An unconventional News Portal.

    ...
    Agusta-Westland_1
    ದೇಶ

    ‘ಹೆಲಿಕ್ಯಾಪ್ಟರ್ ಹಗರಣ’: ಗಾಂಧಿ- ಮೋದಿ ಒಂದೇ ನಾಣ್ಯದ ಎರಡು ಮುಖಗಳು!

    ಗಣ್ಯರ ಓಡಾಟಕ್ಕೆ ಯುಪಿಎ ಸರಕಾರ ಖರೀದಿಸಲು ಹೊರಟಿದ್ದ ‘ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕ್ಯಾಪ್ಟರ್ ಹಗರಣ’ ಮಂಗಳವಾರ ಸಂಸತ್ ಅಧಿವೇಶನಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿತು. ಹಠಕ್ಕೆ ಬಿದ್ದವರಂತೆ, ಪ್ರತಿಪಕ್ಷದ ನಾಯಕರು “ದಾಖಲೆಗಳಿದ್ದರೆ ಒದಗಿಸಿ,” ಎಂದು ಸವಾಲು ಹಾಕಿದರು. ವಾಸ್ತವದಲ್ಲಿ ಸದರಿ ಹಗರಣದ ವಿಚಾರದಲ್ಲಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು; ಸತ್ಯವನ್ನು ಮರೆಯಲ್ಲಿಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನಷ್ಟೆ ಮಾಡುತ್ತಿವೆ ಎನ್ನುತ್ತವೆ ಅಂತರಾಳದ ಸತ್ಯಗಳು…

    April 27, 2016
    ...
    hearst-death-copy
    SPECIAL SERIES

    ಪತ್ರಿಕೋದ್ಯಮ ಸರಣಿ-4: ಏಳು ಬೀಳುಗಳನ್ನು ಕಂಡವನು ಸತ್ತಾಗಲೂ ಮೀಸೆ ಮಾತ್ರ ಮಣ್ಣಾಗಿರಲಿಲ್ಲ!

    (ಭಾಗ- 4) ಜೀವನದಲ್ಲಿ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ವಿಪರೀತ ಮಹತ್ವಾಕಾಂಕ್ಷಿಯಾಗಿದ್ದ. ಯಶಸ್ವಿ ಪತ್ರಿಕೆಗಳ ಮಾಲೀಕನ ಆಸಕ್ತಿಗಳು ಕ್ರಮೇಣ ರಾಜಕೀಯದ ಕಡೆಗೂ ವಾಲತೊಡಗಿದವು. ಎರಡು ಬಾರಿ ಅಲ್ಲಿನ ಸಂಸತ್ತಿಗೆ ಡೆಮಾಕ್ರಾಟಿಕ್ ಪಕ್ಷದಿಂದ ಸದಸ್ಯನಾಗಿ ಆಯ್ಕೆಯೂ ಆದ. ಆದರೆ ಸದಸ್ಯ ಮಾತ್ರ ಸಾಕಾಗಿರಲಿಲ್ಲ. ಅದಕ್ಕಿಂತ ಆಚೆಯೂ ಅಧಿಕಾರಕ್ಕಾಗಿ ಆತ ಹಂಬಲಿಸುತ್ತಿದ್ದ. ಕನಿಷ್ಟ ಪಕ್ಷ ನ್ಯೂಯಾರ್ಕ್ ಮೇಯರ್ ಆಗುವ ಕನಸು ಇಟ್ಟುಕೊಂಡಿದ್ದ. ಆದರೆ, ಎರಡೂ ಬಾರಿ ಮೇಯರ್ ಚುನಾವಣೆಯಲ್ಲಿ ಸೋತು ಹೋದ. ಕೊನೆಗೆ ಗವರ್ನರ್ ಆಗಲು ಹೊರಟ. ಆಗಲು ಸೋಲು ಆತನನ್ನು ಹಿಂಬಾಲಿಸಿತು. ಮುಂದೆ ನ್ಯೂಯಾರ್ಕ್..

    April 27, 2016
    ...
    indian-judiciary-symbol
    ರಾಜ್ಯ

    ವಕೀಲರಿಗೊಂದು ಪ್ರೇರಣೆಯ ಕತೆ: ಆರ್ಡರ್… ಆರ್ಡರ್… ನಾನೀಗ ಜಡ್ಜ್ ‘ಮೈ ಲಾರ್ಡ್’!

