An unconventional News Portal.

  ...
  modi-walking-1
  ದೇಶ

  ‘#PoMoneಮೋದಿ’ ಸೊಮಾಲಿಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಚಾರಗಳು!

  ಕೇರಳದ ಬುಡಕಟ್ಟು ಜನರ ಕುರಿತು ಮಾತನಾಡುವ ಭರಾಟೆಯಲ್ಲಿ ರಾಜ್ಯವನ್ನು ಸೊಮಾಲಿಯಾಗೆ ಹೋಲಿಸುವ ಮೂಲಕ ಪ್ರಧಾನಿ ಮೋದಿ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ಮೋದಿ ಚುನಾವಣಾ ಪ್ರಚಾರ ಸಮಯದಲ್ಲಿ ಆಡಿದ ಮಾತುಗಳ ಕುರಿತು ಪರ- ವಿರೋಧದ ಚರ್ಚೆಗಳು ಶುರುವಾಗಿವೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದಲ್ಲಿಯೇ ‘ಅತ್ಯುತ್ತಮ’ ಸ್ಥಾನದಲ್ಲಿರುವ ಕೇರಳವನ್ನು ಸೊಮಾಲಿಯಾಗೆ ಹೋಲಿಸಿರುವುದು ತಪ್ಪು ಎಂದು ಮೋದಿ ಬಗ್ಗೆ ನಿರೀಕ್ಷೆ ಇಟ್ಟುಕೊಂಡವರೂ ಹೇಳುವ ಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ, ಕೇರಳದ ಅತ್ಯುತ್ತಮ ಸಾಮಾಜಿಕ ಸನ್ನಿವೇಶಗಳು ಎಂಬುದಕ್ಕಿಂತ, ಸೊಮಾಲಿಯಾ ಭೀಕರ ಚಿತ್ರಣ. ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಸೊಮಾಲಿಯಾ..

  May 11, 2016
  ...
  sonia-siddu-param-1
  ರಾಜ್ಯ

  ಸಂಪುಟ ವಿಸ್ತರಣೆ ಅಥವಾ ಸಿಎಂ ಬದಲಾವಣೆ: ಏನೇ ಇದ್ದರೂ ತಿಂಗಳ ಕೊನೆಗೆ!

  ರಾಜ್ಯದಲ್ಲಿ ಮಾನ್ಸೂನ್ ಹನಿಗಳು ಬೀಳುತ್ತಿದ್ದಂತೆ ಮತ್ತೆ ಸಂಪುಟ ಪುನರ್ ರಚನೆ ವಿಚಾರ ನಿರೀಕ್ಷೆಯಂತೆಯೇ ಮುನ್ನೆಲೆಗೆ ಬಂದಿದೆ. ಇದೇ ಸಮಯಕ್ಕೆ ಸಿಎಂ ಸಿದ್ದರಾಮಯ್ಯ ಬುಧವಾರ ದಿಲ್ಲಿಗೆ ತೆರಳಿರುವುದು ಹೀಗೊಂದು ಚರ್ಚೆ ಶುರುವಾಗಲು ಕಾರಣ. ಆದರೆ, ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬರಬೇಕಿದೆ. ಅಲ್ಲೀವರೆಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸಂಪುಟ ಪುನರ್ ರಚನೆ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಬಲ್ಲ ಮೂಲಗಳು ಹೇಳುತ್ತಿವೆ. “ಗುರುವಾರ ಕಾಂಗ್ರೆಸ್ ಹೈಕಮಾಂಡ್ ಜತೆ ಸಿಎಂ ಭೇಟಿ ನಿಗದಿಯಾಗಿದ್ದರೂ, ಸಂಪುಟ ವಿಚಾರ ಚರ್ಚೆಗೆ ಬರುವುದಿಲ್ಲ. ಬದಲಿಗೆ, ಈ ತಿಂಗಳ 22-23ಕ್ಕೆ ಮತ್ತೊಮ್ಮೆ..

  May 11, 2016
  ...
  ಉದ್ಯಮಿ ವಿಜಯ್ ಮಲ್ಯ.
  ಸುದ್ದಿ ಸಾರ

  ವಿಜಯ್ ಮಲ್ಯ ಹಸ್ತಾಂತರಕ್ಕೆ ಒಲ್ಲೆ ಎಂದ ಬ್ರಿಟನ್

  ಸಾರ್ವಜನಿಕ ವಲಯದ ಬ್ಯಾಂಕುಗಳ 9000 ಕೋಟಿ ಸಾಲ ಮರುಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ಬಿಟ್ಟು ಪರಾರಿಯಾದ ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಒಪ್ಪಿಸುವಂತೆ ಮಾಡಿಕೊಂಡ ಮನವಿಯನ್ನು ಬ್ರಿಟನ್ ನಿರಾಕರಿಸಿದೆ. ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಏಪ್ರಿಲ್ 29ರಂದು ಬ್ರಿಟನ್ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಲ್ಯ ಅವರನ್ನು ಗಡಿಪಾರು ಮಾಡಲು ಪ್ರಯತ್ನಿಸುವುದಾಗಿ ಬ್ರಿಟನ್ ಸರಕಾರ ಹೇಳಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. ವಿಜಯ್ ಮಲ್ಯ..

