An unconventional News Portal.

ದೇವಿ ವಿರುದ್ಧ ಮದ್ಯ ನಿಷೇಧ ಕಾಯ್ದೆ ಅಸ್ತ್ರ ಬಳಕೆ: ಬಂಧನಕ್ಕೆ ಬಿಹಾರ ಸರಕಾರ ಆದೇಶ

ದೇವಿ ವಿರುದ್ಧ ಮದ್ಯ ನಿಷೇಧ ಕಾಯ್ದೆ ಅಸ್ತ್ರ ಬಳಕೆ: ಬಂಧನಕ್ಕೆ ಬಿಹಾರ ಸರಕಾರ ಆದೇಶ

ಸಾರಾಯಿ ನಿಷೇಧ ಕಾನೂನು ಉಲ್ಲಂಘನೆ ಆರೋಪದ ಮೇಲೆ ನಿತೀಶ್ ಕುಮಾರ್ ಸರಕಾರ ಬಿಹಾರದ ಆಡಳಿತಾರೂಢ ಜೆಡಿಯುನ ಮನೋಹರಾ ದೇವಿಯ ವಿರುದ್ಧ ಬಂಧನಾದೇಶ ಹೊರಡಿಸಿದೆ.

ಓವರ್ ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದ ಮಗನನ್ನು ರಕ್ಷಣೆ ಮಾಡುತ್ತಿರುವ ಆರೋಪದ ಮೇಲೆ ಮನೋಹರ ದೇವಿಯನ್ನು ಪಕ್ಷದಿಂದ ಮಂಗಳವಾರವಷ್ಟೆ ಅಮಾನತು ಮಾಡಲಾಗಿತ್ತು. ನಂತರ ಅವರು ಬಚ್ಚಿಟ್ಟುಕೊಂಡಿದ್ದಾರೆಂದು ಹೇಳಲಾಗಿತ್ತು.

ಪಾಟ್ನಾದಿಂದ ಸುಮಾರು 100 ಕಿ. ಮೀ. ದೂರದ ಗಯಾದಲ್ಲಿರುವ ದೇವಿ ಮನೆಯಲ್ಲಿ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದ್ದು, ಈ ಸಂಬಂಧ ರಾಜ್ಯ ಸರಕಾರ ಬಂಧನಕ್ಕೆ ಆದೇಶ ನೀಡಿದೆ.

ಬಿಹಾರದಲ್ಲಿ ಮದ್ಯ ಮಾರಾಟ, ಸೇವನೆ, ಶೇಖರಣೆ, ಅಪರಾಧವಾಗಿದ್ದು ಇದನ್ನು ಉಲ್ಲಂಘಿಸಿದ ದೇವಿಯ ವಿರುದ್ಧ ರಾಜ್ಯ ಅಬಕಾರಿ ಇಲಾಖೆಯು ಗಯಾ ಜಿಲ್ಲಾ ಆಡಳಿತಕ್ಕೆ ದೇವಿಯ ಮನೆ ಜಪ್ತಿ ಮಾಡಿ, ಅವರನ್ನು ಬಂಧಿಸುವಂತೆ ನಿರ್ದೇಶಿಸಿದೆ.

ದೇವಿಯ ಮಗ ರಾಕಿಯನ್ನು ಬಂಧಿಸಲು ಹೋದಾಗ ದೇವಿಯವರ ಮನೆಯಲ್ಲಿ ಕಳ್ಳಭಟ್ಟಿಯ 6 ಪ್ಯಾಕೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಬೀಗಮುದ್ರೆ:

ನಿತೀಶ್ ಕುಮಾರ್ ಸರ್ಕಾರ ಹೇರಿದ್ದ ಮದ್ಯನಿಷೇಧವನ್ನು ಉಲ್ಲಂಘಿಸಿದ ಆರೋಪದ ಮೇಲೆ ಜೆಡಿಯುನ ಮನೋರಮಾ ದೇವಿಗೆ ಬಂಧನದ ವಾರಂಟ್ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಮನೆ ಮತ್ತು ಇತರೆ ಆಸ್ತಿಗಳಿಗೆ ರಾಜ್ಯ ಅಬಕಾರಿ ಇಲಾಖೆ ಮತ್ತು ಬಿಹಾರ ಪೊಲೀಸರು ಬೀಗಮುದ್ರೆ ಹಾಕಿದ್ದಾರೆ.

ಆದರೆ ಕೊಲೆ ಆರೋಪಿಯಾದ ಅವರ ಪುತ್ರನನ್ನು ರಕ್ಷಿಸಿದ ಕಾರಣಕ್ಕಾಗಿ ಅಮಾನತು ಮಾಡಿದ ಕೆಲವೇ ನಿಮಿಷಗಳಲ್ಲಿ ಮನೋರಮಾ ದೇವಿ ನಾಪತ್ತೆಯಾಗಿದ್ದಾರೆ.

ಗಯಾದಲ್ಲಿ ಕಾರು ಓವರ್ಟೇಕ್ ಮಾಡಿದ ಪ್ರಕರಣದಲ್ಲಿ ಯುವಕನಿಗೆ ಗುಂಡಿಕ್ಕಿ ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕಿಯ ಪುತ್ರ ರಾಕೇಶ್ ರಂಜನ್ ಅಲಿಯಾಸ್ ರಾಕಿಯನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾಗ ಲಿಕ್ಕರ್ ಸೀಸೆಗಳು ಪತ್ತೆಯಾಗಿದ್ದವು.

Leave a comment

FOOT PRINT

Top