An unconventional News Portal.

    ...
    atta-pathanjali-ramdev
    ಸುದ್ದಿ ಸಾರ

    ಪತಂಜಲಿ ನೂಡಲ್ಸ್ ಕೂಡ ಬಲು ಡೇಂಜರ್ ಅಂತೆ: ಎಫ್‍ಎಸ್‍ಡಿಎ ವರದಿ

    ಯೋಗ ಗುರು ಬಾಬರಾಮ್ದೇವ್ ಒಡೆತನದ ಪತಾಂಜಲಿ ಅಟಾ ನ್ಯೂಡೆಲ್ಸ್ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಚಾರ ಬಹಿರಂಗವಾಗಿದೆ. ನೆಸ್ಲೆ ಕಂಪನಿಯ ‘ಮ್ಯಾಗಿ’ ಆರೋಗ್ಯ ಹಾನಿಕರ ಎಂಬ ಹಿನ್ನೆಲೆಯಲ್ಲಿ ದೇಶಾದ್ಯಂತ ಇದರ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಇದೀಗ, ಬಾಬಾರಾಮ್‍ದೇವ್ ಒಡೆತನದ ಪತಂಜಲಿ ನ್ಯೂಡೆಲ್ಸ್‍ನಲ್ಲಿ ಮಿಶ್ರಣ ಮಾಡಿರುವ ಬೂದಿ ಹಾಗೂ ಟೇಸ್ಟ್ ಮೇಕರ್(ರುಚಿ ವರ್ಧಕ) ‘ಮ್ಯಾಗಿ ನೂಡ್ಯೆಲ್ಸ್‍’ಗಿಂತಲೂ ಹಾನಿಕಾರಕ ಎಂದು ಉತ್ತರಪ್ರದೇಶದ ಆರೋಗ್ಯ ಸುರಕ್ಷತೆ ಮತ್ತು ಔಷಧ ನಿಯಂತ್ರಣಾಧಿಕಾರ(ಎಫ್‍ಎಸ್‍ಡಿಎ) ಸಂಸ್ಥೆ ಹೇಳಿದೆ. ಪತಾಂಜಲಿ ನ್ಯೂಡೆಲ್ಸ್ ಸೇವನೆಯಿಂದ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ…

    April 3, 2016
    ...
    cm-siddaramayya-video-conference
    ಸುದ್ದಿ ಸಾರ

    ರಜೆ ದಿನ ಸಿಎಂ ವಿಡಿಯೋ ಕಾನ್ಫರೆನ್ಸ್; ಬರ ಕಾಮಗಾರಿ ಲೋಪದ ಹೊಣೆ ಡಿಸಿಗಳಿಗೆ ವರ್ಗಾವಣೆ

    ಬರ ಪರಿಹಾರ ಕಾಮಗಾರಿಯಲ್ಲಿ ಲೋಪವಾದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಸರಕಾರಿ ರಜೆ ದಿನ ಭಾನುವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಜತೆ ವಿಡಿಯೋ ಸಂವಾದ ನಡೆಸಿದ ಸಿಎಂ, ಬರ ಪರಿಹಾರ ಕಾಮಗಾರಿಗೆ ಹಣದ ಕೊರತೆ ಇಲ್ಲ. ಸಮರೋಪಾದಿಯಲ್ಲಿ ಕೆಲಸ, ಕಾರ್ಯಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದರು. ಜಿಲ್ಲಾಧಿಕಾರಿಗಳು, ಸಿಇಒಗಳು, ಕಂದಾಯ, ಆರೋಗ್ಯ ಮತ್ತಿತರ ಇಲಾಖೆ ಅಧಿಕಾರಿಗಳು ಪ್ರತಿ ದಿನ ಕುಡಿಯುವ ನೀರು, ಗೋವುಗಳಿಗೆ ಮೇವು..

