An unconventional News Portal.

  ...

  ಕೋಟ್ಯಾಂತರ ಡಾಲರ್ ವಹಿವಾಟು ನಡೆಸುವ ‘ಗನ್ ಲಾಬಿ’ ಒಬಾಮ ಕಣ್ಣೀರಿಗೂ ಮಣಿದಿರಲಿಲ್ಲ!

  ಅಮೆರಿಕಾದಲ್ಲಿ ಗುಂಡಿನ ದಾಳಿಗಳು ಹೊಸದಲ್ಲ. ಒಂದಿಲ್ಲೊಂದು ಶೂಟೌಟ್‍ಗಳು ದೇಶದಲ್ಲಿ ದಿನನಿತ್ಯ ಜರುಗುತ್ತಿರುತ್ತವೆ. ಕಳೆದ 5-6 ವರ್ಷಗಳ ಅಂತರದಲ್ಲಿ ಪ್ರತಿ ವರ್ಷ ಮುನ್ನೂರಕ್ಕೂ ಹೆಚ್ಚು ಜನ ಗುಂಡಿನ ದಾಳಿಗೆ ಇಲ್ಲಿ ಸಾವನ್ನಪ್ಪಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು. ಕಳೆದೆರಡು ವರ್ಷಗಳಲ್ಲಿ ಈ ಸಂಖ್ಯೆ 500 ದಾಟಿದ್ದು ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಅದರಲ್ಲೂ ಈ ವರ್ಷ ಸರಣಿ ಗುಂಡಿನ ದಾಳಿಗಳಿಗೆ ಅಮೆರಿಕಾ ಸಾಕ್ಷಿಯಾಗಿದೆ. ಮಾದರಿ ಎನಿಸಿಕೊಂಡ ದೇಶದಲ್ಲಿ ನಡೆಯುತ್ತಿರುವ ಈ ಘಟನೆಗಳು ಅಚ್ಚರಿಗೆ ದೂಡುತ್ತವೆ. ಅಮೆರಿಕಾದಲ್ಲಿ ಕಾನೂನು, ಸುರಕ್ಷತೆ ಬಿಗಿಯಾಗಿದೆ. ಆದರೆ […]

  June 15, 2016
  ...

  ಸಂಪುಟ ಪುನಾರಚನೆ ಖಚಿತ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತು ಪಡಿಸಿ…!

  ಎರಡು ವರ್ಷಗಳಿಂದ ಹೊಯ್ದಾಟದಲ್ಲಿದ್ದ ಸಂಪುಟ ಪುನಾರಚನೆ ಕಗ್ಗಂಟು ಬಗೆಹರಿದಿದೆ. ಸಂಪುಟ ಪುನಾರಚನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ದಾರೆ. ಒಟ್ಟು 13 ಅಥವಾ 14 ಸಚಿವರು ಸಂಪುಟದಿಂದ ಹೊರಬರಲಿದ್ದು 12 ಸಚಿವರು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಸಂಪುಟದಿಂದ ಯಾರು ಹೊರಕ್ಕೆ? ಯಾರು ಒಳಬರಲಿದ್ದಾರೆ ಎಂಬ ಹೆಸರುಗಳೀಗ ಚಲಾವಣೆಗೆ ಬಂದಿವೆ. ಶನಿವಾರ ಬೆಳಗ್ಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, “ಸಂಪುಟ ಪುನಾರಚನೆಗೆ ಒಪ್ಪಿಗೆ ಸಿಕ್ಕಿದೆ. ನಾಳೆ ಅಥವ ನಾಡಿದ್ದು ರಾಜ್ಯಪಾಲರಿಗೆ ನೂತನ […]

  June 15, 2016
  ...

  ಬ್ರದರ್’ಗಳು ಬಿಟ್ಟ ಬಾಣಕ್ಕೆ ಗೌಡರಿಗಾದ ಮರ್ಮಘಾತ ಮತ್ತು ಸ್ಥಳೀಯ ಪಕ್ಷವೊಂದರ ಅವಸಾನ!

