An unconventional News Portal.

    ...
    kumaraswamy-2
    ಸುದ್ದಿ ಸಾರ

    ‘ದಲಿತ ಮಹಿಳೆಗೆ ದೌರ್ಜನ್ಯ ಭಾಗ್ಯ’ ಪ್ರಕರಣ: ಪ್ರತಿಭಟನೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

    ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಗೃಹ ಇಲಾಖೆಗೆ ಬಂದಿದ್ದ ದಲಿತ ಮಹಿಳೆಗೆ ಅವಮಾನ ಮಾಡಿದ ಪ್ರಕರಣಕ್ಕೆ ಕಾರಣವಾದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇನ್ನೆರಡು ದಿನದಲ್ಲಿ ಗೃಹ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಗೆ ಅವಮಾನ ಮಾಡಿದ ಅಧಿಕಾರಿಯನ್ನು ಮೊದಲು ಹೊರ ಹಾಕಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಕುಮಾರಸ್ವಾಮಿಯವರು ಇಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. “ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಘಟನೆ ಬಗ್ಗೆ ಪಶ್ಚಾತ್ತಾಪ ಪಡುವುದನ್ನು ಬಿಟ್ಟು ಕೇವಲವಾಗಿ ಮಾತನಾಡಿದ್ದಾರೆ. ಮಹಿಳೆಯ ಬಗ್ಗೆ..

    May 25, 2016
    ...
    PU-board-exam-paper
    ರಾಜ್ಯ

    ಪಿಯುಸಿ ಫಲಿತಾಂಶ ಕಂಪ್ಲೀಟ್ ಡಿಟೇಲ್ಸ್: ಬಡವರ ಮಕ್ಕಳ ಸಾಧನೆ, ನಕಲು ತಡೆಯಿಂದ ಫಲಿತಾಂಶ ಕುಸಿತ

    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ 57. 20 ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ 3.32 ರಷ್ಟು ಫಲಿತಾಂಶ ಕುಸಿತ ಕಂಡಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ( 90.480) ಮೊದಲ ಸ್ಥಾನ ಪಡೆದರೆ, ಉಡುಪಿ( 90.35) ಎರಡನೇ ಸ್ಥಾನ, ಕೊಡಗು(79.35) ಮೂರನೇ ಸ್ಥಾನ ಹಾಗೂ ಯಾದಗಿರಿ (44.16) ಕೊನೆಯ ಸ್ಥಾನಗಳಿಸಿವೆ. ಕಲಾ ವಿಭಾಗದಲ್ಲಿ ಶೇ. 42.12, ವಾಣಿಜ್ಯ ವಿಭಾಗ ಶೇ.64.16,..

    May 25, 2016
    ...
    modi-vaj-1
    SPECIAL SERIES

    ‘ಮೋದಿ ಸವೆಸಿದ ಹಾದಿ’-3: ಗುಜರಾತ್ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ವಾಜಪೇಯಿ ಹೆಗಲ ಮೇಲೆ ಬಂದೂಕಿಟ್ಟ ಮೋದಿ!

    ರಾಜಕೀಯ ಅಖಾಡದಲ್ಲಿ ಮೋದಿ ಬೆಳೆದ ಕತೆಯನ್ನು ಹೇಳುವುದು ಅಂದರೆ, 1970ರ ದಶಕದಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಹಿಂದುತ್ವದ ಪ್ರಯೋಗಗಳನ್ನು, ಪಡೆದ ಅಧಿಕಾರವನ್ನು, ಅದನ್ನು ಅನುಭವಿಸಲು ಮೂರು ನಾಯಕರು ನಡೆಸಿದ ಭಿನ್ನ ತಂತ್ರಗಳನ್ನು ಹೇಳಿದಂತೆ. ಸ್ವಾತಂತ್ರ್ಯ ನಂತರ ನಡೆಸಿದ ಗಾಂಧಿ ಹತ್ಯೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ನಿಷೇಧ ಹೇರಲಾಯಿತು. ಈ ಸಮಯದಲ್ಲಿ ಸಂಘದ ಬಹುತೇಕ ನಾಯಕರು ಭೂಗತರಾದರು, ಇಲ್ಲವೇ ತಮ್ಮನ್ನು ತಾವು ತೆರೆಮರೆಯಲ್ಲಿ ಉಳಿಸಿಕೊಂಡು ಕೆಲಸ ಮಾಡತೊಡಗಿದರು. ಹೆಚ್ಚು ಕಡಿಮೆ ಮುಗಿದೇ ಹೋಯಿತು ಎಂಬಂತಾಗಿದ್ದ ಸಂಘಪರಿವಾರದ..