    April 3, 2016
    ...
    sigaranahalli-hasana-thehindu-revanna
    ಸುದ್ದಿ ಸಾರ

    ‘ದಿ ಹಿಂದೂ’ ಪತ್ರಿಕೆಯ ಸಂಪಾದಕರಿಗೆ ದೇವೇಗೌಡರ ಪುತ್ರ ಪತ್ರ ಬರೀತಾರಂತೆ!

    ಹಾಸನ ಜಿಲ್ಲೆಯ ಸಿಗರನಹಳ್ಳಿ ಪ್ರಕರಣದ ಹಿನ್ನೆಲೆಯಲ್ಲಿ ಭಾನುವಾರ ಹಾಸನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಶಾಸಕ ರೇವಣ್ಣ ‘ದಿ ಹಿಂದೂ’ ಪತ್ರಿಕೆ ವಿರುದ್ಧ ತಮ್ಮ ಕೋಪತಾಪವನ್ನು ಹೊರಹಾಕಿದ್ದಾರೆ. ಜೆಡಿಎಸ್ ರಾಷ್ಟ್ರಾದ್ಯಕ್ಷ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಹುಟ್ಟೂರು ಹರದನಹಳ್ಳಿಯಿಂದ ಕೇವಲ 2. ಕಿ.ಮೀ ಅಂತರದಲ್ಲಿರುವ ಸಿಗರನಹಳ್ಳಿ ಗ್ರಾಮ, ಮೇಲ್ವರ್ಗದ ಒಕ್ಕಲಿಗರು ಹಾಗೂ ದಲಿತರ ನಡುವಿನ ಗಲಾಟೆಯಿಂದ ಕೆಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿ ಕೇಂದ್ರದಲ್ಲಿದೆ. ಗ್ರಾಮದ ಬಸವೇಶ್ವರ ದೇವರ ಜಾತ್ರಿ ವಿಚಾರದಲ್ಲಿ ಏ. 1ರಂದು ಗ್ರಾಮದ ಮೇಲ್ವರ್ಗದ ಜನ ಇಬ್ಬರು ಪತ್ರಕರ್ತರು ಸೇರಿದಂತೆ ಅಧಿಕಾರಿಗಳ..

    April 3, 2016
    ...
    yemen-priest-fr-tom.jpg.image.784.410
    ಸುದ್ದಿ ಸಾರ

    ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಾದ್ರಿ ಶೀಘ್ರ ಬಿಡುಗಡೆ; ಕರ್ನಾಟಕದಲ್ಲೂ ಸೇವೆ ಸಲ್ಲಿಸಿದ್ದ ಫಾದರ್

    ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಕರ್ನಾಟಕದಲ್ಲೂ ಕಾರ್ಯ ನಿರ್ವಹಿಸಿದ್ದ ಕೇರಳ ಮೂಲದ ಪಾದ್ರಿ ಫಾದರ್ ಟಾಮ್ ಉಳುನ್ನಲಿಲ್ ಶೀಘ್ರ ಬಿಡುಗಡೆಯಾಗುವ ಭರವಸೆ ದೊರೆತಿದೆ. ಹೀಗಂಥ ಕ್ಯಾಥೋಲಿಕ್ ಸಂಘಟನೆ, ವಿದೇಶಾಂಗ ಸಚಿವರ ಮಾತುಗಳನ್ನು ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಇವರು ಕಳೆದ ತಿಂಗಳು ಯೆಮೆನ್ನಲ್ಲಿ ಬಂಧೂಕುದಾರಿಗಳಿಂದ ಅಪಹರಣಕ್ಕೆ ಒಳಗಾಗಿದ್ದರು. ಆದರೆ ಇದರ ಹೊಣೆಯನ್ನು ಯಾರೂ ಹೊತ್ತುಕೊಂಡಿರಲಿಲ್ಲ. ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ಕಳೆದ ತಿಂಗಳು ದಕ್ಷಿಣ ಯೆಮೆನ್ನಿನ ಅಡೆನ್ ಪಟ್ಟದಿಂದ ಬಂಧೂಕುದಾರಿಗಳು ಅಪಹರಿಸಿದ್ದರು. ಉಳುನ್ನಲಿಲ್ ಕಾರ್ಯ್ ನಿರ್ವಹಿಸುತ್ತಿದ್ದ ವೃದ್ಧಾಶ್ರಮದ ಮೇಲೆ ದಾಳಿ ನಡೆಸಿದ ಬಂಧೂಕುದಾರಿಗಳು..

