An unconventional News Portal.

  ...

  31 ಬೇಡಿಕೆ ಮುಂದಿಟ್ಟು ಡಿಜಿಪಿಗೆ ಮನವಿ: ಪೊಲೀಸರ ಪ್ರತಿಭಟನೆಗೆ ಈಗ ಅಧಿಕೃತ ಮುದ್ರೆ!

  ಜೂನ್ 4ರಂದು ಸಾಮೂಹಿಕ ರಜೆ ಹಾಕುವ ಮೂಲಕ ಕುಂದುಕೊರತೆಗಳನ್ನು ಈಡೇರಿಸಿಕೊಳ್ಳಲು ಮುಂದಾದ ಪೊಲೀಸರ ಪ್ರತಿಭಟನೆಗೆ ಮಂಗಳವಾರ ಅಧಿಕೃತ ಮುದ್ರೆಯೊಂದು ಬಿದ್ದಿದೆ. ಕರ್ನಾಟಕ ರಾಜ್ಯ ಪೊಲೀಸ್ ಸಂಘದ ವತಿಯಿಂದ ಡಿಜಿಪಿ ಓಂಪ್ರಕಾಶ್ ಅವರಿಗೆ 31 ಬೇಡಿಕೆಗಳಿರುವ ಮನವಿ ಪತ್ರವನ್ನು ನೀಡಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯೊಳಗೆ ನಡೆಯುತ್ತಿದ್ದ ಪ್ರತಿಭಟನೆಗೆ ಅಧಿಕೃತತೆ ಬಂದಂತಾಗಿದೆ. “ಸೋಮವಾರ ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ ಭೇಟಿ ಮಾಡಿ ಇದೇ ಮನವಿಯನ್ನು ನೀಡಲಾಗಿತ್ತು. ಮಂಗಳವಾರ ಡಿಜಿಪಿಯವರಿಗೆ ಮನವಿಯನ್ನು ನೀಡಲಾಗಿದೆ. ಅವರ ಪ್ರತಿಕ್ರಿಯೆ […]

  May 31, 2016
  ...

  ಸಚಿವರುಗಳ ಮೇಲೆ ಆರೋಪಗಳ ಸುರಿಮಳೆ ಅಷ್ಟೆ: ಜಡ್ಡುಗಟ್ಟಿರುವ ವ್ಯವಸ್ಥೆಯಲ್ಲಿ ತಲೆದಂಡದ ಮಾತೇ ಇಲ್ಲ!

  ರಾಜ್ಯದ ಸಚಿವರುಗಳ ಮೇಲೆ ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದರೂ, ನಿರೀಕ್ಷಿತ ತಲೆದಂಡಗಳು ಮಾತ್ರ ಆಗುತ್ತಿಲ್ಲ. ಕಳೆದ ಮೂರು ವರ್ಷಗಳ ಅಂತರದಲ್ಲಿ ಸಂಪುಟ ಸಚಿವರುಗಳು ಮೇಲೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ದುರ್ಬಳಕೆ ಹೀಗೆ ಆರೋಪಗಳು ಮುನ್ನಲೆಗೆ ಬಂದಿವೆ. ಬಂದಷ್ಟೆ ವೇಗವಾಗಿ ತೆರೆಮರೆಗೂ ಸರಿದು ಹೋಗಿವೆ. ವ್ಯವಸ್ಥೆ ಜಡ್ಡುಗಟ್ಟಿ ಹೋಗಿರುವ ಈ ಸಮಯದಲ್ಲಿ ಈ ಪ್ರಕರಣಗಳ ಅವಲೋಕನ ನಡೆಸಿದರೆ ಜನ ಕೂಡ ಯಥಾಸ್ಥಿತಿಯನ್ನು ನಿರೀಕ್ಷಿಸುತ್ತಿದ್ದಾರಾ ಎಂಬ ಅನುಮಾನ  ಮೂಡುತ್ತಿದೆ. ಎಷ್ಟೊಂದು ಪ್ರಕರಣಗಳು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ […]

  May 31, 2016
  ...

  ಪತ್ರಿಕೋದ್ಯಮಕ್ಕೆ ಬರುವವರಲ್ಲಿ ಕೌಶಲ್ಯದ ಕೊರತೆ: ಸಮಸ್ಯೆಯ ಮೂಲ ಎಲ್ಲಿದೆ?