    May 25, 2016
    ...
    2_gigvq5
    ಫೋಕಸ್

    ನಾವು ‘ಇಂಟೆಲಿಜೆಂಟ್ ಟ್ರಾನ್ಸ್ ಪೋರ್ಟ್’ ಅನ್ನುವ ಹೊತ್ತಿಗೆ ಅವರು ಚಾಲಕರಿಲ್ಲದ ಕಾರುಗಳ ಗುಂಗಿನಲ್ಲಿದ್ದಾರೆ!

    ಇಂದು ಬೆಂಗಳೂರಿನಲ್ಲಿ ಬಿಎಂಟಿಸಿ ನೇತೃತ್ವದಲ್ಲಿ ‘ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಸಿಸ್ಟಂ’ ಜಾರಿಗೆ ತರಲು ಹೊರಟಿದೆ ಸರಕಾರ. ಹಾಗೆ ನೋಡಿದರೆ, ನಗರ ಸಾರಿಗೆ ಬಸ್ಗಳ ಪ್ರಯಾಣದ ವಿವರಗಳನ್ನು ಜನರಿಗೆ ನೀಡುವ ಈ ಯೋಜನೆ ‘ಐಟಿಎಸ್’ ಮೂಲ ಪರಿಕಲ್ಪನೆಯಲ್ಲಿ ಚಿಕ್ಕದೊಂದು ಭಾಗ ಅಷ್ಟೆ. ನಿಜಕ್ಕೂ ಐಟಿಎಸ್ ಎಂದರೇನು? ಇದರಿಂದ ಜನರಿಗೆ ಆಗುವ ಅನುಕೂಲಗಳೇನು ಎಂಬುದು ಬೇರೆಯದೇ ಕತೆ. ಸದ್ಯ ನಗರ ಸಾರಿಗೆ ವಿಚಾರದಲ್ಲಿ ವಿದೇಶಗಳಲ್ಲಿ ನಡೆಯುತ್ತಿರುವ ಹಲವು ಸಂಶೋಧನೆಗಳ ಪೈಕಿ ದುಬೈನ ಈ ಪ್ರಯೋಗದ ಕುರಿತು ಮಾಹಿತಿ ನೀಡುವುದು ಈ ವರದಿಯ ಉದ್ದೇಶ…

    May 25, 2016
    ...
    Untitled-1
    ದೇಶ

    ಅಯೋಧ್ಯೆಯಲ್ಲಿ ಬಂದೂಕು ತರಬೇತಿ: ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾದ ಭಜರಂಗದಳದ ಶಸ್ತ್ರಾಸ್ತ್ರ ಶಿಬಿರ

    ಹಿಂದೂಗಳ ರಕ್ಷಣೆ ನೆಪದಲ್ಲಿ ಪರಿವಾರದ ಅಂಗ ಸಂಘಟನೆ ಭಜರಂಗ ದಳ ನೀಡುತ್ತಿರುವ ಶಸ್ತ್ರಾಸ್ತ್ರ ತರಬೇತಿ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿದೆ. ಅಯೋಧ್ಯೆಯಲ್ಲಿ ಇತ್ತೀಚೆಗೆ ಭಜರಂಗ ದಳ ತನ್ನ ಕಾರ್ಯಕರ್ತರಿಗೆ ಬಂದೂಕು, ಖಡ್ಗ ಹಾಗೂ ಲಾಠಿ ಬಳಕೆ ಕುರಿತು ತರಬೇತಿ ನೀಡಿದೆ ಎಂದು ಎರಡು ದಿನಗಳ ಹಿಂದೆ ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿತ್ತು. ಇದರ ವಿಡಿಯೋಗಳು ಮಂಗಳವಾರ ರಾಷ್ಟ್ರೀಯ ಸುದ್ದಿವಾಹಿನಿಗಳಿಗೆ ಲಭ್ಯವಾಗುವ ಮೂಲಕ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಅಯೋಧ್ಯೆಯಲ್ಲಿ ಭಜರಂಗ ದಳದ ಕಾರ್ಯಕರ್ತರು ಮುಸುಗುಧಾರಿಗಳನ್ನು..

    May 25, 2016
    ...
    TOI IE
    ಪತ್ರಿಕೆ

    ‘ಟಿಓಐ’ ಜಾಹೀರಾತಿನ ಫಲಶೃತಿ ವರದಿ ಮಾಡಿದ ‘ಐಇ’: ಪೈಪೋಟಿ ಆಚೆಗೆ ಸೌಜನ್ಯ ಮೆರೆದ ಪತ್ರಿಕೋದ್ಯಮ!

