An unconventional News Portal.

    ...
    DGP
    ರಾಜ್ಯ

    ಹುಷಾರ್… ಪುತ್ರನ ವಿರುದ್ಧ ದೂರು ನೀಡೋಕೆ ಬಂದರೆ, ಜೈಲಿಗೆ ಅಟ್ತಾರೆ ಡಿಜಿಪಿ ಓಂಪ್ರಕಾಶ್!

    ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಮೇಲೆ ಪುತ್ರ ವ್ಯಾಮೋಹಕ್ಕೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಶನಿವಾರ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಚಿಕ್ಕಮಗಳೂರು ಮೂಲದ ಯುವತಿಯನ್ನು ಭಾನುವಾರ ಸಂಜೆ ವೇಳೆಗೆ ರಾಜಾಜಿನಗರದ ಮನೆಯಲ್ಲಿ ಬಂಧಿಸಲಾಗಿದೆ. ಆಕೆಯ ವಿರುದ್ಧ ಶನಿವಾರ ಕನಕಪುರ ನಗರ ಠಾಣೆಯಲ್ಲಿ ದಾಖಲಾದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಕಾರ್ಯಚರಣೆಯನ್ನು ನಡೆಸಲಾಗಿದೆ. ಈ ಮೂಲಕ, ಡಿಜಿಪಿ ಪುತ್ರ ಕಾರ್ತಿಕೇಶ ಹಾಗೂ ಆತನ ಸ್ನೇಹಿತ ಎಂದು ಗುರುತಿಸುತ್ತಿರುವ ರವಿಶಂಕರ್ ಎಂಬಾತನ ವಿರುದ್ಧ ದೂರು..

    May 1, 2016
    ...
    woman-sad-shadow
    ರಾಜ್ಯ

    ಯಾರು ಈ ರಾಜಲಕ್ಷ್ಮಿ? ಡಿಜಿಪಿ ಜತೆ ಆಕೆಗಿದ್ದ ಸಂಬಂಧವೇನು?

    ಡಿಜಿಪಿ ಪುತ್ರನ ವಿರುದ್ಧ ಕಿರುಕುಳ ಆರೋಪದ ಮೇಲೆ ದೂರು ನೀಡಲು ಬಂದ ರಾಜಲಕ್ಷ್ಮಿಗೂ ಡಿಜಿಪಿ ಓಂಪ್ರಕಾಶ್ ಅವರಿಗೂ ಹಿಂದೆಯೇ ಪರಿಚಯವಿತ್ತು ಎಂಬುದಕ್ಕೆ ದಾಖಲೆಯೊಂದು ಇದೀಗ ಲಭ್ಯವಾಗಿದೆ. ‘ಸಮಾಚಾರ’ಕ್ಕೆ ಸಿಕ್ಕಿರುವ ಮೊಬೈಲ್ ಮೆಸೇಜ್ ಒಂದು ಇದನ್ನು ಸಾಭೀತು ಪಡಿಸುತ್ತಿದೆ. 2015ರ ಡಿಸೆಂಬರ್ 7ರಂದು ಡಿಜಿಪಿ ಅವರ ಮೊಬೈಲ್ ನಂಬರ್ನಿಂದ, ರಾಜಲಕ್ಷ್ಮಿ ಕುಟುಂಬದ ಸದಸ್ಯರೊಬ್ಬರಿಗೆ ಫಾರ್ವರ್ಡ್ ಮಾಡಿರುವ ಮೆಸೇಜ್ ಇದು. ಇದನ್ನು ರಾಜಲಕ್ಷ್ಮಿ ಡಿಜಿಪಿ ಓಂಪ್ರಕಾಶ್ ಅವರಿಗೆ ಕಳುಹಿಸಿದ್ದರು ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿವೆ. ‘ಯಾರತ್ರ ಏನು ಹೇಳಿದರೂ ಅಷ್ಟೆ, ನಿನ್ನ ನಿನ್ನ ಮಗನ್ನ ಬಿಡಲ್ಲ…

