An unconventional News Portal.

  ...
  india-court-1
  ದೇಶ

  ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲಿ ಬದಲಾವಣೆ ಅಗತ್ಯವಿಲ್ಲ: ಸುಪ್ರಿಂ ಮಹತ್ವದ ತೀರ್ಪು

  ‘ಲ್ಯಾಂಡ್ ಮಾರ್ಕ್’ ಎಂದು ಕರೆಯಬಹುದಾದ ತೀರ್ಪೊಂದನ್ನು ನೀಡಿರುವ ಸುಪ್ರಿಂ ಕೋರ್ಟ್ ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದು ಶುಕ್ರವಾರ ತಿಳಿಸಿದೆ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕಾನೂನುಗಳನ್ನು (ಐಪಿಸಿ 499, 500) ಸುಧಾರಣೆ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಇದು ರಾಜಕಾರಣಿಗಳು, ಹೋರಾಟಗಾರರು ಹಾಗೂ ಪತ್ರಕರ್ತರ ಮೇಲೆ ನೇರ ಪರಿಣಾಮ ಬೀರುಲಿರುವ ತೀರ್ಪು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಐಪಿಸಿ..

  May 13, 2016
  ...
  passport-1
  ರಾಜ್ಯ

  ಅರಬ್ ದೇಶಗಳಲ್ಲಿರುವ ಬಡ ಭಾರತೀಯರ ಸಂಕಷ್ಟಗಳು ಮತ್ತು ಪಾಸ್ಪೋರ್ಟ್ ಬೆನ್ನಿಗೆ ಬಿದ್ದ ಕನ್ನಡಿಗನ ಕತೆ!

  ವಿದೇಶದಲ್ಲಿ ಪಾಸ್ಪೋರ್ಟ್ ಕಳೆದುಕೊಂಡು ವಾಪಾಸಾಗಿದ್ದ ಕನ್ನಡಿಗರೊಬ್ಬರಿಗೆ ಮಾನವೀಯತೆ ಆಧಾರದ ಮೇಲೆ ಮತ್ತೆ ರಹದಾರಿ ಪ್ರಮಾಣ ಪತ್ರವನ್ನು ನೀಡಿದ ವಿಶೇಷ ಘಟನೆಯೊಂದು ವರದಿಯಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮದುಬಾಲದ ಉಸ್ಮಾನ್ ಪಟೇಲ್ ಬಿರಾದಾರ್ ಅವರ ಸಂದಿಗ್ಧ ಪ್ರಕರಣವನ್ನು ಗಮನಿಸಿದ ವಿದೇಶಾಂಗ ಇಲಾಖೆ 2 ತಿಂಗಳು ಅಳೆದು ತೂಗಿ ಕೊನೆಗೆ ಕಳೆದ ಶನಿವಾರ ಪಾಸ್ಪೋರ್ಟ್ ವಿತರಿಸಲು ಅನುಮತಿ ನೀಡಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಮೂಲಕ ಬಿರಾದಾರ್ ತಮ್ಮ ಹೊಸ ಪಾಸ್ಪೋರ್ಟ್ ಪಡೆದುಕೊಂಡು, ಮತ್ತೆ ವಿದೇಶದಲ್ಲಿ ಕೆಲಸ ಅರಸಲು ಮುಂದಾಗಿದ್ದಾರೆ…

  May 13, 2016
  ...
  sonia-gandhi-1
  ದೇಶ

  ‘ನನ್ನನ್ನು ಉಳಿಸಿಕೊಳ್ಳುವ ಸಲುವಾಗಿ ಆದರೂ ಸೋನಿಯಾ ಗಾಂಧಿಯನ್ನು ಉಳಿಸಬೇಕಿದೆ’!

  ಆಗಸ್ಟಾ ಹೆಲಿಕಾಪ್ಟರ್ ಖರೀದಿ ಅವ್ಯವಹಾರದದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ‘ಪ್ರಮುಖ ಪಾತ್ರಧಾರಿ’ ಎಂದು ಪತ್ರವೊಂದರಲ್ಲಿ ತಿಳಿಸಿದ್ದಾಗಿ ಮಧ್ಯವರ್ತಿ ಕ್ರಿಸ್ಟಿಯನ್ ಮೈಖೇಲ್ ‘ಎನ್ ಡಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ. ಆದರೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವೈಯುಕ್ತಿಕವಾಗಿ ಗೊತ್ತಿಲ್ಲ ಎಂದಿರುವ ಆತ, ”ನನ್ನನ್ನುಉಳಿಸಿಕೊಳ್ಳಲಾದರೂ, ನಾನು ಗಾಂಧಿ ಕುಟುಂಬವನ್ನು ಉಳಿಸಬೇಕಿದೆ,” ಎಂದು ಹೇಳಿಕೊಂಡಿದ್ದಾನೆ. ಸದ್ಯ ಈತನಿಗಾಗಿ ಸಿಬಿಐ ಹುಡಕಾಟ ನಡೆಸುತ್ತಿದೆ. ಆದರೆ, ಈ ವಾರದ ಆರಂಭದಲ್ಲಿಯೇ ಕ್ರಿಸ್ಟಿಯನ್ ದುಬೈನಿಂದ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ನೀಡಿದ್ದಾನೆ. “ಗಾಂಧಿ..

