An unconventional News Portal.

  ...
  ranaveer singh
  ಸುದ್ದಿ ಸಾರ

  ಐದು ಪೈಸೆಗಾಗಿ ನಲುವತ್ತು ವರ್ಷಗಳ ಕಾನೂನು ಹೋರಾಟ

  ಐದು ಪೈಸೆ ಚಲಾವಣೆ ನಿಂತು ದಶಕಗಳೇ ಕಳೆದಿದೆ. ಆದರೆ ಐದು ಪೈಸೆಯ ವಿಚಾರವಾಗಿ ವಿಶೇಷ ಪ್ರಕರಣ ದೆಹಲಿಯಲ್ಲಿ ನಡೆಯುತ್ತಿದೆ. ಅಲ್ಲದೆ ಇದಕ್ಕಾಗಿ ಈಗಾಗಲೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ದೆಹಲಿ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆಗಿದ್ದ ರಣವೀರ್ ಸಿಂಗ್ 1973 ರಲ್ಲಿ 15 ಪೈಸೆ ಪಡೆದು ಆಕೆಗೆ 10 ಪೈಸೆ ಟಿಕೆಟ್ ನೀಡಿ ಐದು ಪೈಸೆ ಜೇಬಿಗಿಳಿಸಿದ್ದರು.ದುರದೃಷ್ಟವಶಾತ್  ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದರು. ಬಳಿಕ ರಣವೀರ್ ಅವರನ್ನು ಡಿಟಿಸಿ ಅಮಾನತು ಗೊಳಿಸಿತು. ಅಲ್ಲದೆ ತನಿಖೆ ವೇಲೆ ಆರೋಪ ಸಾಬೀತಾಗಿದ್ದರಿಂದ..

  May 5, 2016
  ...
  child
  ಸುದ್ದಿ ಸಾರ

  ಉರಿಯುತ್ತಿದ್ದ ಕಟ್ಟಡದಿಂದ ಮಕ್ಕಳನ್ನು ಎಸೆದು ರಕ್ಷಣೆ ಮಾಡಿದ ತಾಯಿ

  ಉರಿಯುತ್ತಿದ್ದ ಕಟ್ಟಡದಿಂದ ತನ್ನ ಮಕ್ಕಳನ್ನು ರಕ್ಷಣೆ ಮಾಡಲು ತಾಯಿಯೊಬ್ಬರು ನಾಲ್ಕನೆ ಮಹಡಿಯಿಂದ ಮಕ್ಕಳನ್ನು ಎಸೆದಿದ್ದಾರೆ. ದಕ್ಷಿಣ ಕೊರಿಯಾದ ಪ್ಯಾಂಕ್ಟೇಕ್ ಕೌಂಟಿಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ಯಾಂಗ್ಟೆಕ್ನಲ್ಲರುವ ಅಮೆರಿಕಾದ ಓಸನ್ ಏರ್ ಬೇಸ್ ಬಳಿ ಇರುವ ಕಟ್ಟಡದಲ್ಲಿ ಕಳೆದ ಶುಕ್ರವಾರ ಅಗ್ನಿಅವಘಡ ಸಂಭವಿಸಿತ್ತು, ಈ ಸಂದರ್ಭದಲ್ಲಿ ಕಟ್ಟಡದೊಳಗೆ ಪ್ರೀಷಿಯಸ್ ಎನ್ ಯೋಕಿ (30) ಮತ್ತು ಆಕೆಯ 7 ತಿಂಗಳ ಸಣ್ಣ ಮಗು ಜೊತೆಗೆ 3 ಹಾಗೂ 4 ವರ್ಷದ ಮಗು ಕಟ್ಟಡದೊಳಗೆ ಸಿಲುಕಿದ್ದರು. ರಕ್ಷಣೆಗಾಗಿ ಮೊರೆಯಿಡುತ್ತಿದ್ದ..

  May 5, 2016
  ...
  siddaramaiah
  ರಾಜ್ಯ

  ಸರ್ಕಾರಿ ನೌಕರರಿಗೂ ತಟ್ಟಿದ ಬರದ ಬಿಸಿ: ಆರಂಭವಾಗದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ

  ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ತೀವ್ರ ಬರಗಾಲ ಇದೆ ಎಂಬ ಕಾರಣವನ್ನು ನೀಡಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಬರಗಾಲದ ಬಿಸಿ ಸರ್ಕಾರಿ ನೌಕರರನ್ನೂ ಕಾಡುವುದು ನಿಚ್ಚಳವಾಗಿದೆ. ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗ ಸೂಚಿ ಪ್ರಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜೂನ್ 30 ರ ನಂತರ ವರ್ಗಾವಣೆ ಮಾಡಬೇಕಿದ್ದರೆ ಮುಖ್ಯಮಂತ್ರಿಗಳ ಪೂರ್ವಾನುಮತಿ ಕಡ್ಡಾಯ. ಆದರೆ ಈ ಬಾರಿ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು..

