An unconventional News Portal.

    ...
    2_man-went-on-a-six-year-60000km-bike-ride
    ಫೋಕಸ್

    ದೇಶ ಸುತ್ತಿ, ಕೋಶ ಬರೆಯಲು ಹೊರಟ ಈತ ಕಾಲಿಗೇ ಚಕ್ರ ಕಟ್ಟಿಕೊಂಡಿದ್ದ!

    ಮೈಕ್ ಬೋಲ್ಸ್ ನ ಈ ಸಾಹಸವನ್ನು ಹುಚ್ಚಾಟ ಅನ್ನಬೇಕೋ ಸಾಧನೆ ಅನ್ನಬೇಕೋ ತಿಳಿಯದು. ಯಾಕೆಂದರೆ ತನ್ನಷ್ಟಕ್ಕೆ ತಾನು ದುಡಿಯುತ್ತಾ ಬೇಕಾದಷ್ಟು ಹಣವನ್ನು ಸಂಪಾದಿಸ್ತಾ ಇದ್ದಾತನಿಗೆ ಇದ್ದಕ್ಕಿದ್ದಂತೆ ಇದೆಲ್ಲದರ ಮೇಲೆ ಬೇಸರವುಂಟಾಗಲು ಆರಂಭಿಸಿತು. ಸುಂದರವಾದ ಬದುಕನ್ನು ಕೇವಲ ಹಣವನ್ನು ಸಂಪಾದನೆ ಮಾಡೋದಿಕ್ಕಾಗಿ ಮಾತ್ರ ವ್ಯಯಿಸುತ್ತಿದ್ದೇನೆ ಎಂದು ಅನ್ನಿಸತೊಡಗಿತು. ಹೀಗೆ ಅನ್ನಿಸಲು ಆರಂಭಿಸಿದ್ದೇ ತಡ. ಬೋಲ್ಸ್ ತನ್ನ ಅಂತರಂಗಕ್ಕೆ ಮೋಸ ಮಾಡಲು ತಯಾರಿರಲಿಲ್ಲ. ತನ್ನ ಸೈಕಲ್ ಏರಿ ಪ್ರಯಾಣ ಆರಂಭಿಸಿದ. ಆತನ ಪ್ರಯಾಣ ಅಂದರೆ ಅಂತಿಂತದ್ದಲ್ಲ. ಅದು ಸೈಕಲ್ನಲ್ಲಿ ಪ್ರಪಂಚ..

    April 28, 2016
    ...
    hearst-final-1
    SPECIAL SERIES

    ಪತ್ರಿಕೋದ್ಯಮ ಸರಣಿ-5: ಕೊನೆಗೆ ಎಲ್ಲವನ್ನೂ ಬಿಟ್ಟು ಹೋದವನು ಉಳಿಸಿದ ಪಾಠಗಳು!

    ಐದು ದಿನಗಳ ಹಿಂದೆ, ‘ಸಮಾಚಾರ’ ಇದೊಂದು ಸರಣಿಯನ್ನು ಕೊಂಚ ಅಳುಕಿನಿಂದಲೇ ಶುರುಮಾಡಿತು ಎಂಬುದನ್ನು ಇಲ್ಲಿ ಒಪ್ಪಿಕೊಳ್ಳಬೇಕಿದೆ. ಮಾಧ್ಯಮ ಎಂಬುದು ಎಷ್ಟೇ ಕುತೂಹಲದ ಕ್ಷೇತ್ರವಾದರೂ, ಇತಿಹಾಸ ಎಲ್ಲರಿಗೂ ರುಚಿಸುತ್ತದೆ ಎಂಬುದಕ್ಕೆ ಪುರಾವೆಗಳಿಲ್ಲ. ಹೀಗಿರುವಾಗ, ಮಾಧ್ಯಮ ಕ್ಷೇತ್ರವನ್ನು 120 ವರ್ಷಗಳ ಹಿಂದಕ್ಕೆ ಹೋಗಿ, ಅಲ್ಲಿನ ಕತೆಗಳನ್ನು ಎತ್ತಿಕೊಂಡು ಬಂದರೆ ಓದುಗರು ಹೇಗೆ ಸ್ವೀಕರಿಸಬಹುದು ಎಂಬ ಸಣ್ಣ ಅಳುಕು ನಮ್ಮ ತಂಡದಲ್ಲಿತ್ತು. ಆದರೆ, ಮೊದಲ ನಾಲ್ಕು ಸರಣಿ ಲೇಖನಗಳಿಗೆ ನೀವು ತೋರಿಸಿದ ಪ್ರತಿಕ್ರಿಯೆ ನಮಗೆ ಕನ್ನಡದ ಆನ್ ಲೈನ್ ಓದುಗ ವಲಯ ವಿಸ್ತಾರಗೊಳ್ಳುತ್ತಿರುವ,..

