An unconventional News Portal.

    ...
    Untitled 5
    ಟಿವಿ

    ಮತ್ತೂರು ಸೋಮಯಾಗ ಪ್ರಕರಣ: ಬೆಟ್ಟ ಅಗೆದು ‘ಮೇಕೆ’ ಹಿಡಿದ TV9!

    ಪಿಕೆ ಸಿನಿಮಾದಲ್ಲಿ ಅನುಷ್ಕಾ ಶರ್ಮ ಸುದ್ದಿ ವಾಹಿನಿಯೊಂದರ ಸ್ಟುಡಿಯೋದೊಳಗೆ ನಾಯಿಮರಿ ಹಿಡಿದುಕೊಂಡು ನಿರೂಪಣೆ ಮಾಡಿದ್ದನ್ನು ನೋಡಿದ್ದ ಪ್ರೇಕ್ಷಕರು, ಕನ್ನಡದಲ್ಲಿ ಇಂಥದನ್ನೆಲ್ಲಾ ನೋಡುವುದು ಯಾವಾಗ ಎನ್ನುವ ನಿರೀಕ್ಷೆಯಲ್ಲಿದ್ದರು. ಅವರ ನಿರೀಕ್ಷೆಯನ್ನು ಕನ್ನಡದ ನಂಬರ್ 1 ಸುದ್ದಿ ವಾಹಿನಿ ನಿನ್ನೆ ಪೂರೈಸಿದ್ದು, ಸ್ಟುಡಿಯೋದಲ್ಲಿ ಪ್ರೇಕ್ಷಕರಿಗೆ ಮೇಕೆ ದರ್ಶನ ಮಾಡಿಸಿದೆ. ಮೇಕೆಗೆ ಸ್ವಾಗತ: ಈ ಬಾರಿ ಕರ್ನಾಟಕದಲ್ಲಿ ಬರಗಾಲ. ಕನ್ನಡ ಸುದ್ದಿ ವಾಹಿನಿಗಳಿಗೂ ಸುದ್ದಿ ಬರ. ಇದೇ ಸಮಯಕ್ಕೆ ಪ್ರಜಾವಾಣಿ ಎರಡು ದಿನಗಳ ಹಿಂದೆ ಶಿವಮೊಗ್ಗ ಹೊರವಲಯದ ಮತ್ತೂರಿನಲ್ಲಿ ಸಂಕೇತಿ ಬ್ರಾಹ್ಮಣರು..

    May 6, 2016
    ...
    vidhansabha_uttarakhand
    ಸುದ್ದಿ ಸಾರ

    ಉತ್ತರಖಾಂಡ್ ಬಿಕ್ಕಟ್ಟು: ಬಹುಮತ ಸಾಬೀತುಪಡಿಸಲು ದಿನಾಂಕ ನಿಗದಿ

    ಉತ್ತರಾಖಾಂಡ್ನಲ್ಲಿ ಮೇ.10ರಂದು ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಸಾಬೀತು ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಬಹುಮತ ಸಾಬೀತು ಪಡಿಸಲು ಕೇಂದ್ರ ಸರಕಾರ ತಕರಾರು ಸಲ್ಲಿಸದ ಹಿನ್ನೆಲೆಯಲ್ಲಿ ಸುಪ್ರೀಂ ಈ ಆದೇಶ ನೀಡಿದೆ. ಮೇ 10ರಂದು ಬೆಳಗ್ಗೆ 11 ಗಂಟೆಗೆ ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಬಹುಮತ ಸಾಬೀತು ಪಡಿಸಬೇಕಿದೆ. ಅಂದು ಒಂಬತ್ತು ಮಂದಿ ಕಾಂಗ್ರೆಸ್ಸಿನ ಬಂಡಾಯ ಶಾಸಕರು ಉತ್ತರಾಖಾಂಡ್ ಸ್ಪೀಕರ್ ಅವರಿಂದ ಮಾನ್ಯತೆಯನ್ನು ಕಳೆದುಕೊಂಡ ಶಾಸಕರಾದ ಕಾರಣ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ…

