An unconventional News Portal.

  ...
  sonia_siddaramiah-1
  ರಾಜ್ಯ

  ಸಂಪುಟ ಪುನರ್ ರಚನೆಗೆ ದಿನಾಂಕ ನಿಗದಿ: 6 ಅಥವಾ 12 ಸಚಿವರಿಗೆ ಕೊಕ್ ಗ್ಯಾರೆಂಟಿ!

  ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ. 29ರೊಳಗೆ ರಾಜ್ಯದಲ್ಲಿ ಹೊಸ ಸಂಪುಟ ಅಸ್ಥಿತ್ವಕ್ಕೆ ಬರಲಿದ್ದು, ಸಿಎಂ ಸಿದ್ದರಾಮಯ್ಯ ಆಡಳಿತ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯಲಿದೆ! ಹೀಗೊಂದು ಸುದ್ದಿಯನ್ನು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಆಡಳಿತ ವಿಚಾರದಲ್ಲಿ ಗಟ್ಟಿಯಾದ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೊದಲೇ ನಿಗದಿಯಾದಂತೆ ಮೇ. 26, 27, 28 ಹಾಗೂ 29 ರಂದು ಸಿಎಂ ಸಿದ್ದರಾಮಯ್ಯ ದಿಲ್ಲಿಯಲ್ಲಿ ಠಿಕಾಣಿ ಹೂಡಲಿದ್ದಾರೆ. ಪಕ್ಷದ ಹಿರಿಯ ನಾಯಕರ ಜತೆ ಸಂಪುಟ..

  May 19, 2016
  ...
  output_XR90Rr
  ದೇಶ

  ಚುನಾವಣೆ- 2016: ಸ್ಥಳೀಯರ ಹೋರಾಟ; ಸಮೀಕ್ಷೆಗಳ ಕೋತಿ ಆಟ; ನಿರೀಕ್ಷಿತ ಫಲಿತಾಂಶಗಳ ‘ರಂಗಿನಾಟ’!

  ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ‘ನೀಲಿ’, ಕೇರಳದಲ್ಲಿ ಎಡಪಕ್ಷಗಳ ‘ಕೆಂಪು’, ತಮಿಳುನಾಡಿನಲ್ಲಿ ಎಐಎಡಿಎಂಕೆಯ ‘ಹಸಿರು’, ಅಸ್ಸಾಂನಲ್ಲಿ ಬಿಜೆಪಿಯ ‘ಕೇಸರಿ’ ಬಣ್ಣಗಳಿಗೆ ಜನರ ಮನ್ನಣೆ… ಇಂತಹದೊಂದು ‘ರಂಗಿನಾಟ’ಕ್ಕೆ ಸಾಕ್ಷಿಯಾಗಿರುವುದು 2016ರ ವಿಧಾನಸಭಾ ಚುನಾವಣೆಗಳು. ಗುರುವಾರ ಹೊರಬಿದ್ದಿರುವ ನಾಲ್ಕೂ ರಾಜ್ಯಗಳ ಚುನಾವಣಾ ಫಲಿತಾಂಶ, ಕೆಲವು ಕಡೆಗಳಲ್ಲಿ ನಿರೀಕ್ಷಿತ ಫಲ ಕೊಟ್ಟಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಅಚ್ಚರಿ ಮೂಡಿಸಿದೆ. ಪಶ್ಚಿಮ ಬಂಗಾಳದ ಪಾಲಿಗೆ ‘ಅಗ್ನಿ ದೇವತೆ’ ಎಂದು ಕರೆಸಿಕೊಳ್ಳುತ್ತಿರುವ ಮಮತಾ ದೀದಿ ಮುಖ್ಯಮಂತ್ರಿಯಾಗಿ ಪುನರ್ ಆಯ್ಕೆ ಆಗಿದ್ದಾರೆ. ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್..

  May 19, 2016
  ...
  mamata-banerjee-2
  ದೇಶ

  ಮಮತಾ ಬ್ಯಾನರ್ಜಿ ಎಂಬ ಗಟ್ಟಿಗಿತ್ತಿಯ ಬದುಕಿನ 5 ಪ್ರಮುಖ ತಿರುವುಗಳು ಮತ್ತು ಸವೆಸಿದ ಹಾದಿ!

  ಈಕೆ ಗಟ್ಟಿಗಿತ್ತಿ; ಹೆಸರು ಮಮತಾ ಬ್ಯಾನರ್ಜಿ! ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ತನ್ನ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಗಳಿಸುವ ಮೂಲಕ ಮಮತಾ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 34 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಪಿಎಂ ‘ಕೆಂಪು ಕೋಟೆ’ಯನ್ನು ಒಡೆದು ಹಾಕಿ 2011ರಲ್ಲಿ ಅಧಿಕಾರಕ್ಕೇರಿದ ಅವರದ್ದು ವಿಭಿನ್ನ ಹಿನ್ನೆಲೆ ಹಾಗೂ ಹಠಮಾರಿತನಗಳಿಂದ ಕೂಡಿರುವ ಬದುಕಿನ ಹಾದಿ. 1955ರ ಜನವರಿಯಲ್ಲಿ ಕೋಲ್ಕತ್ತಾದಲ್ಲಿ ಹುಟ್ಟಿದ ಮಮತಾ 15ರ ಹರೆಯದಲ್ಲಿಯೇ ರಾಜಕೀಯದೆಡೆಗೆ ಆಕರ್ಷಿತರಾದವರು. ಅವತ್ತಿನ ಕಾಂಗ್ರೆಸ್ (ಐ) ಪಕ್ಷದ ಸ್ಟೂಡೆಂಟ್ ಯೂನಿಯನ್ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದರು…