  May 11, 2016
  ...
  manohar-devi-bihar-1
  ಸುದ್ದಿ ಸಾರ

  ದೇವಿ ವಿರುದ್ಧ ಮದ್ಯ ನಿಷೇಧ ಕಾಯ್ದೆ ಅಸ್ತ್ರ ಬಳಕೆ: ಬಂಧನಕ್ಕೆ ಬಿಹಾರ ಸರಕಾರ ಆದೇಶ

  ಸಾರಾಯಿ ನಿಷೇಧ ಕಾನೂನು ಉಲ್ಲಂಘನೆ ಆರೋಪದ ಮೇಲೆ ನಿತೀಶ್ ಕುಮಾರ್ ಸರಕಾರ ಬಿಹಾರದ ಆಡಳಿತಾರೂಢ ಜೆಡಿಯುನ ಮನೋಹರಾ ದೇವಿಯ ವಿರುದ್ಧ ಬಂಧನಾದೇಶ ಹೊರಡಿಸಿದೆ. ಓವರ್ ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದ ಮಗನನ್ನು ರಕ್ಷಣೆ ಮಾಡುತ್ತಿರುವ ಆರೋಪದ ಮೇಲೆ ಮನೋಹರ ದೇವಿಯನ್ನು ಪಕ್ಷದಿಂದ ಮಂಗಳವಾರವಷ್ಟೆ ಅಮಾನತು ಮಾಡಲಾಗಿತ್ತು. ನಂತರ ಅವರು ಬಚ್ಚಿಟ್ಟುಕೊಂಡಿದ್ದಾರೆಂದು ಹೇಳಲಾಗಿತ್ತು. ಪಾಟ್ನಾದಿಂದ ಸುಮಾರು 100 ಕಿ. ಮೀ. ದೂರದ ಗಯಾದಲ್ಲಿರುವ ದೇವಿ ಮನೆಯಲ್ಲಿ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದ್ದು, ಈ ಸಂಬಂಧ ರಾಜ್ಯ ಸರಕಾರ ಬಂಧನಕ್ಕೆ ಆದೇಶ ನೀಡಿದೆ. ಬಿಹಾರದಲ್ಲಿ ಮದ್ಯ..

  May 11, 2016
  ...
  call-drop-1
  ಸುದ್ದಿ ಸಾರ

  ‘ಕಾಲ್ ಡ್ರಾಪ್’ಗೆ ಪರಿಹಾರ: ಟೆಲಿಕಾಂ ಕಂಪನಿಗಳ ಮೊರೆಗೆ ಅಸ್ತು ಎಂದ ಸುಪ್ರಿಂ ಕೋರ್ಟ್

  ಕಾಲ್ ಡ್ರಾಪ್ಗೆ ದಂಡ ವಿಧಿಸುವಂತೆ ಭಾರತೀಯ ದೂರ ಸಂಪರ್ಕ ಪ್ರಾಧಿಕಾರ ಮಾಡಿದ್ದ ಶಿಫಾರಸನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಈ ಮೂಲಕ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಪ್ರತಿ ಕಾಲ್ ಡ್ರಾಪ್ ಗೆ ಒಂದು ರೂ ದಂಡ ವಿಧಿಸುವಂತೆ ಟ್ರಾಯ್ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಟೆಲಿಕಾಂ ಕಂಪನಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.ಈ ಕುರಿತು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಟ್ರಾಯ್ ಆದೇಶವನ್ನು ರದ್ದುಮಾಡಿ ತೀರ್ಪು ನೀಡಿದೆ. ದಿನದಲ್ಲಿ ಗರಿಷ್ಠ ಮೂರಕ್ಕಿಂತ..

  May 11, 2016
  ...
  siddaganga-matt-1
  ರಾಜ್ಯ

  ಸಿದ್ದಗಂಗಾ ಮಠದ ಹೆಸರಿನಲ್ಲಿ ಪಂಗನಾಮ: ಔಷಧಿ ಕೊಡುತ್ತೇವೆಂದು ಬಂದು 50 ಸಾವಿರ ಕಿತ್ತರು!