  ಕುಟುಂಬದ ಯಜಮಾನರ ನಿರ್ಧಾರಗಳಲ್ಲಿನ ಗೊಂದಲ, ಮನೆ ಮಂದಿಗೆಲ್ಲಾ ಅಧಿಕಾರದ ಹಪಾಹಪಿ, ಅಪಾತ್ರರಿಗೆ ಮಣೆ ಹಾಕಿದ್ದಕ್ಕೆ ತೆರಬೇಕಾದ ದಂಡ, ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡು ಜತೆಯಲ್ಲಿದ್ದವರಿಗೆ ಬಗೆದ ದ್ರೋಹ. ಇವುಗಳ ಜತೆಗೆ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂಬಂತೆ ರಾಜಕೀಯ ವಿರೋಧಿಗಳು ಹೆಣೆದ ರಣತಂತ್ರ… ಫಲಿತಾಂಶ; ಅವಸಾನದ ಅಂಚಿನಲ್ಲಿ ಬಂದು ನಿಂತ ರೈತರ ಪರ, ಜಾತ್ಯಾತೀತ ಪಕ್ಷ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಸ್ಥಳೀಯ ಪಕ್ಷ ಜಾತ್ಯಾತೀತ ಜನತಾದಳ. ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಜಿ ಪ್ರಧಾನಿ […]

  June 13, 2016
  ...

  ಕಾಂಗ್ರೆಸ್ಗೆ ಗೆಲುವಿನ ನಗೆ, ಬಿಜೆಪಿಗೆ ಸಮಾಧಾನ, ಜೆಡಿಎಸ್ಗೆ ಮಾತ್ರ ನಿರೀಕ್ಷಿತ ಆಘಾತ

  ಇಂದು (ಶನಿವಾರ) ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಒಂದು ಸ್ಥಾನ ಮತ್ತು ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದು ಎಂದಿನಂತೆ ಜೆಡಿಎಸ್ ಮುಖಭಂಗ ಅನುಭವಿಸಿದೆ.  ಜೆಡಿಎಸ್ ಪಕ್ಷದ ಎಂಟು ಶಾಸಕರು ವಿಪ್ ಉಲ್ಲಂಘಿಸಿ ಮತ ಚಲಾಯಿಸುವ ಮೂಲಕ  ಕಾಂಗ್ರೆಸ್‍ನ ಮೂರನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿಯನ್ನು ಗೆಲ್ಲಿಸಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಏನು? ಎಲ್ಲರಿಗೂ ಗೊತ್ತಿರುವಂತೆ ಮತ್ತದೇ ಕುದುರೆ ವ್ಯಾಪಾರ. ಕಾಂಗ್ರೆಸ್ ಪಕ್ಷದ ಹೆಚ್ಚುವರಿ ಮತಗಳು, ಪಕ್ಷೇತರರ ಮತಗಳು, ಜೆಡಿಎಸ್ ಬಂಡಾಯ ಮತಗಳನ್ನು ಒಟ್ಟಾಗಿಸಿ ರಾಮಮೂರ್ತಿ ಭರ್ಜರಿ 52 ಮತಗಳಿಂದ ಗೆಲ್ಲುವ […]

  June 11, 2016
  ...

  ಮಾಡದ ತಪ್ಪಿಗೆ 23 ವರ್ಷ ಜೈಲು: ಮಗನ ಬಿಡುಗಡೆಗಾಗಿ ಗುಲ್ಬರ್ಗದ ಈ ತಾಯಿ ಹಾಕಿದ ಕಣ್ಣೀರು ಹುಸಿಹೋಗಲಿಲ್ಲ!

