An unconventional News Portal.

    ...
    dejagov-1
    ರಾಜ್ಯ

    ವಿದ್ವತ್ತು, ಆಡಳಿತ ಮತ್ತು ಚಳವಳಿ ಮೂಲಕ ಕನ್ನಡ ಕಟ್ಟಿದ ಸಾಹಿತಿ ಇನ್ನಿಲ್ಲ

    ಹಿರಿಯ ಸಾಹಿತಿ, ಕುವೆಂಪು ಶಿಷ್ಯ ದೇ. ಜವರೇಗೌಡ ಅನಾರೋಗ್ಯದ ಕಾರಣ ಸೋಮವಾರ ಸಂಜೆ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇಜಗೌ ಅವರನ್ನು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1918ರ ಜುಲೈ 8ರಂದು ಈಗಿನ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕರೆಯಲ್ಲಿ ದೇಜಗೌ ಜನಿಸಿದ್ದರು. ‘ದೇಜಗೌ’ ಎಂದೇ ಹೆಸರುವಾಸಿಯಾಗಿದ್ದ ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಪದ್ಮಶ್ರೀ, ಕರ್ನಾಟಕ ರತ್ನ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ,..

    May 30, 2016
    ...
    skydiving
    ಫೋಕಸ್

    ವಿಮಾನದಲ್ಲಿಯೇ ರೋಚಕ ದರೋಡೆಯೊಂದನ್ನು ನಡೆಸಿದ ಆತ ಇವತ್ತಿಗೂ ನಿಗೂಢವಾಗಿಯೇ ಉಳಿದು ಹೋದ!

    ಧೂಮ್ ಸರಣಿ ಚಿತ್ರಗಳನ್ನು ನೋಡುತ್ತಿರುವ ತಲೆಮಾರು ಇದು. ಹೈಟೆಕ್ ಆಗಿ ದರೋಡೆ ಮಾಡುವುದು, ಕನ್ನ ಹಾಕುವುದು ಹಾಗೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡು ಹೋಗುವುದನ್ನು ರೋಚಕವಾಗಿ ತೋರಿಸಿದ ಚಿತ್ರಗಳವು. ಈ ಸಮಯದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವತ್ತಿಗೂ ತನಿಖಾ ಸಂಸ್ಥೆಗಳಿಗೆ ತಲೆಬಿಸಿ ಮಾಡುತ್ತಿರುವ, ನಾಲ್ಕು ದಶಕಗಳ ಹಿಂದೆಯೇ ಭಿನ್ನ ರೀತಿಯ ದರೋಡೆ ನಡೆಸಿದ ಒಬ್ಬ ವ್ಯಕ್ತಿ ಧೂಮ್ ಸಿನೆಮಾ ಚಿತ್ರಕತೆಯನ್ನೂ ಮೀರಿಸುವಂತಹ ನೈಜ ಕತೆಯೊಂದನ್ನು ಜಾಗತಿಕ ಅಪರಾಧಗಳ ಪಟ್ಟಿಯಲ್ಲಿ ಉಳಿಸಿ ಹೋಗಿದ್ದಾನೆ. ಆತನ ಹೆಸರು ಡ್ಯಾನ್ ಕೂಪರ್. ಮಾಧ್ಯಮಗಳ ವರದಿಯಿಂದಾಗಿ..

    May 30, 2016
    ...
    baliga-case-1
    ರಾಜ್ಯ

    ವಿನಾಯಕ್ ಬಾಳಿಗ ಕೊಲೆ ಪ್ರಕರಣಕ್ಕೆ ಹೊಸ ತಿರುವು: ನರೇಶ್ ಶೆಣೈ ಜಾಮೀನು ಅರ್ಜಿಗೆ ಮುನ್ನವೇ ಆಪ್ತನ ಬಂಧನ

    ಮಂಗಳೂರು ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಹಾಗೂ ಪೊಲೀಸರ ನಡುವೆ ನಡೆಯುತ್ತಿರುವ ಕಣ್ಣಾ ಮುಚ್ಚಾಲೆ ಆಟಕ್ಕೆ ಭಾನುವಾರ ಹೊಸ ತಿರುವೊಂದು ಸಿಕ್ಕಿದೆ. ಮಂಗಳೂರಿನಲ್ಲಿ ಫೊಟೋ ಸ್ಟುಡಿಯೋ ನಡೆಸುತ್ತಿದ್ದ ಮಂಜು ನೀರೇಶ್ವಲ್ಯಾ ಎಂಬಾತನ್ನು ಪ್ರಕರಣದ ಆರೋಪಿಗೆ ಅಡಗುತಾಣ ಹಾಗೂ ಧನ ಸಹಾಯ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಸೋಮವಾರ ನರೇಶ್ ಶೆಣೈ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈ ಕೋರ್ಟ್ ಮುಂದೆ ಬರಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರ..

    May 30, 2016

Top