    ನಾವು ಇವತ್ತು ಹೇಳಲು ಹೊರಟಿರುವ ಕಥೆ ಭಾರತದ ಎರಡು ಪ್ರತಿಸ್ಪರ್ಧಿ ಮಾಧ್ಯಮಗಳದ್ದು. ಒಂದು ‘ಟೈಮ್ಸ್ ಆಫ್ ಇಂಡಿಯಾ’; ಇನ್ನೊಂದು ‘ದಿ ಇಂಡಿಯನ್ ಎಕ್ಸ್’ಪ್ರೆಸ್’. ಎರಡೂ ದೈತ್ಯ ಕಂಪೆನಿಗಳು, ಮತ್ತು ವ್ಯವಹಾರದಲ್ಲಿ ಆಜನ್ಮ ವಿರೋಧಿಗಳು. ಹೀಗಿದ್ದೂ ಬಿಗುಮಾನ ಬದಿಗಿಟ್ಟು ‘ಟೈಮ್ಸ್ ಆಫ್ ಇಂಡಿಯಾ’ದ ಯಶಸ್ಸಿನ ಕಥೆಯನ್ನು ‘ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿ ಮಾಧ್ಯಮಗಳ ಆರೋಗ್ಯಕರ ಸ್ಪರ್ಧೆಗೆ ಹೊಸ ಆಯಾಮ ನೀಡಿದೆ. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಪುಟದ ಮೂಲೆಯಲ್ಲಿ ಪ್ರಕಟವಾದ ಕ್ಲಾಸಿಫೈಡ್ ಜಾಹೀರಾತೊಂದು ಅಪರಿಚಿತ ಮೃತ ವ್ಯಕ್ತಿಯ..

    May 25, 2016
    ...
    waju-bhayi-wala-1
    KPSC NEWS

    ಮೊಸರಲ್ಲಿ ಕಲ್ಲು ಹುಡುಕುತ್ತಿದ್ದವರು ವಾಲಾ: ಕೆಪಿಎಸ್ಸಿ ಶಿಫಾರಸ್ಸಿಗೆ ಅಂಕಿತ ಹಾಕ್ತಾರಾ?

    ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷರ ಶಿಫಾರಸು ಚೆಂಡು ಈಗ ರಾಜಭವನದ ಅಂಗಳಕ್ಕೆ ಬಂದು ಬಿದ್ದಿದೆ. ಆರಂಭದಿಂದಲೂ ರಾಜ್ಯ ಸರಕಾರದ ಶಿಫಾರಸ್ಸುಗಳಿಗೆ ಅಂಕಿತ ಹಾಕುವಲ್ಲಿ ತಕರಾರು ತೆಗೆಯುತ್ತಲೇ ಬಂದಿದ್ದ ರಾಜ್ಯಪಾಲ ವಾಜುಭಾಯಿ ವಾಲಾ, ಈ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಒಂದು ವೇಳೆ ಕಳಂಕಿತ ಅಧಿಕಾರಿ ಶಾಮ್ ಭಟ್ ಅವರ ಹೆಸರನ್ನು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಸರಕಾರ ಮಾಡಿರುವ ಶಿಫಾರಸಿಗೆ ಅಂಕಿತ ಹಾಕಿದ್ದೇ ಆದರೆ, ರಾಜ್ಯಪಾಲರ ನಡೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಮಾಡಿರುವ ಆರೋಪಕ್ಕೆ..

    May 25, 2016
    ...
    kumaraswamy-1
    ರಾಜ್ಯ

    ದಲಿತ ಮಹಿಳೆಗೆ ‘ದೌರ್ಜನ್ಯ ಭಾಗ್ಯ’: ಚದುರಂಗ ಆಟದಲ್ಲಿ ಕುತೂಹಲ ಮೂಡಿಸಿರುವ ಕುಮಾರಸ್ವಾಮಿ ನಡೆಗಳು!

    ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಲು ಭಿನ್ನ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ವಿಧಾನ ಸೌಧದಲ್ಲಿಯೇ ದಲಿತ ಮಹಿಳೆಯೊಬ್ಬರನ್ನು ಕರೆತರುವ ಮೂಲಕ ಹೊಸ ಮಾದರಿಯ ಚದುರಂಗದಾಟಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ‘ಜನತಾ ದರ್ಶನ’ಕ್ಕೆಂದು ಬಂದ ಬೆಂಗಳೂರು ಮೂಲದ ದಲಿತ ಮಹಿಳೆಯೊಬ್ಬರ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.  ವಿಜಯನಗರ ಪೈಪ್ ಲೈನ್ ರಸ್ತೆಯಲ್ಲಿರುವ ಸುನೀತಾ ಎಂಬುವವರು, ಮೇ. 17ರಂದು ಮುಖ್ಯಮಂತ್ರಿ ಜತೆ ಅಳಲು ತೋಡಿಕೊಳ್ಳಲು ಬಂದಾಗ ಪೊಲೀಸರು ಹಲ್ಲೆ ನಡೆಸಿ, ಮಡಿವಾಳದಲ್ಲಿರುವ ಮಹಿಳಾ ನಿಲಯಕ್ಕೆ..

    May 25, 2016

Top