An unconventional News Portal.

    ...
    india-china-1
    ದೇಶ

    ಭಾರತ- ಚೀನಾ ಸಂಬಂಧಕ್ಕೆ ಬೆಂಕಿ ಇಡಲಿರುವ ಧರ್ಮಶಾಲ ಸಮ್ಮೇಳನ!

    ವಿದೇಶಾಂಗ ನೀತಿಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ, ಚೀನಾಕ್ಕೆ ಬೇಕಾಗಿರುವ ‘ಭಯೋತ್ಪಾದಕ’ನಿಗೆ ಭಾರತ ವೀಸಾ ನೀಡಿದೆ. ತಿಂಗಳ ಕೊನೆಯಲ್ಲಿ ಧರ್ಮಶಾಲದಲ್ಲಿ ನಡೆಯಲಿರುವ ‘ಪ್ರಜಾಪ್ರಭುತ್ವ ಸ್ಥಾಪನಾ ಸಮ್ಮೇಳನ’ದಲ್ಲಿ ‘ಜಾಗತಿಕ ಐಘೂರ್ ಕಾಂಗ್ರೆಸ್’ ನಾಯಕ, ಚೀನಾ ವಿರುದ್ಧ ಹೋರಾಟ ನಡೆಸುತ್ತಿರುವ ದೋಲ್ಕನ್ ಇಸಾಗೆ ಪಾಲ್ಗೊಳ್ಳಲು ಅನುಮತಿ ನೀಡಿದೆ. ಈ ಮೂಲಕ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಚೀನಾ ವಿಚಾರದಲ್ಲಿ ಗಟ್ಟಿ ನಿಲುವನ್ನು ತಳೆದಿದೆ. ಧರ್ಮಶಾಲದಲ್ಲಿ ನಡೆಯಲಿರುವ ಇದೇ ಸಮ್ಮೇಳನದಲ್ಲಿ ಚೀನಾ ವಿರುದ್ಧ ಹೋರಾಟ ನಡೆಸುತ್ತಿರುವ ಟಿಬೇಟ್ ಧರ್ಮಗುರು ದಲೈಲ್ ಲಾಮ..

    April 22, 2016
    ...
    empower-university-1
    ಫೋಕಸ್

    ಇದು ಅವರ ‘ಎಂಪವರ್’ಗಾಗಿ ತೆರೆದ ಮೊದಲ ವಿಶ್ವವಿದ್ಯಾನಿಲಯ!

    ಜಗತ್ತಿನಾದ್ಯಂತ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿರುವ ಮಹಿಳೆಯರು, ಯುವತಿಯರು ಹಾಗೂ ಮಕ್ಕಳ ಸಂಖ್ಯೆ ಇವತ್ತಿಗೆ, 1. 40 ಕೋಟಿ ಎಂಬುದು ವಿಶ್ವಸಂಸ್ಥೆ ವರದಿಯೊಂದು ಹೇಳುತ್ತದೆ. ಇದರಲ್ಲಿ 2.5 ಲಕ್ಷ ಲೈಂಗಿಕ ಕಾರ್ಯಕರ್ತೆಯರು ಥಾಯ್ಲೆಂಡ್ ದೇಶವೊಂದರಲ್ಲೇ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಡೆ ಇರುವಂತೆಯೇ, ಇಲ್ಲಿಯೂ ಕೂಡ ಲೈಂಗಿಕ ಕಾರ್ಯಕರ್ತೆಯನ್ನು ಸಮಾಜದ ಪಿಡುಗು ಎಂಬಂತೆ ನೋಡುವ ಸಾಮಾಜಿಕ ವಾತಾವರಣವಿದೆ. ಇದನ್ನು ಹೋಗಲಾಡಿಸುವುದು ಸದ್ಯದ ಸ್ಥಿತಿಯಲ್ಲಿ ಸವಾಲು. ಆದರೆ, ಅಂತಹದೊಂದು ಸವಾಲನ್ನು ಸ್ವೀಕರಿದ ಗಟ್ಟಿಗಿತ್ತಿ ಇದ್ದಾರೆ- ಆಕೆಯ ಹೆಸರು ಚಂತವಿಪಾ ಅಪಿಸುಕ್. ಆಕೆಯ ರೋಚಕ ಕತೆಯೊಂದನ್ನು..