    April 3, 2016
    ...
    Untitled-1
    ವಿಚಾರ

    ಇ. ರಾಘವನ್ ನೆನಪಿಸಿಕೊಳ್ಳುತ್ತಿರುವ ಈ ವೇಳೆಯಲ್ಲಿ- Welcome to ‘ಸಮಾಚಾರ’

    ‘ಪತ್ರಿಕೋದ್ಯಮ ನಿಂತ ನೀರಲ್ಲ. ಆದರೆ ಪತ್ರಕರ್ತರು ಕಾಲಕ್ಕಿಂತ ಮುಂದೆಯೂ ಇರಬಾರದು, ಕಾಲದಿಂದ ಹಿಂದೆಯೂ ಉಳಿಯಬಾರದು. ಕಾಲದ ಜತೆಗೆ ನಡೆದುಕೊಂಡು ಹೋಗಬೇಕು’ ಎನ್ನುತ್ತಿದ್ದವರು ಇ. ರಾಘವನ್. ಆಗ ಅವರಿಗೆ 62 ವರ್ಷ ವಯಸ್ಸಾಗಿತ್ತು. ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದವರು. ಅವರ ಕೊನೆಯ ದಿನಗಳಲ್ಲಿ ಕನ್ನಡದ ದಿನ ಪತ್ರಿಕೆ, ‘ವಿಜಯ ಕರ್ನಾಟಕ’ದ ಸಂಪಾದಕರಾಗಿದ್ದರು. ಬಹುಶಃ ಕನ್ನಡ ಪತ್ರಿಕೋದ್ಯಮಕ್ಕೆ ಸಿಕ್ಕ ಅಪರೂಪದ ಸಂಪಾದಕ ಅವರು. ತಮ್ಮ ವೃತ್ತಿಬದುಕಿನ ಕೊನೆಯ ದಿನದವರೆಗೂ ಅವರು ಪತ್ರಕರ್ತರಾಗಿಯೇ ಉಳಿದುಕೊಂಡರು. ಭ್ರಷ್ಟರಾಗಲಿಲ್ಲ; ರಾಜಕೀಯ..

    April 2, 2016
    ...
    Rajdeep
    ಮೀಡಿಯಾ 2.0

    ಪೊಲೀಸ್ ಠಾಣೆ ಮೆಟ್ಟಿಲೇರಿದ ರಾಷ್ಟ್ರೀಯ ಪತ್ರಕರ್ತರ ‘ಸಾಮಾಜಿಕ ಅವಹೇಳನ’

    ಹಿರಿಯ ಪತ್ರಕರ್ತ, ಇಂಡಿಯಾ ಟುಡೇ ಗ್ರೂಪ್ ಸಂಪಾದಕೀಯ ಸಲಹೆಗಾರ ರಾಜ್ ದೀಪ್ ಸರ್ದೇಸಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಮೊಬೈಲ್ ನಂಬರನ್ನು ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಲಾಗಿದೆ ಎಂದು  ಚಂದನ್ ಪಟಿಹಾಸ್ಟ್ ಎಂಬಾತನ ವಿರುದ್ಧ ಪೊಲೀಸ್ ಗೆ ದೂರು ನೀಡಿದ್ದಾರೆ. ಈತ ಹಿಂದೂ ಪರ ಸಂಘಟನೆ ಸದಸ್ಯನಾಗಿದ್ದು, ಎಎಪಿಯ ಹೆಸರಿನಲ್ಲಿ ಪೇಸ್ ಬುಕ್ ಅಕೌಂಟ್ ಹೊಂದಿದ್ದ ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ. ಅದು ಮಾರ್ಚ್ 23 ರಾತ್ರಿ. ದೆಹಲಿಯಲ್ಲಿ ದಂತವೈದ್ಯ ಡಾ ಪಂಕಜ್ ನಾರಂಗ್ ರನ್ನು ಮನೆಯಿಂದ ಹೊರಗೆಳೆದ ಗುಂಪೊಂದು,..

