An unconventional News Portal.

    ...
    3888
    ಟಿವಿ

    ಚಿಕ್ಕವರೆಲ್ಲಾ ಕೋಣರಲ್ಲ; ಮನಸ್ಸು ಮಾಡಿದರೆ ಪತ್ರಕರ್ತರೂ ಆಗುತ್ತಾರಲ್ಲಾ…!

    ಪತ್ರಕರ್ತರಾಗಲು ವಯಸ್ಸಿನ ಮಿತಿಗಳಿಲ್ಲ. ಹೀಗಿದ್ದೂ, ಬಾಲ ಪತ್ರಕರ್ತರ ಉದಾಹರಣೆಗಳು ಈ ಜಗತ್ತಿನಲ್ಲಿ ಅಪರೂಪ. ಆದರೆ ಇದಕ್ಕೆ ಅಪವಾದ ಬಾಂಗ್ಲಾದೇಶದ ‘ಪ್ರಿಸಂ’ ಮಾಧ್ಯಮ ಸಂಸ್ಥೆ. ಇಲ್ಲಿ ಎಳೆ ವಯಸ್ಸಿನ ಮಕ್ಕಳೇ ಪತ್ರಕರ್ತರು. ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಮತ್ತು BDnews24.com ಎಂಬ ನ್ಯೂಸ್ ವೆಬ್ಸೈಟ್ ಸಹಯೋಗದಲ್ಲಿ ಪ್ರಿಸಂ (prism) ವೀಡಿಯೋ ಸುದ್ದಿ ಸೇವಾ ಸಂಸ್ಥೆಯನ್ನು ಢಾಕಾದಲ್ಲಿ ಆರಂಭಿಸಲಾಗಿದೆ. ಅದನ್ನು ವೇದಿಕೆಯಾಗಿ ಬಳಸಿಕೊಂಡಿರುವ ಅರ್ಜು ಮೋನಿ ಎಂಬ ಈ 17ರ ಹರೆಯದ ಪೋರ, ಬೀದಿ ಬದಿಯ ಮಕ್ಕಳ ಸಮಸ್ಯೆಗಳನ್ನು ಜನರ ಮುಂದಿಡುತ್ತಿದ್ದಾನೆ. ಈ ಮೂಲಕ ಬಾಂಗ್ಲದೇಶದ ಸ್ಥಳೀಯತೆಗೆ ಹೆಚ್ಚು..

    May 3, 2016
    ...
    porn-film-shooting-1
    SPECIAL SERIES

    ‘ಮೈಥುನ ಮಿಸ್ಟರಿ’-3: ಟ್ಯೂಬ್ ಸೈಟ್ಸ್ ಸೃಷ್ಟಿಸುವ ಭ್ರಮಾಲೋಕ ಮತ್ತು ಮರೆಯಾದ ವಾಸ್ತವ!

    ಇವತ್ತು ಒಂದು ದಿನಕ್ಕೆ ಜಗತ್ತಿನಾದ್ಯಂತ ಪೊರ್ನ್ ಮೂವಿಗಳಿಗಾಗಿ ಅಂತರ್ಜಾಲದಲ್ಲಿ ತಡಕಾಡುವವರ ಸಂಖ್ಯೆ ಬರೋಬ್ಬರಿ 10 ಕೋಟಿ! ಅಂದರೆ, ನಮ್ಮ ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳ ಒಟ್ಟು ಜನಸಂಖ್ಯೆ. ಇಷ್ಟು ದೊಡ್ಡ ಪ್ರಮಾಣದ ಗ್ರಾಹಕರನ್ನು ಹೊಂದಿರುವ ಉದ್ಯಮವಾಗಿ ಬೆಳೆದಿರುವ ಪೊರ್ನೋಗ್ರಫಿ ತನ್ನ ಮಾರುಕಟ್ಟೆ ಉಳಿಸಿಕೊಳ್ಳಲು, ತನ್ನ ಗ್ರಾಹಕರನ್ನು ಸೆಳೆಯಲು ನಡೆಸುತ್ತಿರುವ ಕಸರತ್ತುಗಳು, ಅವುಗಳದ್ದೇ ಆದ ಭ್ರಮಾತ್ಮಕ ಲೋಕವೊಂದನ್ನು ಸೃಷ್ಟಿಸಿವೆ. ಮತ್ತದು ಇವತ್ತಿನ ಮಟ್ಟಿಗೆ ಯಾರ ಅಂಕೆಗೂ ಸಿಗದ ಹಾಗೆ ಬೆಳೆದು ಬಿಟ್ಟಿವೆ ಕೂಡ. ಅದು 2012ನೇ ಇಸವಿ. ಜರ್ಮನಿ..

