An unconventional News Portal.

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

  ...
  ರಾಜ್ಯ

  ರಿಯಲ್ ಎಸ್ಟೇಟ್ ಎಂಬ ‘ನಾಯಿಸಂತೆ’: ಕೂಸು ಹುಟ್ಟುವ ಮುನ್ನವೇ ‘Online ಕುಲಾವಿ’!

  ಮನೆ ಕಟ್ಟಬೇಕು ಎಂಬ ನಗರ ಪ್ರದೇಶದ ಜನರ ಕನಸುಗಳನ್ನೇ ಬಂಡವಾಳ ಮಾಡಿಕೊಂಡು, ಬೃಹತ್ ಪ್ರಮಾಣದ ಆನ್ಲೈನ್ ಉದ್ಯಮವೊಂದು ಸದ್ದಿಲ್ಲದೆ ಬೆಳೆದು ನಿಂತಿದೆ. ಭಿನ್ನ ಪ್ರಚಾರ ತಂತ್ರ, ತಂತ್ರಜ್ಞಾನದ ಬಳಕೆ, ಜನರನ್ನು ನಂಬಿಸಲು ಕಸರತ್ತುಗಳು, ದೊಡ್ಡ ಮಟ್ಟದ ಆದಾಯ ಹಾಗೂ ಯುವಕರೇ ತುಂಬಿಕೊಂಡಿರುವ  ವಿಚಿತ್ರ ಸಂಕರಗಳಿರುವ ಹೊಸ ಕಾಲದ ಉದ್ಯಮವಿದು. ಇಲ್ಲಿಯೂ ಪೈಪೋಟಿ ಇದೆ, ಮೋಸವಿದೆ, ವಂಚನೆ ಇದೆ, ಗಾಸಿಪ್ ಇದೆ, ತನ್ನದೇ ಜಾಲವಿದೆ, ಒಳಸುಳಿಗಳಿವೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಸಮಸ್ತ ಜಾತಕ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ತೋಳ್ಬಲಕ್ಕಿಂತ ಯುಕ್ತಿಯನ್ನು ನಂಬಿಕೊಂಡು..

  April 25, 2016
  ...
  SPECIAL SERIES

  ಪತ್ರಿಕೋದ್ಯಮ ಸರಣಿ-2: ‘ದರ ಸಮರ’ ಹುಟ್ಟುಹಾಕಿದವನು ಗೆದ್ದ ಮೇಲೂ ವಿರಾಮ ಘೋಷಿಸಲಿಲ್ಲ!

  (ಭಾಗ-2) ಅವತ್ತು ಅಮೆರಿಕಾದ ಪತ್ರಿಕೋದ್ಯಮ ಪ್ರಪಂಚ ಹಿಂದೆಂದೂ ಕಾಣದ ಪೈಪೋಟಿಗೆ ಸಾಕ್ಷಿಯಾಗಲು ಕೆಲವು ದಿನಗಳಷ್ಟೆ ಬಾಕಿ ಇತ್ತು. ‘ಸ್ಯಾನ್ ಫ್ರಾನ್ಸಿಸ್ಕೋ ಎಗ್ಸಾಮಿನರ್’ ಪತ್ರಿಕೆ ಒಂದು ಮಟ್ಟಿಗೆ ಯಶಸ್ಸು ಕಾಣುತ್ತಲೇ, ಆಗಷ್ಟೆ ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ತಲೆಯಲ್ಲಿ ಹೊಸ ಕನಸುಗಳು ಮೊಳೆತು ನಿಂತಿದ್ದವು. ಪತ್ರಿಕೋದ್ಯಮವನ್ನು ಆವರಿಸಿಕೊಂಡಿದ್ದ ಜೋಸೆಫ್ ಪುಲಿಟ್ಜರ್ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಲು ಅವನು ಕಾರ್ಯತಂತ್ರಗಳನ್ನು ಹೆಣಿಯಲಾರಂಭಿಸಿದ್ದ. ಇದರ ಭಾಗವಾಗಿಯೇ ಹರ್ಸ್ಟ್ ನ್ಯೂಯಾರ್ಕ್ ಮಾಧ್ಯಮ ಲೋಕದಲ್ಲಿ ಖಾತೆಯನ್ನು ತೆರೆಯುವ ಅಗತ್ಯವಿತ್ತು. ಅವತ್ತಿಗೆ ಅಮೆರಿಕಾದಲ್ಲಿ ನ್ಯೂಯಾರ್ಕ್ ಆಯಕಟ್ಟಿನ..

