An unconventional News Portal.

  ...
  2c33
  ದೇಶ

  ಸಿಂಪಲ್ ಆಗೊಂದು ‘ಸೈನ್ಸ್’ ಸ್ಟೋರಿ: ಇಸ್ರೋದ ಹೊಸ ಸಾಧನೆಯಿಂದ ದೇಶಕ್ಕೇನು ಉಪಯೋಗ?

  ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಗಾಲೋಟ ಮುಂದುವರಿಸಿರುವ ಇಸ್ರೋ ಸೋಮವಾರ ಮಹತ್ವದ ಮೈಲುಗಲ್ಲೊಂದನ್ನು ಸ್ಥಾಪಿಸಿದೆ. ಮರುಬಳಕೆ ಮಾಡಬಹುದಾದ ಉಡಾವಣಾ ವಾಹಕದ ಆರಂಭಿಕ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭವಿಷ್ಯದ ಯೋಜನೆಗಳ ಸುಳಿವನ್ನೂ ನೀಡಿದೆ ಇಸ್ರೋ. ಪ್ರತಿ ಉಪಗ್ರಹ ಉಡಾವಣೆ ಮಾಡುವಾಗಲೂ, ಅವುಗಳನ್ನು ಆಗಸಕ್ಕೆ ತೆಗೆದುಕೊಂಡು ಹೋಗಲು ಪ್ರತ್ಯೇಕ ರಾಕೆಟ್ಗಳನ್ನು ಬಳಸಲಾಗುತ್ತದೆ. ಆದರೆ ಇವುಗಳ ನಿರ್ಮಾಣ ವೆಚ್ಚ ದುಬಾರಿ. ಹೆಚ್ಚು ಕಡಿಮೆ 90 ಕೋಟಿ ರೂಪಾಯಿ ವೆಚ್ಚ ಬೇಡುವ ಪ್ರಕ್ರಿಯೆ ಇದು. ಆದೇ ಇವುಗಳ ಮರು ಬಳಕೆ ಸಾಧ್ಯವಿದ್ದರೆ ಹೆಚ್ಚಿನ ಹಣ ಉಳಿತಾಯವಾಗುತ್ತದೆ…

  May 24, 2016
  ...
  journalism-5
  ಮೀಡಿಯಾ 2.0

  ಪತ್ರಿಕೋದ್ಯಮ ಎಂಬ ಹುಲಿವೇಷ ಹಾಕಿದ ಮೇಲೆ ಸುಮ್ನೆ ‘ಸ್ಟೆಪ್’ ಹಾಕಿ; ಲಾಭ-ನಷ್ಟಗಳನ್ನು ಬಿಟ್ಟಾಕಿ!

  ಇದು ದಶಕದ ಹಿಂದಿನ ಮಾತು. ಆಗಷ್ಟೆ ಪತ್ರಿಕೋದ್ಯಮ ಮುಗಿಸಿ ಬಂದ ಆಕಾಂಕ್ಷಿಯೊಬ್ಬ ಸುದ್ದಿವಾಹಿನಿಯೊಂದರಲ್ಲಿ ಕೆಲಸ ಅರಸಿ ಮೊದಲ ಸುತ್ತಿನ ಪರೀಕ್ಷೆಯನ್ನು ಪಾಸು ಮಾಡಿದ್ದ. ಎರಡನೇ ಸುತ್ತಿನಲ್ಲಿ ಮೌಖಿಕ ಸಂದರ್ಶನ. ಚಾನಲ್ ಮುಖ್ಯಸ್ಥರ ಪ್ಯಾನಲ್ ಆತನ ಸಂದರ್ಶನ ಶುರುಮಾಡಿದರು. “ನಿಮಗೆ ಕೆಲಸ ನೀಡಿದರೆ, ಏನೇನು ಸ್ಟೋರಿ ಮಾಡುತ್ತೀರಿ,” ಎಂಬುದು ಮೊದಲ ಪ್ರಶ್ನೆಯಾಗಿತ್ತು. ಆತ, “ಬೆಂಗಳೂರಿನ ಕೊಳಗೇರಿ ಸಮಸ್ಯೆಗಳು, ವಿಧಾನಸೌಧದಲ್ಲಿ ನಡೆಯುವ ಭ್ರಷ್ಟಾಚಾರ, ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಕಷ್ಟಗಳು, ಖಾಸಗಿ ಶಾಲೆಗಳ ಡೊನೇಶನ್ ಹಾವಳಿ…” ಹೀಗೆ ಅವತ್ತಿನ ತನ್ನ ಮಿತಿ ಹಾಗೂ..