  ಕಳೆದ ತಿಂಗಳು ಆತನಿಗೆ ಸಂಭ್ರಮವೋ ಸಂಭ್ರಮ. ಗಿಳಿಮರಿಯನ್ನು ಗೂಡಿನಿಂದ ಬಿಟ್ಟ ಸಂತೋಷ ಅವರ ಮುಖದಲ್ಲಿತ್ತು. ನಮ್ಮದೇ ಗುಲ್ಬರ್ಗ ಮೂಲದ ನಿಸಾರ್ ಉದ್ದೀನ್ ಅಹಮದ್ ಕಥೆ ಇದು. ಒಂದೇ ಒಂದು ಸುಳ್ಳು ಆರೋಪ ಇವರನ್ನು 23 ವರ್ಷ ಜೈಲು ಶಿಕ್ಷೆಗೆ ದೂಡಿತು. ಕೊನೆಗೂ ಆರೋಪ ಸಾಬೀತಾಗದೆ ಕಳೆದ ತಿಂಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಳ್ಳು ಆರೋಪಕ್ಕೆ ಬಲಿಯಾಗಿ ತನ್ನ ಬದುಕಿನ ಅಮೂಲ್ಯ ದಿನಗಳನ್ನು ಜೈಲಿನಲ್ಲಿ ಕಳೆದ ನತದೃಷ್ಟನ ಕತೆಯನ್ನು ಕರ್ನಾಟಕದ ಮೂಲದ ಹಿರಿಯ ಪತ್ರಕರ್ತ ಇಮ್ರಾನ್ ಖುರೇಶಿ ಬಿಬಿಸಿ- ಹಿಂದಿಗಾಗಿ ವರದಿ ಮಾಡಿದ್ದಾರೆ. ಅದರ […]

  June 11, 2016
  ...

  FDA ಮರುಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ವಿಚಾರ: ಆಕ್ರೋಶ, ಅಭಿವ್ಯಕ್ತಿ ಹಾಗೂ ಭ್ರಮನಿರಸನ!

  ಎಫ್ಡಿಎ ಮರುಪರೀಕ್ಷೆಗೆ ಆಗ್ರಹಿಸಿ ಆರಂಭಗೊಂಡಿದ್ದ ಪ್ರತಿಭಟನೆ ತಾರ್ಕಿಕ ಅಂತ್ಯಕ್ಕೆ ಮುನ್ನವೇ ಭ್ರಮನಿರಸನವನ್ನು ಹುಟ್ಟು ಹಾಕಿದೆ. ಸಹಜ ಆಕ್ರೋಶದ ಅಭಿವ್ಯಕ್ತಿಯ ರೂಪವಾಗಿ ಸಾಮಾಜಿಕ ಜಾಲತಾಣದಲ್ಲಿ ಮೊಳಕೆಯೊಡೆದಿದ್ದ ಪ್ರತಿಭಟನೆ ಮೂರು ಹಂತಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಕಾವನ್ನು ಕಾಯ್ದುಕೊಂಡಿತ್ತು. ಮೊದಲು ‘ಕೆಪಿಎಸ್ಸಿ ಚಲೋ’ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ, ನಂತರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಕಾಲಿಟ್ಟಿತ್ತು. ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಜೂ. 9ರಂದು ನಡೆಸಲು ಕೆಲವು ಅಭ್ಯರ್ಥಿಗಳು ಮುಂದಾಗಿದ್ದರು ಕೂಡ. ಆದರೆ, ಪ್ರತಿಭಟನೆಗೆ ಒಂದು ದಿನ ಅನುಮತಿ ನೀಡಿದ್ದ ಪೊಲೀಸರು, […]

  June 11, 2016
  ...

  ‘ಸ್ಟಿಂಗ್ ಆಪರೇಷನ್’ ಸುತ್ತ ಹುಟ್ಟಿಕೊಂಡಿರುವ ಜಿಜ್ಞಾಸೆ: ಪತ್ರಿಕೋದ್ಯಮಕ್ಕೆ ಇದರಿಂದ ಲಾಭನಾ? ನಷ್ಟನಾ?