    May 6, 2016
    ...
    bombay-high-court
    ದೇಶ

    ಗೋಹತ್ಯೆ ನಿಷೇಧ ಓಕೆ; ಮಾಂಸ ತಿನ್ನೋಕೆ ತಡೆ ಏಕೆ?: ಬಾಂಬೆ ಹೈಕೋರ್ಟ್ ಆದೇಶ

    ಮಹಾರಾಷ್ಟ್ರ ಸರ್ಕಾರದ ಗೋಹತ್ಯೆ ನಿಷೇಧ ಕಾನೂನನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಹೊರಗಿನಿಂದ ಗೋಮಾಂಸ ಖರೀದಿಸಿ  ಸಂಗ್ರಹಿಸಿಡುವುದನ್ನು ಕಾನೂನಿನ ಪರಿಧಿಯಿಂದ ಹೊರಗಿಡುವಂತೆ ಸೂಚಿಸಿ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ. ಮಹಾರಾಷ್ಟ್ರದಲ್ಲಿ ಹೇರಲಾಗಿರುವ ಗೋಮಾಂಸ ಮೇಲಿನ ನಿಷೇಧಕ್ಕಿರುವ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ಬಾಂಬೆ ಹೈಕೋರ್ಟ್ ಈ ತೀರ್ಮಾನವನ್ನು ಪ್ರಕಟಿಸಿದೆ. ವಿಭಾಗೀಯ ಪೀಠವು ಈ ವರ್ಷ ಜನವರಿಯಲ್ಲಿ ತನ್ನ ತೀರ್ಪನ್ನು ಕಾದಿರಿಸಿತ್ತು. ಅಂತಿಮವಾಗಿ ಶುಕ್ರವಾರ ತೀರ್ಪನ್ನು ಪ್ರಕಟಿಸಿದೆ. ಗೋಮಾಂಸ ಖರೀದಿಯನ್ನು(ಸಂಗ್ರಹ) ಅಪರಾಧದ ಪರಿಧಿಯಿಂದ ಹೊರಗಿಟ್ಟ..

    May 6, 2016
    ...
    con-vs-bjp-1
    ದೇಶ

    ಕಾಂಗ್ರೆಸ್ v/s ಬಿಜೆಪಿ: ‘ಸೇವ್ ಡೆಮಾಕ್ರಸಿ’ ಅಬ್ಬರದಲ್ಲಿ ಬಚಾವಾಗಿದ್ದು ಮಾತ್ರ ಆಗಸ್ಟಾ, ಫಿನ್ಮೆಸಾನಿಕಾ!

    ದಿಲ್ಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಬೀದಿ ಹೋರಾಟಕ್ಕೆ ಇಳಿಯುವ ಮೂಲಕ ತಮ್ಮ ಅಸ್ಥಿತ್ವವನ್ನು ದೇಶಕ್ಕೆ ಸಾರುವ ಪ್ರಯತ್ನವನ್ನು ಶುಕ್ರವಾರ ಪ್ರದರ್ಶಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕಳೆದ ಎರಡೂವರೆ ವರ್ಷಗಳ ಅಂತರದಲ್ಲಿ ಲೋಕಸಭೆಯ ಒಳಗೆ ಹಾಗೂ ಹೊರಗೆ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಅದರ ನಾಯಕರನ್ನು ಮೂಲೆಗುಂಪು ಮಾಡುತ್ತಲೇ ಬಂದಿತ್ತು. ಪ್ರತಿ ಬಾರಿ ಅಧಿವೇಶನ ಶುರುವಾಗುತ್ತಿದ್ದಂತೆ, ಪ್ರತಿಪಕ್ಷದ ಒಂದಿಲ್ಲೊಂದು ಹಗರಣವನ್ನು ಮುಂದಿಟ್ಟು, ಆಡಳಿತ ಪಕ್ಷವೇ ಒಂದು ಹೆಜ್ಜೆ ಮುಂದೆ ಹೋಗಿ..

    May 6, 2016
    ...
    jayalalithaa-rally-1
    ದೇಶ

    ಎಐಎಡಿಎಂಕೆ ಪ್ರಣಾಳಿಕೆ: ಮಕ್ಕಳ ಅಗತ್ಯವೇನು ಎಂದು ಅರ್ಥ ಮಾಡಿಕೊಂಡವರ ಹೆಸರು ‘ಅಮ್ಮ’!

    ತಮಿಳುನಾಡಿನಲ್ಲಿ ಮಾನ್ಸೂನ್ ಮೋಡಗಳ ಜತೆಜತೆಗೇ ಹೊರಬಿದ್ದಿದೆ ಜೆ. ಜಯಲಲಿತಾ ಅವರ ಎಐಎಡಿಎಂಕೆ ಪಕ್ಷದ ಪ್ರಣಾಳಿಕೆ. ಎರಡು ತಿಂಗಳಿಗೆ ನೂರು ಯೂನಿಟ್ ಉಚಿತ ಗೃಹ ಬಳಕೆಯ ವಿದ್ಯುತ್, ಮಹಿಳೆಯರು ಖರೀದಿಸುವ ಸ್ಕೂಟರ್ ಮೇಲೆ ಶೇ. 50ರಷ್ಟು ಸಬ್ಸಿಡಿ, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಹಾಗೂ ಇಂಟರ್ ನೆಟ್, ಮದುವೆಯಾಗುವ ಯುವತಿಯರಿಗೆ 8 ಗ್ರಾಂ ಉಚಿತ ಚಿನ್ನ, ರೇಷನ್ ಕಾರ್ಡ್ ಹೊಂದಿದವರಿಗೆ ಉಚಿತ ಮೊಬೈಲ್ ಸಂಪರ್ಕ, ಬಾಣಂತನಕ್ಕೆ 18 ಸಾವಿರ ಸಹಾಯ ಧನ ಹಾಗೂ 9 ತಿಂಗಳ ರಜೆ, 2016-21ರ ಆರ್ಥಿಕ..

