An unconventional News Portal.

ಶಾಸಕ ಭೀಮನಾಯ್ಕರಿಂದ ಹಲ್ಲೆ: ಆರೋಪ

ಶಾಸಕ ಭೀಮನಾಯ್ಕರಿಂದ ಹಲ್ಲೆ: ಆರೋಪ

ಬಳ್ಳಾರಿ ಜೆಡಿಎಸ್ ಶಾಸಕ ಭೀಮಾನಾಯ್ಕ್ ಎಸ್‍ಎಲ್‍ಆರ್ ಫ್ಯಾಕ್ಟರಿ ಸಿಬ್ಬಂದಿ ಮೇಲೆ ಗೂಂಡಾಗಿರಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

“ನನಗೆ ಖರ್ಚಿಗೆ ಪ್ರತಿ ತಿಂಗಳ 10 ಲಕ್ಷ ರೂಪಾಯಿ ಕೊಡಿ. ಇಲ್ಲದಿದ್ರೆ ಕಾರ್ಖಾನೆಯ ಟಾನ್ಸ್‍ಪೋರ್ಟ್ ಏಜೆನ್ಸಿಯನ್ನ ನನಗೇ ಕೊಡಿ,” ಎಂದು ಹಗರಿಬೊಮ್ಮನಹಳ್ಳಿಯ ಬೈಯಲಪ್ಪನಹಕ್ಕಲಿನಲ್ಲಿರುವ ಎಸ್‍ಎಲ್‍ಆರ್ ಕಾರ್ಖಾನೆ ಮಾಲೀಕರ ಶಾಸಕರು ಬೇಡಿಕೆ ಇಟ್ಟಿದ್ದರು ಎಂದು ಆರೋಪ ಕೇಳಿಬಂದಿದೆ. ಶಾಸಕರ ಬೇಡಿಕೆಗೆ ಮಾಲೀಕರು ಮಣಿಯದ ಹಿನ್ನೆಲೆಯಲ್ಲಿ ಕೋಪವನ್ನು ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಮೂಲಕ ಭೀಮಾನಾಯ್ಕ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ, ಭೀಮಾನಾಯ್ಕ್ ಎಸ್‍ಎಲ್‍ಆರ್ ಕಾರ್ಖಾನೆ ಟ್ರಾನ್ಸ್‍ಪೋರ್ಟ್ ಏಜೆನ್ಸಿ ನಡೆಸ್ತಿದ್ರು. ಈ ವೇಳೆ ಗೋಲ್‍ಮಾಲ್ ನಡೆಸಿದ್ದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಟಾನ್ಸ್‍ಪೋರ್ಟ್ ಏಜೆನ್ಸಿಯನ್ನು ರದ್ದು ಮಾಡಲಾಗಿತ್ತು. ಇದರಿಂದ ರೊಚ್ಚಿಗೆದ್ದ ಶಾಸಕ ಭೀಮಾನಾಯ್ಕ್, ಟಾನ್ಸ್‍ಪೋರ್ಟ್ ಏಜೆನ್ಸಿ ಬೇಕು ಅಂತಾ ಕಾರ್ಖಾನೆ ಮಾಲೀಕರ ಜತೆ ಜಗಳಕ್ಕೆ ಇಳಿದ್ದಾರೆ.

ಇದಕ್ಕೆ ಕಾರ್ಖಾನೆಯವರು ಒಪ್ಪದಿದ್ದಾಗ ಪೊಲೀಸರೊಂದಿಗೆ ಬಂದು ಕಾರ್ಖಾನೆಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಗೂಂಡಾಗಿರಿ ದೃಶ್ಯವನ್ನ ಚಿತ್ರೀಕರಣ ಮಾಡ್ತಿದ್ದವರ ಮೊಬೈಲ್‍ಗಳನ್ನ ಪೊಲೀಸರು ಕಸಿದುಕೊಂಡಿದ್ದಾರೆ. ಆದರೆ ಶಾಸಕರ ಗೂಂಡಾಗಿರಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ದೂರು ದಾಖಲಾಗಿದೆ. ಆದರೆ 12 ಗಂಟೆಯಾದ್ರೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಕಾರ್ಖಾನೆ ಮಾಲೀಕರು ಆರೋಪಿಸಿದ್ದಾರೆ.

“ಕ್ಷೇತ್ರದಲ್ಲಿ ಬರ ಇದೆ. ಜನ ಸಂಕಷ್ಟದಲ್ಲಿದ್ದಾರೆ. ಇಂತಾ ಟೈಮಲ್ಲಿ ಶಾಸಕರಾದವವರು ಕೆಲಸ ಮಾಡೋದನ್ನ ಬಿಟ್ಟು, ಟಾನ್ಸ್‍ಪೋರ್ಟ್ ಏಜೆನ್ಸಿಗಾಗಿ ರೌಡಿಸಂ ಮಾಡೋದು ಎಷ್ಟು ಸರಿ, ಎಂದು ಅವರು ಪ್ರಶ್ನೆಯಾಗಿದೆ.

Leave a comment

FOOT PRINT

Top