An unconventional News Portal.

    ...
    yadiyurappa-shobha-bjp
    ರಾಜ್ಯ

    ರಾಜ್ಯ ಬಿಜೆಪಿಯಲ್ಲಿ ಕೋರ್ ಕಮಿಟಿ ಸಂಚಲನ: ಶೋಭಾಗೆ ಸಿಗುತ್ತಾ ಸ್ಥಾನಮಾನ?

    ರಾಜ್ಯ ಬಿಜೆಪಿಯ ಕೋರ್ ಕಮಿಟಿಯಲ್ಲಿ ಬದಲಾವಣೆಗೆ ಭೂಮಿಕೆ ಸಿದ್ಧವಾಗುತ್ತಿದೆ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸ ತಂಡ ಕಟ್ಟಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಿರುವ ಕೋರ್ ಕಮಿಟಿಯಿಂದ ಯಾರು ಹೊರ ಹೋಗ್ತಾರೆ, ಯಾರು ಒಳಗೆ ಬರ್ತಾರೆ ಅನ್ನೋ ಚರ್ಚೆ ಪಕ್ಷದೊಳಗೆ ಶುರುವಾಗಿದೆ. ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಸ್ಥಾನದಿಂದ ಸಂತೋಷ್ ಔಟ್ ಆಗ್ತಾರೆ ಎನ್ನಲಾಗಿದೆ. ಆರ್ ಎಸ್‍ ಎಸ್ ಮತ್ತು ಪಕ್ಷದ ನಡುವೆ ಸಮನ್ವಯ ಸೇತುವೆಯಾಗಿ ಕೆಲಸ ಮಾಡುವ ಸಂಘಟನಾ ಕಾರ್ಯದರ್ಶಿ ಹುದ್ದೆ ಬಹಳ ಮಹತ್ವದ್ದು. 2006ಲ್ಲಿ ರಾಜ್ಯ ಬಿಜೆಪಿ ಸಂಘಟನಾ..

    April 21, 2016
    ...
    amitabh-bachhan
    ಸುದ್ದಿ ಸಾರ

    ‘ಪನಾಮ ಪೇಪರ್ಸ್’: ನಟ ಅಮಿತಾಬ್ ವ್ಯವಹಾರಗಳಿಗೆ ಇನ್ನೊಂದಿಷ್ಟು ಸಾಕ್ಷಿ

    ತೆರಿಗೆದಾರರ ಸ್ವರ್ಗ ಎಂದೇ ಜನಪ್ರಿಯವಾಗಿರುವ ಪನಾಮಾದಲ್ಲಿ ಬಾಲಿವುಡ್ ನಟ ಅಮಿತಾಭ್ ಸೇರಿ ಹಲವು ಖ್ಯಾತನಾಮರು ಕಪ್ಪು ಹಣ ಇಟ್ಟಿದ್ದಾಗಿ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಈ ಸಂದರ್ಭದಲ್ಲಿ ಅಮಿತಾಭ್ ಈ ಆರೋಪವನ್ನು ನಿರಾಕರಿಸಿದ್ದರು. ಅಲ್ಲದೆ, ತನ್ನ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂದು ಹೇಳಿದರು. ಆದರೆ ಅಮಿತಾಭ್ ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ ಈಗ ಸಾಕ್ಷ್ಯ ದೊರೆತಿದೆ. ‘ಮೊಸಾಕ್ ಫೋನ್ಸಿಕಾ’ ದಾಖಲೆಗಳ ಪ್ರಕಾರ ಅಮಿತಾಭ್ 1993 ರಿಂದ 1997 ರ ತನಕ ನಾಲ್ಕು ಸಾಗರೋತ್ತರ ಶಿಪ್ಪಿಂಗ್ ಕಂಪೆನಿಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂದು..

    April 21, 2016
    ...
    Vidhana-Soudha-bangalore-View
    ಸುದ್ದಿ ಸಾರ

    ‘ನಿಧಾನ ಸೌಧ’ದಲ್ಲಿ ಕಡತಗಳನ್ನು ಬಾಕಿ ಉಳಿಸಿಕೊಂಡ ಸಚಿವರು!

