An unconventional News Portal.

    ...
    jandj-cancer-1
    ವಿದೇಶ

    ‘ಜಾನ್ಸನ್ ಬೇಬಿ ಪೌಡರ್’ನಿಂದ ಕ್ಯಾನ್ಸರ್: ಕಂಪನಿಗೆ 7.2 ಕೋಟಿ ಡಾಲರ್ ದಂಡ!

    ಮಕ್ಕಳ ಸೌಂದರ್ಯ ವರ್ಧಕ ಉತ್ಪಾದನೆಯ ಮೂಲಕ ವಿಶ್ವದ ಮನೆಮಾತಾಗಿರುವ ‘ಜಾನ್ಸನ್ ಅಂಡ್ ಜಾನ್ಸನ್’ ಸಂಸ್ಥೆಗೆ ಅಮೆರಿಕಾದ ನ್ಯಾಯಾಲಯವೊಂದು 7. 20 ಕೋಟಿ ಡಾಲರ್ ದಂಡ ವಿಧಿಸಿ, ಸೋಮವಾರ ಸಂಜೆ ತೀರ್ಪು ಹೊರಡಿಸಿದೆ. ಅಲಬಾಮ ಮೂಲದ ಮಹಿಳೆಯೊಬ್ಬರು ಸದರಿ ಸಂಸ್ಥೆಯ ಬೇಬಿ ಪೌಡರ್ ಹಾಗೂ ‘ಶವರ್ ಎಂಡ್ ಶವರ್’ ಶಾಂಪುಗಳ ಬಳಕೆಯಿಂದ ಗರ್ಭಕೋಶದ ಕ್ಯಾನ್ಸರ್ಗೆ ತುತ್ತಾಗಿದ್ದರು. ಈ ಕುರಿತು ಮಿಸೋರಿ ರಾಜ್ಯ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಸೋಮವಾರ ಸಂಜೆ ವೇಳೆಗೆ, ಪ್ರಕರಣದ ಕುರಿತು ತೀರ್ಪು ನೀಡಿದ ಜ್ಯೂರಿಗಳು, ದೂರು ನೀಡಿದ ಜಾಕ್ವೆಲಿನ್..

    May 3, 2016
    ...
    ಆರೋಪಿ ಶಿವಕುಮಾರ್
    ರಾಜ್ಯ

    ‘ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ’: ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ನಿಂತ ಸಿಐಡಿ!

    ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವಕುಮಾರ್ ಅಲಿಯಾಸ್ ಶಿವಕುಮಾರ ಸ್ವಾಮಿಯನ್ನು ಬಂಧಿಸಿರುವುದಾಗಿ ಮಂಗಳವಾರ ಸಿಐಡಿ ಪ್ರಕಟಿಸಿದೆ. ಈ ಮೂಲಕ ಒಟ್ಟು 14 ಜನರನ್ನು ಬಂಧಿಸಿದಂತಾಗಿದೆ. ಕಳೆದ ತಿಂಗಳು ಆರಂಭದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣದಲ್ಲಿ ಸಿಐಡಿ ಆರಂಭದಿಂದಲೇ ಕಾರ್ಯಾಚರಣೆಗೆ ಇಳಿದಿತ್ತು. ಹಿಂದೆ ರಾಜ್ಯದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯನ್ನು ದಾಟಿ, ಸಿಐಡಿ ಈ ಬಾರಿ ತನಿಖೆಯಲ್ಲಿ ಆಳಕ್ಕೆ ಇಳಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮಂಗಳವಾರ ಸಿಐಡಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಮತ್ತು..

    May 3, 2016
    ...
    sex-series-2
    SPECIAL SERIES

    ‘ಮೈಥುನ ಮಿಸ್ಟರಿ’-2: ಸರಕಾರಿ ಅಧಿಕಾರಿಯ ಫ್ಯಾಂಟಸಿಗಳು ಹಾಗೂ 5000 ಕೋಟಿಯ ಪೊರ್ನೋಗ್ರಫಿ ಉದ್ಯಮ!