  May 5, 2016
  ...
  bangalore-clouds
  ರಾಜ್ಯ

  ಬಿಸಿಲಿಗೆ ಬೆಂಡಾದ ಊರಿನಲ್ಲಿ ತಂಪುಗಾಳಿ: ವಾಡಿಕೆ ಮಳೆಯ ಮುನ್ಸೂಚನೆ

  ತೀವ್ರ ಬರ ಮತ್ತು ನೀರಿನ ಅಭಾವದಿಂದ ಕಂಗೆಟ್ಟಿರುವ ರಾಜ್ಯಕ್ಕೆ ವಾಡಿಕೆಯಂತೆ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿರೀಕ್ಷೆಯಂತೆಯೇ ನಿಗದಿತ ಸಮಯದಲ್ಲೇ ಮುಂಗಾರು ಪ್ರವೇಶ ಮಾಡಲಿದ್ದು, ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಕೇಂದ್ರ ಹವಾಮಾನ ಇಲಾಖೆಯ ಮೂಲಗಳ ಪ್ರಕಾರ, ಸಾಮಾನ್ಯಕ್ಕಿಂತ ಈ ಬಾರಿ ಶೇ.4ರಷ್ಟು ಹೆಚ್ಚು ಮಳೆಯಾಗಲಿದ್ದು, ಕರ್ನಾಟಕದಲ್ಲಿ 865 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ 900..

  May 5, 2016
  ...
  sonkar-cover-1
  ದೇಶ

  ಮಂಚ ಏರಿದ ಐಎಎಸ್ ಅಧಿಕಾರಿ ಕಾಲು: ಹಿಂದೆಯೇ ಬಂತು ಟೀಕೆಗಳ ಸಾಲು!

  ಛತ್ತೀಸಗಢದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಆಸ್ಪತ್ರೆಯ ಮಂಚದ ಮೇಲೆ ತನ್ನ ಶೂ ಧರಿಸಿದ್ದ ಕಾಲನ್ನು ಇಟ್ಟಿರುವ ಫೊಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದವನ್ನು ಹುಟ್ಟಿಹಾಕಿದೆ. ಸ್ವತಃ ಎಂಬಿಬಿಎಸ್ ವೈದ್ಯರಾಗಿರುವ, 2013ನೇ ಬ್ಯಾಚ್ ಅಧಿಕಾರಿ ಜಗದೀಶ್ ಸೋಂಕರ್ ತಮ್ಮ ವಿಚಿತ್ರ ನಡೆಯಿಂದ ಸಾರ್ವಜನಿಕ ಟೀಕೆಗೆ ಗುರಿಯಾದ ಅಧಿಕಾರಿ. ‘ಇದು ಅಧಿಕಾರಿ ರೋಗಿಗಳಿಗೆ ಅಗೌರವ ಸೂಚಿಸುವ ನಡೆ ಮಾತ್ರವಲ್ಲ, ಬದಲಿಗೆ ಆಸ್ಪತ್ರೆಯ ಸ್ವಚ್ಚತೆ ದೃಷ್ಟಿಯಿಂದಲೂ ಈ ನಡವಳಿಕೆ ಸರಿಯಲ್ಲ’ ಎಂದು ಟೀಕೆಗಳು ಆರಂಭವಾಗಿವೆ. ಅಧಿಕಾರಿ ಸೋಂಕರ್, ಸರಕಾರ ನಡೆಸುತ್ತಿರುವ ಅಪೌಷ್ಠಿಕತೆ ನಿವಾರಣಾ ಕೇಂದ್ರಕ್ಕೆ..

  May 5, 2016
  ...
  india-children-sex-traffic-1
  SPECIAL SERIES

  ‘ಮೈಥುನ ಮಿಸ್ಟರಿ’-4: ಮಕ್ಕಳ ಸರ್ಚ್ ‘ಹಿಸ್ಟರಿ’ ಹಾಗೂ ಸಂತೆಯ ಸರಕುಗಳು!

  ಅದು ಬೆಂಗಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಂಭಾಗದಲ್ಲಿರುವ ಸೈಬರ್ ಸೆಂಟರ್. ಅಲ್ಲಿ ಶಾಲೆಯ ಐಡಿ ಕಾರ್ಡ್ ತೋರಿಸಿ, ತಮ್ಮ ಹೆಸರನ್ನು ಸವಕಲೆದ್ದು ಹೋಗಿರುವ ನೋಟ್ ಪುಸ್ತಕದಲ್ಲಿ ಬರೆದು, ಖಾಲಿ ಇರುವ ಕೋಣೆಯನ್ನು ಹೊಕ್ಕಿ ಕೂರುವ ಮಕ್ಕಳ ವಯಸ್ಸು ಹೆಚ್ಚೆಂದರೆ 15ರ ಆಸುಪಾಸಿನಲ್ಲಿರುತ್ತದೆ. ಒಳಗೆ ಹೋದವರು ಒಂದು ಗಂಟೆಯ ನಂತರ ಹೊರಬರುತ್ತಾರೆ. ಗಂಟೆಗೆ 30 ರೂಪಾಯಿ ಲೆಕ್ಕದಲ್ಲಿ ಹಣ ಪಾವತಿಸಿ, ಶಾಲೆಯ ಬ್ಯಾಗನ್ನು ಏರಿಸಿಕೊಂಡು ಮನೆಯ ಹಾದಿಯಲ್ಲಿ ನಡೆದು ಮರೆಯಾಗುತ್ತಾರೆ. ‘ಸಮಾಚಾರ’ ಈ ಸರಣಿಯ ಭಾಗವಾಗಿ ಅಂತಹದೊಂದು ಸೈಬರ್..

  May 5, 2016

Top