  ಕೆಲಸಗಳು ಖಾಲಿ ಇವೆ; ಅರ್ಹರು ಸಿಗುತ್ತಿಲ್ಲ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ; ಕೆಲಸಗಳು ಸಿಗುತ್ತಿಲ್ಲ! ಇದು ಇವತ್ತಿನ ಆರ್ಥಿಕ ವ್ಯವಸ್ಥೆ ಮುಂದಿಟ್ಟಿರುವ ಔದ್ಯಮಿಕ ವಲಯದ ಸವಾಲುಗಳಲ್ಲಿ ಒಂದು. ಒಂದು ಹಂತದಲ್ಲಿ ಐಟಿ- ಬಿಟಿ ಬೆಂಗಳೂರಿನಲ್ಲಿ ಬೆಳೆದ ನಂತರ ಇಂತಹದೊಂದು ಸಮಸ್ಯೆ ತೀವ್ರವಾಗಿ ಕಾಡಲು ಶುರುವಾಯಿತು. ಸಿಲಿಕಾನ್ ಸಿಟಿಯಲ್ಲಿ ಐಟಿ ಮತ್ತು ಬಿಟಿ ಉದ್ಯೋಗಗಳು ಸೃಷ್ಟಿಯಾದವು, ಅವುಗಳನ್ನು ತುಂಬಲು ಅರ್ಹತೆ ಇರುವ ಮಾನವ ಸಂಪನ್ಮೂಲ ಸಿಗುತ್ತಿಲ್ಲ ಎಂದು 2012ರ ಸುಮಾರಿಗೆ ಬೆಂಗಳೂರಿನಲ್ಲಿ ‘ಸ್ಕಿಲ್ ಕಾಲೇಜು’ಗೆ ಅಡಿಗಲ್ಲು ಹಾಕಲಾಯಿತು. ಇದರಿಂದ ಸಮಸ್ಯೆ […]

  May 31, 2016
  ...

  ವಿದ್ವತ್ತು, ಆಡಳಿತ ಮತ್ತು ಚಳವಳಿ ಮೂಲಕ ಕನ್ನಡ ಕಟ್ಟಿದ ಸಾಹಿತಿ ಇನ್ನಿಲ್ಲ

  ಹಿರಿಯ ಸಾಹಿತಿ, ಕುವೆಂಪು ಶಿಷ್ಯ ದೇ. ಜವರೇಗೌಡ ಅನಾರೋಗ್ಯದ ಕಾರಣ ಸೋಮವಾರ ಸಂಜೆ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇಜಗೌ ಅವರನ್ನು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1918ರ ಜುಲೈ 8ರಂದು ಈಗಿನ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕರೆಯಲ್ಲಿ ದೇಜಗೌ ಜನಿಸಿದ್ದರು. ‘ದೇಜಗೌ’ ಎಂದೇ ಹೆಸರುವಾಸಿಯಾಗಿದ್ದ ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಪದ್ಮಶ್ರೀ, ಕರ್ನಾಟಕ ರತ್ನ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, […]

  May 30, 2016
  ...

  ವಿಮಾನದಲ್ಲಿಯೇ ರೋಚಕ ದರೋಡೆಯೊಂದನ್ನು ನಡೆಸಿದ ಆತ ಇವತ್ತಿಗೂ ನಿಗೂಢವಾಗಿಯೇ ಉಳಿದು ಹೋದ!

  ಧೂಮ್ ಸರಣಿ ಚಿತ್ರಗಳನ್ನು ನೋಡುತ್ತಿರುವ ತಲೆಮಾರು ಇದು. ಹೈಟೆಕ್ ಆಗಿ ದರೋಡೆ ಮಾಡುವುದು, ಕನ್ನ ಹಾಕುವುದು ಹಾಗೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡು ಹೋಗುವುದನ್ನು ರೋಚಕವಾಗಿ ತೋರಿಸಿದ ಚಿತ್ರಗಳವು. ಈ ಸಮಯದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವತ್ತಿಗೂ ತನಿಖಾ ಸಂಸ್ಥೆಗಳಿಗೆ ತಲೆಬಿಸಿ ಮಾಡುತ್ತಿರುವ, ನಾಲ್ಕು ದಶಕಗಳ ಹಿಂದೆಯೇ ಭಿನ್ನ ರೀತಿಯ ದರೋಡೆ ನಡೆಸಿದ ಒಬ್ಬ ವ್ಯಕ್ತಿ ಧೂಮ್ ಸಿನೆಮಾ ಚಿತ್ರಕತೆಯನ್ನೂ ಮೀರಿಸುವಂತಹ ನೈಜ ಕತೆಯೊಂದನ್ನು ಜಾಗತಿಕ ಅಪರಾಧಗಳ ಪಟ್ಟಿಯಲ್ಲಿ ಉಳಿಸಿ ಹೋಗಿದ್ದಾನೆ. ಆತನ ಹೆಸರು ಡ್ಯಾನ್ ಕೂಪರ್. ಮಾಧ್ಯಮಗಳ ವರದಿಯಿಂದಾಗಿ […]

  May 30, 2016
  ...