  ಕುಟುಕು ಕಾರ್ಯಾಚರಣೆ.. ಪತ್ರಿಕೋದ್ಯಮಕ್ಕೆ ಒಳ್ಳೆದೋ, ಕೆಟ್ಟದ್ದೋ? ಅಥವಾ ಪತ್ರಿಕೋದ್ಯಮನೇ ಅಲ್ವಾ? ಪತ್ರಿಕೋದ್ಯಮದಲ್ಲಿಯೇ ಈ ಪ್ರಶ್ನೆಗಳಿಗೆ ಒಂದೇ ಉತ್ತರ ಸಿಗುವುದಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರ ‘ಕುದುರೆ ವ್ಯಾಪಾರ’ಕ್ಕೆ ಸಂಬಂಧಿಸಿದಂತೆ ಎರಡು ರಾಷ್ಟ್ರೀಯ ವಾಹಿನಿಗಳು ಕುಟುಕು ಕಾರ್ಯಾಚರಣೆ ನಡೆಸಿದ್ದವು. ಅದರಲ್ಲೂ ‘ಟೈಮ್ಸ್ ನೌ’ ವಾಹಿನಿಯ ಕುಟುಕು ಕಾರ್ಯಾಚರಣೆ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಕುಟುಕು ಕಾರ್ಯಾಚರಣೆ ಸುತ್ತಾ ಚರ್ಚೆಯೊಂದು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಕುಟುಕು ಕಾರ್ಯಾಚರಣೆ ಹಾಗೂ ತನಿಖಾ ಪತ್ರಿಕೋದ್ಯಮದ ಕುರಿತು ಇರುವ ಜಿಜ್ಞಾಸೆಗಳನ್ನು ನಿಮ್ಮ ಮುಂದಿಡುತ್ತಿದೆ. ಸ್ಟಿಂಗ್ […]

  June 11, 2016
  ...

  ಐಎಸ್ಎಸ್ ವಿಕ್ರಮಾದಿತ್ಯದಲ್ಲಿ ವಿಷಾನಿಲ ಸೋರಿಕೆ: ಮೋದಿ ಉದ್ಘಾಟಿಸಿದ ಸಮರನೌಕೆಯಲ್ಲಿ ಮೊದಲ ದುರಂತ

  ಭಾರತೀಯ ನೌಕಾ ಪಡೆಗೆ ಸೇರಿದ ‘ಐಎನ್ಎಸ್ ವಿಕ್ರಮಾದಿತ್ಯ’ ಸಮರ ನೌಕೆಯಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ಇದು ಕಾರವಾರ ನೌಕಾನೆಲೆಯ ವ್ಯಾಪ್ತಿಯೊಳಗೆ ನಡೆದಿರುವ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಸುತ್ತಾಟದ ನಂತರ ಕಾರವಾರ ನೌಕಾನೆಲೆಯ ವ್ಯಾಪ್ತಿಯಲ್ಲಿ ನೌಕೆಯು ಬಂದು ನಿಂತಿತ್ತು. ಈ ಸಮಯದಲ್ಲಿ ಬಿಡಿ ಭಾಗಗಳ ರಿಪೇರಿ ಕಾರ್ಯ ನಡೆಸುತ್ತಿದ್ದಾಗ ಈ ದುರಂತ ಘಟಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಈ ಕುರಿತು ನೌಕಾಪಡೆಯ ವಕ್ತಾರರು ಮಾಹಿತಿ ನೀಡಿದ್ದು, “ಸ್ಥಳೀಯರೊಬ್ಬರು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. […]

  June 11, 2016
  ...

  ಹಚ್ಚೆ ಬಿಡಿಸಲು ಕೃತಕ ಕೈ: ವಿಜ್ಞಾನ ಮತ್ತು ಕಲೆಯ ಸಂಕರದ ಫಲ ಇದು!

