An unconventional News Portal.

ಉಪಲೋಕಾಯುಕ್ತ ನ್ಯಾ. ಆಡಿಗೆ ಕ್ಲೀನ್ ಚಿಟ್: ಹಕ್ಕುಚ್ಯುತಿ ಪ್ರಕ್ರಿಯೆ ಕೈ ಬಿಡುವಂತೆ ಕಾಗೋಡು ಆದೇಶ

ಉಪಲೋಕಾಯುಕ್ತ ನ್ಯಾ. ಆಡಿಗೆ ಕ್ಲೀನ್ ಚಿಟ್: ಹಕ್ಕುಚ್ಯುತಿ ಪ್ರಕ್ರಿಯೆ ಕೈ ಬಿಡುವಂತೆ ಕಾಗೋಡು ಆದೇಶ

ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ ಆಡಿ ಹಾಗೂ ಸರಕಾರದ ನಡುವಿನ ಸಂಘರ್ಷಕ್ಕೆ ತೆರೆ ಬಿದ್ದಿದೆ.

ನ್ಯಾ. ಆಡಿ ವಿರುದ್ಧ ಮಂಡನೆಯಾಗಿದ್ದ ಪದಚ್ಯುತಿ ನಿರ್ಣಯವನ್ನು ಕೈ ಬಿಡುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಗುರುವಾರ ಶಾಸಕ ತನ್ವೀರ್ ಸೇಟ್ ಮತ್ತಿತರ 78 ಶಾಸಕರಿಗೆ ಸೂಚಿಸಿದ್ದಾರೆ.

ಉಪಲೋಕಾಯುಕ್ತರಾಗಿದ್ದ ನ್ಯಾ. ಆಡಿ ವಿರುದ್ಧ ಕಚೇರಿ ದುರುಪಯೋಗ ಸೇರಿದಂತೆ ಒಟ್ಟು 5 ಆರೋಪಗಳನ್ನು ಮಾಡಲಾಗಿತ್ತು. ಈ ಕುರಿತು ನಿವೃತ್ತ ನ್ಯಾಯಮೂರ್ತಿ ಬೂದಿಹಾಳ್ ತನಿಖೆ ನಡೆಸಿ, ಆರೋಪಗಳಲ್ಲಿ ಹುರುಳಿಲ್ಲ ಎಂದು ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ವರದಿಯನ್ನು ಉಲ್ಲೇಖಿಸಿ ಆದೇಶ ಹೊರಡಿಸಿದ್ದು, ಉಪಲೋಕಾಯುಕ್ತರ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಗಳನ್ನು ಕೈ ಬಿಡುವಂತೆ ಶಾಸಕರಿಗೆ ಆದೇಶ ನೀಡಿದ್ದಾರೆ.

ಬೆಳಗಾವಿಯ ಸೈಯರ್ ಯಾರ್ಡ್ ಭೂ ಒತ್ತುವರಿ ಪ್ರಕರಣದಲ್ಲಿ ಉಪಲೋಕಾಯುಕ್ತರಾಗಿದ್ದ ನ್ಯಾ. ಆಡಿ ತಮ್ಮ ವ್ಯಾಪ್ತಿಯನ್ನು ಮೀರಿ ಕೆಲಸ ನಿರ್ವಹಿಸಿದ್ದಾರೆ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರೊಂದರಲ್ಲಿ ತಮ್ಮ ಕಾರ್ಯವ್ಯಾಪ್ತಿ ಮೀರಿ ಮಧ್ಯಪ್ರವೇಶ ಮಾಡಿದ್ದಾರೆ, ನಾಗರಬಾವಿಯ ವಿನಾಯಕ ಹೌಸಿಂಗ್ ಸೊಸೈಟಿ ಭೂಹಗರಣದಲ್ಲಿ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂಬ ದೂರುಗಳು ಉಪಲೋಕಾಯುಕ್ತ ನ್ಯಾ. ಆಡಿ ಮೇಲೆ ಹೊರಿಸಲಾಗಿತ್ತು. ಅವರನ್ನು ಪದಚ್ಯತಿಗೊಳಿಸುವಂತೆ ಕಾಂಗ್ರೆಸ್ ಶಾಸಕರು ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದರು.

“ಆರೋಪ ಮಾಡಿದವರು ಅವುಗಳನ್ನು ಸಾಭೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಲು ವಿಫಲರಾಗಿದ್ದಾರೆ,” ಎಂದು ಆರೋಪಗಳ ಕುರಿತು ತನಿಖಾ ವರದಿ ನೀಡಿದ ನಿವೃತ್ತ ನ್ಯಾ. ಬೂದಿಹಾಳ್ ತಿಳಿಸಿದ್ದಾರೆ.

ಕಾಂಗ್ರೆಸ್ಗೆ ಮುಖಭಂಗ:

ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರ ಪದಚ್ಯುತಿಗೆ ಮುಂದಾಗಿದ್ದ ಕಾಂಗ್ರೆಸ್ಗೆ ಮುಖಭಂಗವಾದಂತಾಗಿದೆ. “ಉಪಲೋಕಾಯುಕ್ತರ ಮೇಲೆ ಕಳಂಕ ಹೊರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ. ಬಿ. ಜಯಚಂದ್ರ ಕ್ಷಮೆಯಾಚಿಸಬೇಕು,” ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. “ಸರಕಾರ ನಡೆಸಲು ಹೊರಟ ಹೇಯ ರಾಜಕಾರಣ ಬಹಿರಂಗವಾಗಿದೆ. ಕೂಡಲೇ ಕ್ಷಮೆಯಾಚನೆಗೆ ಮುಂದಾಗಬೇಕು,” ಎಂದು ಉಪಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

 

 

Leave a comment

FOOT PRINT

Top