    April 28, 2016
    ...
    cm-drought-tour-2
    ರಾಜ್ಯ

    ಬರ ಅಂದ್ರೆ ಎಲ್ಲರಿಗೂ ಇಷ್ಟ: ಸಿಎಂ ಬಂದ್ರೆ ಅಧಿಕಾರಿಗಳಿಗೆ ಕಷ್ಟ!

    ಎರಡನೇ ಸುತ್ತಿನ ಬರ ಪ್ರವಾಸವನ್ನು ಮುಗಿಸಿಕೊಂಡು  ಸಿಎಂ ಸಿದ್ದರಾಮಯ್ಯ ರಾಜಧಾನಿ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಆದರೆ ಬರ ಪ್ರವಾಸದ ಸಮಯದಲ್ಲಿ ಎಲ್ಲೆಲ್ಲಿ ಮುಖ್ಯಮಂತ್ರಿಯನ್ನು ಅಧಿಕಾರಿಗಳು ವ್ಯವಸ್ಥಿತವಾಗಿ ದಾರಿ ತಪ್ಪಿಸಿದ್ದಾರೆ ಎಂಬುದಕ್ಕೆ ಈಗ ಹೊರಬೀಳುತ್ತಿರುವ ಸ್ಥಳೀಯ ವರದಿಗಳು ಸಾಕ್ಷಿಯಾಗಿವೆ. ಕೆಲವು ಕಡೆಗಳಲ್ಲಿ ಗ್ರಾಮಸ್ಥರ ಶ್ರಮವನ್ನೇ, ಅಧಿಕಾರಿಗಳು ತಾವು ಮಾಡಿದ ಘನಕಾರ್ಯ ಎಂದು ಸಿಎಂ ಎದುರು ಬಿಂಬಿಸಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಸಿಎಂ ಭೇಟಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜಾನುವಾರುಗಳನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಜನರಿಗೆ ತಿಳಿಸಲಾಗಿದೆ. ಇದಲ್ಲಕ್ಕಿಂತ ವ್ಯಂಗ್ಯ ಏನೆಂದರೆ, ಕಾಮಗಾರಿ ಮುಗಿಯದ..

    April 28, 2016
    ...
    ಚಿತ್ರ ಕೃಪೆ: ಪ್ರಜಾವಾಣಿ
    ಸುದ್ದಿ ಸಾರ

    ಹಿರಿಯ ಸಂಪಾದಕ ಎಸ್ ವಿ ಜಯಶೀಲರಾವ್ ನಿಧನ

    ಚಿತ್ರಕೃಪೆ ಪ್ರಜಾವಾಣಿ ಕನ್ನಡದ ಅಪರೂಪದ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಹಲವು ಸಂಸ್ಥೆಗಳಲ್ಲಿ ಪತ್ರಕರ್ತರಾಗಿ, ಮಾಧ್ಯಮ ಸಲಹೆಗಾರರಾಗಿ, ಸಂಯುಕ್ತ ಕರ್ನಾಟಕದ ನಿವೃತ್ತ ಸಂಪಾದಕರಾಗಿದ್ದ ಮೃತರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ. ಜಯಶೀಲರಾವ್ ಕರ್ನಾಟಕದ ಹೊರಗೆಯೂ ಪರಿಚಿತರಾಗಿದ್ದ ಕೆಲವೇ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಸಂಪೆಮನೆ ಜಯಶೀಲರಾವ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ..

    April 28, 2016
    ...
    raghaveshwara-swamy
    ಸುದ್ದಿ ಸಾರ

    ರಾಘವೇಶ್ವರ ಸ್ವಾಮಿ ಅತ್ಯಾಚಾರ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ಸಿಐಡಿ

    ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ಗುರುವಾರ ಅಂಗೀಕರಿಸಿದೆ. ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾ. ಎ.ವಿ. ಚಂದ್ರಶೇಖರ ನೇತೃತ್ವದ ಏಕಸದಸ್ಯ ಪೀಠ, ರಾಘವೇಶ್ವರ ಸ್ವಾಮಿಗೆ ನೋಟಿಸ್ ಜಾರಿ ಮಾಡಿ ಬೇಸಿಗೆ ರಜೆಯ ನಂತರ ಅರ್ಜಿ ವಿಚಾರಣೆ ಮಾಡುವುದಾಗಿ ತಿಳಿಸಿದೆ. ಏನಿದು ಪ್ರಕರಣ? ತಮ್ಮ ತಾಯಿಯ ಮೇಲೆ ಶ್ರೀಗಳು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅಂಶುಮತಿ ಶಾಸ್ತ್ರಿ ಗಿರಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಐಡಿ ಪೊಲೀಸರು..

