An unconventional News Portal.

  ...

  ಮಹಾರಾಷ್ಟ್ರ ಬಿಜೆಪಿಯಲ್ಲಿ ಮತ್ತೊಂದು ಓಬಿಸಿ ನಾಯಕನ ತಲೆದಂಡ: ಸಚಿವ ಸ್ಥಾನಕ್ಕೆ ಏಕನಾಥ ಖಡ್ಸೆ ರಾಜೀನಾಮೆ

  ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಹಾಗೂ ರಾಷ್ಟ್ರೀಯ ಬಿಜೆಪಿ ನಾಯಕರ ನಡುವೆ ನಡೆಯುತ್ತಿದ್ದ ಹಗ್ಗ- ಜಗ್ಗಾಟದಲ್ಲಿ ಕೊನೆಗೂ ಸಚಿವ ಏಕನಾಥ ಖಡ್ಸೆ ತಲೆದಂಡವಾಗಿದೆ. ಶನಿವಾರ ಖಡ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಖಡ್ಸೆ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಹಾಗೂ ಭೂಗತ ಪಾತಕಿ ದಾವೂದ್ ಜತೆ ಸಂಪರ್ಕ ಹೊಂದಿರುವ ಬಗ್ಗೆ ವಿಸ್ತೃತ ವರದಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಎರಡು ವರ್ಷಗಳ […]

  June 4, 2016
  ...

  ‘ಬಾಕ್ಸಿಂಗ್ ರಿಂಗ್’ ಹೊರಗೆ ಔಷಧಿ ಇಲ್ಲದ ಖಾಯಿಲೆ ವಿರುದ್ಧ ಹೋರಾಡುತ್ತಲೇ ಇದ್ದ ಅಪರೂಪದ ಕ್ರೀಡಾಪಟು ಮಹಮದ್ ಅಲಿ ಇನ್ನಿಲ್ಲ

  ಜಗತ್ತು ಕಂಡು ಅಪರೂಪದ ಕ್ರೀಡಾಪಟು, ವ್ಯವಸ್ಥೆ ಜತೆ ರಾಜೀ ಮಾಡಿಕೊಳ್ಳದ ಹೋರಾಟಗಾರ, ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ಮಾತುಗಾರ, ಔಷಧಿ ಇಲ್ಲದ ನರರೋಗದ ವಿರುದ್ಧ ನಾಲ್ಕು ದಶಕಗಳ ಕಾಲ ಒಳಗೆ ಬಡಿದಾಡುತ್ತಲೇ, ಸಾಮಾಜಿಕವಾಗಿ ಜಾಗೃತಿ ಮೂಡಿಸಿದ್ದ ‘ದಿ ಗ್ರೆಟೆಸ್ಟ್’ ಬಾಕ್ಸರ್ ಮಹಮದ್ ಅಲಿ ಇನ್ನಿಲ್ಲ. ಅಮೆರಿಕಾ ಕಾಲಮಾನ ಶುಕ್ರವಾರ ರಾತ್ರಿ ಫೀನಿಕ್ಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಅಲಿಗೆ 74 ವರ್ಷ ವಯಸ್ಸಾಗಿತ್ತು. 1960ರಲ್ಲಿ ಬಾಕ್ಸಿಂಗ್ ಅಖಾಡಕ್ಕಿಳಿದ ಅಲಿ, ತನ್ನ ಬದುಕಿನುದ್ದಕ್ಕೂ ಗಳಿಸಿದ ಕೀರ್ತಿ, ಅನುಭವಿಸಿದ ಅವಮಾನಗಳು ಹಾಗೂ ಎಲ್ಲವನ್ನೂ […]

  June 4, 2016
  ...

  ಇದು ಮಾನವನ ಮೂಳೆ, ತಲೆ ಬುರುಡೆಗಳಿಂದ ಅಲಂಕೃತಗೊಂಡಿರುವ ದೇಗುಲ; ಕೈ ಮುಗಿದು ಒಳಗೆ ಬನ್ನಿ!