    “ಅವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಉದ್ಯೋಗಿ. ಕಳೆದ ಹತ್ತು ವರ್ಷಗಳಿಂದ ಅವರಲ್ಲಿ ಒಂದು ಫ್ಯಾಂಟಸಿ ಬೆಳೆದು ಬಂದಿತ್ತು. ತಮ್ಮ ಪತ್ನಿಯ ಎದುರೇ ಹೆಣ್ಣಿನಂತೆ ವೇಷ ಧರಿಸಿಕೊಂಡು ಓಡಾಡುತ್ತಿದ್ದರು. ಅದನ್ನು ಫೊಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳುತ್ತಿದ್ದರು. ಅವುಗಳನ್ನು ಪತ್ನಿ ಸೇರಿದಂತೆ ಎಲ್ಲರೂ ಇಷ್ಟಪಡಬೇಕು ಎಂದು ಬಯಸುತ್ತಿದ್ದರು. ನಮ್ಮ ಬಳಿ ಬರುವಾಗ ಅವರ ವಯಸ್ಸು 40ರ ಆಸುಪಾಸಿನಲ್ಲಿತ್ತು,” ಎಂದರು ಮನಃಶಾಸ್ತ್ರಜ್ಞ ಡಾ. ಮಹೇಶ್. ನಂದಿನಿ ಲೇಔಟ್ನಲ್ಲಿರುವ ‘ಸ್ಪಂದನ ಹೆಲ್ತ್ ಕೇರ್’ನಲ್ಲಿ ಇಂತಹ ಹತ್ತು ಹಲವು ಲೈಂಗಿಕತೆ ಸುತ್ತ ಬೆಳೆಯುವ..

    May 3, 2016
    ...
    ms-1
    ರಾಜ್ಯ

    ಓಂ ನಮಃ ಶಿವಾಯ…: ಈ ಅಲೆಮಾರಿಯ ಪಾಲಿಗೆ ಪ್ರಕೃತಿಯೇ ಆಲಯ!

    ನಾವು ಅಂದುಕೊಂಡಂತೆ ಬದುಕುತ್ತಿದ್ದೇವೆ ಎಂದು ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ‘ನಾವು ಅಂದುಕೊಂಡಿದ್ದು’ ಏನು? ಅದು ಹಾಗೆ ಅನ್ನಿಸಲು ಕಾರಣಗಳೇನು ಎಂದು ಹುಡುಕಲು ಹೊರಟಾಗ ಗೊಂದಲ ಶುರುವಾಗುತ್ತದೆ. ನಿಜಕ್ಕೂ, ನಾನು ಬದುಕುತ್ತಿರುವ ಬದುಕು, ನಮ್ಮದೇನಾ? ಅನ್ನಿಸಲು ಶುರುವಾಗುತ್ತದೆ. ಯಾಕೆ ಈಗ ಈ ಪೀಠಿಕೆ ಎಂದರೆ, ಕಳೆದ 20 ವರ್ಷಗಳಿಂದ ತಮ್ಮನ್ನು ತಾವು, ಅಂದುಕೊಂಡ ಹಾದಿಯಲ್ಲಿಯೇ ನಡೆಸಿಕೊಂಡು ಬಂದು, ಇವತ್ತು ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಬೇಕು ಎಂಬ ಮನಸ್ಥಿತಿಯಲ್ಲಿರುವ ಒಬ್ಬರ ಪರಿಚಯವನ್ನು ನಿಮಗೆ ಮಾಡಿಸಬೇಕಿದೆ. ಅವರು ಮಂಜುನಾಥ್ ಸುಳ್ಳೊಳ್ಳಿ…

    May 3, 2016
    ...
    press-reporters
    ಮೀಡಿಯಾ 2.0

    ಸುದ್ದಿ ಸಂಸ್ಥೆಯ ಸ್ವರೂಪದಲ್ಲೇ ಬದಲಾವಣೆ: ಇಲ್ಲಿ ವರದಿಗಾರರಿಗೇ ಹೆಚ್ಚಿನ ಮನ್ನಣೆ!

