An unconventional News Portal.

    ...
    BTV-priyakrishna-mix
    ಟಿವಿ

    BTV ವಿರುದ್ಧ ಮಾನನಷ್ಟ ಪ್ರಕರಣ: ನಡೆದರೆ ಸಂಧಾನ; ಮಿಸ್ಸಾದ್ರೆ ಕದನ!

    ಬಿಟಿವಿ ಸುದ್ದಿ ವಾಹಿನಿಯ ಮೇಲೆ ಶಾಸಕ ಪ್ರಿಯಾಕೃಷ್ಣ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಏ. 30ರಂದು (ಇಂದು) ನಿರ್ಣಾಯಕ ತಿರುವು ತೆಗೆದುಕೊಳ್ಳಲಿದೆ. ಕನ್ನಡ ಪತ್ರಿಕೋದ್ಯಮದ ಅಪರೂಪದ ಮಾನನಷ್ಟ ಪ್ರಕರಣವಿದು. ನ್ಯೂಸ್ ಚಾನಲ್ ಒಂದು ಭಿತ್ತರಿಸಿದ ಸುದ್ದಿಯಿಂದ ಮಾನಹಾನಿಗೆ ಒಳಗಾಗಿದ್ದೇನೆ ಎಂದು ಆರೋಪಿಸಿ ಶಾಸಕರೊಬ್ಬರು ಬರೋಬ್ಬರಿ 100 ಕೋಟಿ ರೂಪಾಯಿ ಪರಿಹಾರವನ್ನು ಕೇಳಿದ್ದಾರೆ. ಇದರ ನ್ಯಾಯಾಲಯದ ಶುಲ್ಕ ಸುಮಾರು 52 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಾವತಿಸಿದ್ದಾರೆ. ಹೀಗಾಗಿ, ಮಾಧ್ಯಮಗಳ ಮೇಲೆ ಹೂಡುವ ಇತರೆ ಮಾನಹಾನಿ ಪ್ರಕರಣಗಳಿಗಿಂತ ಇದು ಗಂಭೀರವಾಗಿದ್ದು..

    April 29, 2016
    ...
    income-tax-documents
    ದೇಶ

    ಐಟಿ ಇಲಾಖೆ ಮಾಹಿತಿ ಬಹಿರಂಗ: ನಮ್ಮಿಂದ ಸಂಗ್ರಹಿಸಿದ್ದೇ 60 ಸಾವಿರ ಕೋಟಿ!

    ಮಹತ್ವದ ಬೆಳವಣಿಗೆಯಲ್ಲಿ ಶುಕ್ರವಾರ ಸಂಜೆ ವೇಳೆಗೆ ಆದಾಯ ತೆರಿಗೆ ಇಲಾಖೆ 16 ವರ್ಷಗಳ ಮಾಹಿತಿಯನ್ನು ಸಾರ್ವಜನಿಕಗೊಳಿಸಿದೆ. ವೈಯುಕ್ತಿಕ ಆದಾಯ ತೆರಿಗೆ ಕಟ್ಟಿದ ವಿವರಗಳೂ ಸೇರಿದಂತೆ, ನಾನಾ ಸರಕಾರಗಳು ಸಂಗ್ರಹಿಸಿದ ತೆರಿಗೆ ಮೊತ್ತದ ಮಾಹಿತಿಯನ್ನು ವರ್ಷವಾರು ಲೆಕ್ಕದಲ್ಲಿ ದಾಖಲೆಗಳು ಒಳಗೊಂಡಿವೆ. ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆಯ ಮಾಹಿತಿ ಹೀಗೆ ಸ್ವ ಇಚ್ಚೆಯಿಂದ ಬಹಿರಂಗವಾಗುತ್ತಿದೆ. ಒಟ್ಟು 84 ಪುಟಗಳ ದಾಖಲೆಯನ್ನು ಮೂರು ಪ್ರತ್ಯೇಕ ವಿಭಾಗಗಳ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆ ತನ್ನ..