    May 1, 2016
    ...
    dgp-omprakash1
    ರಾಜ್ಯ

    ‘ಅಕ್ಕನ ಮೇಲೆ ಪೊಲೀಸ್ ದೌರ್ಜನ್ಯ’: ಡಿಜಿಪಿ ಪುತ್ರನಿಂದ ಕಿರುಕುಳ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    “ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನನ್ನ ಅಕ್ಕನ ಮನೆಗೆ ಪೊಲೀಸರನ್ನು ಕಳುಹಿಸಿ, ಬಂಧಿಸುವ ಪ್ರಯತ್ನ ನಡೆಸಿದ್ದಾರೆ…” ಹೀಗೊಂದು ಗಂಭೀರ ಆರೋಪವನ್ನು ಮಾಡಿದ್ದು, ಶನಿವಾರ ಡಿಜಿಪಿ ಮನೆ ಎದುರು ಪ್ರತಿಭಟನೆ ನಡೆಸಿದ ಯುವತಿಯ ಸಹೋದರಿ. ‘ಸಮಾಚಾರ’ಕ್ಕೆ ಕೆಲವು ಕ್ಷಣಗಳ ಹಿಂದೆಯಷ್ಟೆ ದೂರವಾಣಿ ಮೂಲಕ ಮಾತನಾಡುತ್ತಿದ್ದ ಅವರ ದನಿ ಆತಂಕಗೊಂಡಂತಿತ್ತು. “ಹತ್ತು ನಿಮಿಷದ ಮುಂದೆ, ರಾಜಾಜಿನಗರದಲ್ಲಿರುವ ನನ್ನ ಅಕ್ಕ ಕರೆ ಮಾಡಿದ್ದಳು. ಮನೆಗೆ ಪೊಲೀಸರು ಬಂದಿದ್ದಾರೆ. ನಾನು ಮನೆಯ ಬಾಗಿಲು ತೆಗೆಯಲಿಲ್ಲ. ಈ..

    May 1, 2016
    ...
    Matrimonial-Websites-in-India
    ರಾಜ್ಯ

    ಮಿಸ್ ಹೊಡೆದ ‘ಮ್ಯಾಟ್ರಿಮೋನಿ ಮ್ಯಾಚ್’: ಪೊಲೀಸ್ ಠಾಣೆ ಮೆಟ್ಟಿಲೇರಿತು ಪ್ರಕರಣ

    ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ವರಾನ್ವೇಷಣೆ ಮುಗಿಸಿ, ಮದುವೆಯಾಗಿ ಮೋಸ ಹೋದ ಪ್ರಕರಣವೊಂದು ಈಗ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇಂಟೀರಿಯರ್ ಡಿಸೈನರ್ ಒಬ್ಬರು ಮದುವೆಯಾಗಲು ಗಂಡು ಬೇಕು ಎಂದು 5 ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಒಂದರ ಮೊರೆ ಹೋಗಿದ್ದರು. ಅದಕ್ಕಾಗಿ ಹಣವನ್ನೂ ತೆತ್ತು ತಮ್ಮ ಖಾತೆಯನ್ನು ತೆರೆದಿದ್ದರು. ಈ ಸಮಯದಲ್ಲಿ ಐಬಿಎಂ ಉದ್ಯೋಗಿ ಎಂದು ಹೇಳಿಕೊಂಡು ಬಂದ ಯುವಕನೊಬ್ಬನ ಪರಿಚಯವನ್ನು ಸದರಿ ವೆಬ್ ಸೈಟ್ ಮಾಡಿಸಿತ್ತು. ಮುಂದೆ ಅವರಿಬ್ಬರು ಮದುವೆಯಾದರು. ಮದುವೆಯ ನಂತರ ಗೊತ್ತಾಗಿದ್ದೇನು..

    May 1, 2016
    ...
    indian-court-symbol
    ಟಿವಿ

    ‘ಬಿಟಿವಿ’ ಹೇಳಿಕೆಗೆ ಧನಂಜಯ್ ಪ್ರತಿಕ್ರಿಯೆ: ‘ಸಂಧಾನದ ಅಗತ್ಯವಿರಲಿಲ್ಲ; ಸತ್ಯಕ್ಕೆ ಸಾವಿಲ್ಲ’!

    ಕೆ. ವಿ. ಧನಂಜಯ್ ಸುದ್ದಿ ಮಾಧ್ಯಮವೊಂದರ ಮೇಲೆ ಶಾಸಕರಾದ ಪ್ರಿಯ ಕೃಷ್ಣರವರು ಹೂಡಿರುವ ಮಾನನಷ್ಟ ಮೊಕದ್ದಮೆಯು ನಿನ್ನೆಯಿಂದ ಇಲ್ಲಿ ಚರ್ಚೆಯ ವಸ್ತುವಾಗಿದೆ. ಕರ್ನಾಟಕದಲ್ಲಿ ದಾಖಲಾದ ಅತೀ ದೊಡ್ಡ ಮೊತ್ತದ ಮಾನಹಾನಿ ಪ್ರಕರಣ ಇದಾಗಿರುವುದರಿಂದ, ಸಹಜವಾಗಿಯೇ ಸಾರ್ವಜನಿಕರ ಗಮನ ಸೆಳೆದಿದೆ. ‘ಸಮಾಚಾರ’ ಪ್ರಕರಣದ ನ್ಯಾಯಾಲಯದ ವಿಚಾರಣೆ ಸಂಬಂಧಿಸಿದಂತೆ ಶನಿವಾರ ವರದಿ ಪ್ರಕಟಿಸುತ್ತಿದ್ದಂತೆ, ಬಿಟಿವಿ ಸುದ್ದಿ ವಾಹಿನಿ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ಶಾಸಕರಾದ ಪ್ರಿಯ ಕೃಷ್ಣರವರ ವಕೀಲನಾಗಿರುವ ನಾನು ಪ್ರತಿಕ್ರಿಯೆ ನೀಡಬೇಕಿದೆ. ಶನಿವಾರ ನ್ಯಾಯಾಲಯವು..

