An unconventional News Portal.

    ...
    kempayya-cover-1
    ರಾಜ್ಯ

    ನೀವು ಬ್ಲಾಕ್ ಮೇಲರ್ಸ್, ಸತ್ಯವನ್ನು ನೇಣು ಹಾಕುವವರು: ‘ಡೋಂಟ್ ಟಾಕ್ ರಬ್ಬಿಶ್’ ಕೆಂಪಯ್ಯ!

    ರಾಜ್ಯ ಗೃಹ ಇಲಾಖೆಯ ಭದ್ರತಾ ಸಲಹೆಗಾರ ಕೆಂಪಯ್ಯ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಘಟನೆಗೆ ಬುಧವಾರ ಸಂಜೆ ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯ ಆವರಣ ಸಾಕ್ಷಿಯಾಯಿತು. ಅರ್ಕಾವತಿ ಡಿ- ನೋಟಿಫಿಕೇಶನ್ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆಯು ಕೆಂಪಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಸಂಬಂಧ ಕೆಂಪಯ್ಯ ಬುಧವಾರ ಸಂಜೆ 5. 30ರ ಸುಮಾರಿಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಗೆ ಆಗಮಿಸಿದ್ದರು. ಸುದ್ದಿ ತಿಳಿದ ಮಾಧ್ಯಮಗಳು ಹೊರಗೆ ಕಾಯುತ್ತಿದ್ದವು. ರಾತ್ರಿ 8.30ರ ಸುಮಾರಿಗೆ..

    May 4, 2016
    ...
    mamata-banerjee-1
    ದೇಶ

    56 ದಿನಗಳಲ್ಲಿ 200 ಭಾಷಣ: ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿರುವ ‘ಅಗ್ನಿ ದೇವತೆ’!

    ಪಶ್ಚಿಮ ಬಂಗಾಳ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ. ಕಳೆದ 56 ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಭಾರಿ ಚುನಾವಣಾ ಪ್ರಚಾರ ಸಭೆಗಳ ಪೈಕಿ ಸ್ಟಾರ್ ಕ್ಯಾಂಪೇನರ್ ಆಗಿ ಮಿಂಚುತ್ತಿದ್ದಾರೆ ಮಮತಾ ಬ್ಯಾನರ್ಜಿ. ಕಾಂಗ್ರೆಸ್ ಪಕ್ಷದಿಂದ ಸಿಡುದು ಬಂದು, ಸ್ವತಂತ್ರವಾಗಿ ಪಕ್ಷವನ್ನು ಕಟ್ಟಿ, 36 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಭದ್ರಕೋಟೆಯನ್ನು ಒಡೆದು, ಕಳೆದ ಬಾರಿ ರಾಜ್ಯದ ಚುಕ್ಕಾಣಿಯನ್ನು ಹಿಡಿದ ಹಠಯೋಗಿ ರಾಜಕಾರಣಿ ಮಮತಾ. ಇಂಡಿಯಾ ಟುಡೇ ಹಾಗೂ ಸಿ- ವೋಟರ್ ಜಂಟಿ ಸಮೀಕ್ಷೆ, ಈ ಬಾರಿಯೂ ಮಮತಾ..

    May 4, 2016
    ...
    pv-final-2
    ಪತ್ರಿಕೆ

    ಗುಪ್ತವಾಗಿ ನಡೆದ ‘ಸೋಮಯಾಗ’ ಮತ್ತು ಚರ್ಚೆಗೆ ಬಂದ ಪ್ರಜಾವಾಣಿ ವಿಶ್ವಾಸಾರ್ಹತೆ!

    ಶಿವಮೊಗ್ಗದ ಹೊರವಲಯದಲ್ಲಿರುವ ಮತ್ತೂರು ಎಂಬ ದೇಶದ ಏಕೈಕ ‘ಸಂಸ್ಕೃತ ಗ್ರಾಮ’ದಲ್ಲಿ ಗುಪ್ತವಾಗಿ ನಡೆದಿದ್ದ ‘ಸೋಮಯಾಗ’ಕ್ಕೆ ಸಂಕೇತಿಗಳಿಂದ ಬಂದ ವಿರೋಧದ ಸುದ್ದಿಯನ್ನು ‘ಪ್ರಜಾವಾಣಿ’ ಬುಧವಾರ ಪ್ರಕಟಿಸಿದೆ. ಈ ಮೂಲಕ ಹಲವು ದಿನಗಳ ನಂತರ ಕನ್ನಡದ ‘ದಿನ ಪತ್ರಿಕೆ’ಯ ಸುದ್ದಿಯೊಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸುದ್ದಿವಾಹಿನಿಗಳು ‘ಪ್ರಜಾವಾಣಿ’ಯ ಈ ಸುದ್ದಿಯನ್ನು ತಮ್ಮದೇ ಒಳನೋಟಗಳ ಮೂಲಕ ಪ್ರಸಾರ ಮಾಡುತ್ತಿವೆ. ಸುದ್ದಿ ಜತೆಗೆ, ‘ಸೋಮಯಾಗ’ ಎಂದರೇನು? ಅದರ ವಿಶೇಷತೆಗಳೇನು? ಎಂದು ಜನರಿಗೆ ತಿಳಿಸಲು ಅವು ಉತ್ಸಾಹ ತೋರಿಸುತ್ತಿವೆ. ಇಂತಹ ಯಾಗದ ಹಿಂದೆ ರಾಜಕಾರಣಿಗಳ ಕೈವಾಡ ಇರುವುದನ್ನು..