    April 22, 2016
    ...
    anas-4
    ಮೀಡಿಯಾ 2.0

    ಅಪರೂಪದ ಪತ್ರಕರ್ತನ ಪರಿಚಯ ಅಷ್ಟೆ; ಮುಖ ನೋಡಿದವರೇ ಇಲ್ಲ!

    ಇತ್ತೀಚೆಗೆ ಆಫ್ರಿಕಾ ಖಂಡದ ಪುಟ್ಟ ದೇಶ ಘಾನವನ್ನು ತುದಿಗಾಲ ಮೇಲೆ ನಿಲ್ಲಿಸಿದ ಪತ್ರಕರ್ತ ಈತ- ಅನಾಸ್ ಅರೆಮಿಯೋ ಅನಾಸ್. ಆಫ್ರಿಕನ್ ದೇಶದ ನ್ಯಾಯಾಂಗ ವ್ಯವಸ್ಥೆಒಳಗಿನ ಹುಳುಕುಗಳನ್ನು ಅಡಿಯಿಂದ ಮುಡಿವರೆಗೆ ಜನರ ಎದುರಿಗೆ ತೆರೆದಿಟ್ಟ ಈತನ ತನಿಖಾ ವರದಿ ವಿಶ್ವದಾದ್ಯಂತ ಭಾರಿ ಸದ್ದು ಮಾಡಿತ್ತು. ಪತ್ರಕರ್ತರಿಗೆ ಪತ್ರಕರ್ತರು ಮಾತ್ರವೇ ಮಾದರಿಯಾಗುವುದು ಸಾಮಾನ್ಯ. ವೃತ್ತಿಯೊಳಗೆ ಎಷ್ಟೇ ಮತ್ಸರಗಳಿದ್ದರೂ, ಅಸೂಯೆಗಳಿದ್ದರೂ, ಪತ್ರಕರ್ತರು ತನ್ನ ಸಹೋದ್ಯೋಗಿಯನ್ನು ಗೊತ್ತೇ ಇಲ್ಲದಂತೆ ಅನುಸರಿಸುತ್ತಿರುತ್ತಾರೆ. ಅದನ್ನು ಆತ ಅಥವಾ ಆಕೆ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ, ಮನಸ್ಥೈರ್ಯವನ್ನು ಉಳಿಸಿಕೊಳ್ಳಲು ಇದು ಅನಿವಾರ್ಯ ಕೂಡ. ಹೀಗಾಗಿಯೇ, ಕನ್ನಡ ಪತ್ರಿಕೋದ್ಯಮ ಹಲವು..

    April 22, 2016
    ...
    cm-droght-tour
    ರಾಜ್ಯ

    ಬರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ, ನೆರವಿಗಾಗಿ ದಿಲ್ಲಿಗೆ ನಿಯೋಗ: ಸಿಎಂ

    ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬರ ಪರಿಸ್ಥಿತಿ ಕುರಿತು ಶುಕ್ರವಾರ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, “ಬರಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಿದ್ದು, ಅಲ್ಲಿನ ಪರಿಸ್ಥಿತಿ ಅರಿಯಲಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಭಾಗದಲ್ಲಿ ಭೀಕರ ಬರ ತಲೆದೋರಿದೆ. ಇನ್ನು ಕೆಲ ಕಡೆ ಸಾಧಾರಣ ರೀತಿಯಲ್ಲಿದೆ. ಈ ಎಲ್ಲ..

    April 22, 2016
    ...
    ಉದ್ಯಮಿ ವಿಜಯ್ ಮಲ್ಯ.
    ದೇಶ

    ವಿಜಯ್ ಮಲ್ಯ ವಿದೇಶಿ ಆಸ್ತಿ ಮೌಲ್ಯ 780 ಕೋಟಿ ರೂಪಾಯಿಗಳಂತೆ!

