An unconventional News Portal.

    ...
    paidmedia
    ಮೀಡಿಯಾ 2.0

    ಲೀಕಾಯ್ತು ಪತ್ರಕರ್ತೆಯ ಟೇಪು: ಚರ್ಚೆಗೆ ಬಂತು ಚುನಾವಣೆ ಸಮಯದಲ್ಲಿ ನಡೆಯುವ ‘ಕಾಸಿಗಾಗಿ ಸುದ್ದಿ’ ವಿಚಾರ!

    ಕೇರಳದಲ್ಲಿ ಚುನಾವಣೆ ಕಾವು ಜೋರಾಗುತ್ತಿರುವಂತೆ ಪತ್ರಕರ್ತೆಯೊಬ್ಬರ ಆಡಿಯೋ ಕ್ಲಿಪ್ ಲೀಕ್ ಆಗಿದ್ದು ಚರ್ಚೆಗೆ ಕಾರಣವಾಗಿದೆ. ಪತ್ರಕರ್ತೆಯೊಬ್ಬರು ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ತನ್ನ ಗಂಡನ ಪರವಾಗಿ ಬೇರೆ ಬೇರೆ ಮಾಧ್ಯಮಗಳ ಪತ್ರಕರ್ತರನ್ನೇ ‘ಬುಕ್’ ಮಾಡಲು ಹೊರಟಿದ್ದರು ಎಂಬ ಗುಲ್ಲು ಹಬ್ಬಿದೆ. ನಡೆದಿದ್ದೇನು? ಲೆಬಿ ಡೆನಿಸ್ ಕೇರಳದ ಪ್ರತಿಷ್ಠಿತ ಮಾತೃಭೂಮಿ ಚಾನಲ್ನ ಕೊಚ್ಚಿ ವಿಭಾಗದ ವಿಶೇಷ ವರದಿಗಾರ್ತಿ. ಈಕೆಯ ಗಂಡ ವಿ ಪಿ ಸಜೀಂದ್ರನ್ ಯುಡಿಎಫ್(ಯುನೈಟೆಡ್ ಡೆಮಕ್ರಾಟಿಕ್ ಫ್ರಂಟ್)ನ  ಕುನ್ನತುನಾಡು ಕ್ಷೇತ್ರದ ಅಭ್ಯರ್ಥಿ. ತನ್ನ ಗಂಡನ ಪರವಾಗಿ ಈಕೆ ಜರ್ನಲಿಸ್ಟ್’ಗಳನ್ನೇ ಖರೀದಿಸಲು..

    May 9, 2016
    ...
    insect-food-1
    ಫೋಕಸ್

    ಜಾಗತಿಕ ಆಹಾರೋದ್ಯಮದ ಭವಿಷ್ಯ: ಪ್ರೊಟೀನ್ ಬೇಡಿಕೆ ಪೂರೈಸುತ್ತಿರುವ ‘ಕೀಟ ಖಾದ್ಯ’ಗಳು!

    ನಮ್ಮ ದೇಶದಲ್ಲಿ ಪ್ರೊಟೀನ್ ಯುಕ್ತ ದನದ ಮಾಂಸದ ಸುತ್ತ ಚರ್ಚೆ, ನ್ಯಾಯಾಲಯದ ಆದೇಶಗಳು ಹೊರಬೀಳುತ್ತಿರುವ ವೇಳೆಯಲ್ಲಿಯೇ, ಜಾಗತಿಕ ಮಾರುಕಟ್ಟೆಯಲ್ಲಿ ಕೀಟಗಳಿಂದ ತಯಾರಾಗುತ್ತಿರುವ ಖಾದ್ಯಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಈ ಹೊಸ ಕೀಟ ಖಾದ್ಯಗಳು ಹೆಚ್ಚುತ್ತಿರುವ ಪ್ರೊಟೀನ್ ಯುಕ್ತ ಆಹಾರದ ಬೇಡಿಕೆಯನ್ನು ಪೂರೈಸಲಿವೆ ಎಂದು ಆಹಾರ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಹವಾಮಾನದ ವೈಪರೀತ್ಯಗಳಿಂದಾಗಿ ಜಗತ್ತಿನ ಸಾಂಪ್ರದಾಯಿಕ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ, ಆಹಾರ ಬೇಡಿಕೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಕೀಟಗಳಿಂದ ತಯಾರಿಸಿದ ಖಾದ್ಯಗಳು ಈ ನಿರ್ವಾತವನ್ನು ತುಂಬಲಿವೆ..

    May 9, 2016
    ...
    modi-kejriwal-1
    ದೇಶ

    ‘ನರೇಂದ್ರಭಾಯಿ ಎಂಎ’: ಎಎಪಿ ನಿರ್ದೇಶನದ ಸಿನೆಮಾ ಹಿಟ್ ಆಗೋಕೆ ಅಮಿತ್ ಶಾ ಒಬ್ಬರು ಬೇಕಿತ್ತು!

    ಕಳೆದ ಕೆಲವು ದಿನಗಳಿಂದ ದೇಶದ ಪ್ರಧಾನಿ ನರೇಂದ್ರ ದಾಮೋದರ್ ಮೋದಿ ವಿದ್ಯಾರ್ಹತೆ ಸುತ್ತ ಎದ್ದಿದ್ದ ಕಿಚ್ಚಿಗೆ ಸ್ವತಃ ಭಾರತೀಯ ಜನತಾ ಪಕ್ಷ ತುಪ್ಪ ಸುರಿದಿದೆ. ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿ ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಮೋದಿ ಶಿಕ್ಷಣ ಪ್ರಮಾಣ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೇ ಕಾಯುತ್ತಿದ್ದ ಆಮ್ ಆದ್ಮಿ ಪಕ್ಷ, ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದ ಅಸ್ತ್ರಗಳನ್ನು ಪಕ್ಷದ ವಕ್ತಾರ ಅಶುತೋಶ್ ಮೂಲಕ ಪ್ರಯೋಗಿಸಿದೆ. ಒಟ್ಟಾರೆ, ದೇಶದ ಆಡಳಿತದ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರ..

