An unconventional News Portal.

  ...

  ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕೆ ಕೋಟಿ ಕೋಟಿ ಬೇಡಿಕೆ ಇಟ್ಟ ಶಾಸಕರು: ‘ಇಂಡಿಯಾ ಟುಡೆ’ ಇನ್ವೆಷ್ಟಿಗೇಶನ್

  ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಭಾರಿ ಮೊತ್ತದ ಲಂಚದ ಬೇಡಿಕೆ ಮುಂದಿಟ್ಟ ರಾಜ್ಯದ ನಾಲ್ವರು ಶಾಸಕರ ಬಣ್ಣವನ್ನು ‘ಇಂಡಿಯಾ ಟುಡೆ’ ರಹಸ್ಯ ಕ್ಯಾಮೆರಾಗಳು ಬಯಲು ಮಾಡಿವೆ. ಗುರುವಾರ ಸಂಜೆ ವೇಳೆ ರಾಷ್ಟ್ರೀಯ ವಾಹಿನಿ ಭಿತ್ತರಿಸಿದ ತನಿಖಾ ವರದಿಯಲ್ಲಿ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಐದು ಕೋಟಿ- ಹತ್ತು ಕೋಟಿ ಲಂಚದ ಬೇಡಿಕೆ ಮುಂದಿಟ್ಟುಕೊಂಡು ಮಾತುಕತೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ದಿಲ್ಲಿ ಹಾಗೂ ಬೆಂಗಳೂರಿನ ಪಂಚತಾರ ಹೋಟೆಲ್ನಲ್ಲಿ ವಾಹಿನಿಯ ‘ವಿಶೇಷ ತನಿಖಾ ತಂಡ’ದ ಸದಸ್ಯರು ಬಸವ ಕಲ್ಯಾಣದ […]

  June 2, 2016
  ...

  14 ವರ್ಷಗಳ ನಂತರ ‘ಗುಲ್ಬರ್ಗ್ ಸೊಸೈಟಿ ಪ್ರಕರಣ’ದಲ್ಲಿ 24 ಜನರಿಗೆ ಶಿಕ್ಷೆ

  ದೇಶಾದ್ಯಂತ ತಲ್ಲಣ ಮೂಡಿಸಿದ್ದ ಗುಜರಾತಿನ ಕೋಮು ಸಂಘರ್ಷದ ಸಮಯದಲ್ಲಿ ನಡೆದ ‘ಗುಲ್ಬರ್ಗ್ ಸೊಸೈಟಿ’ ಪ್ರಕರಣದಲ್ಲಿ 24 ಜನರಿಗೆ ಶಿಕ್ಷೆ ವಿಧಿಸಿ ಅಹಮದಾಬಾದ್ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ಹೊರಟಿಸಿದೆ. ಒಟ್ಟು 66 ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳು ಎಂದು ಹೆಸರಿಸಲಾಗಿತ್ತು. ಈ ಪೈಕಿ 24 ಮಂದಿಗೆ ಶಿಕ್ಷೆ ಪ್ರಕಟವಾಗಿದೆ. 11 ಜನರ ವಿರುದ್ಧ ಕೊಲೆ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ತೀರ್ಪಿನ ಹಿನ್ನೆಲೆಯಲ್ಲಿ ಪ್ರಮುಖ 10 ಅಂಶಗಳು ಇಲ್ಲಿವೆ. ಪ್ರಕರಣದ ನಡೆದು 14 ವರ್ಷಗಳ ನಂತರ ತೀರ್ಪು […]

  June 2, 2016
  ...

  ಪೊಲೀಸರ ಪ್ರತಿಭಟನೆ ಮೇಲೆ ಮೊದಲ ‘ಮಹಾ ಪ್ರಹಾರ’: ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಬಂಧನ

  ಪೊಲೀಸರ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ‘ಎಸ್ಮಾ’ ಜಾರಿಯಾದ 24 ಗಂಟೆಯೊಳಗೆ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಧ್ಯರಾತ್ರಿ 12.30ರ ಸುಮಾರಿಗೆ ಯಲಹಂಕ ನ್ಯೂಟೌನ್ ಆರ್ಟಿಒ ಕಛೇರಿ ಹಿಂಭಾಗದಲ್ಲಿರುವ ಮನೆಯಿಂದ ಶಶಿಧರ್ ಅವರನ್ನು ಸುಮಾರು 30 ಮಂದಿ ಇದ್ದ ಪೊಲೀಸರ ತಂಡ ಕರೆದುಕೊಂಡು ಹೋಗಿದೆ. ಘಟನೆ ನಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ಶಶಿಧರ್ ಮಗ ‘ತಂದೆಯ ಬಂಧನವಾಗಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾನೆ. ‘ಏನೇ ಆಗಲಿ, ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಕೈ […]

  June 2, 2016
  ...