    ಎಲ್ಲಾ ಕ್ಷೇತ್ರಗಳಂತೆ ಪತ್ರಿಕೋದ್ಯಮದಲ್ಲೂ ಹೊಸತನದ ತುಡಿತ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅದರ ಮುಂದುವರಿದ ಭಾಗವೇ 101reporters.com. ಇದೊಂದು ಸ್ವತಂತ್ರ ನ್ಯೂಸ್ ಏಜೆನ್ಸಿ. ಆದರೆ ಇಲ್ಲಿ ವರದಿಗಾರರಿಗೇ ಮೊದಲ ಪ್ರಾಶಸ್ತ್ಯ, ಪ್ರಕಾಶಕರಿಗೆ ಏನಿದ್ದರೂ ನಂತರದ ಸ್ಥಾನ. ಇನ್ನೇನು ಚಾಲನೆ ಸಿಗಬೇಕಾಗಿರುವ 101reporters.com ಬೆಂಗಳೂರು ಮೂಲದ ಸಂಸ್ಥೆ. ಇದರ ಉದ್ದೇಶ ಎಲ್ಲೋ ಇರುವ ವರದಿಗಾರರು ಮತ್ತು ಪ್ರಕಾಶಕರನ್ನು ತಂತ್ರಜ್ಞಾನದ ಮೂಲಕ ಒಂದೇ ಸೂರಿನಡಿ ತರುವುದು. ಇಬ್ಬರಿಗೂ ಸಮಾನ ಅವಕಾಶಗಳಿರುವ ವೇದಿಕೆಯನ್ನು ನಿರ್ಮಾಣ ಮಾಡುವುದು ಈ ಸುದ್ದಿ ಸಂಸ್ಥೆಯ ಆಶಯ. ನಡುವಿನ ಕೊಂಡಿ:  ಇವತ್ತು ಪತ್ರಿಕೋದ್ಯಮದಲ್ಲಿ ಪ್ರಕಾಶಕರು..

    May 2, 2016
    ...
    KPN photo
    ರಾಜ್ಯ

    ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’; ಯಡಿಯೂರಪ್ಪ ಕಣ್ಣೀರು ಹಾಕುವುದು ಮರೆಯಲಿಲ್ಲ!

    ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತೆ ಕಣ್ಣೀರು ಹಾಕಿದ್ದಾರೆ. ಈ ಬಾರಿ ಅವರು ಕಣ್ಣೀರು ಹಾಕಲು ಆಯ್ಕೆ ಮಾಡಿಕೊಂಡ ಸ್ಥಳ, ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ಸಿಬಿಐ ವಿಶೇಷ ನ್ಯಾಯಾಲಯ. ಸೋಮವಾರ ಹಳೆಯ ಪ್ರಕರಣರವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ಅವರು, ವಿಶೇಷ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ. ಕೆ. ನಾಯಕ್ ಅವರ ಮುಂದೆಯೇ ದುಃಖತಪ್ತರಾಗಿದ್ದಾರೆ. ಮೂಲಗಳ ಪ್ರಕಾರ, ನ್ಯಾಯಾಧೀಶರು ವಿಚಾರಣೆಯ ಭಾಗವಾಗಿ ಸಿದ್ಧಪಡಿಸಲಾಗಿದ್ದ ಸುಮಾರು 473 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇವೆಲ್ಲವಕ್ಕೂ ಒಂದೊಂದಾಗಿ, ತಾಳ್ಮೆಯಿಂದಲೇ..

    May 2, 2016
    ...
    uttakhand-forest-fire-1
    ದೇಶ

    ಉತ್ತರಖಾಂಡ್ ಕಾಡ್ಗಿಚ್ಚು: ಟಿಂಬರ್ ಮಾಫಿಯಾ ಸುತ್ತ ಅನುಮಾನದ ಹುತ್ತ!