    April 29, 2016
    ...
    ramachandrapura-matt-hosanagara
    ರಾಜ್ಯ

    ರಾಮಚಂದ್ರಪುರ ಮಠದ ನಿಯಂತ್ರಣಕ್ಕೆ ಅರ್ಜಿ: ಬೇಸಿಗೆ ರಜೆಯ ನಂತರ ವಿಚಾರಣೆ ಶುರು

    ರಾಮಚಂದ್ರಾಪುರ ಮಠದ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದೇ ವಿಚಾರಣೆ ನಡೆಸುವಂತೆ ರಾಘವೇಶ್ವರ ಸ್ವಾಮಿ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ. ಹೊಸನಗರದಲ್ಲಿರುವ ರಾಮಚಂದ್ರಪುರ ಮಠವನ್ನು ಸರಕಾರದ ಸುಪರ್ದಿಗೆ ತರುವಂತೆ ಕೋರಿ ಪಿಐಎಲ್ ಸಲ್ಲಿಸಲಾಗಿತ್ತು. ಇದನ್ನು ತ್ವರಿತವಾಗಿ, ಇಂದೇ ವಿಚಾರಣೆ ನಡೆಸಬೇಕು ಎಂದು ಮಠದ ಪರವಾಗಿ ವಕೀಲರು ನ್ಯಾಯಾಲಯಕ್ಕೆ ಕೋರಿಗೆ ಸಲ್ಲಿಸಿದ್ದರು. ರಾಘವೇಶ್ವರ ಸ್ವಾಮಿ ಮೇಲೆ ಎರಡು ಅತ್ಯಾಚಾರ ಆರೋಪ ಇರುವುದರಿಂದ, ಮಠದ ಆವರಣ ಪ್ರವೇಶಕ್ಕೆ ನಿಷೇಧ ಹೇರುವಂತೆಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಗುರುವಾರದ ವಿಚಾರಣೆಯ ವೇಳೆ..

    April 29, 2016
    ...
    adarsha-housing-society-scam
    ದೇಶ

    ಆದರ್ಶ ಹೌಸಿಂಗ್ ಸೊಸೈಟಿ ಹಗರಣ: ಕಟ್ಟಡ ನೆಲಸಮಕ್ಕೆ ನ್ಯಾಯಾಲಯ ಸೂಚನೆ

    ‘ಆದರ್ಶ ಹೌಸಿಂಗ್ ಸೊಸೈಟಿ ಹಗರಣ’ ಸಂಬಂಧಪಟ್ಟಂತೆ ಶುಕ್ರವಾರ ಮುಂಬೈ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಭಾರಿ ಸದ್ದು ಮಾಡಿದ್ದ ಹಗರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಆದರ್ಶ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸುವಂತೆ ಸೂಚನೆ ನೀಡಿದೆ. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾಗಿದ್ದ ಯೋಧರ ಕುಟುಂಬದವರಿಗೆ ನೀಡುವ ಸಲುವಾಗಿ ಮುಂಬೈನ ಕೊಲಾಬಾದಲ್ಲಿ ಆದರ್ಶ ಬಹುಮಹಡಿ ಕಟ್ಟಡವನ್ನು ಕಟ್ಟಲಾಗಿತ್ತು. ಇದು ಹಸಿರು ನೀತಿ ಮತ್ತಿತರ ಕಾನೂನುಗಳನ್ನು ಗಾಳಿಗೆ ತೂರಿ ನಿರ್ಮಾಣಗೊಂಡಿರುವ ಕಟ್ಟಡವಾಗಿರುವುದರಿಂದ ಇಡೀ ನಿರ್ಮಾಣವನ್ನೇ ನೆಲಸಮ ಮಾಡಿ ಎಂದು ನ್ಯಾಯಾಲಯ ಹೇಳಿದೆ. ಹಿನ್ನೆಲೆ: ರಕ್ಷಣಾ ಸಚಿವಾಲಯ..

    April 29, 2016
    ...
    neat-exam-supreme-order
    ದೇಶ

    ‘ನೀಟ್’ ಆಗಿ ಪರೀಕ್ಷೆ ನಡೆಸಿ: ಕೇಂದ್ರದ ಮನವಿ ತಳ್ಳಿಹಾಕಿದ ಸುಪ್ರಿಂ ಕೋರ್ಟ್

    ಎರಡು ಹಂತಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ನಡೆಸುವ ಆದೇಶದ ಮರು ಪರಿಶೀಲನೆಗೆ ಸಲ್ಲಿಸಿದ್ದ ಕೇಂದ್ರ ಸರಕಾರದ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಶುಕ್ರವಾರ ಸೂಚಿಸಿದೆ. ‘ನೀಟ್’ ಪರೀಕ್ಷೆಯನ್ನು ಒಂದೇ ಹಂತದಲ್ಲಿ ಜು.24ರಂದು ನಡೆಸಬೇಕೆಂಬ ಕೇಂದ್ರ ಸರಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಮಾತ್ರವಲ್ಲ, ಈ ಸಂಬಂಧ ತಾನಿನ್ನು ಯಾವುದೇ ಆದೇಶವನ್ನು ಹೊರಡಿಸುವುದಿಲ್ಲ ಎಂದು ಅದು ಕೇಂದ್ರ ಸರಕಾರಕ್ಕೆ ಸ್ಪಷ್ಟಪಡಿಸಿದೆ. ಎರಡು ಹಂತಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)..

