An unconventional News Portal.

ರಾಜ್ಯ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷ, ಸದಸ್ಯರ ನೇಮಕ

ರಾಜ್ಯ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷ, ಸದಸ್ಯರ ನೇಮಕ

ರಾಜ್ಯ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಹಾಗೂ ನಾಲ್ವರು ಸದಸ್ಯರ ಆಯ್ಕೆಯನ್ನು ಸರಕಾರ ಅಂತಿಮಗೊಳಿಸಿರುವ ಮಾಹಿತಿ ಹೊರಬಿದ್ದಿದೆ.

ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಪಿಟಿಐ ಸುದ್ದಿಸಂಸ್ಥೆಯಲ್ಲಿದ್ದು ನಿವೃತ್ತರಾಗಿದ್ದು, ಹಿರಿಯ ಪತ್ರಕರ್ತ ಬಿ. ಟಿ. ಸಿದ್ದರಾಜು (ಸಿದ್ದಣ್ಣ) ಅವರನ್ನು ನೇಮಕ ಮಾಡಿಲಾಗಿದೆ. ‘ಪ್ರಜಾವಾಣಿ’ ಪತ್ರಿಕೆಯ ಪೊನ್ನಪ್ಪ ಅವರಿಂದ ತೆರವಾದ ಸ್ಥಾನವನ್ನು ಇವರು ತುಂಬಲಿದ್ದಾರೆ.

ಸದಸ್ಯರಾಗಿ ‘ವಿಜಯವಾಣಿ’ ಬೆಂಗಳೂರು ಆವೃತ್ತಿಯಲ್ಲಿ ರಾಜಕೀಯ ವಿಭಾಗದ ಮುಖ್ಯಸ್ಥರಾಗಿದ್ದ  ರುದ್ರಣ್ಣ ಹರ್ತಿಕೋಟೆ, ‘ದಿ ಹಿಂದೂ’ ಪತ್ರಿಕೆಯ ರಂಗಣ್ಣ, ಬಳ್ಳಾರಿ ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ್ ಹಾಗೂ ಬಾಗಲಕೋಟೆಯ ಮುತ್ತು ನಾಯ್ಕರ್ ಅವರನ್ನು ನೇಮಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯ ಮಾಧ್ಯಮ ಅಕಾಡೆಮಿಯಲ್ಲಿ ಅಧ್ಯಕ್ಷರು ಸೇರಿದಂತೆ 22 ಜನರಿಗೆ ಅವಕಾಶವಿದೆ. ಇದರಲ್ಲಿ ಅಧ್ಯಕ್ಷರು ಹಾಗೂ ನಾಲ್ವರು ಸದಸ್ಯರನ್ನು ಸರಕಾರವೇ ನೇರವಾಗಿ ನೇಮಕ ಮಾಡಿಲಿದೆ. ಸಣ್ಣ ಪತ್ರಿಕೆಗಳು, ಮಾಲೀಕರು ಹಾಗೂ ವಿಶ್ವವಿದ್ಯಾನಿಲಯದ ಉಪನ್ಯಾಸಕರು ಮತ್ತಿತರ ಕೋಟಾಗಳ ಅಡಿಯಲ್ಲಿ ಉಳಿದವರ ನೇಮಕಾತಿ ನಡೆಯಲಿದೆ.

ಸೋಮವಾರ ಸಂಜೆ ವೇಳೆಗೆ ಸರಕಾರದ ಈ ನೇಮಕಾತಿ ಆದೇಶ ಹೊರಬೀಳುವ ಸಾಧ್ಯತೆ ಇದೆ.

 

Leave a comment

FOOT PRINT

Top