಿಸಲು ಇವು ಅತ್ಯಗತ್ಯ ಎನ್ನುತ್ತಾರೆ. ಆದರೆ ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧದ ಅಮಾನವೀಯ ಮುಖವನ್ನು ಲೋಕದ ಮುಂದೆ ತೆರೆದಿಟ್ಟ ಈ ಪತ್ರಕರ್ತೆಗೆ ಕಣ್ಣು ಕಾಣುವುದಿಲ್ಲ. ಆಕೆಯ ಹೆಸರು ಬುಡೋರ್ ಹಸ್ಸನ್. ಬುಡೋರ್ ಹಸ್ಸನ್ ವಿಕಲಚೇತನ ಪತ್ರಕರ್ತೆ. ಈಕೆಗೆ ದೃಷ್ಠಿ ದೋಷವಿದೆ. ಆದರೆ ಸುತ್ತಲಿನ ಪ್ರಪಂಚವನ್ನು ಅರಿಯಲು ಅಥವಾ ತನಗೆ ಅರಿವಿಗೆ ಬಂದ ಸಂಗತಿಯನ್ನು ಜಗತ್ತಿಗೆ ತಿಳಿಸಲು ಈಕೆಗೆ ಯಾವುದೇ ಸಮಸ್ಯೆ ಇಲ್ಲ. ನಮ್ಮಂತಹ ಸಾಮಾನ್ಯರು ನೋಡುವುದಕ್ಕಿಂತ..

    June 6, 2016

Top