    May 9, 2016
    ...
    bird-flu-3
    ರಾಜ್ಯ

    350 ಕೋಟಿ ಕುಕ್ಕುಟ ಉದ್ಯಮದಲ್ಲಿ ತಲ್ಲಣ: ಬೀದರ್ ‘ಹಕ್ಕಿ ಜ್ವರ’ವನ್ನು ರಾಜ್ಯಕ್ಕೆ ಹಬ್ಬಿಸಬೇಡಿ!

    ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೊಳಕೇರ ಗ್ರಾಮದ ಫಾರಂ ಒಂದರ ಕೋಳಿಗಳಲ್ಲಿ ಕಾಣಿಸಿಕೊಂಡ ‘ಹಕ್ಕಿ ಜ್ವರ’ದ ನೇರ ಪರಿಣಾಮ ರಾಜ್ಯದ ಕುಕ್ಕುಟೋದ್ಯಮದ ಮೇಲಾಗುತ್ತಿದೆ. ಎಚ್5ಎನ್1 ವೈರಾಣುಗಳಿಂದಾಗಿ ಉಂಟಾಗುವ ಈ ಜ್ವರಕ್ಕೆ ಈವರೆಗೆ ಮೊಳೆಕೇರ ಗ್ರಾಮದ ರಮೇಶ್ ಪೌಲ್ ಎಂಬುವವರ ಕೋಳಿ ಫಾರಂನಲ್ಲಿ ಸುಮಾರು 1 ಲಕ್ಷ ಕೋಳಿಗಳನ್ನು ಸಾಯಿಸಲಾಗುತ್ತಿದೆ. “ಕೋಳಿಗಳನ್ನು ಸಾಯಿಸುವ ಕೆಲಸ ಸೋಮವಾರ ಶುರುವಾಗಿದ್ದು, ನಾಳೆಗೆ ಕೊನೆಯಾಗಲಿದೆ,” ಎಂದು ಹೆಸರುಘಟ್ಟದ ಸಿಪಿಡಿಓ ನಿರ್ದೇಶಕ ಡಾ. ಮಹೇಶ್ ‘ಸಮಾಚಾರ’ಕ್ಕೆ ತಿಳಿಸಿದ್ದಾರೆ. “ಇದು ಹೊರಗಿನ ಸಂಪರ್ಕಿಗಳಿಂದ ದೂರ ಇರುವ ಚಿಕ್ಕ ಫಾರಂನಲ್ಲಿ ಕಾಣಿಸಿಕೊಂಡ..

    May 9, 2016
    ...
    writing-exam-1
    ಪಾಸಿಟಿವ್

    ಕ್ಯಾನ್ಸರ್ ಕಾಯಿಲೆಗೆ ಮಣಿಯಲಿಲ್ಲ; ಐಸಿಎಸ್ಸಿ ಪರೀಕ್ಷೆಯಲ್ಲಿ ಸೋಲಲಿಲ್ಲ: ಕೋಲ್ಕತ್ತಾ ವಿದ್ಯಾರ್ಥಿಯೊಬ್ಬನ ಯಶೋಗಾಥೆ

    ಕ್ಯಾನ್ಸರ್ ಕಾಯಿಲೆಯನ್ನು ಮೆಟ್ಟಿನಿಂತು ಐಸಿಎಸ್ಸಿ ಪರೀಕ್ಷೆಯಲ್ಲಿ ಶೇ. 95. 8 ಅಂಕ ಗಳಿಸುವ ಮೂಲಕ ಕೋಲ್ಕತ್ತಾ ಮೂಲದ ವಿದ್ಯಾರ್ಥಿಯೊಬ್ಬ ಸುದ್ದಿ ಕೇಂದ್ರಕ್ಕೆ ಬಂದಿದ್ದಾನೆ. ರಾಘವ್ ಚಂಡಕ್ ಎಂಬ ವಿದ್ಯಾರ್ಥಿಗೆ ಲಿಂಪೋಬ್ಲಾಸ್ಟಿಕ್ ಲುಕೆಮಿಯಾ ಕಾಯಿಲೆ ಇರುವುದು ಕಳೆದ ಏಪ್ರಿಲ್ ತಿಂಗಳಿನಲ್ಲಿ ಪತ್ತೆಯಾಗಿತ್ತು. ಹೀಗಾಗಿ, ಆಸ್ಪತ್ರೆಗೆ ದಾಖಲಾದ ಆತ, ತನ್ನ ಹೆರಿಟೇಜ್ ಶಾಲೆಯಿಂದ ಹೊರಗುಳಿಯಬೇಕಾಯಿತು. ಆದರೆ, ಆಸ್ಪತ್ರೆಯ ಹಾಸಿಗೆಯಲ್ಲಿಯೇ ಓದು ಮುಂದುವರಿಸಿದ ರಾಘವ್ ಇದೀಗ ಉತ್ತಮ ಅಂಕಗಳೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ. “ನನ್ನ ಸಹೋದರ ಕೂಡ ಅದೇ ತರಗತಿಯಲ್ಲಿ ಓದುತ್ತಿದ್ದರಿಂದ..

    May 9, 2016

Top