  ನೀವು ಆಸ್ತಿಕರೋ? ಅಥವಾ ನಾಸ್ತಿಕರೋ? ಗೊತ್ತಿಲ್ಲ. ಆದರೆ ದೇವರು ಇದ್ದಾನೆ ಎಂದು ನಂಬುವ ಸ್ಥಳಗಳಿಗೂ, ಸ್ಮಶಾನಗಳಿಗೂ ಇರುವ ವ್ಯತ್ಯಾಸ ನಿಮಗೆ ಗೊತ್ತೇ ಇರುತ್ತದೆ. ಆದರೆ ಇಲ್ಲೊಂದು ಚರ್ಚು ಇದೆ. ಹೊರಗಡೆಯಿಂದ ನೋಡಿದರೆ ಇದು ಅದ್ಭುತವಾಗಿ ಕಾಣಿಸುತ್ತದೆ. ಒಳಗಡೆ ಅಲಂಕಾರಕ್ಕೆ ಬಳಸಿರೋದು ಮಾತ್ರ ಮನುಷ್ಯನ ತಲೆ ಬುರುಡೆಗಳು ಹಾಗೂ ಅಸ್ತಿಪಂಜರದ ಭಾಗಗಳು. ಸ್ಮಶಾನದಲ್ಲಿರಬೇಕಾದ ಅಸ್ತಿಗಳೇ ಇಲ್ಲಿನ ಇಂಟೀರಿಯರ್ ಡೆಕೊರೇಶನ್ಗೆ ಬಳಕೆಯಾದ ವಸ್ತುಗಳು. ಚರ್ಚ್’ನ ಎಲ್ಲಾ ಭಾಗದಲ್ಲೂ ಅದ್ಭುತ ಎಂಬಂತೆ ಅತ್ಯಂತ ಸುಂದರವಾಗಿ ಹಾಗೂ ಕಲಾತ್ಮಕವಾಗಿ ಮೂಳೆಗಳನ್ನು ಜೋಡಿಸಿಡಲಾಗಿದೆ. ಒಮ್ಮೆ ನೋಡಲು ಭಯವನ್ನು ಹುಟ್ಟಿಸಿದರೂ […]

  June 4, 2016
  ...

  ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ: ‘ಟೈಮ್ಸ್ ನೌ’ಗೆ ‘ಆಫ್ ದಿ ರೆಕಾರ್ಡ್’ ಮಾಹಿತಿಯೇ ವರ!

  ‘ಆಫ್ ದಿ ರೆಕಾರ್ಡ್’.. ಪತ್ರಿಕೋದ್ಯಮದಲ್ಲಿದ್ದವರಿಗೆ ಈ ಪದದ ಅರ್ಥ ಗೊತ್ತಿರುತ್ತದೆ. ಮೂಲಗಳ ಜತೆ ವರದಿಗಾರರು ಒಂದು ಕ್ಷಣ ವೃತ್ತಿಯನ್ನು ಮರೆತು ಮಾತನಾಡುವುದು, ಅವುಗಳನ್ನು ಭಿತ್ತರಿಸುವುದಿಲ್ಲ ಅಥವಾ ಪ್ರಕಟಿಸುವುದಿಲ್ಲ ಎಂಬ ಕರಾರಿನ ಮೇಲೆ ಮಾಹಿತಿ ಪಡೆದುಕೊಳ್ಳುವುದೇ ಈ ‘ಆಫ್ ದಿ ರೆಕಾರ್ಡ್’… ಅಲ್ಲಿ ಕರಾಳ ಸತ್ಯಗಳು ಅನಾವರಣಗೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಂತ ಅವುಗಳನ್ನು ಯಾರೂ ಸುದ್ದಿ ಮಾಡುವುದಿಲ್ಲ. ಅದು ವರದಿಗಾರಿಕೆಯ ಅಲಿಖಿತ ನಿಯಮ. ಇದಕ್ಕಿರುವ ಕಾರಣಗಳಲ್ಲಿ ಒಂದು ಪತ್ರಿಕೋದ್ಯಮದ ಕೆಲವು ಮೂಲಭೂತ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿದೆ. ಅದರ ಆಚೆಗೂ, ‘ಆಫ್ ದಿ ರೆಕಾರ್ಡ್’ ಮಾಹಿತಿ […]

  June 4, 2016

Top