    May 6, 2016
    ...
    erica-lust-1
    SPECIAL SERIES

    ‘ಮೈಥುನ ಮಿಸ್ಟರಿ’-5: ಸಹಜತೆಯ ಸವಾಲುಗಳು ಮತ್ತು ಈಕೆಯ ಪರ್ಯಾಯದ ಹುಡುಕಾಟ!

    2015ರ ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ಸರಕಾರ ದೇಶದಲ್ಲಿ ಪೊರ್ನೋಗ್ರಫಿಯಲ್ಲಿ ನಿಷೇಧಿಸುವ ತೀರ್ಮಾನ ತೆಗೆದುಕೊಂಡಿತು. ಇದು ವ್ಯಾಪಕ ಟೀಕೆಗೆ, ತಮಾಷೆಗೆ ಕಾರಣವಾಯಿತು. ಒಟ್ಟು 857 ಅಶ್ಲೀಲ ವೆಬ್ಸೈಟ್ಗಳನ್ನು ಕಡಿವಾಣ ಹಾಕಿದ ಮಾತ್ರಕ್ಕೆ, ಅಂತರ್ಜಾಲದಲ್ಲಿರುವ ಪೊರ್ನೋಗ್ರಫಿಗೆ ಕಡಿವಾಣ ಹಾಕುವುದು ಕಷ್ಟ ಎಂಬುದು ಟೀಕೆಗಳ ಹಿಂದಿದ್ದ ಕಾಳಜಿ ಅಷ್ಟೆ. ಕೊನೆಗೆ, ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಈ ವಿದ್ಯಮಾನದಿಂದ ಆದ ಲಾಭವೇನು ಎಂದರೆ, ಜಗತ್ತಿನ ನಾಲ್ಕನೇ ದೊಡ್ಡ ಗ್ರಾಹಕರನ್ನು ಹೊಂದಿರುವ ದೇಶದಲ್ಲಿ ಪೊರ್ನ್ ಕುರಿತು ಅಂತರ್ಜಾಲದಲ್ಲಿ ಹುಡುಕಾಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು, ಅಷ್ಟೆ! ಹಾಗಂತ,..

    May 6, 2016
    ...
    journalismvspr
    ಮೀಡಿಯಾ 2.0

    ಪಿಆರ್ ವರ್ಸಸ್ ಮೀಡಿಯಾ: ಮಾಹಿತಿ ಪ್ರಸಾರಕ್ಕೆ ‘ಕೂಪನ್’ ಆಮಿಷ, ಐಡಿಯಾ!

    ಅದು ಬೆಂಗಳೂರಿನ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್. ಅದರ ಬ್ಯಾಂಕ್ವೆಟ್ ಹಾಲೊಂದರಲ್ಲಿ ಪ್ರತಿಷ್ಠಿತ ಕಾರ್ಪೋರೇಟ್ ಕಂಪೆನಿಯೊಂದರ ಉತ್ಪನ್ನ ಬಿಡುಗಡೆಯ ಕಾರ್ಯಕ್ರಮ. ಆಹ್ವಾನಿತ ಪತ್ರಕರ್ತರು, ಅಹ್ವಾನವನ್ನು ಅವಹಾಯಿಸಿಕೊಂಡು ಬಂದ ಪತ್ರಕರ್ತರು, ಹೀಗೆ ಹೆಚ್ಚು ಕಡಿಮೆ 50ರ ಆಸುಪಾಸಿನಲ್ಲಿರುವ ಸಂಖ್ಯೆ. ಜತೆಗೆ, ಟಿವಿ ಕ್ಯಾಮೆರಾಮೆನ್ಗಳು ಹಾಗೂ ಪತ್ರಿಕೆಗಳ ಛಾಯಾಚಿತ್ರಕಾರರು. ಅಂದುಕೊಂಡ ಸಮಯಕ್ಕಿಂತ ಕೊಂಚ ತಡವಾಗಿಯೇ ಪತ್ರಿಕಾಗೋಷ್ಠಿ ಆರಂಭವಾಗುತ್ತದೆ. ದೂರದ ಮುಂಬೈನಿಂದ ಬಂದ ನಟಿ, ಉತ್ಪನ್ನವನ್ನು ಬಿಡುಗಡೆ ಮಾಡುತ್ತಾಳೆ. “ಮೇಡಂ, ಸ್ವಲ್ಪ ಹಿಂಗೆ… ಮೇಡಂ, ಸ್ವಲ್ಪ ಈ ಕಡೆ… ಸಾರ್, ಸ್ವಲ್ಪ ಸೈಡಿಗೆ ಬನ್ನಿ…”. ಕ್ಲಿಕ್.. ಕ್ಲಿಕ್….

    May 6, 2016

Top