An unconventional News Portal.

    ...
    lok-sabha-1
    ಸುದ್ದಿ ಸಾರ

    ಎರಡನೇ ದಿನವೂ ನಡೆಯದ ಅಧಿವೇಶನ; ಉತ್ತರಖಾಂಡ್ ವಿಚಾರ ಚರ್ಚೆಗೆ ಆಗ್ರಹ

    ಉತ್ತರಾಖಾಂಡ್ ರಾಜಕೀಯ ಬಿಕ್ಕಟ್ಟಿನ ಮೇಲೆ ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿದ್ದರಿಂದ ಸಂಸತ್ತಿನ ಉಭಯ ಸದನದ ಕಲಾಪ ಬುಧವಾರಕ್ಕೆ ಮುಂದೂಡಲಾಯಿತು. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರು ಎರಡನೇ ದಿನವೂ ಕೋಲಾಹಲ ಸೃಷ್ಟಿಸಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗದೆ ಉಭಯ ಸದನಗಳನ್ನು ಮುಂದುಡುವುದು ಅನಿವಾರ್ಯವಾಯಿತು. ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದೆ ಮತ್ತು ಪ್ರಜಾತಾಂತ್ರಿಕ ಹಕ್ಕುಗಳನ್ನು ಧಮನ..

    April 26, 2016
    ...
    siddaramaiah-ie
    ರಾಜ್ಯ

    ‘ಅಹಿಂದ ನಾಯಕ’ನನ್ನೂ ಬಿಡದ ಡಿ-ನೋಟಿಫಿಕೇಶನ್ ಮಾಯೆ!: ಸಿಎಂ ವಿರುದ್ಧ ಮತ್ತೊಂದು ದೂರು

    ಅತ್ತ ಬರ ಪ್ರವಾಸದಲ್ಲಿ ಸಿಎಂ ಸಿದ್ದರಾಮಯ್ಯ ಇರುವಾಗಲೇ, ಇತ್ತ ಬೆಂಗಳೂರಿನಲ್ಲಿ ಅವರ ವಿರುದ್ಧ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ)ದಲ್ಲಿ ದೂರೊಂದು ಮಂಗಳವಾರ ದಾಖಲಾಗಿದೆ. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಮುಖ್ಯಮಂತ್ರಿ, ಬಿಡಿಎ ಸ್ವಾಧೀನದಲ್ಲಿದ್ದ 1. 31 ಎಕರೆ ಭೂಮಿಯನ್ನು ಡಿ- ನೋಟಿಫೈ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ಯಾಮ್ ಭಟ್, ಮತ್ತಿತರ ಅಧಿಕಾರಿಗಳ ವಿರುದ್ಧ ವಕೀಲ ನಟರಾಜ್ ಶರ್ಮಾ ಎಂಬುವವರು ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಅವರ ಸೂಚನೆಯಂತೆ, ಸದರಿ ಡಿ- ನೋಟಿಫಿಕೇಶನ್..

    April 26, 2016
    ...
    william-randolph-hearst-1
    SPECIAL SERIES

    ಪತ್ರಿಕೋದ್ಯಮ ಸರಣಿ-3: ಯುದ್ಧಭೂಮಿ ವರದಿಗಾರಿಕೆಯಲ್ಲಿ ಸತ್ಯ ಬರೆದರೆ ನಂಬುವವರೇ ಇರಲಿಲ್ಲ!

    (ಭಾಗ-3) ನ್ಯೂಯಾರ್ಕ್ ನಗರದ ಪತ್ರಿಕೋದ್ಯಮ ಸಮರದಲ್ಲಿ ಗೆದ್ದ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ವಿರಮಿಸಲಿಲ್ಲ. ಅಮೆರಿಕಾದ ದೊಡ್ಡ ದೊಡ್ಡ ನಗರಗಳಿಗೆಲ್ಲಾ ತನ್ನ ಪತ್ರಿಕೆಯನ್ನು ವಿಸ್ತರಿಸುತ್ತಾ ಹೋದ. 30 ನಗರಗಳಲ್ಲಿ ಪತ್ರಿಕೆಯ ಪ್ರಕಟಣೆ ಆರಂಭಿಸಿದ. 120 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇವತ್ತಿಗೂ 30 ಆವೃತ್ತಿಗಳಿರುವ ಯಾವುದೇ ಪತ್ರಿಕೆಗಳಿಲ್ಲ. 120 ವರ್ಷಗಳ ಹಿಂದೆ ಹರ್ಸ್ಟ್ ಹೀಗೊಂದು ಸಾಹಸಕ್ಕೆ ಕೈ ಹಾಕಿದ್ದ ಎಂದರೆ, ಆತನ ಮನಸ್ಥಿತಿ ಹೇಗಿದ್ದೀತು?. ಒಮ್ಮೆ ಪತ್ರಿಕೆಗಳನ್ನು ಸ್ಥಾಪಿಸುತ್ತ ಹೋದವನ ಮುಂದೆ ಭಾರಿ ಸವಾಲೊಂದು ಕಾದಿತ್ತು. ಅದು ಓದುಗರನ್ನು ಸೆಳೆಯುವುದಾಗಿತ್ತು…