    April 2, 2016
    ...
    Bike case  2
    ರಾಜ್ಯ

    ಪೊಲೀಸರ ಪ್ರತಿಷ್ಠೆಗೆ ಬೇಸತ್ತು ‘ಬೈಕ್ ದೇಣಿಗೆ’ ಕೊಡಲು ಮುಂದಾದ ಕಾಲೇಜು ವಿದ್ಯಾರ್ಥಿ!

    ಅಣ್ಣ ಮಾಡಿದ ತಪ್ಪಿಗೆ ತಮ್ಮನೊಬ್ಬ ಪೊಲೀಸ್ ಠಾಣೆ ಕಟ್ಟೆ ಕಾದು ಕಾದು ಸಾಕಾಗಿ, ಕೊನೆಗೆ ಬೈಕನ್ನು ‘ನೀವೇ ಇಟ್ಟಿಕೊಳ್ಳಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಎಸ್ಎಂಎಸ್ ಕಳಿಸಿದ ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ತೀರ್ಥಹಳ್ಳಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಕ್ಷೇತ್ರ. ತೀರ್ಥಹಳ್ಳಿಯಿಂದ ಕುಪ್ಪಳ್ಳಿ ಮಾರ್ಗದಲ್ಲಿ ಸಿಗುವ ದೇವಂಗಿ ಸಮೀಪದ ಹಳ್ಳಿಯ ಶಶಾಂಕ್ ಎಂಬಾತ ಈ ಕತೆಯ ಕೇಂದ್ರಬಿಂದು. ಈತನ ಸಹೋದರ ಅಭಿಷೇಕ್ ಭಾರತೀಯ ಸೇನೆಯಲ್ಲಿ ಯೋಧ…

    April 2, 2016
    ...
    cm siddaramayya-acb-bangalore
    ಸುದ್ದಿ ಸಾರ

    ‘ಭ್ರಷ್ಟಾಚಾರ ನಿಗ್ರಹ ದಳ’ಕ್ಕೆ ಬೋಣಿಗೆ ಮಾಡಿದ ಸಿಎಂ ವಾಚ್ ಪ್ರಕರಣ!

    ಹಠಕ್ಕೆ ಬಿದ್ದವರಂತೆ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ರಚಿಸಿದ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಮೊದಲ ಪ್ರಕರಣ ದಾಖಲಾದ ಅಚ್ಚರಿಯ ಬೆಳವಣಿಗೆ ಶನಿವಾರ ನಡೆದಿದೆ. ವಕೀಲ ನಟರಾಜ್ ಶರ್ಮಾ ಎಂಬುವವರು ನೂತನವಾಗಿ ರಚನೆಗೊಂಡ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಸಿಎಂ ವಿವಾದಿತ ವಾಚಿನ ಕುರಿತು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವಂತೆ ಎಸಿಬಿಯ ಬೆಂಗಳೂರು ವಿಭಾಗದ ಎಸಿಪಿ ಅಬ್ದುಲ್ ಖಾದರ್ ಅವರಿಗೆ ದೂರನ್ನು ವರ್ಗಾಯಿಸಿದ್ದಾರೆ. “ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ 70 ಲಕ್ಷ ರೂ. ಮೌಲ್ಯದ ಹ್ಯೂಬ್ಲೋಟ್..