    May 3, 2016
    ...
    Girl writing exam paper
    ರಾಜ್ಯ

    ಇಂದಿನಿಂದ ಸಿಇಟಿ ಪರೀಕ್ಷೆ: ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ

    ಹಲವು ಗೊಂದಲಗಳ ನಡುವೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬುಧವಾರ (ಇಂದು)ದಿಂದ ಆರಂಭವಾಗಲಿದೆ. ಸುಮಾರು 1,78,346 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ 391 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿ 82 ಕೇಂದ್ರಗಳಲ್ಲಿ 42,963 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದಾರೆ. ಗಡಿನಾಡು ಮತ್ತು ಹೊರನಾಡು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಮೇ 6ರಂದು ನಡೆಯಲಿದ್ದು, 2,560 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಸಂಬಂಧ ಇಲ್ಲಾ ವಿಧವಾದ ಸಿದ್ಧತೆ, ಭದ್ರತಾ ವ್ಯವಸ್ಥೆ ಮಾಡಲಾಗಿದೆ…

    May 3, 2016
    ...
    jarkhand-village-1
    ಸುದ್ದಿ ಸಾರ

    ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಈ ಗ್ರಾಮಸ್ಥರು!

    ಭಾರತದಲ್ಲಿ ಕಾನೂನು ಸುವ್ಯವಸ್ಥೆ ಪಾಲಿಗೆ ಅಪರೂಪದ ಗ್ರಾಮ ಎಂದು ಗುರುತಿಸಿಕೊಂಡಿದ್ದ ಗ್ರಾಮದಲ್ಲಿ ಕೊನೆಗೂ ಒಂದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸ್ವಾತಂತ್ರ್ಯ ಬಂದು ಇಲ್ಲೀಯವರೆಗೂ ಜಾರ್ಖಂಡ್ ರಾಜ್ಯದ ಲತೇಹಾರ್ ಜಿಲ್ಲೆಯ ಲಾಲ್‍ಘಡಿ ಗ್ರಾಮದಲ್ಲಿ ಒಂದೇ ಒಂದು ಪೊಲೀಸ್ ಕೇಸ್ ದಾಖಲಾಗಿರಲಿಲ್ಲ. ಹೀಗಾಗಿ, ಇಡೀ ದೇಶದಲ್ಲಿ ಈ ಗ್ರಾಮ ವಿಶೇಷ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಆದರೆ ಇದೀಗ, ಮೊದಲ ಬಾರಿಗೆ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಲ್ಲಿನ ಬುಡಕಟ್ಟು ಜನಾಂಗದ ವಿವಾಹಿತ ವ್ಯಕ್ತಿಯೊಬ್ಬ ಇದೇ ಗ್ರಾಮದ ಮಹಿಳೆಯೊಂದಿಗೆ ನಾಪತ್ತೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಭಾನುವಾರ..

    May 3, 2016
    ...
    jandj-cancer-1
    ವಿದೇಶ

    ‘ಜಾನ್ಸನ್ ಬೇಬಿ ಪೌಡರ್’ನಿಂದ ಕ್ಯಾನ್ಸರ್: ಕಂಪನಿಗೆ 7.2 ಕೋಟಿ ಡಾಲರ್ ದಂಡ!

    ಮಕ್ಕಳ ಸೌಂದರ್ಯ ವರ್ಧಕ ಉತ್ಪಾದನೆಯ ಮೂಲಕ ವಿಶ್ವದ ಮನೆಮಾತಾಗಿರುವ ‘ಜಾನ್ಸನ್ ಅಂಡ್ ಜಾನ್ಸನ್’ ಸಂಸ್ಥೆಗೆ ಅಮೆರಿಕಾದ ನ್ಯಾಯಾಲಯವೊಂದು 7. 20 ಕೋಟಿ ಡಾಲರ್ ದಂಡ ವಿಧಿಸಿ, ಸೋಮವಾರ ಸಂಜೆ ತೀರ್ಪು ಹೊರಡಿಸಿದೆ. ಅಲಬಾಮ ಮೂಲದ ಮಹಿಳೆಯೊಬ್ಬರು ಸದರಿ ಸಂಸ್ಥೆಯ ಬೇಬಿ ಪೌಡರ್ ಹಾಗೂ ‘ಶವರ್ ಎಂಡ್ ಶವರ್’ ಶಾಂಪುಗಳ ಬಳಕೆಯಿಂದ ಗರ್ಭಕೋಶದ ಕ್ಯಾನ್ಸರ್ಗೆ ತುತ್ತಾಗಿದ್ದರು. ಈ ಕುರಿತು ಮಿಸೋರಿ ರಾಜ್ಯ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಸೋಮವಾರ ಸಂಜೆ ವೇಳೆಗೆ, ಪ್ರಕರಣದ ಕುರಿತು ತೀರ್ಪು ನೀಡಿದ ಜ್ಯೂರಿಗಳು, ದೂರು ನೀಡಿದ ಜಾಕ್ವೆಲಿನ್..

    May 3, 2016
    ...
    ಆರೋಪಿ ಶಿವಕುಮಾರ್
    ರಾಜ್ಯ

    ‘ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ’: ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ನಿಂತ ಸಿಐಡಿ!

    ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವಕುಮಾರ್ ಅಲಿಯಾಸ್ ಶಿವಕುಮಾರ ಸ್ವಾಮಿಯನ್ನು ಬಂಧಿಸಿರುವುದಾಗಿ ಮಂಗಳವಾರ ಸಿಐಡಿ ಪ್ರಕಟಿಸಿದೆ. ಈ ಮೂಲಕ ಒಟ್ಟು 14 ಜನರನ್ನು ಬಂಧಿಸಿದಂತಾಗಿದೆ. ಕಳೆದ ತಿಂಗಳು ಆರಂಭದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣದಲ್ಲಿ ಸಿಐಡಿ ಆರಂಭದಿಂದಲೇ ಕಾರ್ಯಾಚರಣೆಗೆ ಇಳಿದಿತ್ತು. ಹಿಂದೆ ರಾಜ್ಯದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಯನ್ನು ದಾಟಿ, ಸಿಐಡಿ ಈ ಬಾರಿ ತನಿಖೆಯಲ್ಲಿ ಆಳಕ್ಕೆ ಇಳಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮಂಗಳವಾರ ಸಿಐಡಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಮತ್ತು..

    May 3, 2016
    ...
    sex-series-2
    SPECIAL SERIES

    ‘ಮೈಥುನ ಮಿಸ್ಟರಿ’-2: ಸರಕಾರಿ ಅಧಿಕಾರಿಯ ಫ್ಯಾಂಟಸಿಗಳು ಹಾಗೂ 5000 ಕೋಟಿಯ ಪೊರ್ನೋಗ್ರಫಿ ಉದ್ಯಮ!

    “ಅವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಉದ್ಯೋಗಿ. ಕಳೆದ ಹತ್ತು ವರ್ಷಗಳಿಂದ ಅವರಲ್ಲಿ ಒಂದು ಫ್ಯಾಂಟಸಿ ಬೆಳೆದು ಬಂದಿತ್ತು. ತಮ್ಮ ಪತ್ನಿಯ ಎದುರೇ ಹೆಣ್ಣಿನಂತೆ ವೇಷ ಧರಿಸಿಕೊಂಡು ಓಡಾಡುತ್ತಿದ್ದರು. ಅದನ್ನು ಫೊಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳುತ್ತಿದ್ದರು. ಅವುಗಳನ್ನು ಪತ್ನಿ ಸೇರಿದಂತೆ ಎಲ್ಲರೂ ಇಷ್ಟಪಡಬೇಕು ಎಂದು ಬಯಸುತ್ತಿದ್ದರು. ನಮ್ಮ ಬಳಿ ಬರುವಾಗ ಅವರ ವಯಸ್ಸು 40ರ ಆಸುಪಾಸಿನಲ್ಲಿತ್ತು,” ಎಂದರು ಮನಃಶಾಸ್ತ್ರಜ್ಞ ಡಾ. ಮಹೇಶ್. ನಂದಿನಿ ಲೇಔಟ್ನಲ್ಲಿರುವ ‘ಸ್ಪಂದನ ಹೆಲ್ತ್ ಕೇರ್’ನಲ್ಲಿ ಇಂತಹ ಹತ್ತು ಹಲವು ಲೈಂಗಿಕತೆ ಸುತ್ತ ಬೆಳೆಯುವ..

    May 3, 2016
    ...
    ms-1
    ರಾಜ್ಯ

    ಓಂ ನಮಃ ಶಿವಾಯ…: ಈ ಅಲೆಮಾರಿಯ ಪಾಲಿಗೆ ಪ್ರಕೃತಿಯೇ ಆಲಯ!

    ನಾವು ಅಂದುಕೊಂಡಂತೆ ಬದುಕುತ್ತಿದ್ದೇವೆ ಎಂದು ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ‘ನಾವು ಅಂದುಕೊಂಡಿದ್ದು’ ಏನು? ಅದು ಹಾಗೆ ಅನ್ನಿಸಲು ಕಾರಣಗಳೇನು ಎಂದು ಹುಡುಕಲು ಹೊರಟಾಗ ಗೊಂದಲ ಶುರುವಾಗುತ್ತದೆ. ನಿಜಕ್ಕೂ, ನಾನು ಬದುಕುತ್ತಿರುವ ಬದುಕು, ನಮ್ಮದೇನಾ? ಅನ್ನಿಸಲು ಶುರುವಾಗುತ್ತದೆ. ಯಾಕೆ ಈಗ ಈ ಪೀಠಿಕೆ ಎಂದರೆ, ಕಳೆದ 20 ವರ್ಷಗಳಿಂದ ತಮ್ಮನ್ನು ತಾವು, ಅಂದುಕೊಂಡ ಹಾದಿಯಲ್ಲಿಯೇ ನಡೆಸಿಕೊಂಡು ಬಂದು, ಇವತ್ತು ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಬೇಕು ಎಂಬ ಮನಸ್ಥಿತಿಯಲ್ಲಿರುವ ಒಬ್ಬರ ಪರಿಚಯವನ್ನು ನಿಮಗೆ ಮಾಡಿಸಬೇಕಿದೆ. ಅವರು ಮಂಜುನಾಥ್ ಸುಳ್ಳೊಳ್ಳಿ…

    May 3, 2016

Top