An unconventional News Portal.

    ...
    assam-media-1
    ಮೀಡಿಯಾ 2.0

    ‘ಪಕ್ಷ’ಪಾತಿ ಮಾಧ್ಯಮಗಳ ಸುಳ್ಳು ವರದಿಗಳು ಹಾಗೂ ಅಸ್ಸಾಂ ಚುನಾವಣೆ ಫಲಿತಾಂಶ ಕಲಿಸಿದ ಪಾಠಗಳು!

    ಚುನಾವಣೆಗಳನ್ನು ಎದುರಿಸಲು, ಗೆದ್ದು ಜನಪ್ರತಿನಿಧಿಯಾಗಲು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬೇಕಾದ ಅರ್ಹತೆಗಳ ಜತೆಗೆ ಕನಿಷ್ಟ ಮೂರು ‘ಎಂ’ಗಳ ಅಗತ್ಯವಿದೆ ಎಂಬ ಮಾತಿದೆ. ‘ಮನಿ’ (ಹಣ), ‘ಮಝಲ್’ (ತೋಳ್ಭಲ) ಮತ್ತು ‘ಮೀಡಿಯಾ’ (ಮಾಧ್ಯಮ)…! ಪ್ರತಿ ಚುನಾವಣೆಗಳು ನಡೆದಾಗಲೂ ಪದೇ ಪದೇ ಈ ಮೂರು ‘ಎಂ’ಗಳ ಸೂತ್ರ ಮುನ್ನಲೆಯಲ್ಲಿ ಇರುವುದು ಕಂಡುಬರುತ್ತದೆ. ಸದ್ಯ ಮುಗಿದು ಹೋದ ವಿಧಾನಸಭಾ ಚುನಾವಣೆಗಳ ಪೈಕಿ ಅಸ್ಸಾಂ ಇದಕ್ಕೊಂದು ಹೊಸ ಉದಾಹರಣೆ. ಇಲ್ಲಿ ಹೇಗೆ, ಮಾಧ್ಯಮಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮಿಷ್ಟಕ್ಕೆ ಬಳಸಿಕೊಂಡವು ಮತ್ತು ಹೇಗೆ,..

    May 28, 2016
    ...
    police-protest-2
    ರಾಜ್ಯ

    ಪೊಲೀಸರ ಐತಿಹಾಸಿಕ ಪ್ರತಿಭಟನೆ ನ್ಯಾಯೋಚಿತವಾದದ್ದು ಎನ್ನಲು ಇಷ್ಟು ಕಾರಣಗಳು ಸಾಕಲ್ಲವಾ?

    ಸಾಮೂಹಿಕ ರಜೆ ಹಾಕುವ ಮೂಲಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಪೊಲೀಸ್ ಸಿಬ್ಬಂದಿ ಶಾಂತಿಯುತ ಪ್ರತಿಭಟನೆ ಮುಂದಾಗಿದ್ದಾರೆ. ಜೂ. 4ರಂದು ರಾಜ್ಯಾದ್ಯಂತ ಪೊಲೀಸರು ರಜೆಯ ಮೇಲೆ ತೆರಳುವ ಮುನ್ಸೂಚನೆ ನೀಡಿದ್ದಾರೆ. ಆದರೆ, ಇದು “ಪುಂಡ ಪೋಕರಿಗಳ ಕೃತ್ಯ,” ಎಂದು ಡಿಜಿಪಿ ಓಂಪ್ರಕಾಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನೆಗೆ ಮುಂದಾದ ಪೊಲೀಸ್ ಸಿಬ್ಬಂದಿಯನ್ನು ಮನವೊಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ‘ಕರ್ನಾಟಕ ಪೊಲೀಸ್ ಮಹಾಸಂಘ’ದ ಹೆಸರಿನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಈಗಾಗಲೇ ಮಾಧ್ಯಮಗಳಿಗೆ ಪೊಲೀಸರ..