    ಉತ್ತರಾಖಾಂಡ್ ರಾಜ್ಯದಲ್ಲಿ ಕಾಣಿಸಿಕೊಂಡ ಭಾರಿ ಕಾಡ್ಗಿಚ್ಚು ಈಗ ಹತೋಟಿಗೆ ಬರುತ್ತಿದೆ. 2000 ಹೆಕ್ಟೇರ್ ಅರಣ್ಯ ಅಗ್ನಿಗಾಹುತಿಯಾಗಿದೆ. ಒಣಹವೆಯಿಂದಾಗಿ ಮರಗಳ ನಡುವೆ ಘರ್ಷಣೆಯಿಂದ ಕಾಳ್ಗಿಚ್ಚು ಹಬ್ಬಿರಬಹುದೆಂದು ಮೊದಲು ಶಂಕಿಸಲಾಗಿತ್ತು. ಈಗ ಬೆಂಕಿಯ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಿರುವುದಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. “ಪ್ರಕರಣದ ತನಿಖೆ ನಡೆಯುತ್ತಿದ್ದು, ಸಂಚುಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ,” ಜಾವಡೇಕರ್ ಹೇಳಿದ್ದಾರೆ. 6000ಕ್ಕೂ ಅಧಿಕ ಮಂದಿ ಬೆಂಕಿ ನಂದಿಸುವಲ್ಲಿ ನಿರತವಾಗಿದ್ದು, ಶೇ.70ರಷ್ಟು ಬೆಂಕಿ ಹತೋಟಿಗೆ..

    May 2, 2016
  • ಸುದ್ದಿ ಸಾರ

    ಶಾಸಕ ಭೀಮನಾಯ್ಕರಿಂದ ಹಲ್ಲೆ: ಆರೋಪ

    ಬಳ್ಳಾರಿ ಜೆಡಿಎಸ್ ಶಾಸಕ ಭೀಮಾನಾಯ್ಕ್ ಎಸ್‍ಎಲ್‍ಆರ್ ಫ್ಯಾಕ್ಟರಿ ಸಿಬ್ಬಂದಿ ಮೇಲೆ ಗೂಂಡಾಗಿರಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. “ನನಗೆ ಖರ್ಚಿಗೆ ಪ್ರತಿ ತಿಂಗಳ 10 ಲಕ್ಷ ರೂಪಾಯಿ ಕೊಡಿ. ಇಲ್ಲದಿದ್ರೆ ಕಾರ್ಖಾನೆಯ ಟಾನ್ಸ್‍ಪೋರ್ಟ್ ಏಜೆನ್ಸಿಯನ್ನ ನನಗೇ ಕೊಡಿ,” ಎಂದು ಹಗರಿಬೊಮ್ಮನಹಳ್ಳಿಯ ಬೈಯಲಪ್ಪನಹಕ್ಕಲಿನಲ್ಲಿರುವ ಎಸ್‍ಎಲ್‍ಆರ್ ಕಾರ್ಖಾನೆ ಮಾಲೀಕರ ಶಾಸಕರು ಬೇಡಿಕೆ ಇಟ್ಟಿದ್ದರು ಎಂದು ಆರೋಪ ಕೇಳಿಬಂದಿದೆ. ಶಾಸಕರ ಬೇಡಿಕೆಗೆ ಮಾಲೀಕರು ಮಣಿಯದ ಹಿನ್ನೆಲೆಯಲ್ಲಿ ಕೋಪವನ್ನು ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಮೂಲಕ ಭೀಮಾನಾಯ್ಕ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ, ಭೀಮಾನಾಯ್ಕ್ ಎಸ್‍ಎಲ್‍ಆರ್..