  ‘ಹಚ್ಚೆ’ ಎಂದರೆ ನಿಮಗೆ ಹಳೆಯದೆಲ್ಲಾ ನೆನಪಾಗಬಹುದು. ಆಗ ಹಳ್ಳಿ ಹಳ್ಳಿಗೆ, ಮನೆ ಮನೆಗೆ ಬಗಲಿಗೊಂದು ಬಟ್ಟೆಯ ಚೀಲವನ್ನು ನೇತು ಹಾಕಿಕೊಂಡು ಬರುತ್ತಿದ್ದ ಕಲಾಕಾರರು ನಮ್ಮ ಹಿರಿಯರ ಚರ್ಮದ ಮೇಲೆ ಚಿತ್ರವನ್ನು ಬಿಡಿಸಿದ್ದನ್ನು ನೀವು ನೋಡಿರಲೂ ಸಾಕು. ಇದೇ ಈಗ ಆಧುನಿಕ ಮಾರುಕಟ್ಟೆಯಲ್ಲಿ ಟ್ಯಾಟೂ ಎಂದು ಕರೆಸಿಕೊಳ್ಳುತ್ತಿದೆ. ಇವತ್ತಿಗೆ ಹಚ್ಚೆ ಹಾಕುವ ಪ್ರಕ್ರಿಯೆ ಹಿಂದಿಗಿಂತಲೂ ಅಪ್ ಡೇಟ್ ಆಗಿದೆ. ಹಚ್ಚೆ ಹಾಕಿಸಿಕೊಳ್ಳುವುದು ಫ್ಯಾಷನ್ ಅನ್ನಿಸಿಕೊಂಡಿದೆ. ಮಾನಸಿಕ ಹಿಂಸೆಯಿಂದ ದೂರ ಆಗಲು ಟ್ಯಾಟೂ ನೆರವಾಗುತ್ತದೆ ಎಂಬ ನಂಬಿಕೆಗಳಿವೆ. ಅದೇನೆ ಇರಲಿ, ಇಲ್ಲಿ […]

  June 10, 2016
  ...

  ಬೆಲೆ ಏರಿಕೆ ನಾಗಾಲೋಟಕ್ಕೆ ಗ್ರಾಹಕ ಸುಸ್ತು; ದಾಖಲೆಯ ದರ ಹೆಚ್ಚಳಕ್ಕೆ ಕಾರಣವೇನು? ಪರಿಹಾರಗಳೇನು?

  ಕಳೆದ ಕೆಲವು ದಿನಗಳಿಂದ ಮಳೆ ಹನಿಗಳು ಬಾಯಾರಿದ ಇಳೆಯ ದಾಹ ನೀಗಿಸುತ್ತಿವೆ. ಆದರೆ ವ್ಯಾಪಾರಿಗಳ ಲಾಭದ ದಾಹ, ಸರಕಾರಗಳ ತೆರಿಗೆ ದಾಹ ಮಾತ್ರ ಸದ್ಯಕ್ಕೆ ತೀರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪರಿಣಾಮ ನಿತ್ಯ ಜೀವನಕ್ಕೆ ಬೇಕಾಗುವ ಪದಾರ್ಥಗಳ ಬೆಲೆ ಏರಿಕೆ. ರಾಜ್ಯದಲ್ಲಷ್ಟೇ ಅಲ್ಲ ದೇಶಾದ್ಯಂತ ಕಳೆದೆರಡು ತಿಂಗಳಿನಿಂದ ಕಂಡು ಕೇಳರಿಯದ ರೀತಿಯಲ್ಲಿ ಬೆಲೆಗಳು ಏರಿಕೆಯಾಗುತ್ತಲೇ ಇವೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೊಳ್ಳುವವರ ಜೇಬು ಖಾಲಿಯಾಗುತ್ತಿದೆ. ತರಕಾರಿ, ಕಾಯಿ ಪಲ್ಲೆ, ಮೊಟ್ಟೆ, ಮೀನು, ಮಾಂಸ ಮತ್ತು ದಿನಸಿ ವಸ್ತುಗಳ ಬೆಲೆಗಳು […]

  June 10, 2016

Top