An unconventional News Portal.

  ...

  ‘ಸಮಯ’ಕ್ಕೊಂದು ಒಳ್ಳೆ ಸಮಯದ ನಿರೀಕ್ಷೆಯಲ್ಲಿ…

  ಎಲ್ಲವೂ ಅಂದುಕೊಂಡಂತೆ, ಕೊಟ್ಟ ಮಾತಿನಂತೆ ನಡೆದಿದ್ದರೆ ಶನಿವಾರ ಸಂಜೆ ವೇಳೆಗೆ ‘ಸಮಯ’ ಸುದ್ದಿ ವಾಹಿನಿಯ ಪತ್ರಕರ್ತರು, ಸಿಬ್ಬಂದಿಗಳಿಗೆ ಬಾಕಿ ಇರುವ ಸಂಬಳವಾಗಬೇಕಿತ್ತು. ಅವರಲ್ಲಿ ಬಹುತೇಕರು ಪಡುತ್ತಿರುವ ಆರ್ಥಿಕ ಸಂಕಷ್ಟಗಳು ತೀರಿ ಹೋಗಬೇಕಿತ್ತು. ಆದರೆ, ಹಾಗೆ ಆಗಲಿಲ್ಲ ಎಂಬ ಕಾರಣಕ್ಕಾಗಿಯೇ ‘ಸಮಾಚಾರ’ ಈ ವರದಿಯನ್ನು ಪ್ರಕಟಿಸುತ್ತಿದೆ. ಕಳೆದ 15 ದಿನಗಳಿಂದ ‘ಸಮಯ’ದೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ದಿನದಿಂದ ದಿನಕ್ಕೆ ವಾಹಿನಿಯ ಆರೋಗ್ಯ ಹದಗೆಡುತ್ತಿದೆ. ಅದರ ಮಾಲೀಕ ವಿಜಯ್ ಟಾಟಾ ಅವರ ಆರ್ಥಿಕ ಬಿಕ್ಕಟ್ಟು, ಉದ್ಯೋಗಿಗಳ ಆರ್ಥಿಕ ಮುಗ್ಗಟ್ಟಾಗಿ ಪರಿವರ್ತನೆಗೊಂಡಿದೆ. ವಾರದ […]

  April 23, 2016
  ...

  ‘ಡಾಗ್ ಮೈ ಡಾರ್ಲಿಂಗ್’: ನಾಯಿ ಸಾಕಲು ಹೋಗಿ ಬಿಕಾರಿಯಾದ ಮಿಲೇನಿಯರ್!

  ಸಂಬಂಧಗಳ ಬಗ್ಗೆ ನಂಬಿಕೆಗಳು ಕಳೆದು ಹೋದಾಗ ಪ್ರಾಣಿಗಳನ್ನು ಸಾಕಿ ಎಂಬುದು ಮನಶಾಸ್ತ್ರ ಹೇಳುವ ಬದುಕಿನ ಟಿಪ್ಸ್. ನೀವೊಂದು ನಾಯಿಯನ್ನೋ, ಬೆಕ್ಕನ್ನೋ ಅಥವಾ ಇನ್ಯಾವುದೋ ಪ್ರಾಣಿಯನ್ನು ಹಚ್ಚಿಕೊಂಡಿರಿ ಎಂದರೆ, ನಿಮ್ಮೊಳಗಿನ ಮನುಷ್ಯ ಸದಾ ಜೀವಂತವಾಗಿರುತ್ತಾನೆ ಎಂದರ್ಥ. ಒಮ್ಮೆ ಅಂತಃಕರಣ ಜಾಗೃತಗೊಂಡರೆ, ಮನಸ್ಸು ಚಿಕ್ಕಪುಟ್ಟ ಸೂಕ್ಷ್ಮಗಳಿಗೂ ಸ್ಪಂದಿಸಲು ಶುರು ಮಾಡುತ್ತದೆ. ಬಹುಶಃ ಚೀನಾದ ಈ ಶ್ವಾನ ಪ್ರೇಮಿಗೂ ಆಗಿದ್ದೂ ಅದೇ. ವಿಷಯ ಏನಪ್ಪ ಅಂದರೆ, ಚೀನಾದಲ್ಲಿ ವಾಂಗ್ ಯಾನ್ ಎಂಬಾತನ ಸಾಕು ನಾಯಿಯೊಂದು ಒಂದು ದಿನ ಕಣ್ಮರೆಯಾಗಿತ್ತು. ಅದಕ್ಕಾಗಿ ಆತ ಹುಡುಕಾಡದ ಜಾಗವೇ […]

  April 23, 2016
  ...

