An unconventional News Portal.

  ...
  sham-bhat-kpsc-final
  KPSC NEWS

  KPSCಗೆ ಕಳಂಕಿತ ಶಾಮ್ ಭಟ್ ಹೆಸರು ಶಿಫಾರಸ್ಸು: ಶವ ಪೆಟ್ಟಿಗೆಗೆ ಸರಕಾರದ ಕೊನೆಯ ಮೊಳೆ!

  ನಿರೀಕ್ಷೆಯಂತೆಯೇ ಸಿಎಂ ಸಿದ್ದರಾಮಯ್ಯ ಸರಕಾರ ಆಡಳಿತಾತ್ಮಕ ವಿಚಾರದಲ್ಲಿ ಮತ್ತೊಂದು ಆಘಾತಕಾರಿ ಹೆಜ್ಜೆಯನ್ನು ಇಡಲು ಮುಂದಾಗಿದೆ. ಬಿಡಿಎ ಆಯುಕ್ತರಾಗಿರುವ, ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿ ಶಾಮ್ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಕುರಿತು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, “ಊರಿಗೆ ಬಂದವರು ನೀರಿಗೆ ಬರಲ್ವಾ? ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಾಮ್ ಭಟ್ ಹೆಸರು ಇನ್ನೂ ನೇಮಕ ಆಗಿಲ್ಲ. ಒಂದು ವೇಳೆ ಮಾಡಿದರೆ ನಿಮಗೆ ಗೊತ್ತಾಗದೇ ಇರುತ್ತದಾ?,” ಎಂದು ಅಡ್ಡ..

  May 18, 2016
  ...
  Heavy rains in Chennai
  ದೇಶ

  ಮಳೆಯ ಮಾರುತಗಳ ನಿರೀಕ್ಷೆಯಲ್ಲಿ ನೆರೆ ರಾಜ್ಯಗಳು: ಸೈಕ್ಲೋನ್ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

  ರಾಜ್ಯದ ನಾನಾ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಇದೇ ವೇಳೆ, ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಸೈಕ್ಲೋನ್ ಸಾಧ್ಯತೆಯನ್ನು ಮುಂದಿಟ್ಟಿರುವ ಹವಾಮಾನ ಇಲಾಖೆ ರಾಜ್ಯ ಸರಕಾರಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸಂದೇಶ ರವಾನಿಸಿದೆ. ಚೆನ್ನೈನಿಂದ 90 ಕಿ.ಮೀ ಪೂರ್ವ ಭಾಗದ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಮಾರುತಗಳು ಎದ್ದಿವೆ. ಮುಂದಿನ 24 ಅಥವಾ 48 ಗಂಟೆಯೊಳಗೆ ಮಳೆಯ ಮಾರುತಗಳು ತಮಿಳುನಾಡು ಹಾಗೂ ಆಂಧ್ರಪ್ರದೇಶದ ಸಮುದ್ರ ತೀರವನ್ನು ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಳೆಯ ಮಾರುತಗಳಿಂದಾಗಿ ಭಾರಿ..

  May 18, 2016
  ...
  343C316200000578-3592627-image-a-1_1463406951889
  ಪತ್ರಿಕೆ

  ‘ನುಡಿದಂತೆ ನಡೆದ’ ಪತ್ರಕರ್ತ ತನ್ನ ಅಂಕಣವನ್ನೇ ಖಾದ್ಯ ಮಾಡಿ ತಿಂದ!

  ಪತ್ರಿಕೋದ್ಯಮ ನೈತಿಕತೆ ಕಳೆದುಕೊಳ್ಳುತ್ತಿದೆ ಎನ್ನುವ ಆಪಾದನೆಗಳ ಹೊತ್ತಲ್ಲಿ, ‘ನುಡಿದಂತೆ ನಡೆದ’ ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಡೇನಾ ಮಿಲ್’ಬ್ಯಾಂಕ್ ಜಾಗತಿಕ ಪತ್ರಿಕೋದ್ಯಮದಲ್ಲಿ ಅಚ್ಚರಿಗೆ ಕಾರಣರಾಗಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾದರೆ ತಾನು ತನ್ನ ಅಂಕಣವನ್ನೇ ತಿನ್ನುತ್ತೇನೆ (ಐ ವಿಲ್ ಈಟ್ ಮೈ ಕಾಲಂ) ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ಕಾಲಮಿಸ್ಟ್ ಡೇನಾ ಮಿಲ್’ಬ್ಯಾಂಕ್ ಅಂಕಣವೊಂದರಲ್ಲಿ ಬರೆದುಕೊಂಡಿದ್ದರು. ಇದೀಗ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುತ್ತಿದ್ದಂತೆ  ತನ್ನ ಮಾತನ್ನು ಉಳಿಸಿಕೊಂಡಿರುವ ಮಿಲ್’ಬ್ಯಾಂಕ್ ತನ್ನ ಅಂಕಣ ಪ್ರಕಟವಾದ..

  May 18, 2016
  ...
  french-labour-protest-1
  ವಿದೇಶ

  ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿರುವ ‘ಪ್ರೇಮಿಗಳ ನಗರಿ’: ಪ್ಯಾರೀಸ್ ಬೀದಿಗಳಲ್ಲಿ ಸಾವಿರಾರು ಕಾರ್ಮಿಕರು

  ಕಾರ್ಮಿಕ ಕಾನೂನಿನಲ್ಲಿ ಬದಲಾವಣೆ ಘೋಷಿಸಿದ ಬೆನ್ನಿಗೇ, ಸಾವಿರಾರು ಕಾರ್ಮಿಕರು ಫ್ರಾನ್ಸ್ ರಾಜಧಾನಿ ಪ್ಯಾರೀಸ್ ನಗರದಲ್ಲಿ ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ. ಬುಧವಾರಕ್ಕೆ ಮುಷ್ಕರ 6 ನೇ ದಿನಕ್ಕೆ ಕಾಲಿಟ್ಟಿದ್ದು, 55 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ಯಾರೀಸ್ ಸೇರಿದಂತೆ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳಿಗೆ ಕಾರ್ಮಿಕ ಹಾಗೂ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿವೆ. ಫ್ರಾನ್ಸ್ ಆಂತರಿಕ ಆಡಳಿತ ಸಚಿವಾಲಯದ ಪ್ರಕಾರ ಕಳೆದ ಒಂದು ವಾರದಿಂದೀಚೆಗೆ 1 ಸಾವಿರಕ್ಕೂ ಅಧಿಕ ಪ್ರತಿಭಟನಾನಿರತರನ್ನು ಬಂಧಿಸಲಾಗಿದೆ. ಮಂಗಳವಾರ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಅರ್ಧ ಲಕ್ಷ ಜನ..

  May 18, 2016

Top