    April 28, 2016
    ...
    india-wed-1
    ರಾಜ್ಯ

    ಓದಿಗಾಗಿ ನಿಗದಿಯಾಗಿದ್ದ ಮದುವೆ ನಿರಾಕರಣೆ: ಹಾಸನ ಯುವತಿಯ ದಿಟ್ಟ ನಡೆ

    ಅರಕಲಗೂಡು ಜಯಕುಮಾರ್ ಮದುವೆ ಬಂಧನಕ್ಕೆ ಒಳಗಾಗಬೇಕಿದ್ದ ಯುವತಿ ಶಿಕ್ಷಣ ಮುಂದುವರಿಸುವ ಹಂಬಲದಿಂದ ನಿಗದಿಯಾಗಿದ್ದ ಮದುವೆಯನ್ನೇ ಮುರಿದುಕೊಂಡ ಘಟನೆ ಅರಕಲಗೂಡು ತಾಲೂಕಿನಲ್ಲಿ ಬುಧವಾರ ನಡೆದಿದೆ. ಏಪ್ರಿಲ್ 27ರಂದು ಹಸೆಮಣೆ ಏರಬೇಕಿದ್ದ ತಾಲೂಕಿನ ಮೇನಕ (ಹೆಸರು ಬದಲಿಸಿದೆ) ಮದುವೆಯನ್ನು ನಿರಾಕರಿಸಿದ ಯುವತಿ. ಅಧಿಕಾರಿಗಳ ಮಧ್ಯ ಪ್ರವೇಶಿಸುವಂತೆ ಯುವತಿ ಕೋರಿದ ಹಿನ್ನೆಲೆಯಲ್ಲಿ ಮದುವೆ ನಿಂತು ಹೋಗಿದೆ. ಕೊನೆಗೆ, ಪೋಷಕರನ್ನೂ ಕರೆಸಿ ಮಾತನಾಡಿದ ಅಧಿಕಾರಿಗಳು ಮಗಳನ್ನು ಅವರ ಬಳಿ ಕಳಿಸಿಕೊಟ್ಟಿದ್ದಾರೆ. ಪದವಿ ಓದಿಸುವ ಭರವಸೆ ಸಿಕ್ಕ ನಂತರ ಯುವತಿ ಮನೆಗೆ ಹಿಂತಿರುಗಿದ್ದಾಳೆ. ಘಟನೆ ವಿವರ:  ಮೈಸೂರು..

    April 28, 2016
    ...
    hdd-car-railway
    ರಾಜ್ಯ

    ಫ್ಲಾಟ್ಫಾರಂ ಏರಿದ್ದು ಗೌಡ್ರ ಕಾರು: ಇದು ‘ಮಾಹಿತಿ ಯುದ್ಧ’, ಸ್ವಲ್ಪ ಹುಷಾರು!

    ಆರು ವರ್ಷಗಳ ಹಿಂದಿನ ಫೊಟೋ ಒಂದನ್ನು ಈಗ ರಾಜಕೀಯ ಅಸ್ತ್ರವಾಗಿ ಬಳಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಿಎಸ್ವೈ ಅಭಿಮಾನಿಗಳು ಎಂದು ಹೇಳಿಕೊಂಡವರು ಅಪಸವ್ಯವೊಂದನ್ನು ಸೃಷ್ಟಿಸಿದ್ದಾರೆ. ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ ಮದ್ಯೆ, ರೈಲಿನ ಪಕ್ಕದವರೆಗೂ ಮಾಜಿ ಪ್ರಧಾನಿ ದೇವೇಗೌಡರ ಕಾರು ನಿಂತಿರುವ ಹಳೆಯ ಫೊಟೋವನ್ನು ತಿರುಚುವ ಮೂಲಕ ಸಾಮಾಜಿಕ ಜಾಲಗಳಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ‘ಮಾಹಿತಿ ಯುದ್ಧ’ಗಳ ಸ್ವರೂಪ ಹೇಗಿರಬಹುದು ಎಂಬುದಕ್ಕೆ ಮುನ್ಸೂಚನೆಯೊಂದನ್ನು ನೀಡಿದ್ದಾರೆ. ಏನಿದು ಘಟನೆ?: 2010ರ ಮಾರ್ಚ್ 7ರಂದು ಪತ್ರಕರ್ತ ಪ್ರಭುದೇವ್ ಶಾಸ್ತ್ರಿಮಠ ತಮಗೆ ಸಿಕ್ಕಿದ..

    April 28, 2016

Top