    ಹಿಂದೊಮ್ಮೆ ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಜಯಂತಿ ನಟರಾಜನ್, ಭಾರತದಲ್ಲಿ ಬಾಕಿ ಇರುವ ಕೇಸುಗಳ ಇತ್ಯರ್ಥವಾಗಲು 400 ವರ್ಷಗಳು ಬೇಕು ಎಂದಿದ್ದರು. ಮೊನ್ನೆ ಮೊನ್ನೆ ಸುಪ್ರಿಂ ಕೋರ್ಟ್ ಸಿಜೆಐ ಭಾವುಕರಾಗಿ ನ್ಯಾಯಾಂಗ ವ್ಯವಸ್ಥೆಯ ಒತ್ತಡಗಳನ್ನು ದೇಶದ ಮುಂದೆ ಇಟ್ಟಿದ್ದರು.  ಕರ್ನಾಟಕದಲ್ಲಿ ಇತ್ತೀಚೆಗೆ, ನ್ಯಾಯಾಧೀಶರ ನೇಮಕಾತಿ ನಡೆದಿದೆ. 10 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಲ್ಲಿ 142 ಜನರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಒಬ್ಬರು ‘ನಾನು ಹೇಗೆ ಜಡ್ಜ್ ಆದೆ?’ ಎಂಬುದನ್ನು ‘ಸಮಾಚಾರ’ ಓದುಗರಿಗಾಗಿ ನಿರೂಪಿಸಿದ್ದಾರೆ. ಔಪಚಾರಿಕ ಕಾರಣಗಳಿಗಾಗಿ ಅವರ ಹೆಸರನ್ನು..

    April 27, 2016
    ...
    bookbed-6
    ಸಮಾಚಾರ +

    ಪುಸ್ತಕ, ಓದು ಮತ್ತು ನಿದ್ದೆ: ಭಿನ್ನ ಆಲೋಚನೆಗಳಿಗೆ ಹೀಗೆಲ್ಲಾ ಹುಟ್ಟಿಕೊಳ್ಳುತ್ತವೆ!

    ಓದುವ ಹವ್ಯಾಸಕ್ಕೂ, ನಿದ್ದೆಗೂ ಅದೆಲ್ಲಿಂದ ಸಂಬಂಧವೊಂದು ಬೆಳೆದು ಬಂತೋ ಗೊತ್ತಿಲ್ಲ. ರಾತ್ರಿ ಮಲಗಿ ತಕ್ಷಣ ನಿದ್ದೆ ಬರುತ್ತಿಲ್ಲ ಎಂದರೆ, ಕೈಲೊಂದು ಪುಸ್ತಕ ಹಿಡಿದುಕೊಂಡು ಕೆಲ ಕಾಲ ಕಣ್ಣಾಡಿಸಿ. ತೂಕಡಿಕೆ ಬರುತ್ತೆ ಅನ್ನೋದನ್ನು ಮನಶಾಸ್ತ್ರಜ್ಞರೂ ಹೇಳುತ್ತಾರೆ. ಇದನ್ನು ಆಧಾರವಾಗಿಟ್ಟುಕೊಂಡೇ, ಜಪಾನ್ ದೇಶದ ಟೋಕಿಯೋದಲ್ಲಿ ಹೋಟೆಲ್ ಒಂದನ್ನು ವಿನ್ಯಾಸಗೊಳಿಸಲಾಗಿದೆ. ಇದು ಹೋಟೆಲ್ ಅನ್ನೋದಕ್ಕಿಂತ, ಮೇಲ್ನೋಟಕ್ಕೆ ಗ್ರಂಥಾಲಯದ ಹಾಗೆ ಕಾಣಿಸುತ್ತದೆ. ಸುಮಾರು 3000 ಜಪಾನಿ ಹಾಗೂ ಇಂಗ್ಲಿಷ್ ಪುಸ್ತಕಗಳನ್ನು ಇಲ್ಲಿ ನೀಟಾಗಿ ಜೋಡಿಸಿ ಇಡಲಾಗಿದೆ. ಇಲ್ಲಿಗೆ ಬರುವ ಗಿರಾಕಿಗಳಿಗೆ ಒಂದು ರಾತ್ರಿ ಕಳೆಯಲು ಜಪಾನಿ..