    April 29, 2016
    ...
    arvind-kejriwal
    ಸುದ್ದಿ ಸಾರ

    ಸೋನಿಯಾ ಬಂಧಿಸಿ: ಬಿಜೆಪಿಗೆ ಕೇಜ್ರಿವಾಲ್ ಸವಾಲು

    ಆಗಸ್ಟಾ ವೆಸ್ಟ್‍ಲ್ಯಾಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಇತರ ನಾಯಕರನ್ನು ಬಂಧಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೌನ ಕಾಯ್ದುಕೊಂಡಿರುವುದನ್ನು ಪ್ರಶ್ನಿಸಿರುವ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ  ಕಾಂಗ್ರೆಸ್ ನಾಯಕರ ಕಚೇರಿ ಹಾಗೂ ಮನೆಗಳ ಮೇಲೆ ಯಾಕಿನ್ನೂ ದಾಳಿ ನಡೆಸಿಲ್ಲ ಎಂದು ಪ್ರಶ್ನಿಸಿದ್ದಾರೆ. ‘ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ನಾಯಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು..

    April 29, 2016
    ...
    bangalore-metro-3
    ರಾಜ್ಯ

    ಮೆಟ್ರೊ ತುಂಡು ಮಾರ್ಗ ಉದ್ಘಾಟನೆ: ಸಂಭ್ರಮ ಪಡಬೇಕೋ? ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕೋ?

    ಕೊನೆಗೂ, ಇತ್ತೀಚಿನ ಆಂತರಿಕ ಬಿಕ್ಕಟ್ಟುಗಳನ್ನು ದಾಟಿ ಬೆಂಗಳೂರು ಮೆಟ್ರೊ ನಿಗಮ ತನ್ನ ಮಾರ್ಗವೊಂದನ್ನು ಸಾರ್ವಜನಿಕ ಸಂಚಾರಕ್ಕೆ ಶುಕ್ರವಾರ ಅಣಿಗೊಳಿಸಿದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್ ಸಂಪರ್ಕಿಸುವ 18. 1 ಕಿ. ಮೀ ಮಾರ್ಗದಲ್ಲಿ ವಾಣಿಜ್ಯ ಸೇವೆ ಶನಿವಾರದಿಂದ ಆರಂಭವಾಗಲಿದೆ. ಈವರೆಗೆ ಬೈಯಪ್ಪನಗಳ್ಳಿಯಿಂದ ಎಂ. ಜಿ. ರಸ್ತೆವರೆಗೆ ಓಡಾಡುತ್ತಿದ್ದ ಮಾರ್ಗದ ವಿಸ್ತರಣೆ ಇದು ಅಷ್ಟೆ. ಇದಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಿಂದ ಮೆಜೆಸ್ಟಿಕ್ ನಿಲ್ದಾಣದವರೆಗಿನ ಸುರಂಗ ಮಾರ್ಗವೂ ಸೇರಿಕೊಂಡಿರುವುದು ಸಿಲಿಕಾನ್ ಸಿಟಿ ಪಾಲಿಗೆ ಹೊಸ ಅನುಭವವನ್ನು ನೀಡಲಿದೆ. ಆದರೆ, ಈ ಸಮಯದಲ್ಲಿ ಕೊನೆಗೂ ಮೆಟ್ರೊದ..

    April 29, 2016
    ...
    infi-narayana-murty-letter
    ದೇಶ

    ಇನ್ಫಿ ನಾರಾಯಣ ಮೂರ್ತಿ ಮಗಳಿಗೆ ಬರೆದ ಪತ್ರ: ಸರ್ವಂ ಸರಳಂ ಸುಂದರಂ!

    ಕನ್ನಡಕ್ಕೆ: ಶಿವಕುಮಾರ್ ಮಾವಲಿ ಡಿಯರ್ ಅಕ್ಷತಾ, ನಾನು ಅಪ್ಪನಾದ ದಿನದಿಂದ ನನ್ನಲ್ಲಿ ಎಂತಹ ಬದಲಾವಣೆಗಳಾದಾವು ಎಂಬುದನ್ನು ನಾನೂ ಆ ಹಿಂದೆ ಯೋಚಿಸಿರಲೂ ಇಲ್ಲ. ‘ಅಪ್ಪ’ ನಾದ ನಂತರ, ನಾನು ಮೊದಲಿನ ಜೀವನಕ್ಕೆ ಹಿಂತಿರುಗಿ ಹೋಗಲು ಸಾಧ್ಯವಾಗಲೇ ಇಲ್ಲ. ನನ್ನ ಜೀವನದಲ್ಲಿ ನಿನ್ನ ಆಗಮನ ಅನೂಹ್ಯವಾದ ಸಂತಸ ಮತ್ತು ಜವಾಬ್ದಾರಿಗಳೆರಡನ್ನೂ ಹೊತ್ತು ತಂದಿತ್ತು. ಆ ದಿನದಿಂದ ನಾನು ಕೇವಲ ಒಬ್ಬ ಪತಿಯಾಗಿರದೆ, ಮಗನಾಗಿರದೆ, ಅಥವಾ ಆಗ ತಾನೆ ಕ್ಟಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದ ಕಂಪನಿಯೊಂದರ ಪ್ರಮುಖ ಉದ್ಯೋಗಿಯಷ್ಟೇ ಆಗಿರದೆ, ಓರ್ವ ಮಗಳ ತಂದೆಯೂ..

    April 29, 2016

Top