  May 19, 2016
  ...
  jayalalitha-tn-2
  ದೇಶ

  ತಮಿಳುನಾಡಿನಲ್ಲಿ ಸೋತಿದ್ದು ಸಮೀಕ್ಷೆಗಳು; ‘ಅಮ್ಮ’ ಮರು ಆಯ್ಕೆ ಹಿಂದಿರುವ ನಿಗೂಢ ನಡೆಗಳು!

  ತಮಿಳುನಾಡು ಜನರ ಮನದಲ್ಲಿ ಏನಿದೆ ಎಂಬುದನ್ನು ಫಲಿತಾಂಶಕ್ಕೆ ಮುನ್ನವೇ ಅರಿಯುವಲ್ಲಿ ಈ ಬಾರಿಯೂ ಬಹುತೇಕ ಮತದಾನ ಪೂರ್ವ ಹಾಗೂ ಮತದಾನೋತ್ತರ ಸಮೀಕ್ಷೆಗಳು ವಿಫಲವಾಗಿವೆ. ನೆರೆಯ ರಾಜ್ಯ ತಮಿಳುನಾಡಿನಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕರುಣಾನಿಧಿ ನೇತೃತ್ವದ ಡಿಎಂಕೆ ಅಥವಾ ಜಯಲಲಿತಾ ಮುಂದಾಳತ್ವದ ಎಐಎಡಿಎಂಕೆ ಪಕ್ಷಗಳ ನಡುವೆ ಪೈಪೋಟಿ ಇರುವುದಾಗಿ ಸಮೀಕ್ಷೆಗಳು ಬಿಂಬಿಸಿದವು. ಇಂಡಿಯಾ ಟಿವಿ ಹಾಗೂ ಸಿ- ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಆಡಳಿತರೂಢ ಪಕ್ಷಕ್ಕೆ ಗೆಲುವಿನ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಅತ್ತ ಮತ ಸಮೀಕ್ಷೆಗಳು, ಚುನಾವಣಾ ನಾಡಿನಿಂದ ವರದಿಗಳು ಹೊರಬರುತ್ತಿರುವಾಗಲೇ ತಮಿಳುನಾಡಿನ..

  May 19, 2016
  ...
  output_FOqGO9
  Un Category

  ‘ELECTION-2016’ UPDATE: ಅಸ್ಸಾಂನಲ್ಲಿ ಕೇಸರಿ ಪಕ್ಷ; ಕೇರಳದಲ್ಲಿ ಕೆಂಬಾವುಟ; ಪುದುಚೆರಿ ಅತಂತ್ರ; ‘ದೀದಿ’, ‘ಅಮ್ಮ’ ಗಾದಿಗಿಲ್ಲ ಅಡ್ಡಿ

  1.10: ನಿರೀಕ್ಷೆಗೂ ಮೀರಿ ಪುದುಚೆರಿಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಮೈತ್ರಿಕೂಟ 13 ಸ್ಥಾನಗಳಲ್ಲಿ ಮತ್ತು ಸ್ಥಳೀಯ ಪಕ್ಷ ಎನ್ಆರ್’ಸಿ 12 ಸ್ತಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಸರ್ಕಾರ ರಚಿಸಲು ಎಐಎಡಿಎಂಕೆ ಸೇರಿದಂತೆ ಇತರರ ಬೆಂಬಲ ಅನಿವಾರ್ಯವಾಗಿದೆ.   1.00: ಮೊದಲ ಬಾರಿಗೆ ಈಶಾನ್ಯ ರಾಜ್ಯಗಳ ಬಾಗಿಲು ಬಿಜೆಪಿಗೆ ತೆರೆದಿದೆ. ಅಸ್ಸಾಂನಲ್ಲಿ ಬಿಜೆಪಿ ನಿಚ್ಛಳ ಬಹುಮತ ಪಡೆಯುವ ಸೂಚನೆಗಳು ಕಾಣಿಸುತ್ತಿವೆ. ಈ ಮೂಲಕ ಬಿಜೆಪಿಯಿಂದ ಸರ್ಬಾನಂದ ಸೋನಾವಾಲ್ ಮುಖ್ಯಮಂತ್ರಿಯಾಗಲಿದ್ದಾರೆ. ಒಟ್ಟು 126 ಸದಸ್ಯ ಬಲದ ಅಸ್ಸಾಂನಲ್ಲಿ ಬಿಜೆಪಿ..

  May 19, 2016

Top