  May 24, 2016
  ...
  Narendra_Modi-1
  SPECIAL SERIES

  ‘ಮೋದಿ ಸವೆಸಿದ ಹಾದಿ- 2’: ದೇಶ ಗೆಲ್ಲುವ ಮುನ್ನವೇ ಉದ್ಯಮಪತಿಗಳನ್ನು ಮಣಿಸಲು ರಣತಂತ್ರ!

  ಗುಜರಾತ್ ರಾಜ್ಯಕ್ಕೂ ಉದ್ಯಮಕ್ಕೂ ಪುರಾತನ ಸಂಬಂಧವೊಂದಿದೆ. ಹೀಗಾಗಿಯೇ ಗುಜರಾತಿಗಳ ವ್ಯಾಪಾರಿ ಮನೋಭಾವದ ಕುರಿತು ಹಲವು ದಂತಕತೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ 1498ರ ಸುಮಾರಿಗೆ ಭಾರತಕ್ಕೆ ಬಂದಿಳಿದ ವಾಸ್ಕೋ-ಡ-ಗಾಮನಿಗೆ ಆಫ್ರಿಕಾದಿಂದ ಭಾರತಕ್ಕೆ ಸಮುದ್ರ ಮಾರ್ಗವನ್ನು ತೋರಿಸಿದವನು ಗುಜರಾತ್ ಮೂಲದ ವ್ಯಾಪಾರಿ ಕಾಂಜಿ ಮಲಾಮ್ ಎಂಬುದು ಒಂದು. ಇವತ್ತು ಗುಜರಾತ್ ಇತಿಹಾಸವನ್ನು ಹುಡುಕಿಕೊಂಡು ಹೊರಟರೆ ಇಂತಹ ಹಲವು ಕತೆಗಳು ಸಿಗುತ್ತವೆ. ಈ ವಿಚಾರ ಇಲ್ಲಿ ಯಾಕೆ ಎಂದರೆ, ಇವತ್ತಿಗೆ ಐದು ವರ್ಷಗಳ ಹಿಂದೆ ಮೋದಿ ಇಟ್ಟ ನಡೆಯನ್ನು ಅರ್ಥಮಾಡಿಕೊಳ್ಳಲು ಇದು ಅಗತ್ಯ. ಅದು 2011ರ..

  May 24, 2016
  ...
  kpsc-1
  KPSC NEWS

  FDA ಅಭ್ಯರ್ಥಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ: ಅತ್ತ ಕೆಪಿಎಸ್ಸಿ ಕಾಯಕಲ್ಪ ಕಡೆಗಣನೆ!

  FDA ಅಭ್ಯರ್ಥಿಗಳ ಹೋರಾಟ ನಿರ್ಣಾಯಕ ತಿರುವಿಗೆ ಬಂದು ಬಂದು ನಿಂತಿದೆ. ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಕ್ಕೂ ಅಧಿಕ ಸರಕಾರಿ ಉದ್ಯೋಗ ಆಕಾಂಕ್ಷಿಗಳು ಕೆಪಿಎಸ್ಸಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ FDA ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಆಮ್ ಆದ್ಮಿ ಪಕ್ಷದ ರಾಜ್ಯ ಸಹಸಂಚಾಲಕ ರವಿಕೃಷ್ಣಾ ರೆಡ್ಡಿ, ಎಐಡಿಎಸ್ಓ ಸಂಘಟನೆಯ ಹರೀಶ್ ಮತ್ತಿತರರು ಪಾಲ್ಗೊಂಡು ಪ್ರತಿಭಟನಾನಿರತರಿಗೆ ಬೆಂಬಲ ಸೂಚಿಸಿದರು. ಸಿಎಂ ಸ್ಪಂದನೆ: ಪ್ರತಿಭಟನಾಕಾರರನ್ನು ಸಿಎಂ ಸಿದ್ದರಾಮಯ್ಯ..

  May 24, 2016

Top