  ಪಾರ್ಶ್ವವಾಯು ಪೀಡಿತರೊಬ್ಬರಿಗೆ ಸಿದ್ದಗಂಗಾ ಮಠದ ಟ್ರಸ್ಟ್ ವತಿಯಿಂದ ಔಷಧಿ ಕೊಡುತ್ತೇವೆ ಎಂದು ಬಂದ ಖದೀಮರಿಬ್ಬರು 50 ಸಾವಿರ ಕಿತ್ತುಕೊಂಡು ಪರಾರಿಯಾದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಿಂದ ವರದಿಯಾಗಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿಯ ಕವಲೇದುರ್ಗ ಸಮೀಪದ ಕೋಗೊಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರಿಗೆ ಔಷಧಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಇದು ಸಿದ್ದಗಂಗಾ ಮಠದ ಟ್ರಸ್ಟ್ ಕಡೆಯಿಂದ ಉಚಿತ ಸೇವೆ ಎಂದು ಹೇಳಿದ್ದಾರೆ. ನಂತರ 25 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 50 ಸಾವಿರ..

  May 11, 2016
  ...
  Oprah_1
  ಟಿವಿ

  ಬರಿಗೈಯಲ್ಲಿ ಬಂದು ಕೋಟ್ಯಾಧಿಪತಿಯಾದ ಪತ್ರಕರ್ತೆ ಓಪ್ರಾಳ ಬದುಕಿನ ಕತೆ

  ನಮ್ಮಲ್ಲಿ ಕಳೆದ ಹತ್ತು ವರ್ಷಗಳ ಅಂತರದಲ್ಲಿ ಪತ್ರಿಕೋದ್ಯಮ ಹುಟ್ಟಿಸಿದ ಕನಸುಗಳ ಪೈಕಿ ನಿರೂಪಕರಾಗಬೇಕು ಎಂಬುದು ಪ್ರಥಮ ಸ್ಥಾನದಲ್ಲಿದೆ. ಈಗಷ್ಟೆ ಕಾಲೇಜು ಮುಗಿಸಿ, ಪತ್ರಿಕೋದ್ಯಮಕ್ಕೆ ಬರುವವರ ಆಸಕ್ತಿ ಏನು ಎಂದು ಕೇಳಿದರೆ, ಆ್ಯಂಕರ್ ಆಗಬೇಕು ಎಂಬುದು. ಕನಸು ಕಾಣುವುದು ತಪ್ಪಲ್ಲ. ಆದರೆ, ಅದರ ಜತೆಗೆ ಅಂತಹ ಕನಸುಗಳನ್ನು ಕಾಣುವಾಗ ವಾಸ್ತವಗಳನ್ನು ಎದುರಿಸುಲೂ ಮನಸ್ಸು ಗಟ್ಟಿಯಾಗಿರಬೇಕು. ಹೀಗಾಗಿಯೇ, ಜಗತ್ತಿನ ಶ್ರೇಷ್ಠ ಅಂತ ಕರೆಯಬಹುದಾದ, ಅದೇ ವೇಳೆ, ಅಷ್ಟೆ ಪ್ರಮಾಣದ ಜನಪ್ರಿಯತೆಯನ್ನೂ ಬೆನ್ನಿಗಿಟ್ಟುಕೊಂಡಿರುವ ಆ್ಯಂಕರ್ ಒಬ್ಬರ ಕತೆಯನ್ನು ಇಲ್ಲಿ ನಿರೂಪಿಸುತ್ತಿದ್ದೇವೆ. ಹೌದು, ಇದು..

  May 11, 2016
  ...
  harish-rawath-cong-1
  ದೇಶ

  ಚುನಾಯಿತ ಸರಕಾರದ ತೆಕ್ಕೆಗೆ ಮರಳಿದ ಉತ್ತರಖಾಂಡ್: ರಾಷ್ಟ್ರಪತಿ ಆಳ್ವಿಕೆ ಹಿಂತೆಗೆಯಲು ಸುಪ್ರೀಂ ಸೂಚನೆ

  ಉತ್ತರಖಾಂಡ್ ಎಂಬ ಪುಟ್ಟ ರಾಜ್ಯದಲ್ಲಿ ಮತ್ತೆ ಚುನಾಯಿತ ಸರಕಾರದ ಆಳ್ವಿಕೆ ಶುರುವಾಗಲಿದೆ. ವಿಶ್ವಾಸ ಮತ ಯಾಚನೆಯಲ್ಲಿ ಕಾಂಗ್ರೆಸ್ ಪಕ್ಷದ ಹರೀಶ್ ರಾವತ್ ಸರಕಾರ ಅಗತ್ಯ ಬಹುಮತ ಗಳಿಸಿದೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಬುಧವಾರ ಸಂಜೆಯೊಳಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸುವಂತೆ ಸೂಚಿಸಿದೆ. ಕಳೆದ ಕೆಲವು ದಿನಗಳಿಂದ ಉತ್ತರಖಾಂಡ್ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ಈ ಮೂಲಕ ತಾರ್ಕಿಕ ಅಂತ್ಯ ಕಾಣುವಂತಾಗಿವೆ. ಕೇಂದ್ರ ಸರಕಾರಕ್ಕೆ ಇದು ಭಾರಿ ಮುಖಭಂಗ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ..

  May 11, 2016

Top