  ವಿನಾಯಕ್ ಬಾಳಿಗ ಕೊಲೆ ಪ್ರಕರಣಕ್ಕೆ ಹೊಸ ತಿರುವು: ನರೇಶ್ ಶೆಣೈ ಜಾಮೀನು ಅರ್ಜಿಗೆ ಮುನ್ನವೇ ಆಪ್ತನ ಬಂಧನ

  ಮಂಗಳೂರು ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಹಾಗೂ ಪೊಲೀಸರ ನಡುವೆ ನಡೆಯುತ್ತಿರುವ ಕಣ್ಣಾ ಮುಚ್ಚಾಲೆ ಆಟಕ್ಕೆ ಭಾನುವಾರ ಹೊಸ ತಿರುವೊಂದು ಸಿಕ್ಕಿದೆ. ಮಂಗಳೂರಿನಲ್ಲಿ ಫೊಟೋ ಸ್ಟುಡಿಯೋ ನಡೆಸುತ್ತಿದ್ದ ಮಂಜು ನೀರೇಶ್ವಲ್ಯಾ ಎಂಬಾತನ್ನು ಪ್ರಕರಣದ ಆರೋಪಿಗೆ ಅಡಗುತಾಣ ಹಾಗೂ ಧನ ಸಹಾಯ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಸೋಮವಾರ ನರೇಶ್ ಶೆಣೈ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈ ಕೋರ್ಟ್ ಮುಂದೆ ಬರಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರ […]

  May 30, 2016
  ...

  ಹೇಗಿದ್ದ ಫಲುಜಾ ಹೇಗಾಯ್ತು ಗೊತ್ತಾ?: ಐಸಿಲ್ ವಶದಲ್ಲಿರುವ ನತದೃಷ್ಟ ನಗರದ ಕತೆ…

  ವಿಶ್ವವನ್ನೇ ಕೈವಶ ಮಾಡಿಕೊಳ್ಳುತ್ತೇವೆ ಎಂದು ಹೊರಟಿದ್ದ ಐಸಿಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವೆನೆಂಟ್) ಪತನ ಕೊನೆಗೂ ಆರಂಭವಾಗಿದೆ. ದಿನದಿಂದ ದಿನಕ್ಕೆ ಒಂದೊಂದೇ ನಗರಗಳನ್ನು ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಉಗ್ರರು ಈಗ ಇರಾಕ್ ದೇಶದ ಪ್ರಮುಖ ನಗರ ಫಲುಜಾ ಕಳೆದುಕೊಳ್ಳುವ ಹಾದಿಯಲ್ಲಿದ್ದಾರೆ. ಐಸಿಲ್ ಕಪಿಮುಷ್ಟಿಯಿಂದ ಕೈತಪ್ಪುತ್ತಿರುವ ಐದನೇ ನಗರ ಇದು. ಫಲುಜಾ ನಗರವನ್ನು ಮರುವಶ ಪಡಿಸಿಕೊಳ್ಳಲು ಆರು ದಿನಗಳ ಹಿಂದೆ ಇರಾಕ್ ಸರಕಾರ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ಫಲುಜಾ ನಗರವನ್ನು ಇರಾಕ್ ಪಡೆಗಳು ಸುತ್ತುವರಿದಿದ್ದು ಮೊದಲ ಹಂತದ […]

  May 29, 2016
  ...

  ವಾಟ್ಸಾಪು, ಆಂಧ್ರದ ಪೇ ಸ್ಲಿಪ್ಪು; ಪೊಲೀಸ್ ಪ್ರತಿಭಟನೆಯಲ್ಲಿ ಸಂವಹನ ಮಾಧ್ಯಮದ ತಾರೀಫು!

