An unconventional News Portal.

  ...
  exit-poll-2016
  ದೇಶ

  ಬಂಗಾಳದಲ್ಲಿ ‘ಅಗ್ನಿ ದೇವತೆ’, ‘ಅಮ್ಮ’ನ ಮಡಿಲಿಗೆ ತಮಿಳುನಾಡು, ಕೇರಳದಲ್ಲಿ ಕೆಂಬಾವುಟ, ಅಸ್ಸಾಂನಲ್ಲಿ ಕೇಸರಿ ಝಂಡಾ!

  ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಂತಿಮ ಹಂತದ ಮತದಾನ ಮುಗಿದ ಬೆನ್ನಿಗೇ ಮತದಾನೋತ್ತರ ಚುನಾವಣಾ ಸಮೀಕ್ಷೆ ವರದಿಗಳು ಹೊರಬಿದ್ದಿವೆ. ಸೋಮವಾರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಲ್ಲಿ ಮತದಾನ ಮುಗಿದಿದೆ. ಈ ಐದೂ ಕಡೆಗಳಲ್ಲಿ ಮೇ. 19ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದರ ನಡುವೆಯೇ, ಮತದಾನೋತ್ತರ ಚುನಾವಣಾ ಸಮೀಕ್ಷೆಗಳು ಹೊರಬಿದ್ದಿವೆ. ಕೆಲವು ಕಡೆಗಳಲ್ಲಿ ಮತದಾನ ಪೂರ್ವ ಸಮೀಕ್ಷೆಗಳು ತಲೆಕೆಳಗಾಗಿದ್ದು ಕುತೂಹಲ ಮೂಡಿಸಿದೆ. ಮತದಾನೋತ್ತರ ಸಮೀಕ್ಷೆಯ..

  May 16, 2016
  ...
  sslc-results-1
  ರಾಜ್ಯ

  SSLC ಫಲಿತಾಂಶ ಕಂಪ್ಲೀಟ್ ಡೀಟೆಲ್ಸ್: ಗ್ರಾಮೀಣ ಮಕ್ಕಳ ಮೇಲುಗೈ; ದಾಖಲೆ ಬರೆದ ಪ್ರಥಮ ರ್ಯಾಂಕ್!

  ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ  ಸೋಮವಾರ ಪ್ರಕಟಗೊಂಡಿದ್ದು ರಾಜ್ಯಾದ್ಯಂತ ಶೇ. 79.16 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಿರೀಕ್ಷೆಯಂತೆಯೇ ಇದರಲ್ಲಿ ಬಾಲಕಿಯರ ಸಂಖ್ಯೆ ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶ ಶೇ.2 ರಷ್ಟು ಕುಸಿತ ಕಂಡಿದೆ. ಅಚ್ಚರಿ ಎಂಬಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಫಲಿತಾಂಶ ದಾಖಲಿಸಿದ ಜಿಲ್ಲೆಯಾಗಿ ಹೊರಹೊಮ್ಮಿದೆ. ಬುದ್ದಿವಂತರ ಜಿಲ್ಲೆ ಎಂದೇ ಕರೆಯಲ್ಪಡುವ ಉಡುಪಿ ಎರಡನೆ ಸ್ಥಾನ ಪಡೆದರೆ, ಮಂಗಳೂರು ತೃತೀಯ ಸ್ಥಾನ ಪಡೆದಿದೆ. ಉತ್ತರ ಕನ್ನಡ ಜಿಲ್ಲೆ 4 ನೇ ಸ್ಥಾನದಲ್ಲಿದ್ದರೆ, ಬಳ್ಳಾರಿ ಕೊನೆಯ ಸ್ಥಾನದಲ್ಲಿದೆ. ಪರೀಕ್ಷೆಗೆ ಹಾಜರಾದ 7,88,442..

  May 16, 2016
  ...
  kpsc-chalo-2
  KPSC NEWS

  KPSC ಎದುರಿಗೆ ಪ್ರತಿಭಟನೆ: FDA ಅಭ್ಯರ್ಥಿಗಳ ಮನವಿಗೆ ಸರಕಾರ ನೀಡುತ್ತಾ ಮನ್ನಣೆ?