    May 28, 2016
    ...
    loksabha-alternative-1
    ದೇಶ

    ಮೋದಿ ಸರಕಾರಕ್ಕೆ ಎರಡು ವರ್ಷ: ಶುರುವಾಗುತ್ತಾ ರಾಜಕೀಯ ಪರ್ಯಾಯದ ಹೊಸ ಪರ್ವ?

    ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2 ವರ್ಷದ ಆಡಳಿತವನ್ನು ಪೂರ್ಣಗೊಳಿಸಿರುವ ಬೆನ್ನಲ್ಲೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪರ್ಯಾಯವೊಂದು ರಚನೆಗೊಳ್ಳುವ ಕುರಿತು ವಿಶ್ಲೇಷಣೆಗಳು ಶುರುವಾಗಿವೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಆಡಳಿತಕ್ಕೆ ಪರ್ಯಾಯವಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಉತ್ತರ ಪ್ರದೇಶದಿಂದ ಮಾಯಾವತಿ ಅಥವಾ ಮುಲಾಯಂ ಸಿಂಗ್ ಯಾದವ್ ಮತ್ತು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದಲ್ಲಿ ರಾಷ್ಟ ರಾಜಕಾರಣ ಹೊಸ ತಿರುವು ಪಡೆದುಕೊಳ್ಳಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ…

    May 28, 2016
    ...
    baby-champ-1
    ವಿದೇಶ

    ಶ್ರೀಮಂತರ ಹೊಸ ಖಯಾಲಿಗೆ ಚಿಂಪಾಂಜಿಗಳ ಬಲಿ: ಜಾಗತಿಕ ಸಮಸ್ಯೆಯಾಗಿ ಬದಲಾದ ‘ಬೇಬಿ ಚಾಂಪ್ಸ್’ ಕಳ್ಳಸಾಗಣೆ

    ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ‘ಬೇಬಿ ಚಿಂಪಾಂಜಿ’ಗಳ ಕಳ್ಳಸಾಗಣೆ ವಿರುದ್ಧ ಜಾಗತಿಕ ಹೋರಾಟಕ್ಕೆ ನೈರೋಬಿಯಲ್ಲಿರುವ ವಿಶ್ವ ಸಂಸ್ಥೆಯ ಎನ್ವಿರಾನ್ಮೆಂಟ್ ಅಸೆಂಬ್ಲಿ (ಯುಎಸ್ಎಪಿ) ಕರೆ ನೀಡಿದೆ. ಬುಧವಾರ ‘ಬೇಬಿ ಚಿಂಪಾಂಜಿ’ಗಳ ರಕ್ಷಣೆಗಾಗಿ ವಿಶೇಷ ಆಂದೋಲನವನ್ನು ಶುರುಮಾಡಿರುವ ಯುಎಎಸ್ಎಪಿ, ಅರಣ್ಯ ಅಪರಾಧಗಳ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಪುಟಾಣಿ ಚಿಂಪಾಂಜಿಗಳ ಕಳ್ಳಸಾಗಣೆ ತಡೆಯಲು ಜಗತ್ತು ಒಂದಾಗಬೇಕಿದೆ ಎಂದು ಹೇಳಿದೆ. ಕಳೆದ ಐದಾರು ವರ್ಷಗಳ ಅಂತರದಲ್ಲಿ ಆಫ್ರಿಕಾ ಮತ್ತು ಏಷಿಯಾದ ಕಾಡುಗಳಿಂದ ಪುಟಾಣಿ ಚಿಂಪಾಂಜಿಗಳನ್ನುಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ದೊಡ್ಡ ಜಾಲವೊಂದು ನಿರ್ಮಾಣವಾಗಿದೆ. ಮಾಟ- ಮಂತ್ರಗಳಿಗೆ,..

    May 27, 2016
    ...
    Li-Ching-Yuen
    ಫೋಕಸ್

    ಬರೊಬ್ಬರಿ 256 ವರ್ಷ ಬದುಕಿದ ಈತ ಸಾಯುವ ಮುನ್ನ ಬಿಚ್ಚಿಟ್ಟಿದ್ದ ಆಯಸ್ಸಿನ ಸಿಕ್ರೇಟ್ !