    April 26, 2016
    ...
    dawood-1
    ವಿದೇಶ

    ‘ಮೋಸ್ಟ್ ವಾಂಟೆಡ್’ ದಾವೂದ್ ಕಾಲಿಗೆ ಗ್ಯಾಂಗ್ರಿನ್: ಕರಾಚಿಯಲ್ಲಿ ಶಸ್ತ್ರ ಚಿಕಿತ್ಸೆ?

    ಭಾರತದ ‘ಮೋಸ್ಟ್ ವಾಂಟೆಡ್’ ಕ್ರಿಮಿನಲ್, ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಆರೋಗ್ಯದ ಸುತ್ತ ಇದೀಗ ಗುಲ್ಲೆದ್ದಿದೆ. “ಕರಾಚಿಯಲ್ಲಿರುವ ದಾವೂದ್ ಸ್ವಗೃಹದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಗೆ ಕಾಲಿನ ಗಾಯ, ಗ್ಯಾಂಗ್ರಿನ್ ಆಗಿ ಪರಿವರ್ತನೆಗೊಂಡಿದೆ. ಲಿಯಾಖತ್ ರಾಷ್ಟ್ರೀಯ ಆಸ್ಪತ್ರೆ ಹಾಗೂ ಮಿಲಿಟರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ,” ಎಂದು ಸಿಎನ್ಎನ್ ನೂಸ್-18 ವರದಿ ಮಾಡಿದೆ. ದಾವೂದ್ ರಕ್ತದ ಒತ್ತಡ ಹೆಚ್ಚಾಗಿದ್ದು ಸಕ್ಕರೆ ಕಾಯಿಲೆಯೂ ಸೇರಿಕೊಂಡಿದೆ. ಹೀಗಾಗಿ ಕಾಲಿನಲ್ಲಿ ಗ್ಯಾಂಗ್ರಿನ್ ಆಗಿದ್ದು, ಆ ಭಾಗವನ್ನು ತೆಗೆದು ಹಾಕಬೇಕು ಎಂಬ ವೈದ್ಯರ ಹೇಳಿಕೆಯೂ..

    April 26, 2016
    ...
    KG-Basin-Scam-modi
    ದೇಶ

    ‘ಗುಜರಾತ್ ಪೆಟ್ರೋಲಿಯಂ ಸ್ಕ್ಯಾಮ್’: ಪ್ರಧಾನಿ ಮೋದಿ ಮೇಲೆ ಭ್ರಷ್ಟಾಚಾರದ ಬೋಣಿಗೆ

    ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮದಲ್ಲಿ ನಡೆದ ‘ಡೀಲ್’ ಒಂದರ ಸುತ್ತ ಭ್ರಷ್ಟಾಚಾರದ ಗಂಭೀರ ಆರೋಪವೀಗ ಕೇಳಿ ಬಂದಿದೆ. 2005ರ ಸುಮಾರಿಗೆ ದೇಶವನ್ನು ಇಂಧನ ಸ್ವಾವಲಂಭಿ ಮಾಡುವ ಯೋಜನೆಯೊಂದನ್ನು ಘೋಷಿಸುವ ಮೂಲಕ ಭಾರಿ ಸುದ್ದಿ ಮಾಡಿದ್ದ ಯೋಜನೆ ಅದು. ಇವತ್ತು ಆ ಯೋಜನೆಯ ಅಂತರಾಳದಲ್ಲಿ ನಡೆದ ವ್ಯವಹಾರಗಳು ಬಹಿರಂಗವಾಗಿವೆ. ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮ (GSPC) ಯಾವುದೇ ತಾಂತ್ರಿಕ ಅನುಭವವಿಲ್ಲದ ಕಂಪನಿಗಳಿಗೆ ಶೇರು ನೀಡುವ ಮೂಲಕ, ಸುಮಾರು 19,700 ಸಾವಿರ ಕೋಟಿ ಹಗರಣ ನಡೆದಿದೆ ಎಂಬ..

    April 26, 2016

Top