    May 1, 2016
    ...
    10408968_879673455433913_4017014889059953450_n
    ಟಿವಿ

    ‘ವೃತ್ತಿ ಬದಲಾವಣೆಯೇ ಮನುಷ್ಯನಿಗೆ ಸಿಗುವ ವಿಶ್ರಾಂತಿ’: ‘ಮನೆದೇವ್ರ’ ಮನದಾಳದ ಮಾತು!

    ”ಇಡೀ ನಿಸರ್ಗದಲ್ಲಿ ಯಾವ ಜೀವಿಯೂ 24/7 ಕೆಲಸ ಮಾಡಲು ವಿನ್ಯಾಸಗೊಂಡಿಲ್ಲ. ಆದರೆ, ಮನುಷ್ಯ ಮಾತ್ರ ಯಾವಾಗಲೂ ತನ್ನ ಅರಿವನ್ನು ಜೀವಂತವಾಗಿಟ್ಟುಕೊಂಡು, ಕೆಲಸದಲ್ಲಿ ಮುಳುಗಿರುವ ಜೀವಿ. ಬಹುಶಃ, ವೃತ್ತಿಯಿಂದ ವೃತ್ತಿಗೆ ಬದಲಾವಣೆ ಮಾಡಿಕೊಳ್ಳುವುದೇ ಅವನಿಗೆ ಸಿಗುವ ವಿರಾಮ ಅನ್ನಿಸುತ್ತದೆ…” ಹೀಗೆ ಸಮಾಜ ಶಾಸ್ತ್ರಜ್ಞರ ರೀತಿಯಲ್ಲಿ ಮಾತನಾಡಿದವರು ರವಿ ಕುಮಾರ್. 16 ವರ್ಷಗಳ ಗಂಭೀರ ಪತ್ರಿಕೋದ್ಯಮದ ನಂತರ, ಅವರೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುವ ‘ಮನೆದೇವ್ರು’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದು ‘ಇಂಡಿಯನ್ ಎಕ್ಸ್ ಪ್ರೆಸ್’, ‘ಉಷಾಕಿರಣ’, ‘ಟೈಮ್ಸ್..

    May 1, 2016
    ...
    delhi-traffic-pollution
    ದೇಶ

    ನಗರ ಮಾಲಿನ್ಯ ತಡೆಗೆ ಕ್ರಮ: ದಿಲ್ಲಿ ರಸ್ತೆಗಳಿಂದ ಡೀಸೆಲ್ ಟ್ಯಾಕ್ಸಿ ನಿಷೇಧ

    ಹೆಚ್ಚುತ್ತಿರುವ ನಗರ ಮಾಲಿನ್ಯ ತಡೆಗೆ ‘ನೈಸರ್ಗಿಕ ಅನಿಲ'(CNG) ಬಳಕೆಗೆ ಸುಪ್ರಿಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಭಾನುವಾರದಿಂದ ದೇಶದ ರಾಜಧಾನಿ ದಿಲ್ಲಿಯ ರಸ್ತೆಗಳಿಂದ ಡೀಸೆಲ್ ವಾಹನಗಳನ್ನು ಹೊರಗಿಡುವ ಪ್ರಕ್ರಿಯೆ ಆರಂಭವಾಗಿದೆ. ದಿಲ್ಲಿಯಲ್ಲಿ ಸುಮಾರು 27 ಸಾವಿರ ಡೀಸೆಲ್ ಚಾಲಿತ ವಾಹನಗಳು ಬಳಕೆಯಲ್ಲಿದ್ದವು. ಹಿಂದೆಯೇ ಡೀಸೆಲ್ ವಾಹನ ಸಂಚಾರವನ್ನು ನಿಷೇಧಿಸಲು ನ್ಯಾಯಾಲಯ ಹೇಳಿತ್ತಾದರೂ, ಗಡುವು ಮುಂದಕ್ಕೆ ಹಾಕಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಗಡುವನ್ನು ಮುಂದುವರಿಸಲು ಸುಪ್ರಿಂ ಕೋರ್ಟ್ ಶನಿವಾರ ನಿರಾಕರಿಸಿದ ಹಿನ್ನೆಲೆಯಲ್ಲಿ, ಡೀಸೆಲ್ ವಾಹನಗಳನ್ನು ರಸ್ತೆಗಳಿಂದ ಹೊರಗಿಡುವ ಪ್ರಕ್ರಿಯೆ ಶುರುವಾಗಲಿದೆ…

    May 1, 2016

Top