    ಕಡತ ವಿಲೇವಾರಿ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಅನೇಕ ಇಲಾಖೆಗಳ ಸಾಧನೆ ಅವಲೋಕಿಸಿದರೆ ಸಿಎಂ ಆದೇಶಕ್ಕೆ ಸಚಿವರ್ಯಾರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ಗುಮಾನಿ ವ್ಯಕ್ತವಾಗುತ್ತದೆ. ಪರಿಣಾಮ ಕಡತ ವಿಲೇವಾರಿಯಲ್ಲಿ ಸಿದ್ದು ಟೀಮ್ ಕಳಪೆ ಸಾಧನೆ ಮಾಡಿದ್ದು, ಕೇವಲ ಶೇ.12 ರಷ್ಟು ಮಾತ್ರ ಕಡತ ವಿಲೇವಾರಿಯಾಗಿದೆ. ಒಂದೆಡೆ ಸಚಿವ ಸಂಪುಟ ಪುನರಚನೆಯ ತೂಗುಕತ್ತಿ ಸಚಿವರ ಮೇಲೆ ಇದ್ರೆ, ಕಡತ ವಿಚಾರದಲ್ಲಿನ ಕಳಪೆ ಸಾಧನೆ..

    April 21, 2016
    ...
    diet-evaluation-karnataka
    ರಾಜ್ಯ

    ಪಿಯುಸಿ ಮೌಲ್ಯಮಾಪನದಿಂದ ಡಯಟ್ ಉಪನ್ಯಾಸಕರಿಗೆ ಮುಕ್ತಿ

    ತಕ್ಷಣದಿಂದ ಜಾರಿಗೆ ಬರುವಂತೆ ಡಯಟ್ ಉಪನ್ಯಾಸಕರನ್ನು(ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳ ಉಪನ್ಯಾಸಕರು) ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈ ಬಿಡಲಾಗುವುದು ಎಂದು ಪಿಯು ಬೋರ್ಡ್ ನಿರ್ದೇಶಕ ರಾಮೇಗೌಡ ಹೇಳಿದ್ದಾರೆ. ಅನನುಭವಿ ಡಯಟ್ ಉಪನ್ಯಾಕರನ್ನು ಮೌಲ್ಯಮಾಪನಕ್ಕೆ ಬಳಸುತ್ತಿರುವುದಕ್ಕ ಪ್ರತಿಕ್ರಿಯಿಸಿದ ಅವರು, “ಮಕ್ಕಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಅವರನ್ನು ಕೋಡಿಂಗ್ ಕೆಲಸಕ್ಕೆ ಮಾತ್ರ ನಿಯೋಜಿದ್ದು, ಅವರಿಂದ ಮೌಲ್ಯಮಾಪನ ಮಾಡಿಸುವುದಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಡಯಟ್ ಉಪನ್ಯಾಸಕರನ್ನು ಮೌಲ್ಯಮಾಪನದಿಂದ ಬಿಡುಗಡೆ ಮಾಡಲಾಗುವುದು,” ಎಂದು ಅವರು ತಿಳಿಸಿದ್ದಾರೆ. ನಿಯಮಗಳ ಪ್ರಕಾರ ಮೌಲ್ಯಮಾಪನ ಮಾಡಲು 3..

    April 21, 2016
    ...
    uttarakhand-highcourt-1
    ದೇಶ

    ಗಣರಾಜ್ಯ ವ್ಯವಸ್ಥೆಯಲ್ಲಿ ದೊಡ್ಡಣ್ಣ ಆಗೋರಿಗೆ ಬ್ರೇಕ್: ಉತ್ತರಾಖಂಡ್ ಹೈಕೋರ್ಟ್ ಐತಿಹಾಸಿಕ ತೀರ್ಪು

    ಉತ್ತರಾಖಂಡ್‍ನಲ್ಲಿ ಜಾರಿಗೊಳಿಸಿದ್ದ ರಾಷ್ಟ್ರಪತಿ ಆಡಳಿತವನ್ನು ಇಲ್ಲಿನ ಹೈಕೋರ್ಟ್ ವಜಾ ಮಾಡಿ ಗುರುವಾರ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. “ಒಂದು ವೇಳೆ ಈಗ ಉತ್ತರಾಖಂಡ್ನಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆದು, ಮತ್ತೊಬ್ಬರಿಗೆ ಸರ್ಕಾರ ರಚಿಸಲು ಅವಕಾಶ ನೀಡಿದರೆ ನ್ಯಾಯದ ಅವಹೇಳನ ಮಾಡಿದಂತೆ,” ಎಂದು ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾಯಮೂರ್ತಿ ವಿ.ಕೆ.ಬಿಸ್ಟ್ ಅವರನ್ನೊಳಗೊಂಡ ನ್ಯಾಯಪೀಠ, ಹರೀಶ್ ರಾವತ್ ಅವರ ಮನವಿಯನ್ನು ಪುರಸ್ಕರಸಿ, ಏಪ್ರಿಲ್ 29ರಂದು ವಿಧಾನಸಭೆಯಲ್ಲಿ..