    May 4, 2016
    ...
    govt-cars-karnataka-1
    ರಾಜ್ಯ

    ಸರಕಾರದ ಕಾರು ಖರೀದಿ ಖಯಾಲಿಗೆ 30 ಕೋಟಿ ತೆರಿಗೆ ಹಣ ವೆಚ್ಚ!

    ರಾಜ್ಯದಲ್ಲಿ ಉಪನ್ಯಾಸಕರಿಗೆ ಸಂಬಳ ಹಚ್ಚಿಸಲು ಹಣವಿಲ್ಲ, ಬರ ಪರಿಹಾರಕ್ಕೆ ಬೊಕ್ಕಸದಲ್ಲಿ ಕಾಸಿಲ್ಲ. ಆದರೆ, ಜನಪ್ರತಿನಿಧಿಗಳ ಶೋಕಿಗಾಗಿ ಕಾರುಗಳ ಖರೀದಿಗೆ ಮಾತ್ರ ತೆರಿಗೆ ಹಣದಲ್ಲಿ ಯಾವುದೇ ವ್ಯತ್ಯಯವಿಲ್ಲ. ಇದು ಕಳೆದ 6 ವರ್ಷಗಳ ಅಂತರದಲ್ಲಿ ರಾಜ್ಯ ಸರಕಾರ ವಾಹನಗಳ ಮೇಲೆ ಮಾಡಿರುವ ವೆಚ್ಚದ ವಿವರಗಳ ಹಿನ್ನೆಲೆಯಲ್ಲಿ ಗಮನಿಸಬೇಕಿರುವ ಅಂಶ. 2009ರಿಂದ 2015ರ ನಡುವೆ ಸರಕಾರ ಒಟ್ಟು 217 ಕಾರುಗಳನ್ನು ಖರೀದಿಸಿದೆ. ಆರ್ಥಿಕ ಇಲಾಖೆ ಅನುಮೋದನೆ ಮೇರೆಗೆ, ಆಡಳಿತ ಹಾಗೂ ಸುಧಾರಣೆ ಇಲಾಖೆ ನಡೆಸಿರುವ ಈ ವ್ಯವಹಾರದ ಮಾಹಿತಿ ಇದೀಗ ಬಹಿರಂಗವಾಗಿದೆ…

    May 4, 2016
    ...
    Modi
    ದೇಶ

    ಸಂಸದರಿಗೆ ವೇತನ ಹೆಚ್ಚಳ ಪ್ರಸ್ತಾಪ: ಮೋದಿಗೆ ಮತ್ತೊಂದು ಸತ್ವ ಪರೀಕ್ಷೆ, ಪಾಪ!

    ಸಂಸದರ ವೇತನ ಹೆಚ್ಚಳ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಸುತ್ತಿನ ಸತ್ವ ಪರೀಕ್ಷೆಗೆ ಗುರಿಯಾಗುವ ಸಾಧ್ಯತೆಗಳು ಕಾಣಿಸುತ್ತಿವೆ. ಮಂಗಳವಾರ ನಡೆದ ಬೆಳವಣಿಗೆಯೊಂದರಲ್ಲಿ, ಸಂಸದರ ಸಂಬಳ ಮತ್ತು ಭತ್ಯೆ ಹೆಚ್ಚಳ ಪ್ರಸ್ತಾಪಕ್ಕೆ ಪ್ರಧಾನಿ ಮೋದಿ ವೈಯುಕ್ತಿಕವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹೊರಗೆಡವಿದೆ. ಈಗಿರುವ ಮಾಸಿಕ 50 ಸಾವಿರ ಮೂಲ ವೇತನವನ್ನು 1 ಲಕ್ಷಕ್ಕೆ ಏರಿಸುವಂತೆ ಸಂಸದರು ಒತ್ತಾಯಿಸುತ್ತಿದ್ದಾರೆ. ಜತೆಗೆ, ಭತ್ಯೆ ವಿಚಾರದಲ್ಲಿ ಹೆಚ್ಚಳ ಬಯಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದರೆ, ವಾರ್ಷಿಕ 250 ಕೋಟಿ ರೂಪಾಯಿ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳಲಿದೆ…

    May 4, 2016

Top