    ಬ್ಯಾಂಕುಗಳು ತನ್ನ ಆಸ್ತಿ ವಿವರ ಕೇಳುವ ಹಾಗಿಲ್ಲ ಎಂದು ಗುರುವಾರ ಉಲ್ಟಾ ಹೊಡೆದಿದ್ದ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಇದೀಗ ಸುಪ್ರೀಂ ಕೋರ್ಟ್ಗೆ ತನ್ನ ವಿದೇಶಿ ಆಸ್ತಿ ವಿವರ ನೀಡಿದ್ದಾರೆ. ಇದೇ ವೇಳೆ, ಬಂಧನದ ಭೀತಿ ಎದುರಿಸುತ್ತಿರುವ ಮಲ್ಯ, ಬ್ಯಾಂಕ್ ಗಳಿಗೆ ಬಾಕಿ ಉಳಿಸಿಕೊಂಡಿರುವ ಸಾಲದಲ್ಲಿ 6,868 ಕೋಟಿ ರೂಪಾಯಿಗಳನ್ನು ಪಾವತಿಸುವುದಾಗಿ ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ.ಈ ಮೊದಲು 4,400 ಕೋಟಿ ರೂಪಾಯಿ ನೀಡುವುದಾಗಿ ಮಲ್ಯ ಸುಪ್ರೀಂಕೋರ್ಟ್ ಮೂಲಕ ಬ್ಯಾಂಕ್ ಗಳಿಗೆ ಆಫರ್ ನೀಡಿದ್ದರು. ವಿದೇಶದಿಂದ ಭಾರತಕ್ಕೆ ವಾಪಸ್ ಆಗುವ ಕುರಿತ..

    April 22, 2016
    ...
    SUPREME-COURT
    ಸುದ್ದಿ ಸಾರ

    ಸುಪ್ರಿಂ ಮೆಟ್ಟಿಲೆರಿತು ಯಡಿಯೂರಪ್ಪ ಡಿ-ನೋಟಿಫಿಕೇಶನ್

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧದ 15 ಡಿನೋಟಿಫಿಕೇಶನ್ ಪ್ರಕರಣಗಳ ಸಂಬಂಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಸುಪ್ರಿಂಕೋರ್ಟ್‍ನಲ್ಲಿ ಶುಕ್ರವಾರ ಅರ್ಜಿ ಸಲ್ಲಿಕೆಯಾಗಿದ್ದು, ಹೈಕೋರ್ಟ್ ಎಲ್ಲಾ ಪ್ರಕರಣಗಳನ್ನು ವಜಾ ಮಾಡಿದ್ದನ್ನು ಪ್ರಶ್ನೆ ಮಾಡಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗಿದೆ. ರಾಜ್ಯ ಸರಕಾರ ಯಡಿಯೂರಪ್ಪ ಅವರ ವಿರುದ್ಧ ವಾದ ಮಾಡಲು ವಕೀಲ ಅರಿಸ್ಟಾಟಲ್ ಅವರನ್ನು ನೇಮಿಸಿದೆ. ಲೋಕಾಯುಕ್ತಕ್ಕೆ ಬಿಎಸ್ವೈ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರವಿದೆ. 2ಜಿ ಹಗರಣದಲ್ಲೂ ಸಿಎಜಿ ವರದಿ ಆಧರಿಸಿ ಎಫ್ ಐಆರ್ ದಾಖಲಿಸಲಾಗಿತ್ತು. ಹಾಗೆಯೇ ಸಿಎಜಿ ವರದಿ..

    April 22, 2016
    ...
    g-parameshwar-karnataka
    ರಾಜ್ಯ

    ಕಾನೂನು ಸುವ್ಯವಸ್ಥೆ: ಪೊಲೀಸ್ ಅಧಿಕಾರಿಗಳ ನಡೆಗೆ ಗರಂ ಆದ ಪರಂ!

    ‘ಗಾರ್ಮೆಂಟ್ ಮಹಿಳೆಯರ ಪ್ರತಿಭಟನೆ’ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. “ಯಾರೇ ಆದರೂ ಸರಿ, ಕಾನೂನು ಸುವ್ಯವಸ್ಥೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ.ಕಾನೂನು ವ್ಯವಸ್ಥೆಗೆ ದಕ್ಕೆಯಾದರೇ ಹಿರಿಯ ಅಧಿಕಾರಿಗಳೇ ಅದಕ್ಕೆ ಹೊಣೆ,” ಎಂದು ಗೃಹಸಚಿವರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಅಲ್ಲದೆ, “ಕಾನೂನು ಸುವ್ಯವಸ್ಥೆ ಬಗ್ಗೆ ಹಿರಿಯ ಅಧಿಕಾರಿಗಳು ಎಚ್ಚರವಹಿಸಬೇಕು. ನೀವು ಎಚ್ಚರವಹಿಸಿದರೇ ಕಿರಿಯ ಅಧಿಕಾರಿಗಳು ಎಚ್ಚರ ವಹಿಸುತ್ತಾರೆ. ಹಿರಿಯ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯ ನಿರ್ವಹಿಸಲಿ,” ಎಂದು ಹಿರಿಯ ಪೊಲೀಸ್..