  ವೇತನ ಹೆಚ್ಚಳ ಆಗ್ರಹಕ್ಕೆ ಕೂಡ ಬಂದ ಕಾಲ: ಸಾಂಕೇತಿಕ ಪ್ರತಿಭಟನೆಗೆ ಮುಂದಾದ ಸರಕಾರಿ ನೌಕರರು

  ಹೆಚ್ಚುತ್ತಿರುವ ಅಕ್ಕಿ, ಬೇಳೆಕಾಳು, ಸೊಪ್ಪು- ತರಕಾರಿ, ಪೆಟ್ರೋಲ್- ಡೀಸೆಲ್- ಅಡುಗೆ ಅನಿಲ ಮತ್ತಿತರ ಅಗತ್ಯ ವಸ್ತುಗಳ ಬೆಲೆಗಳು ನಿತ್ಯ ಬದುಕನ್ನು ಹೈರಾಣಾಗಿಸುತ್ತಿವೆ. ದುಡಿಮೆ ಹಾಗೂ ಖರ್ಚಿನ ನಡುವೆ ಅಂತರ ಕಡಿಮೆಯಾಗುತ್ತಿದೆ, ಇಲ್ಲದೇ ದುಡಿಮೆಗಿಂತಲೂ ಖರ್ಚು ಹೆಚ್ಚುತ್ತಿದೆ. ನೆಮ್ಮದಿಯಿಂದ ಬದುಕುವುದು ಕಷ್ಟ ಎನ್ನಿಸುತ್ತಿದೆ, ಮಕ್ಕಳಿಗೆ ಇಷ್ಟಪಟ್ಟ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುತ್ತಿಲ್ಲ… ಹೀಗೆ ಸಮಸ್ಯೆಗಳ ಪಟ್ಟಿಯನ್ನು ಮುಂದಿಡುತ್ತಿರುವವರು ಕೊಳಗೇರಿಗಳ ಜನರಲ್ಲ, ರೈತರಲ್ಲ, ಬದಲಿಗೆ ಸರಕಾರಿ ನೌಕರರು. ಈ ವರ್ಷದ ಆರಂಭದಲ್ಲಿ ಹೈಸ್ಕೂಲು ಮತ್ತು ಪಿಯು ಉಪನ್ಯಾಸಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಲ್ಲಿಂದ […]

  June 2, 2016
  ...

  ‘ಎಸ್ಮಾ’ ಎಂಬ ಚಾಪೆ ಕೆಳಗೆ ಮೌನ ಪ್ರತಿಭಟನೆಯ ರಂಗೋಲಿ: ಹೊಸ ತಿರುವು ಪಡೆದುಕೊಳ್ಳುತ್ತಾ ಪೊಲೀಸರ ಚಳವಳಿ?

  ‘ಎಸ್ಮಾ’ ಜಾರಿ ಹಿನ್ನೆಲೆಯಲ್ಲಿ ಜೂನ್ 4ರಂದು ಪೊಲೀಸರು ನಡೆಸಲು ತೀರ್ಮಾನಿಸಿದ್ದ ‘ರಜೆ ಚಳವಳಿ’ ಹೊಸ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ. 31 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಇಳಿದಿರುವ ಕರ್ನಾಟಕ ರಾಜ್ಯ ಪೊಲೀಸ್ ಸಂಘ ಹಾಗೂ ಮಹಾ ಸಂಘಗಳ ಅಡಿಯಲ್ಲಿ ರಾಜ್ಯವ್ಯಾಪಿ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಕೋರಿ ಅರ್ಜಿಯನ್ನು ಸಲ್ಲಿಸಲು ಶುರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಒಳಾಡಳಿತ ಇಲಾಖೆ ಅಧೀನ ಕಾರ್ಯದರ್ಶಿ ಮೂಲಕ ಪೊಲೀಸರನ್ನೂ ‘ಅತ್ಯಾವಶ್ಯಕ ಸೇವೆ’ಗಳ ಅಡಿಯಲ್ಲಿ ತರುವ  ಮೂಲಕ ಎಸ್ಮಾ […]

  June 2, 2016
  ...

  ಭಾರತ, ಡಿಜಿಟಲ್ ಪತ್ರಿಕೋದ್ಯಮ ಮತ್ತು ಸಂಚಲನ ಮೂಡಿಸುತ್ತಿರುವ ಸ್ಟಾರ್ಟ್ ಅಪ್ಸ್!

  ‘ರಾಯಟರ್ಸ್ ಇನ್ಸಿಟ್ಯೂಟ್  ಫಾರ್ ದಿ ಸ್ಟಡಿ ಆಫ್ ಜರ್ನಲಿಸಂ’ ಇತ್ತೀಚೆಗೆ ‘ಡಿಜಿಟಲ್ ಜರ್ನಲಿಸಂ ಸ್ಟಾರ್ಟ್ ಅಪ್ಸ್ ಇನ್ ಇಂಡಿಯಾ’ (Digital Journalism Startups in India) ಎಂಬ ವಿಷಯದ ಕುರಿತು ಅಧ್ಯಯನ ವರದಿಯೊಂದನ್ನು ಹೊರತಂದಿದೆ. ಸಾಕಷ್ಟು ಒಳನೋಟಗಳನ್ನು ತೆರೆದಿಡುವ ವರದಿಯ ಆಯ್ದ ಭಾಗಗಳು ಇಲ್ಲಿವೆ. ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಇಂಡಿಯಾ ಟುಡೇ ವಿಶ್ವದಲ್ಲೇ ವೇಗವಾಗಿ ಅಂತರ್ಜಾಲ ಬಳಕೆದಾರರನ್ನು ಪಡೆಯುತ್ತಿರುವ ಮಾಧ್ಯಮಗಳಲ್ಲಿ ಮೊದಲ ಸಾಲಿನಲ್ಲಿದೆ ಎಂದು ವರದಿ ಹೇಳಿದೆ. ಇದಕ್ಕೆ ಅದು ಕಾರಣಗಳನ್ನೂ […]

  June 2, 2016

Top