    April 2, 2016
    ...
    tumkur- 2
    ರಾಜ್ಯ

    ಕನ್ನಯ್ಯ ಪರ ಕರಪತ್ರ ಹಂಚಿದ್ದಕ್ಕೆ ಕರ್ನಾಟಕ ಪೊಲೀಸರಿಂದ ‘ರಾಜದ್ರೋಹ’ದ ಪ್ರಕರಣ ದಾಖಲು

    ‘ಆಝಾದಿ’ ಘೋಷಣೆ ಕೂಗಿದ್ದಕ್ಕೆ ಅಲ್ಲಿ ದಿಲ್ಲಿಯಲ್ಲಿ ವಿದ್ಯಾರ್ಥಿ ಕನ್ನಯ್ಯ ವಿರುದ್ಧ ‘ರಾಜದ್ರೋಹ’ ದಾಖಲಿಸಿದ ವಿವಾದಿತ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಕೇಸೊಂದನ್ನು ಗೃಹಸಚಿವ ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ದಾಖಲಿಸಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ವಿದ್ಯೋದಯ ಕಾನೂನು ಶಾಲೆಯ ವಿದ್ಯಾರ್ಥಿನಿ ಜ್ಯೋತಿ ಹಾಗೂ ಸಾಮಾಜಿಕ ಕಾರ್ಯಕರ್ತ ಚಿನ್ನಪ್ಪ ‘ರಾಜ ದ್ರೋಹ’ ಆರೋಪಕ್ಕೆ ಗುರಿಯಾದವರು. ಇವರ ವಿರುದ್ಧ ಮಾ. 31ರಂದು ಮಧ್ಯಾಹ್ನ 12 ಗಂಟೆಗೆ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ಎಂಬ ಶಿಕ್ಷಕರು ದೂರು ದಾಖಲಿಸಿದ್ದರು. ‘ಮಾ. 30ರಂದು..

    April 2, 2016
    ...
    ಕುಪ್ಪಳ್ಳಿಯ 'ಕವಿಮನೆ'. (ಚಿತ್ರ: kishusworld.blogspot.com)
    INVESTIGATION

    ‘ಕವಿಮನೆ ಕಳ್ಳತನ ಪ್ರಕರಣ’: ಆತುರಕ್ಕೆ ಬಿದ್ದ ಶಿವಮೊಗ್ಗ ಪೊಲೀಸರು ತನಿಖೆಯನ್ನು ಹಳ್ಳ ಹಿಡಿಸಿದರಾ?

    ರಾಷ್ಟ್ರಕವಿ ಕುವೆಂಪು ಅವರ ‘ಕವಿ ಮನೆ’ ಕಳ್ಳತನ ಪ್ರಕರಣದಲ್ಲಿ ಆತುರಕ್ಕೆ ಬಿದ್ದ ಪೊಲೀಸರು ತನಿಖೆಯನ್ನು ಅರ್ಧದಲ್ಲಿಯೇ ಹಾದಿ ತಪ್ಪಿಸಿದರಾ? ಹೀಗೊಂದು ಅನುಮಾನ ಈಗ ವ್ಯಕ್ತವಾಗುತ್ತಿವೆ. ಕಳೆದ ನವೆಂಬರ್ 23ನೇ ತಾರೀಖು ರಾತ್ರಿ ವೇಳೆ ಕುಪ್ಪಳ್ಳಿಯ ಮನೆಯಲ್ಲಿ ಕಳ್ಳತನವಾಗಿತ್ತು. ಕುವೆಂಪು ಅವರಿಗೆ ಬಂದಿದ್ದ ಪದ್ಮಭೂಷಣ ಸೇರಿದಂತೆ ನಾಲ್ಕು ಪದಕಗಳನ್ನು ಕದ್ದೊಯ್ಯಲಾಗಿತ್ತು.  ಜತೆಗೆ, ‘ಕವಿಮನೆ’ಯಲ್ಲಿದ್ದ ಹಣ ಪೆಟ್ಟಿಗೆ ಹಾಗೂ ಗಾಜುಗಳನ್ನು ಒಡೆಯಲಾಗಿತ್ತು. ಮಾರನೇ ದಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಅಷ್ಟೇ ವೇಗವಾಗಿ ಕಾರ್ಯಚರಣೆಗೆ ಇಳಿದ ಶಿವಮೊಗ್ಗ ಪೊಲೀಸರು..

    April 2, 2016

Top