    April 21, 2016
    ...
    ಮೆಕ್ಸಿಕೋ ಅಮೆರಿಕಾ ನಡುವೆ ಡ್ರಗ್ ಕಾರ್ಟಲ್ಗಳು ಕೊರೆದ ಸುಂಗರ ಮಾರ್ಗ.
    ವಿದೇಶ

    ಇದು ರಂಗೋಲಿ ಕೆಳಗಿದ್ದ ಸುರಂಗ: ಡ್ರಗ್ ಮಾಫಿಯಾ ವಿರುದ್ಧ ಯುಎಸ್ ಯುದ್ಧ

    ಅಮೆರಿಕಾ- ಮೆಕ್ಸಿಕೋ ಗಡಿಭಾಗದಲ್ಲಿ ಮತ್ತೊಂದು ಸುರಂಗ ಮಾರ್ಗವನ್ನು ಯುಎಸ್ ಅಧಿಕಾರಿಗಳು ಬುಧವಾರ ಪತ್ತೆಹಚ್ಚಿದ್ದಾರೆ. ರೈಲ್ವೆ ಹಳಿಗಳನ್ನು ಅಳಡಿಸಿದ್ದ ಈ ಸುರಂಗವು ಮೆಕ್ಸಿಕೋದಿಂದ ಸ್ಯಾಂಡಿಯಾಗೋ ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತಿತ್ತು. 874 ಮೀಟರ್ ಉದ್ದದ ಸುರಂಗದಲ್ಲಿ ಈವರೆಗೆ ನೂರಾರು ಟನ್ ಕೊಕೇನ್ ಹಾಗೂ ಮರಿಜುವಾನವನ್ನು ಸಾಗಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸುರಂಗದ ಕೊನೆ ಮುಟ್ಟುವ ಸ್ಯಾಂಡಿಯಾಗೋ ನಗರದ ಗೋಡೋನ್ ಒಂದಕ್ಕೆ ಲಿಫ್ಟ್ ಕೂಡ ಅಳವಡಿಸಲಾಗಿತ್ತು. 2006ರಿಂದ ಈಚೆಗೆ ಪತ್ತೆಯಾದ 13ನೇ ಸುರಂಗ ಮಾರ್ಗ ಇದಾಗಿದೆ. ಸುರಂಗ ಮಾರ್ಗವು 3..

    April 21, 2016
    ...
    kd-5
    ಟಿವಿ

    ಕೊಹಿನೂರ್ ಶಾಪಕ್ಕೆ ‘ಉತ್ತಮ ಸಮಾಜ’ ಬಲಿ: ಟಿವಿ9 ರಲ್ಲಿ ಘೋರ ಚರ್ಚೆ!

    “ಇದು ಎಲ್ಲಾ ರಾಜ್ಯಗಳಿಗೂ ಹೋಗಿ ಬಂದಿದೆ. ಇಲ್ಲಿಂದ ಅಲ್ಲಿಗೆ ಹೋಗಿದೆ, ಅಲ್ಲಿಂದ ಇಲ್ಲಿಗೆ ಹೋಗಿದೆ. ಮುಸ್ಲಿಂ ರಾಷ್ಟ್ರಗಳಿಗೂ ಹೋಗಿದೆ. ಮುಸ್ಲಿಂ ರಾಜರು ಸೌಮ್ಯವಾಗಿರೋಲ್ಲ. ಎಲ್ಲರೂ ಅಂತಲ್ಲ. ಆದರೆ ಬಹುತೇಕರು ಸೌಮ್ಯವಾಗಿರೋಲ್ಲ. ಅದು ಮಾನಸಿಕ ಸ್ಥಿತಿ. ನಮ್ಮದು ಚಿಕ್ಕದಾಯ್ತು. ಇನ್ನೂ ದೊಡ್ಡದು ಮಾಡ್ಕೋಬೇಕು ಅಂತ ಮಾನಸಿಕ ಸ್ಥಿತಿ…” ಮೇಲಿನ ಮಾತುಗಳಲ್ಲಿ ನಿಮಗೇನಾದರೂ ಅರ್ಥವಾಯ್ತಾ? ನಮಗೂ ಆಗಲಿಲ್ಲ. ಗುರುವಾರ ಬೆಳಗ್ಗೆ ಬೆಳಗ್ಗೆ ರಾಜ್ಯದ ನಂ1 ಸುದ್ದಿ ವಾಹಿನಿ ‘ಟಿವಿ9’ರಲ್ಲಿ ನಡೆಯುತ್ತಿದ್ದ ಚರ್ಚೆಯ ತುಣುಕು ಇದು. ಹೀಗೆ ತಲೆಬುಡ ಇಲ್ಲದ ವಾದ ಮಂಡನೆ..

    April 21, 2016

Top