    May 2, 2016
    ...
    madhyama academy
    ಸುದ್ದಿ ಸಾರ

    ರಾಜ್ಯ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷ, ಸದಸ್ಯರ ನೇಮಕ

    ರಾಜ್ಯ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಹಾಗೂ ನಾಲ್ವರು ಸದಸ್ಯರ ಆಯ್ಕೆಯನ್ನು ಸರಕಾರ ಅಂತಿಮಗೊಳಿಸಿರುವ ಮಾಹಿತಿ ಹೊರಬಿದ್ದಿದೆ. ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಪಿಟಿಐ ಸುದ್ದಿಸಂಸ್ಥೆಯಲ್ಲಿದ್ದು ನಿವೃತ್ತರಾಗಿದ್ದು, ಹಿರಿಯ ಪತ್ರಕರ್ತ ಬಿ. ಟಿ. ಸಿದ್ದರಾಜು (ಸಿದ್ದಣ್ಣ) ಅವರನ್ನು ನೇಮಕ ಮಾಡಿಲಾಗಿದೆ. ‘ಪ್ರಜಾವಾಣಿ’ ಪತ್ರಿಕೆಯ ಪೊನ್ನಪ್ಪ ಅವರಿಂದ ತೆರವಾದ ಸ್ಥಾನವನ್ನು ಇವರು ತುಂಬಲಿದ್ದಾರೆ. ಸದಸ್ಯರಾಗಿ ‘ವಿಜಯವಾಣಿ’ ಬೆಂಗಳೂರು ಆವೃತ್ತಿಯಲ್ಲಿ ರಾಜಕೀಯ ವಿಭಾಗದ ಮುಖ್ಯಸ್ಥರಾಗಿದ್ದ  ರುದ್ರಣ್ಣ ಹರ್ತಿಕೋಟೆ, ‘ದಿ ಹಿಂದೂ’ ಪತ್ರಿಕೆಯ ರಂಗಣ್ಣ, ಬಳ್ಳಾರಿ ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ್ ಹಾಗೂ ಬಾಗಲಕೋಟೆಯ..

    May 2, 2016
    ...
    sex-series-6
    SPECIAL SERIES

    ‘ಮೈಥುನ ಮಿಸ್ಟರಿ’-1: ‘ಸೆಕ್ಸ್’ ಎಂಬ ವಿಸ್ಮಯ ಲೋಕಕ್ಕೆ ಸ್ವಾಗತ!

    “ಮನುಷ್ಯನಿಗೆ ಆಹಾರ ಮತ್ತು ನೀರು ಹೇಗೋ, ಸೆಕ್ಸ್ ಕೂಡ ಹಾಗೆಯೇ. ನಾವು ಹಸಿದು ಊಟ ಮಾಡಿದ ನಂತರ ಅಥವಾ ತುಂಬಾ ಬಾಯಾರಿದ ನಂತರ ತಣ್ಣನೆಯ ನೀರು ಕುಡಿದಾಗ ಅನುಭವಿಸುವ ಭಾವನೆಗೂ, ಲೈಂಗಿಕ ಚಟುವಟಿಕೆಯ ಕೊನೆಯಲ್ಲಿ ಸಿಗುವ ಭಾವನೆಗೂ ವ್ಯತ್ಯಾಸವಿಲ್ಲ…” ಎನ್ನುತ್ತಾರೆ ಬೆಂಗಳೂರು ಮೂಲದ ಮಃನಶಾಸ್ತ್ರ ಸಲಹೆಗಾರ್ತಿ ಡಾ. ದಿವ್ಯಾ ಕೆ. ಆರ್. ‘ಸಮಾಚಾರ’ ಇಂದಿನಿಂದ ಆರಂಭಿಸುತ್ತಿರುವ ‘ಮೈಥುನ ಮಿಸ್ಟರಿ’ ಸರಣಿ ಲೇಖನಗಳಿಗಾಗಿ ಅವರ ಮುಂದಿಟ್ಟ ಕೆಲವು ಮೂಲಭೂತ ಪ್ರಶ್ನೆಗಳಿಗೆ ಸಿಕ್ಕ ಉತ್ತರವಿದು. ಮನುಷ್ಯನ ವಿಕಾಸದ ಜತೆಜತೆಗೆ ವಿಕಾಸಗೊಂಡಿರುವ ಹಲವು ಕ್ಷೇತ್ರಗಳಲ್ಲಿ..

    May 2, 2016

Top