    ಜಗತ್ತಿನಲ್ಲಿ ಮನುಷ್ಯರು ಅತೀ ಹೆಚ್ಚು ಅಂದರೆ ಎಷ್ಟು ವರ್ಷ ಬದುಕಬಹುದು? 110, 115… ಅಲ್ಲಾ.. ನಾವಿವತ್ತು ನಿಮಗೆ 256 ವರ್ಷ ಜೀವನ ಮಾಡಿದ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಸ್ತೀವಿ. ಅಂದಾಗೆ ಈತ ಪುರಾಣದ ಕಥೆಯ ಪಾತ್ರವಲ್ಲ ಅಥವಾ ಕಟ್ಟು ಕಥೆಯ ನಾಯಕ ಅಲ್ವೇ ಅಲ್ಲ. ಚೀನಾದ ಅತೀ ದೀರ್ಘ ಕಾಲ ಬದುಕಿದ ವ್ಯಕ್ತಿಯೊಬ್ಬನ ನೈಜ ಕಥೆ ಇದು. ಹೀಗೆ 256 ವರ್ಷಗಳ ಕಾಲ ಬದುಕಿದ ವ್ಯಕ್ತಿಯ ಹೆಸರು ಲಿ ಚಿಂಗ್ ಯೆನ್. 1930 ರಲ್ಲಿ ಚೀನಾದ ಚೆಂಗಾಡು ಯುನಿವರ್ಸಿಟಿಯ ಪ್ರೊಫೆಸರ್ ವು ಚುಂಗ್..

    May 27, 2016
    ...
    Fall14Mag_OxyTalk
    ಮೀಡಿಯಾ 2.0

    ಪತ್ರಕರ್ತರ ಹೊಟ್ಟೆಯಲ್ಲಿ ಪತ್ರಕರ್ತರೇ ಹುಟ್ಟುತ್ತಾರೆ ಎಂದು ಹೇಳಲು ಹೆಚ್ಚಿನ ಪುರಾವೆಗಳು ಸಿಗುವುದಿಲ್ಲ!

    ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವುದು, ವೈದ್ಯರ ಮಕ್ಕಳು ವೈದ್ಯರಾಗುವುದು, ಅಧಿಕಾರಿಗಳ ಮಕ್ಕಳು ಅಧಿಕಾರಿಗಳೇ ಆಗುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಯದಲ್ಲಿ ರಾಜ್ಯದ ಪತ್ರಕರ್ತರು ಮಕ್ಕಳು ಏನಾಗುತ್ತಿದ್ದಾರೆ? ಹೀಗೊಂದು ಕುತೂಹಲ ಪ್ರಶ್ನೆಯನ್ನು ಇಟ್ಟುಕೊಂಡು ‘ಸಮಾಚಾರ’ ಒಂದಷ್ಟು ಹಿರಿಯ- ಕಿರಿಯ ಪತ್ರಕರ್ತರನ್ನು ಮಾತನಾಡಿಸಿತು. ಈ ಸಮಯದಲ್ಲಿ ಹಲವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಅಚ್ಚರಿ ಮೂಡಿಸುವಂತಿವೆ. ಇವು ಯಾಕೆ ಪತ್ರಕರ್ತರ ಮಕ್ಕಳು ಪತ್ರಿಕೋದ್ಯಮದ ಕಡೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ಎಂತಹ ಹಿನ್ನೆಲೆಯ ಪತ್ರಕರ್ತರ ಮಕ್ಕಳು ಪತ್ರಿಕೋದ್ಯಮಕ್ಕೆ ಬರುತ್ತಾರೆ ಮತ್ತಿತರ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಒಂದಷ್ಟು ಒಳನೋಟಗಳನ್ನು ನೀಡುತ್ತವೆ…

    May 27, 2016
    ...
    subhash-adi-uplokayuktha-1
    ರಾಜ್ಯ

    ಉಪಲೋಕಾಯುಕ್ತ ನ್ಯಾ. ಆಡಿಗೆ ಕ್ಲೀನ್ ಚಿಟ್: ಹಕ್ಕುಚ್ಯುತಿ ಪ್ರಕ್ರಿಯೆ ಕೈ ಬಿಡುವಂತೆ ಕಾಗೋಡು ಆದೇಶ

    ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ ಆಡಿ ಹಾಗೂ ಸರಕಾರದ ನಡುವಿನ ಸಂಘರ್ಷಕ್ಕೆ ತೆರೆ ಬಿದ್ದಿದೆ. ನ್ಯಾ. ಆಡಿ ವಿರುದ್ಧ ಮಂಡನೆಯಾಗಿದ್ದ ಪದಚ್ಯುತಿ ನಿರ್ಣಯವನ್ನು ಕೈ ಬಿಡುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಗುರುವಾರ ಶಾಸಕ ತನ್ವೀರ್ ಸೇಟ್ ಮತ್ತಿತರ 78 ಶಾಸಕರಿಗೆ ಸೂಚಿಸಿದ್ದಾರೆ. ಉಪಲೋಕಾಯುಕ್ತರಾಗಿದ್ದ ನ್ಯಾ. ಆಡಿ ವಿರುದ್ಧ ಕಚೇರಿ ದುರುಪಯೋಗ ಸೇರಿದಂತೆ ಒಟ್ಟು 5 ಆರೋಪಗಳನ್ನು ಮಾಡಲಾಗಿತ್ತು. ಈ ಕುರಿತು ನಿವೃತ್ತ ನ್ಯಾಯಮೂರ್ತಿ ಬೂದಿಹಾಳ್ ತನಿಖೆ ನಡೆಸಿ, ಆರೋಪಗಳಲ್ಲಿ ಹುರುಳಿಲ್ಲ ಎಂದು ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್..

    May 27, 2016
    ...
    kpsc-bangalore-1
    KPSC NEWS

    6 ಸಾವಿರ ಹುದ್ದೆ ನೇಮಕಾತಿ ಸಮಯದಲ್ಲಿ KPSCಗೆ ಕಳಂಕಿತ ಅಧ್ಯಕ್ಷರು ಬೇಡ: ರಾಜ್ಯಪಾಲರಿಗೆ ನೀಡಿದ ದೂರಿನ 5 ಪ್ರಮುಖ ಅಂಶಗಳು

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಕ್ಕೆ ಅಧ್ಯಕ್ಷರನ್ನಾಗಿ ಸರಕಾರ ಶಿಫಾರಸು ಮಾಡಿರುವ ಅಧಿಕಾರಿ ಶಾಮ್ ಭಟ್ ಹೆಸರನ್ನು ಅಂಗೀಕರಿಸಬಾರದು ಎಂದು ಬೆಂಗಳೂರು ಮೂಲದ ವಕೀಲರೊಬ್ಬರು ಗುರುವಾರ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ನಟರಾಜ್ ಶರ್ಮಾ ಎಂಬ ವಕೀಲರು ಸುಪ್ರಿಂ ಕೋರ್ಟ್ ಆದೇಶ, ಪತ್ರಿಕೆಗಳಲ್ಲಿ ಬಿಡಿಎ ಆಯುಕ್ತರಾಗಿರುವ ಅಧಿಕಾರಿ ಶಾಮ್ ಭಟ್ ಬಗ್ಗೆ ಬಂದಿರುವ ಪತ್ರಿಕಾ ಪ್ರಕಟಣೆಗಳ ಅಡಕವನ್ನು ಹೊಂದಿರುವ ದೂರನ್ನು ರಾಜಭವನದಲ್ಲಿ ದಾಖಲಿಸಿದ್ದಾರೆ. ಅದರ ಪ್ರಮುಖಾಂಶಗಳು ಇಲ್ಲಿವೆ. ಈ ರಾಜ್ಯದ ಜವಾಬ್ದಾರಿಯುತ ಪ್ರಜೆಯಾಗಿ ಕೆಪಿಎಸ್ಸಿಗೆ ಬಿಡಿಎ ಆಯುಕ್ತರಾಗಿರುವ ಶಾಮ್ ಭಟ್..