  ಡಿ-ನೋಟಿಫಿಕೇಶನ್ ಮೇಲ್ಮನವಿ: ಯಡ್ಡಿ ಕಣ್ಣಿಗೆ ಸುಣ್ಣ; ಡಿಕೆಶಿ ಕಣ್ಣಿಗೆ ಬೆಣ್ಣೆ?

  ‘ಒಂದು ಕಣ್ಣಿಗೆ ಸುಣ್ಣ; ತನ್ನ ಕಣ್ಣಿಗೆ ಮಾತ್ರ ಬೆಣ್ಣೆ’ ಎಂಬಂತಿದೆ ಡಿ- ನೋಟಿಫಿಕೇಶನ್ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವ ರಾಜ್ಯ ಸರಕಾರದ ನಿಲುವು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ವಿರುದ್ಧದ ಡಿ- ನೋಟಿಫಿಕೇಶನ್ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದ ಸರಕಾರ, ತನ್ನದೇ ಸಂಪುಟ ಸಚಿವ ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಈ ಗಟ್ಟಿತನವನ್ನು ತೋರಿಸಿಲ್ಲ ಎಂಬ ದೂರುಗಳೀಗ ಕೇಳಿ ಬರುತ್ತಿವೆ. ವಿವಾದಕ್ಕೆ ಕಾರಣವಾಗಿದ್ದ ಬೆನ್ನಿಗಾನಹಳ್ಳಿ ಡಿ- ನೋಟಿಫಿಕೇಶನ್ ಪ್ರಕರಣದಲ್ಲಿ ಸಚಿವ ಡಿ. ಕೆ. ಶಿವಕುಮಾರ್ ಹೆಸರು ಕೇಳಿಬಂದಿತ್ತು. ಪ್ರಕರಣವನ್ನು ಲೋಕಾಯುಕ್ತ […]

  April 23, 2016
  ...

  ಗಾರ್ಮೆಂಟ್ಸ್ ಮಹಿಳೆಯರ ಮೇಲೆ ಪೊಲೀಸ್ ಪ್ರಹಾರ:ಸ್ವತಂತ್ರ ತನಿಖೆಗೆ ಆಮ್ನೆಸ್ಟಿ ಆಗ್ರಹ

  ‘ಗಾರ್ಮೆಂರ್ಟ್ಸ್ ಮಹಿಳೆಯರ ಪ್ರತಿಭಟನೆ’ ವೇಳೆ ಪೊಲೀಸರು ನಡೆಸಿದ ಬಲಪ್ರಯೋಗದ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಒತ್ತಾಯಿಸಿದೆ. ಶನಿವಾರ ಸಂಸ್ಥೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, “ಪೊಲೀಸರು ನಡೆಸಿದ ಲಾಠಿಚಾರ್ಜ್ ಬಗ್ಗೆ ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು,” ಎಂದು ಆಗ್ರಹಿಸಿದೆ. “ಗಾರ್ಮೆಂಟ್ಸ್ ಕಾರ್ಮಿಕರು ಪಿಎಫ್ ನೀತಿಗಳ ಪರಿಷ್ಕರಣೆ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಿ, ಹೋರಾಟಕ್ಕಿಳಿದರು. ಕೆಲವೆಡೆ ಪ್ರತಿಭಟನೆ ನಿಧಾನಕ್ಕೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಖಾಸಗಿ ವಾಹನಗಳು ಮತ್ತು ಕಚೇರಿಗಳತ್ತ ಕಲ್ಲು ತೂರಾಟ […]

  April 23, 2016
  ...

  ‘ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ’: ಈಗ ಜಾಮೀನಿಗಾಗಿ ಹೋರಾಟ!

  ಗಾರ್ಮೆಂಟ್ ಮಹಿಳೆಯರ ಪ್ರತಿಭಟನೆ ವೇಳೆ ನಡೆದ ಹೆಬ್ಬುಗೋಡಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರದ ವೇಳೆಗೆ 54 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ಅನೇಕಲ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಂಧಿತರ ಮೇಲೆ ದೊಂಬಿ ಗಲಾಟೆ, ಸಾರ್ವಜನಿಕ ಆಸ್ತಿ ಹಾನಿ, ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ, ಕೊಲೆ ಹತ್ನ ಸೇರಿದಂತೆ ಒಟ್ಟು 11 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. “ಬಂಧಿತರ ಮೇಲೆ ಐಪಿಸಿ ಸೆಕ್ಷನ್ 120 ಬಿ, 114, 143, 147, 148, 134, 323, 324, […]

  April 23, 2016

Top