  April 25, 2016
  ...
  ದೇಶ

  ಮೊದಲ ದಿನವೇ ಕೋಲಾಹಲ: ಅಧಿವೇಶನಕ್ಕೆ ಉತ್ತರಖಾಂಡ್ ವಿಚಾರವೇ ಹಾಲಹಲ!

  ನಿರೀಕ್ಷೆಯಂತೆ ಸೋಮವಾರದಿಂದ ಪ್ರಾರಂಭವಾದ ಸಂಸತ್ತಿನ ಮುಂದುವರೆದ ಬಜೆಟ್ ಅಧಿವೇಶನದ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಯಾಗಿ ಕಲಾಪವನ್ನು ಮುಂದೂಡಿದ ಪ್ರಸಂಗ ಮೊದಲ ದಿನವೇ ನಡೆಯಿತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಆಡಳಿತರೂಢ ಎನ್‍ಡಿಎ ವಿರುದ್ದ ಮುಗಿ ಬಿದ್ದವು. ಚುನಾಯಿತ ಸರ್ಕಾರವನ್ನು(ಉತ್ತರಖಾಂಡ್) ದುರುದ್ದೇಶಪೂರ್ವಕವಾಗಿ ವಜಾಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಿದೆ. ಜನ ಅಧಿಕಾರ ಕೊಟ್ಟಿದ್ದಾರೆಂಬ ಒಂದೇ ಒಂದು ಕಾರಣಕ್ಕಾಗಿ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದರ ಬಗ್ಗೆ ಚರ್ಚೆ ನಡೆಸಲು ಸಭಾಪತಿ..

  April 25, 2016
  ...
  ಸುದ್ದಿ ಸಾರ

  ಅಮೆರಿಕಾದ ಡ್ರೋಣ್ ದಾಳಿಗೆ ಭಟ್ಕಳ ಮೂಲದ ಐಸಿಸ್ ಯುವಕ ಬಲಿ

  ಸಿರಿಯಾದಲ್ಲಿ ಕೆಲ ದಿನಗಳ ಹಿಂದೆ  ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಕರ್ನಾಟಕದ ಉಗ್ರನೊಬ್ಬ ಹತನಾಗಿದ್ದಾನೆ. ಮೃತ ಉಗ್ರ 26 ವರ್ಷದ ಮಹಮ್ಮದ್ ಶಫಿ ಆರ್ಮರ್ ಕರ್ನಾಟಕದ ಭಟ್ಕಳ ಮೂಲದವನು ಎಂದು ತಿಳಿದುಬಂದಿದೆ. ಈತ ಭಾರತದಲ್ಲಿ ಐಸಿಸ್ ಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಭಟ್ಕಳ ಮೂಲದ 26 ವರ್ಷದ ಆರ್ಮರ್, ಐಸಿಸ್ ಸಂಘಟನೆಯ ಪ್ರಮುಖನಾಗಿದ್ದ ಅಬೂಬಕ್ಕರ್ ಬಾಗ್ದಾದಿಯೊಂದಿಗೆ ಆತ್ಮೀಯನಾಗಿದ್ದ. ಮೊದಲಿಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಅರ್ಮರ್, ನಂತರದಲ್ಲಿ ಐಸಿಸ್ ಗೆ ಭಾರತೀಯ ಯುವಕರನ್ನು..

  April 25, 2016
  ...
  ಸುದ್ದಿ ಸಾರ

  ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಸ್ಲಿಂ ಆರೋಪಿಗಳಿಗೆ ಮುಕ್ತಿ

  2006ರ ಮಾಲೆಂಗಾವ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸೋಮವಾರ ಖುಲಾಸೆಗೊಳಿಸಲಾಗಿದೆ. ಮುಂಬೈನ ವಿಶೇಷ ನ್ಯಾಯಾಲಯದ ನ್ಯಾ. ವಿ. ವಿ. ಪಾಟೀಲ್ ಅವರ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ. ಎಲ್ಲಾ 9 ಮುಸ್ಲಿಂ ಆರೋಪಿಗಳನ್ನೂ ಆರೋಪ ಮುಕ್ತರನ್ನಾಗಿ ಮಾಡಿದ್ದು, ಅವರ ಪೈಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 6 ಮಂದಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಇಬ್ಬರು ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಸಲ್ಮಾನ್ ಫಾರ್ಸಿ, ಶಬೀರ್ ಅಹ್ಮದ್, ನೂರುಲ್‍ಹುದಾ ದೋಹ, ರಾಯಿಸ್ ಅಹಮದ್, ಮೊಹಮ್ಮದ್ ಅಲಿ, ಆಸಿಫ್..