    April 22, 2016
    ...
    landslides-damage-arunachal-pradesh
    ಸುದ್ದಿ ಸಾರ

    ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: ಮಳೆಯಿಂದಾಗಿ ಪ್ರವಾಹ

    ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದೆ. ಘಟನೆಯಲ್ಲಿ 15 ಜನ ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಕಟ್ಟಡಗಳಿಗೂ ಹಾನಿಯುಂಟಾಗಿದ್ದು, ರಸ್ತೆ ಸಂಪರ್ಕ ವ್ಯತ್ಯಯಗೊಂಡಿದೆ. ಮಳೆಯಿಂದಾಗಿ ವಿದ್ಯುತ್ ಉತ್ಪಾದನಾ ಘಟಕಕ್ಕೂ ಹಾನಿಯಾಗಿದೆ. ಹಲವು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ತವಾಂಗ್ ಗಡಿ ಜಿಲ್ಲೆಗಳ ಹಲವೆಡೆ ಭೂ ಕುಸಿತವುಂಟಾಗಿದೆ. ಪ್ರಕೃತಿ ಅವಘಡಕ್ಕೆ 15 ಮಂದಿ ಮೃತಪಟ್ಟಿರುವ ಹಿನ್ನಲೆಯಲ್ಲಿ, ಗೃಹ ಸಚಿವ ರಾಜನಾಥ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗೃಹ ಸಚಿವರು ಅರುಣಾಚಲ ಮುಖ್ಯಮಂತ್ರಿ ಕಲಿಕೋ ಪುಲ್ ಅವರೊಂದಿಗೆ ಸಮಾಲೋಚನೆ..

    April 22, 2016
    ...
    SUPREME-COURT
    ದೇಶ

    ನೈನಿತಾಲ್ ಕೋರ್ಟ್ ಐತಿಹಾಸಿಕ ತೀರ್ಪಿಗೆ ಸುಪ್ರಿಂ ತಡೆಯಾಜ್ಞೆ

    ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಿ ನೈನಿತಾಲ್ ಹೈಕೋರ್ಟ್ ಗುರುವಾರ ನೀಡಿದ ಆದೇಶಕ್ಕೆ ಸುಪ್ರಿಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ಧುಗೊಳಿಸಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಅದರಿಂದ ತೀವ್ರ ಮುಖಭಂಗಕ್ಕೊಳಗಾಗಿದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಕೇಂದ್ರದ ಪರ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ನೈನಿತಾಲ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ಕೋರಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಎಸ್.ಕೆ ಸಿಂಗ್ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರಿಂ ಕೋರ್ಟ್, ತಾತ್ಕಾಲಿಕ ತಡೆಯಾಜ್ಞೆ..

    April 22, 2016
    ...
    police-arrest-garment-protest
    ರಾಜ್ಯ

    ‘ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ’: ಈಗ ಬೀದಿಗೆ ಇಳಿದಿದ್ದು ಖಾಕಿ ಪಡೆ!

    ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ ತಣ್ಣಗಾದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಬೀದಿಗೆ ಇಳಿದಿದ್ದಾರೆ. ಬೆಂಗಳೂರು ಉತ್ತರ ವಲಯದಲ್ಲಿ ಪೀಣ್ಯ, ಯಶವಂತಪುರ, ಆರ್ ಎಂ ಸಿ ಯಾರ್ಡ್, ರಾಜಗೋಪಾಲನಗರ ಪೊಲೀಸ್ ಠಾಣೆಗಳಲ್ಲಿ, ಬೆಂಗಳೂರು ಆಗ್ನೇಯ ವಲಯದ ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ, ಎಚ್. ಎಸ್. ಆರ್. ಲೇಔಟ್, ಮೈಕೋ ಲೇ ಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣೆಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬರುವ ಹೆಬ್ಬುಗೋಡಿ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 50 ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ..

    April 22, 2016
  • 1
  • 2

Top