An unconventional News Portal.

    ...
    For public releaseCol. Robert M Olivier USMCIMEFDM G-3 Information Operations
    ಸುದ್ದಿ ಸಾರ

    ಹೇಗಿದ್ದ ಫಲುಜಾ ಹೇಗಾಯ್ತು ಗೊತ್ತಾ?: ಐಸಿಲ್ ವಶದಲ್ಲಿರುವ ನತದೃಷ್ಟ ನಗರದ ಕತೆ…

    ವಿಶ್ವವನ್ನೇ ಕೈವಶ ಮಾಡಿಕೊಳ್ಳುತ್ತೇವೆ ಎಂದು ಹೊರಟಿದ್ದ ಐಸಿಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವೆನೆಂಟ್) ಪತನ ಕೊನೆಗೂ ಆರಂಭವಾಗಿದೆ. ದಿನದಿಂದ ದಿನಕ್ಕೆ ಒಂದೊಂದೇ ನಗರಗಳನ್ನು ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಉಗ್ರರು ಈಗ ಇರಾಕ್ ದೇಶದ ಪ್ರಮುಖ ನಗರ ಫಲುಜಾ ಕಳೆದುಕೊಳ್ಳುವ ಹಾದಿಯಲ್ಲಿದ್ದಾರೆ. ಐಸಿಲ್ ಕಪಿಮುಷ್ಟಿಯಿಂದ ಕೈತಪ್ಪುತ್ತಿರುವ ಐದನೇ ನಗರ ಇದು. ಫಲುಜಾ ನಗರವನ್ನು ಮರುವಶ ಪಡಿಸಿಕೊಳ್ಳಲು ಆರು ದಿನಗಳ ಹಿಂದೆ ಇರಾಕ್ ಸರಕಾರ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ಫಲುಜಾ ನಗರವನ್ನು ಇರಾಕ್ ಪಡೆಗಳು ಸುತ್ತುವರಿದಿದ್ದು ಮೊದಲ ಹಂತದ..

    May 29, 2016
    ...
    Police-protest-final
    ರಾಜ್ಯ

    ವಾಟ್ಸಾಪು, ಆಂಧ್ರದ ಪೇ ಸ್ಲಿಪ್ಪು; ಪೊಲೀಸ್ ಪ್ರತಿಭಟನೆಯಲ್ಲಿ ಸಂವಹನ ಮಾಧ್ಯಮದ ತಾರೀಫು!

    ಮೇ ತಿಂಗಳ ಮೊದಲ ವಾರ…  ಮುಖ್ಯವಾಹಿನಿ ಮಾಧ್ಯಮಗಳ ಫೇಸ್ ಬುಕ್ ಖಾತೆಗಳಿಗೆ ‘ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ’ದ ಲೆಟರ್ ಹೆಡ್ನಲ್ಲಿ 2 ಪುಟಗಳ ಮನವಿ ಪತ್ರವೊಂದನ್ನು ಮೆಸೇಜ್ ರೂಪದಲ್ಲಿ ಕಳುಹಿಸಲಾಗಿತ್ತು. ದಿನ ನಿತ್ಯ ಬರುವ ಅಂತಹ ನೂರಾರು ಸಂಘ- ಸಂಸ್ಥೆಗಳ ಪತ್ರದಂತೆಯೇ ಇದ್ದ ಅದನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಜತೆಗೆ, ಜೂನ್ 4ನೇ ತಾರೀಖು ಕರ್ನಾಟಕದ ಪೊಲೀಸರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಅದರಲ್ಲಿದ್ದ ಒಕ್ಕಣೆಯನ್ನು ಅಷ್ಟು ಸುಲಭದಲ್ಲಿ ಪತ್ರಕರ್ತರು ನಂಬಿದಂತೆ ಕಂಡಿರಲಿಲ್ಲ. ಈ ಘಟನೆ ನಡೆದು ಮೂರು ವಾರಗಳ ನಂತರ,..