  ಮೇ ತಿಂಗಳ ಮೊದಲ ವಾರ…  ಮುಖ್ಯವಾಹಿನಿ ಮಾಧ್ಯಮಗಳ ಫೇಸ್ ಬುಕ್ ಖಾತೆಗಳಿಗೆ ‘ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ’ದ ಲೆಟರ್ ಹೆಡ್ನಲ್ಲಿ 2 ಪುಟಗಳ ಮನವಿ ಪತ್ರವೊಂದನ್ನು ಮೆಸೇಜ್ ರೂಪದಲ್ಲಿ ಕಳುಹಿಸಲಾಗಿತ್ತು. ದಿನ ನಿತ್ಯ ಬರುವ ಅಂತಹ ನೂರಾರು ಸಂಘ- ಸಂಸ್ಥೆಗಳ ಪತ್ರದಂತೆಯೇ ಇದ್ದ ಅದನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಜತೆಗೆ, ಜೂನ್ 4ನೇ ತಾರೀಖು ಕರ್ನಾಟಕದ ಪೊಲೀಸರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಅದರಲ್ಲಿದ್ದ ಒಕ್ಕಣೆಯನ್ನು ಅಷ್ಟು ಸುಲಭದಲ್ಲಿ ಪತ್ರಕರ್ತರು ನಂಬಿದಂತೆ ಕಂಡಿರಲಿಲ್ಲ. ಈ ಘಟನೆ ನಡೆದು ಮೂರು ವಾರಗಳ ನಂತರ, […]

  May 29, 2016
  ...

  ‘ಶಿಸ್ತಿನ ಇಲಾಖೆಯಲ್ಲಿ ಅಶಿಸ್ತಿಗೆ ಜಾಗ ಇಲ್ಲ; ಜೂ.4ರ ಪ್ರತಿಭಟನೆ ನಡೆಯುವುದಿಲ್ಲ’: ಜಿ. ಪರಮೇಶ್ವರ್

  ದುರ್ನಡತೆ, ಭ್ರಷ್ಟಚಾರ ಇನ್ನಿತರೆ ಕಾರಣಗಳಿಂದ ಸೇವೆಯಿಂದ ಅಮಾನತ್ತಾಗಿರುವವರು ಕೆಳ ಹಂತದ ಸಿಬ್ಬಂದಿಯನ್ನು ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನಡೆಸುತ್ತಿದ್ದಾರೆ. ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು… ಹೀಗೊಂದು ಹೇಳಿಕೆ ನೀಡಿದವರು ಗೃಹ ಸಚಿವ ಜಿ. ಪರಮೇಶ್ವರ್. ಜೂನ್ 4ರಂದು ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸುವ ವಿಚಾರ ಮುನ್ನೆಲೆಗೆ ಬಂದ ನಂತರ ಮೊದಲ ಬಾರಿಗೆ ಹಿರಿಯ ಅಧಿಕಾರಿಗಳ ಜತೆ ಅವರು ಶನಿವಾರ ಸಭೆ ನಡೆಸಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿ, “ಶಿಸ್ತಿಗೆ ಹೆಸರಾದ […]

  May 29, 2016
  ...

  ‘ಮೋದಿ ಸವೆಸಿದ ಹಾದಿ’-5: ಹರೇನ್ ಪಾಂಡ್ಯ ಹತ್ಯೆ ನೆನಪಿನಲ್ಲಿ ಗುಜರಾತಿನ ಗದ್ದುಗೆ ಕತೆಗೆ ಉಪಸಂಹಾರ!

  ‘ಮೋದಿ ಸವೆಸಿದ ಹಾದಿ’ಯ ಕೊನೆಯ ಭಾಗಕ್ಕೆ ಬಂದು ನಿಂತಿದ್ದೇವೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ಮೋದಿ, ಆರ್ ಎಸ್ಎಸ್ ಸಂಘಟನೆ ಮೂಲಕ ವಿಚಾರಗಳನ್ನು ಬೆಳೆಸಿಕೊಂಡು, ಉತ್ತಮ ಸಂಘಟಕ ಎನ್ನಿಸಿಕೊಂಡು, ನಂತರ ಬಿಜೆಪಿ ಪ್ರವೇಶಿಸಿ, ಪಕ್ಷದ ಹುದ್ದೆಗಳಲ್ಲಿ ಹಂತಹಂತವಾಗಿ ಏರುವ ಮೂಲಕ ಗುಜರಾತ್ ಮುಖ್ಯಮಂತ್ರಿಯಾಗಿ, ನಂತರ ದೇಶದ ಪ್ರಧಾನಿಯಾಗಿ ಎರಡು ವರ್ಷಗಳ ಆಡಳಿತವನ್ನು ಪೂರೈಸಿದ್ದಾರೆ. ಇದು ವ್ಯಕ್ತಿಯೊಬ್ಬನ ಬದುಕಿನಲ್ಲಿ ಸುದೀರ್ಘ ಪ್ರಯಾಣದ ಹಾದಿ. ಅವೆಲ್ಲವನ್ನೂ ಸಮಗ್ರವಾಗಿ ಐದು ಸಂಚಿಕೆಗಳ ಮಿತಿಯಲ್ಲಿ ನಿರೂಪಿಸುವುದು ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ‘ಸಮಾಚಾರ’ […]

  May 29, 2016

Top