    April 27, 2016
    ...
    vidhansabha_uttarakhand
    ಸುದ್ದಿ ಸಾರ

    ಉತ್ತರಖಾಂಡ್ ಕಾಂಗ್ರೆಸ್ ಶಾಸಕರಿಂದ ‘ಕುದುರೆ ವ್ಯಾಪಾರ’ದ ಆರೋಪ

    ಉತ್ತರಾಖಾಂಡದಲ್ಲಿ ಹೇರಿರುವ ರಾಷ್ಟ್ರಪತಿ ಆಡಳಿತ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ತಮಗೆ ಬಿಜೆಪಿಯಿಂದ 50 ಕೋಟಿ ರೂ. ನೀಡುವ ಆಮಿಷವೊಡ್ಡಲಾಗಿದೆ ಎಂದು ಹೇಳಿರುವುದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಕಾಂಗ್ರೆಸ್ ಶಾಸಕರಾದ ರಾಜೇಂದ್ರ ಭಂಡಾರಿ ಮತ್ತು ಜೀತ್ ರಾಮ್ ಈ ಗಂಭೀರ ಆರೋಪ ಮಾಡಿದ್ದಾರೆ. “ನಮಗೆ 50 ಕೋಟಿ ರೂ. ಜೊತೆಗೆ ಮತ್ತಿತರ ಸೌಲಭ್ಯಗಳನ್ನು ಕೊಡುವ ಭರವಸೆಯನ್ನು ಬಿಜೆಪಿಯಿಂದ ನೀಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್, ಒಬ್ಬರಿಗೆ ರಾಜ್ಯಸಭಾ ಸ್ಥಾನ..

    April 27, 2016
    ...
    sonia-gandhi-1
    ದೇಶ

    ಮೂರನೇ ದಿನವೂ ಮುಂದೂಡಿದ ಕಲಾಪ: ಆರೋಪಕ್ಕೆ ತಿರುಗೇಟು ನೀಡಿದ ಸೋನಿಯಾ

    “ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ದ ಎರಡು ವರ್ಷ ಸುಮ್ಮನಿದ್ದ ಸರ್ಕಾರ ಈಗ ಏಕಾಏಕಿ ಆರೋಪ ಮಾಡಿದರೆ ನಾನು ಸುಮ್ಮನೆ ಕೈ ಕಟ್ಟಿ ಕೂರುವುದಿಲ್ಲ. ಸರ್ಕಾರ ಏನು ಬೇಕಾದರೂ ಮಾಡಲಿ, ಭ್ರಷ್ಟಾಚಾರ ಆರೋಪ ನನ್ನ ಮೇಲೆ ಬಂದರೆ ಹೋರಾಟಕ್ಕೆ ಸಿದ್ಧ…” ಗಣ್ಯ ವ್ಯಕ್ತಿಗಳ ಹಾರಾಟಕ್ಕಾಗಿ ಆಗಸ್ಟಾ ಹೆಲಿಕಾಪ್ಟರ್ ಖರೀದಿ ಅವ್ಯವಹಾರದಲ್ಲಿ ತಮ್ಮ ಹೆಸರು ಕೇಳಿ ಬಂದಿರುತ್ತಿದ್ದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ಅಧಿವೇಶನದಲ್ಲಿ ಗುಡುಗಿದ ರೀತಿ ಇದು. “ನಾನು ಯಾಕೆ ಹೆದರಬೇಕು? ನನ್ನ ವಿರುದ್ಧ..

    April 27, 2016
    ...
    hdd-smk-2
    ರಾಜ್ಯ

    ಅಧಿಕಾರ ಇದ್ದಾಗ ಜಿದ್ದಾಜಿದ್ದಿ; ಇಲ್ಲದಿರುವಾಗ ದೋಸ್ತಿ: ಒಕ್ಕಲಿಗರ ವೇದಿಕೆಯಲ್ಲಿ ದೇವೇಗೌಡ- ಕೃಷ್ಣ ಅರಳು ಮರಳು!

    ಇತ್ತೀಚೆಗೆ ಮೈಸೂರು ಜಿಲ್ಲೆಯ ಕೆ ಆರ್ ನಗರದಲ್ಲಿ ನಡೆದ ತಾಲೂಕು ಒಕ್ಕಲಿಗರ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವೇದಿಕೆ ಹಂಚಿಕೊಂಡಿದ್ದಾರೆ. ಜತೆಗೆ, ಒಕ್ಕಲಿಗ ಸಮಾಜದ ಕುರಿತು ತಮ್ಮ ಕಕ್ಕುಲಾತಿಗೆ ಮಾತಿನ ಅಭಿವ್ಯಕ್ತಿ ನೀಡಿದ್ದಾರೆ. ಹೆಚ್ಚು ಕಡಿಮೆ ಒಂದೇ ವಯೋಮಾನದ ಇಬ್ಬರು ನಾಯಕರು, ಹಿಂದೆ ಅಧಿಕಾರದಲ್ಲಿದ್ದಾಗ ಪರಸ್ಪರ ಜಿದ್ದಿಗೆ ಬಿದ್ದವರಂತೆ ಪರಸ್ಪರ ಕತ್ತಿ ಮಸೆಯುತ್ತಿದ್ದವರು. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದೇವೇಗೌಡರು ಸರಣಿ ‘ಪ್ರೇಮ ಪತ್ರ’ಗಳನ್ನು ಬರೆಯುವ..