    May 29, 2016
    ...
    g-paramshwar-1
    ರಾಜ್ಯ

    ‘ಶಿಸ್ತಿನ ಇಲಾಖೆಯಲ್ಲಿ ಅಶಿಸ್ತಿಗೆ ಜಾಗ ಇಲ್ಲ; ಜೂ.4ರ ಪ್ರತಿಭಟನೆ ನಡೆಯುವುದಿಲ್ಲ’: ಜಿ. ಪರಮೇಶ್ವರ್

    ದುರ್ನಡತೆ, ಭ್ರಷ್ಟಚಾರ ಇನ್ನಿತರೆ ಕಾರಣಗಳಿಂದ ಸೇವೆಯಿಂದ ಅಮಾನತ್ತಾಗಿರುವವರು ಕೆಳ ಹಂತದ ಸಿಬ್ಬಂದಿಯನ್ನು ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನಡೆಸುತ್ತಿದ್ದಾರೆ. ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು… ಹೀಗೊಂದು ಹೇಳಿಕೆ ನೀಡಿದವರು ಗೃಹ ಸಚಿವ ಜಿ. ಪರಮೇಶ್ವರ್. ಜೂನ್ 4ರಂದು ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸುವ ವಿಚಾರ ಮುನ್ನೆಲೆಗೆ ಬಂದ ನಂತರ ಮೊದಲ ಬಾರಿಗೆ ಹಿರಿಯ ಅಧಿಕಾರಿಗಳ ಜತೆ ಅವರು ಶನಿವಾರ ಸಭೆ ನಡೆಸಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿ, “ಶಿಸ್ತಿಗೆ ಹೆಸರಾದ..

    May 29, 2016
    ...
    modi-photoshop-1
    SPECIAL SERIES

    ‘ಮೋದಿ ಸವೆಸಿದ ಹಾದಿ’-5: ಹರೇನ್ ಪಾಂಡ್ಯ ಹತ್ಯೆ ನೆನಪಿನಲ್ಲಿ ಗುಜರಾತಿನ ಗದ್ದುಗೆ ಕತೆಗೆ ಉಪಸಂಹಾರ!

    ‘ಮೋದಿ ಸವೆಸಿದ ಹಾದಿ’ಯ ಕೊನೆಯ ಭಾಗಕ್ಕೆ ಬಂದು ನಿಂತಿದ್ದೇವೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ಮೋದಿ, ಆರ್ ಎಸ್ಎಸ್ ಸಂಘಟನೆ ಮೂಲಕ ವಿಚಾರಗಳನ್ನು ಬೆಳೆಸಿಕೊಂಡು, ಉತ್ತಮ ಸಂಘಟಕ ಎನ್ನಿಸಿಕೊಂಡು, ನಂತರ ಬಿಜೆಪಿ ಪ್ರವೇಶಿಸಿ, ಪಕ್ಷದ ಹುದ್ದೆಗಳಲ್ಲಿ ಹಂತಹಂತವಾಗಿ ಏರುವ ಮೂಲಕ ಗುಜರಾತ್ ಮುಖ್ಯಮಂತ್ರಿಯಾಗಿ, ನಂತರ ದೇಶದ ಪ್ರಧಾನಿಯಾಗಿ ಎರಡು ವರ್ಷಗಳ ಆಡಳಿತವನ್ನು ಪೂರೈಸಿದ್ದಾರೆ. ಇದು ವ್ಯಕ್ತಿಯೊಬ್ಬನ ಬದುಕಿನಲ್ಲಿ ಸುದೀರ್ಘ ಪ್ರಯಾಣದ ಹಾದಿ. ಅವೆಲ್ಲವನ್ನೂ ಸಮಗ್ರವಾಗಿ ಐದು ಸಂಚಿಕೆಗಳ ಮಿತಿಯಲ್ಲಿ ನಿರೂಪಿಸುವುದು ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ‘ಸಮಾಚಾರ’..

    May 29, 2016

Top