An unconventional News Portal.

  ...
  cat-music-love-1
  ಸಮಾಚಾರ +

  ಬೀದಿ ಸಂಗೀತಕ್ಕೆ ಮಾರುಕಟ್ಟೆ ಸೃಷ್ಟಿಸಿದ ಈ 4 ಬೆಕ್ಕಿನ ಮರಿಗಳು!

  ಇವತ್ತಿನ ಅಂತರ್ಜಾಲ ಯುಗದಲ್ಲಿ ಎಲ್ಲಿ, ಯಾವಾಗ, ಯಾವುದು ಸುದ್ದಿಯಾಗಬಲ್ಲದು ಎಂಬುದನ್ನು ಗುರುತಿಸುವುದು ಕಷ್ಟ. ಸಾಮಾನ್ಯವಾಗಿ ಕಾಣಿಸುವ ಕೆಲವೊಂದು ವಿಚಾರಗಳು, ಕೆಲಮೊಮ್ಮೆ ದೊಡ್ಡ ಸುದ್ದಿಯಾಗಿ ಬಿಡುತ್ತವೆ. ಹೀಗಾಗಿ, ಆಧುನಿಕ ಜನರ ಅಭಿರುಚಿಯನ್ನು, ಆಲೋಚನೆಗಳನ್ನು ತಟ್ಟುವುದು ಸವಾಲಿನ ಕೆಲಸವೇ. ಬಹುಶಃ, ಮಲೇಶಿಯಾದ ಬೀದಿಯಲ್ಲಿ ಕುಳಿತು ಗಿಟಾರ್ ನುಡಿಸುತ್ತಿದ್ದ ಈ ಸಂಗೀತಗಾರನ ದಿನಚರಿಯಲ್ಲಿ ಅದೊಂದು ದಿನ ನಡೆದ ಈ ಘಟನೆ ಇವತ್ತು ನಮ್ಮ ಗಮನ ಸೆಳೆದಿದ್ದರ ಹಿಂದಿರುವ ಮರ್ಮ ಕೂಡ ಇದೇ ಅನ್ನಿಸುತ್ತದೆ. ಆತ ಎಂದಿನಂತೆ ಬೀದಿಯ ಪಕ್ಕದಲ್ಲಿ ಕುಳಿತು ತನ್ನ..

  May 8, 2016
  ...
  janashri-news-kannada-1
  ಟಿವಿ

  ಕನ್ನಡದ ವಾಹಿನಿಗಳಲ್ಲಿ ವಲಸೆ, ಸ್ಥಾನ ಪಲ್ಲಟ: ಜನಶ್ರೀ ಕಾಯಕಲ್ಪದ ವಿಚಾರದಲ್ಲಿ ರೆಡ್ಡಿ ನಿಲುವು ಸ್ಪಷ್ಟ!

  ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ತಯಾರಿಯ ಭಾಗವಾಗಿ, ರಾಜ್ಯದ ಮಾಧ್ಯಮಗಳಲ್ಲಿ ಮತ್ತೊಂದು ಸುತ್ತಿನ ವಲಸೆ, ಪಲ್ಲಟಗಳು ನಡೆಯಲಿವೆ. ಇದಕ್ಕೆ ಕಾರಣ, ತಮ್ಮ ಜನಶ್ರೀ ಸುದ್ದಿವಾಹಿನಿಗೆ ಹೊಸತಾಗಿ ಕಾಯಕಲ್ಪ ನೀಡಲು ಗಣಿಧಣಿ ಜನಾರ್ಧನ ರೆಡ್ಡಿ ತೆಗೆದುಕೊಂಡಿರುವ ತೀರ್ಮಾನ. ಇದನ್ನು ಅವರ ಕುಟುಂಬದ ಮೂಲಗಳು ‘ಸಮಾಚಾರ’ಕ್ಕೆ ಖಚಿತಪಡಿಸಿವೆ. “ಸದ್ಯ ಜನಶ್ರೀ ಟಿವಿಯನ್ನು ಮತ್ತೆ ಒಂದು ಹಂತಕ್ಕೆ ತೆಗೆದುಕೊಂಡು ಬರಲು ಯೋಚಿಸಿದ್ದೇವೆ. ಇದಕ್ಕಾಗಿ ಈಗಾಗಲೇ ನಾಲ್ವರು ಹೂಡಿಕೆದಾರರು ಮುಂದೆ ಬಂದಿದ್ದಾರೆ. ಚಾನಲ್ಗೆ ಒಂದು ಮಟ್ಟಿನ ಕಾಯಕಲ್ಪ ಸಿಕ್ಕ ನಂತರ ನಾವೇ ಅದನ್ನು..

  May 8, 2016
  ...
  janardhan-reddy-yaddy
  ರಾಜ್ಯ

  ಬಿಜೆಪಿಯ ಮಿಶನ್- 150: ಈ ಬಾರಿಯೂ ಹರಿಯುತ್ತಾ ಗಣಿಧಣಿಗಳ ಕೋಟಿ ಕೋಟಿ!

  ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ 700+ ದಿನಗಳ ಬಾಕಿ ಇವೆ ಎನ್ನುವಾಗಲೇ ಭಾರತೀಯ ಜನತಾ ಪಕ್ಷದೊಳಗೆ ಸಕಲ ಸಿದ್ಧತೆಗಳು ಶುರುವಾಗಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸಲು ನೀಲನಕ್ಷೆಯೊಂದು ತಯಾರಾಗಿದೆ. ಅದರ ಒಂದು ಅಂಶವಾಗಿ ಗಣಿಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಕುಟುಂಬದ ಜತೆ ಯಡಿಯೂರಪ್ಪ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಹಿಂದಿನ ಬಾರಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೇಸರಿ ಪಕ್ಷವನ್ನು ಅಧಿಕಾರ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು..

  May 8, 2016
  ...
  arun kumar-bjp-1
  ಸುದ್ದಿ ಸಾರ

  ಬಿಜೆಪಿಯ ಕೋರ್ ಕಮಿಟಿಯಲ್ಲಿ ಮೊದಲ ಸ್ಥಾನ ಪಲ್ಲಟ

  ಬಿಜೆಪಿಯ ನೂತನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಅರುಣ್ ಕುಮಾರ್ ನೇಮಕಗೊಂಡಿದ್ದಾರೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಈ ಸ್ಥಾನದಲ್ಲಿದ್ದ ಸಂತೋಷ್ ಅವರನ್ನು ಬೀಳ್ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ, ಬಿಜೆಪಿಯ ಕೋರ್ ಕಮಿಟಿ ಪುನರ್ ರಚನೆಗೂ ಮುನ್ನವೇ ಪ್ರಮುಖ ಸ್ಥಾನವೊಂದರ ಪಲ್ಲಟವಾದಂತಾಗಿದೆ. ರಾಜ್ಯ ಬಿಜೆಪಿ ಪಾಲಿಗೆ ಸಂಘಟನಾ ಕಾರ್ಯದರ್ಶಿ ಸ್ಥಾನ ಆಯಕಟ್ಟಿನ ಹೊಣೆಗಾರಿಕೆ ಎನ್ನಲಾಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪಕ್ಷದ ನಡುವಿನ ಕೊಂಡಿಯಂತೆ ಸಂಘಟನಾ ಕಾರ್ಯದರ್ಶಿ ಕೆಲಸ ಮಾಡುತ್ತಾರೆ. ಹೀಗಾಗಿ,..

  May 8, 2016

Top