    April 27, 2016
    ...
    agusta-westland-1
    ದೇಶ

    ‘ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ’ ಅರ್ಥ ಮಾಡಿಕೊಳ್ಳಲು 6 ಸರಳ ಪ್ರಶ್ನೆಗಳು!

    ವಿವಿಐಪಿಗಳ ಓಡಾಟಕ್ಕಾಗಿ ಯುಪಿಎ ಸರಕಾರ ಖರೀದಿಸಿದ್ದ ಹೆಲಿಕ್ಯಾಫ್ಟರ್ ಸುತ್ತ ಮತ್ತೊಂದು ಸುತ್ತಿನ ವಿವಾದ ಬುಗಿಲೆದ್ದಿದೆ. ಯುಕೆ ಮೂಲದ ಆಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಗೆ ಹೆಲಿಕ್ಯಾಫ್ಟರ್ ಒದಗಿಸಲು ಸುಮಾರು 3, 727 ಕೋಟಿ ರೂಪಾಯಿ ಟೆಂಡರ್ ನೀಡಿತ್ತು. ಈ ವಿಚಾರದಲ್ಲಿ ಕಂಪನಿಯು ಸುಮಾರು 350 ಕೋಟಿ ಲಂಚ ನೀಡಿದೆ ಎಂದು ಇಟಲಿಯ ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಾಖಲೆಗಳು ಬಹಿರಂಗವಾದ ಹಿನ್ನೆಲೆಯಲ್ಲಿ, ಬಿಜೆಪಿ ಪಕ್ಷವು ಕಾಂಗ್ರೆಸ್ ವಿರುದ್ಧ ವಾಗ್ಧಾಳಿಗೆ ಮುಂದಾಗಿದೆ. ವಿಚಾರವನ್ನು ಅಧಿವೇಶನದಲ್ಲಿ ಬಳಸಿಕೊಳ್ಳಲು ಆಡಳಿತ ಪಕ್ಷ ತೀರ್ಮಾನಿಸಿದೆ. ಈ..

    April 27, 2016
    ...
    body
    ಫೋಕಸ್

    ಕಾಲೇ ಕಂಬ, ದೇಹವೇ ದೇಗುಲ: ಕುಂಚ ಹಿಡಿದ ಕೈಗೆ ನಗ್ನ ದೇಹವೇ ಇಲ್ಲಿ ಕ್ಯಾನ್ವಾಸ್!

    ದೇಹವನ್ನು ಆರೋಗ್ಯಪೂರ್ಣವಾಗಿ ಹೇಗೆಲ್ಲ ಬಳಸಿಕೊಳ್ಳಬಹುದು? ಈ ಪ್ರಶ್ನೆಗೆ ಆಸ್ಟ್ರಿಯಾ ದೇಶದ ಉತ್ಸವ ‘ಬಾಡೀಸ್ ಆಂಡ್ ಬೀಟ್ಸ್’ನಲ್ಲಿ ಉತ್ತರ ಸಿಗುತ್ತದೆ. ತರುಣಿಯರ ಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸುವ ಜಾಗತಿಕ ಜಾತ್ರೆ ಇದು. ಇಲ್ಲಿ ಕುಂಚ ಹಿಡಿದ ವರ್ಣ ಚಿತ್ರಕಾರರಿಗೆ ಯುವತಿಯರು ದೇಹವೇ ಕ್ಯಾನ್ವಾಸ್. ಯುರೋಪ್ ಖಂಡದ ಪುಟ್ಟ ರಾಷ್ಟ್ರ ಆಸ್ಟ್ರಿಯಾದಲ್ಲಿ ನಡೆಯುವ ಪ್ರಮುಖ ಹಬ್ಬ ಇದು. ಇಲ್ಲಿನ ಟರ್ಕೋಯಿಸ್ ಕಡಲಿನಿಂದ ಸುತ್ತುವರಿದ ಪೋರ್ಟ್ಸ್ ಚಚ್ ದ್ವೀಪದಲ್ಲಿ ನಡೆಯುವ 6 ದಿನಗಳ ರಂಗಿನ ಹಬ್ಬವಿದು. ಇನ್ನೇನು ಜೂನ್ 28 ರಿಂದ..

    April 27, 2016

Top