  May 13, 2016
  ...
  insta-2
  ಫೋಕಸ್

  ಆ ಹೃದಯ ಬಡಿತ ನಿಲ್ಲಿಸಿದ್ದು ನಿಮಗಾಗಿ..!

  ಲೆದರ್ ಬ್ಯಾಗ್, ಲೆದರ್ ಬೆಲ್ಟ್, ಲೆದರ್ ಜಾಕೇಟ್, ಶೂಸ್ ಹೀಗೆ ಚರ್ಮದಿಂದ ತಯಾರಿಸಿರುವ ವಸ್ತುಗಳೆಂದರೆ ಯಾರಿಗೆ ತಾನೆ ಇಷ್ಟವಾಗಲ್ಲ. ಅದರಲ್ಲೂ ಇತ್ತೀಚೆಗಂತೂ ಚರ್ಮದ ವಸ್ತುಗಳೆಂದರೆ ಒಂದು ರೀತಿಯ ಟ್ರೆಂಡ್ ಆಗಿ ಬಿಟ್ಟಿದೆ. ಹೀಗಾಗಿ ಮಾರುಕಟ್ಟೆಯಲ್ಲೂ ಈ ರೀತಿಯ ಚರ್ಮದಿಂದ ತಯಾರಿಸಿರುವ ವಸ್ತುಗಳಿಗೆ ಭಾರಿ ಬೇಡಿಕೆ ಇದೆ.   ಚರ್ಮದಿಂದ ತಯಾರಿಸಿರುವ ವಸ್ತುಗಳಿಗೆ ಬೇಡಿಕೇನೋ ಇರುವುದು ನಿಜ. ಆದರೆ ಆ ಸುಂದರವಾದ ಬ್ಯಾಗುಗಳು, ಬೆಲ್ಟ್’ಗಳು ತಯಾರಾಗುವ ಬಗೆಯನ್ನು ನಾವು ಯೋಚನೆ ಮಾಡುವುದಿಲ್ಲ. ಯಾಕೆಂದರೆ ನಮ್ಮ ಸೌಂದರ್ಯಕ್ಕೆ ಭೂಷಣವಾಗುವ ಈ ಎಲ್ಲಾ ವಸ್ತುಗಳಿಗಾಗಿ..

  May 13, 2016
  ...
  VK-final-1
  ಪತ್ರಿಕೆ

  ‘ವಿಜಯ ಕರ್ನಾಟಕ’ದೊಳಗೆ ವರ್ಗಾವಣೆಗಳ ಪರ್ವ: ಏನಿದರ ಹಿಂದಿನ ಮರ್ಮ?

  ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದಲ್ಲಿ ನಡೆದ ಬೆಳವಣಿಗೆಯೊಂದರಲ್ಲಿ ದಿಲ್ಲಿ ಬ್ಯುರೋಗೆ ಸುಭಾಷ್ ಹೂಗಾರ್ ಅವರನ್ನು ನೇಮಕ ಮಾಡಲಾಗಿದೆ. ಮೇ ಅಂತ್ಯದೊಳಗೆ ದಿಲ್ಲಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಹುಬ್ಬಳ್ಳಿಯಿಂದ ಬಂದು, ಬೆಂಗಳೂರಿನಲ್ಲಿ ರಾಜಕೀಯ ವಿಭಾಗದ ಹೊಣೆಗಾರಿಕೆ ವಹಿಸಿಕೊಂಡಿದ್ದ ಹೂಗಾರ್ ಅವರಿಗೆ ತಿಳಿಸಲಾಗಿದೆ. ‘ವಿಕ’ದ ದಿಲ್ಲಿ ಪ್ರತಿನಿಧಿಯಾಗಿರುವ ಹಿರಿಯ ಪತ್ರಕರ್ತ ಡಿ. ಉಮಾಪತಿಯವರಿಗೆ ಬೆಂಗಳೂರಿನ ಕೇಂದ್ರ ಸ್ಥಾನಕ್ಕೆ ಬರುವಂತೆ ತಿಳಿಸಲಾಗಿದೆ. ಈ ನಡುವೆ ತಿಮ್ಮಪ್ಪ ಭಟ್ ಗುರುವಾರದಿಂದ ಸುದೀರ್ಘ ರಜೆಯ ಮೇಲೆ ತೆರಳಿದ್ದಾರೆ. ಏನೀ ಬೆಳವಣಿಗಳು?: “ನಮ್ಮಲ್ಲಿ ರಾಜಕೀಯ ವಿಭಾಗದ..

  May 13, 2016

Top