  ವಿಧಾನಸೌಧ ಪಕ್ಕದಲ್ಲಿರುವ ‘ಉದ್ಯೋಗ ಸೌಧ’ದ ಮುಂಭಾಗ ಸೋಮವಾರ ಮಧ್ಯಾಹ್ನ ಎಫ್ಡಿಎ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ‘ಕೆಪಿಎಸ್ಸಿ ಚಲೋ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಲ್ಲಿ ಪ್ರತಿಭಟನೆಯ ರೂಪುರೇಷಗಳನ್ನು ಸಿದ್ಧಪಡಿಸಿದ್ದ ಅಭ್ಯರ್ಥಿಗಳು, ಕೆಪಿಎಸ್ಸಿ ಮುಂಭಾಗ ಪ್ರತಿಭಟನೆ ನಡೆಸಿ, ತಮ್ಮ ಆಗ್ರಹಗಳನ್ನು ಮುಂದಿಟ್ಟರು. ಸುಮಾರು 50ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದ ಪ್ರತಿಭಟನಾಕಾರರು ಎಫ್ಡಿಎ ಮರು ಪರೀಕ್ಷೆ ನಡೆಸಬೇಕು, ಸದ್ಯ ಸಂದರ್ಶನಕ್ಕೆ ಆಯ್ಕೆ ಮಾಡಿರುವ ಪಟ್ಟಿಯನ್ನು ಮರುಪರಿಶೀಲಿಸಬೇಕು ಎಂದು ಕೆಪಿಎಸ್ಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು. ಹಿನ್ನೆಲೆ:  ಶುಕ್ರವಾರ ಎಫ್ಡಿಎ ಅರ್ಹತಾ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸುತ್ತಲೇ,..

  May 16, 2016
  ...
  suddi-bidugade-final
  ಪತ್ರಿಕೆ

  ಸುದ್ದಿ ಮಾಡುವವರೇ ಸುದ್ದಿಯಾದ ಕತೆ: ‘ಆಂದೋಲನ’ ಮಾಡಲು ಹೋಗಿ ಮೈಮೇಲೆ ಎಳೆದುಕೊಂಡವರ ವ್ಯಥೆ!

  ಸುದ್ದಿ ಮಾಡುವವರೇ ಸುದ್ದಿಕೇಂದ್ರಕ್ಕೆ ಬಂದ ವಿಚಿತ್ರ ಪ್ರಕರಣವಿದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸ್ಥಳೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಪತ್ರಿಕೆ ‘ಸುದ್ದಿ ಬಿಡುಗಡೆ’ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಪತ್ರಿಕೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವ ಭರಾಟೆಯಲ್ಲಿ, ಪರ- ವಿರೋಧದ ಮಧ್ಯದಲ್ಲಿ ಸಿಲುಕಿಕೊಂಡಿದೆ. ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಗುರಿಯಾಗಿದೆ. ಏನಿದು ಘಟನೆ?: ದಕ್ಷಿಣ ಕನ್ನಡದಾದ್ಯಂತ ಬಂದ್ ನಡೆಯುವುದು ಸಾಮಾನ್ಯ ಎಂಬ ಪರಿಸ್ಥಿತಿ ಇದೆ. ಸಂವಿಧಾನ ಕೊಡಮಾಡಿರುವ ಪ್ರತಿಭಟಿಸುವ ಹಕ್ಕನ್ನು ಇಲ್ಲಿನ ಜನ ವಿಪರೀಪವಾಗಿ ಬಳಸಿಕೊಳ್ಳಲು ಹೋಗಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ..

  May 16, 2016
  ...
  isro-air shuttle-1
  ಸುದ್ದಿ ಸಾರ

  ಮೊದಲ ‘ಮೇಕ್ ಇನ್ ಇಂಡಿಯಾ’ ಆಕಾಶಯಾನಕ್ಕೆ ಸಜ್ಜಾಗುತ್ತಿರುವ ಇಸ್ರೋ

  ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಲು ಹೊರಟಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರೆಕ್ಕೆ ಹೊಂದಿದ ರಾಕೆಟ್ಗಳನ್ನು ಗಗನಕ್ಕೆ ಹಾರಿಸುವ ಯೋಜನೆ ಹಾಕಿಕೊಂಡಿದೆ. ಅಂದುಕೊಂಡಂತೆ ನಡೆದರೆ ಪುನರ್ಬಳಕೆ ತಂತ್ರಜ್ಞಾನವನ್ನು ಒಳಗೊಂಡ ಆಕಾಶಯಾನ ಆರ್.ಎಲ್.ವಿ- ಟಿಡಿ, ಈ ತಿಂಗಳಾಂತ್ಯಕ್ಕೆ ಉಡಾವಣೆಯಾಗಲಿದೆ. ಒಂದೊಮ್ಮೆ ಇದು ಯಶಸ್ವಿಯಾದರೆ ವಿಶ್ವದಲ್ಲೇ ಮರುಬಳಕೆಯ ರಾಕೆಟ್ಗಳನ್ನು ಅಭಿವೃದ್ಧಿ ಪಡಿಸಿದಿ ಶ್ರೇಯಸ್ಸು ಇಸ್ರೋ ಪಾಲಾಗಲಿದೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿ ಉಡ್ಡಯನ ವಾಹಕಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಸಂಪೂರ್ಣ ‘ಮೇಕ್ ಇನ್ ಇಂಡಿಯಾ’ ಪ್ರಯತ್ನದೊಂದಿಗೆ ನಿರ್ಮಿಸಲಾಗಿರುವ ನೌಕೆಯ..

  May 16, 2016

Top