  April 25, 2016
  ...
  ರಾಜ್ಯ

  ‘ಬೆಂಕಿ ಬಿದ್ದ ಮನೆ’ಯಲ್ಲಿ ಚಳಿ ಕಾಯಿಸಿಕೊಳ್ಳಲು ಹೊರಟವರು!

  ಇದು ‘ಬೆಂಕಿ ಬಿದ್ದ ಮನೆಯಲ್ಲಿ ಚಳಿ ಕಾಯಿಸಿಕೊಂಡರು’ ಎಂಬ ಗಾದೆಯನ್ನು ನೆನಪಿಸುವ ಪ್ರಸಂಗ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಗಾರ್ಮೆಂಟ್ಸ್ ಮಹಿಳೆಯರ ಬೃಹತ್ ಪ್ರತಿಭಟನೆಯ ಲಾಭ ಪಡೆಯುವ ಕಸರತ್ತುಗಳು ಶುರುವಾಗಿವೆ. ಬೊಮ್ಮನಹಳ್ಳಿಯ ಮುಖ್ಯ ರಸ್ತೆ ಹಾಗೂ ಗಲ್ಲಿಗಳಲ್ಲಿ ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಮಿಕ ಬಂಧುಗಳಿಗಾಗಿ ಹೊಸ ಪಿಎಫ್ ನೀತಿಯನ್ನು ರದ್ಧುಪಡಿಸಲು ಶ್ರಮಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಅವರಿಗೆ ಧನ್ಯವಾದಗಳು’ ಎಂಬ ದೊಡ್ಡ ದೊಡ್ಡ ಹೋರ್ಡಿಂಗ್ಸ್ ರಾರಾಜಿಸುತ್ತಿವೆ. ಕೆಳಗಡೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ಹೆಸರು..

  April 25, 2016
  ...
  ಸುದ್ದಿ ಸಾರ

  ಇಸಾಗೆ ನೀಡಿದ್ದ ವೀಸಾ ವಾಪಾಸ್: ಚೀನಾ ವಿರೋಧಕ್ಕೆ ಮಣಿದ ಭಾರತ

  ‘ಜಾಗತಿಕ ಐಘೂರ್ ಕಾಂಗ್ರೆಸ್’ ನಾಯಕ, ಚೀನಾ ವಿರುದ್ಧ ಹೋರಾಟ ನಡೆಸುತ್ತಿರುವ ದೋಲ್ಕನ್ ಇಸಾಗೆ ನೀಡಿದ್ದ ವೀಸಾವನ್ನು ಭಾರತ ಹಿಂತೆಗೆದುಕೊಂಡಿದೆ. ತಿಂಗಳ ಕೊನೆಯಲ್ಲಿ ಧರ್ಮಶಾಲದಲ್ಲಿ ನಡೆಯಲಿರುವ ‘ಪ್ರಜಾಪ್ರಭುತ್ವ ಸ್ಥಾಪನಾ ಸಮ್ಮೇಳನ’ದಲ್ಲಿ ಇಸಾ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಭಾರತ ವೀಸಾ ನೀಡುತ್ತಿದ್ದಂತೆ ನೆರೆಯ ರಾಷ್ಟ್ರ ಚೀನಾ ತನ್ನ ಪ್ರಬಲ ವಿರೋಧವನ್ನು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತ ವೀಸಾ ವಾಪಾಸ್ ಪಡೆದಿದೆ ಎಂದು ಮೂಲಗಳು ಹೇಳಿವೆ. ಈ ಕುರಿತು ಎನ್ಡಿಟಿವಿಗೆ ಮಾತನಾಡಿರುವ ಇದಾ, “ನನ್ನನ್ನು ಭಯೋತ್ಪಾದಕ ಎಂದು ಚೀನಾ ಹಣೆಪಟ್ಟಿ ಕಟ್ಟಿದೆ. ಹೀಗಾಗಿ ಭಾರತ..

  April 25, 2016

FOOT PRINT

Top