    May 27, 2016
    ...
    mideast-crisis-syria-latakia_web
    ವಿದೇಶ

    ರಕ್ತಸಿಕ್ತ ಮಧ್ಯಪ್ರಾಚ್ಯ: ಕಳೆದ 72 ಗಂಟೆಗಳಲ್ಲಿ ಐಸಿಲ್ ಸರಣಿ ಸ್ಫೋಟಕ್ಕೆ 148 ಜನರ ಬಲಿ

    ಕಳೆದ 72 ಗಂಟೆಗಳು.. ಸಿರಿಯಾದಲ್ಲಿ ಐಸಿಲ್ ಉಗ್ರರ ಅಟ್ಟಹಾಸಕ್ಕೆ ಅಸುನೀಗಿದವರ ಸಂಖ್ಯೆ 148. ಸಿರಿಯಾದ ‘ಬಷರ್ ಅಲ್ ಅಸದ್’ ಸರಕಾರ ಹಿಡಿತ ಹೊಂದಿರುವ ಭಾಗಗಳ ಮೇಲೆ ‘ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆಂಡ್ ಲೆವೆನೆಂಟ್’ (ಐಸಿಲ್) ಉಗ್ರರು ಸೋಮವಾರ ಮುಗಿಬಿದ್ದಿದ್ದಾರೆ. ಒಂದೇ ದಿನ ಏಕಕಾಲದಲ್ಲಿ ಸಿರಿಯಾದ ಕರಾವಳಿ ನಗರಗಳಾದ ಟಾರ್ಟಸ್ ಮತ್ತು ಜೆಬ್ಲಾಹ್ ಪಟ್ಟಣಗಳ ಬಸ್ ನಿಲ್ದಾಣ, ಆಸ್ಪತ್ರೆ ಮತ್ತು ಇತರೆ ಕಡೆಗಳಲ್ಲಿ ಗಂಭೀರ ಸ್ವರೂಪದ ಕಾರ್ ಬಾಂಬ್ ಸ್ಪೋಟ ಮತ್ತು ಆತ್ಮಾಹುತಿ ದಾಳಿಗಳು ನಡೆದಿವೆ. ಸರಣಿ..

    May 26, 2016
    ...
    modi-india-today-1
    SPECIAL SERIES

    ‘ಮೋದಿ ಸವೆಸಿದ ಹಾದಿ-4’: ಎರಡು ವರ್ಷಗಳ ಸಾಧನೆ ಸುದ್ದಿಗಳನ್ನು ಓದುತ್ತಿರುವ ಈ ಹೊತ್ತಿನಲ್ಲಿ ಗಮನಿಸಬೇಕಿರುವ ಪಿಆರ್ ಏಜೆನ್ಸಿ ‘ಸತ್ಯ’ಗಳು!

    ನರೇಂದ್ರ ಮೋದಿ ದೇಶದ ಪ್ರಧಾನಿ ಆಗುವುದಕ್ಕೆ ಬಳಸಿಕೊಂಡ ಹಲವು ಮೆಟ್ಟಿಲುಗಳಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಸ್ಥಾನ ಪ್ರಮುಖವಾದುದು. ಇವತ್ತಿಗೆ ಮೋದಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿ ಎರಡು ವರ್ಷಗಳು ಕಳೆಯುತ್ತಿವೆ. ಈ ಸಮಯದಲ್ಲಿ ದೇಶದ ಜನ ಎರಡು ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎನ್ನುವುದಕ್ಕಿಂತ ನರೇಂದ್ರ ಮೋದಿ ಎಂಬ ‘ವಿಕಾಸ್ ಪುರುಷ’ ದೇಶವನ್ನು ಬದಲಿಸಬಲ್ಲ ಎಂಬ ಅದಮ್ಯ ಭರವಸೆಯಿಂದ ಮತ ಹಾಕಲು ಕಾರಣವಾದ ಅಂಶಗಳೇನು ಎಂಬುದನ್ನು ಗಮನಿಸಬೇಕಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ನಡೆಸಿದ ಅಭಿವೃದ್ಧಿ ಯೋಜನೆಗಳ ಫಲ..

    May 26, 2016

Top