An unconventional News Portal.

  ...

  ಪ್ರಶ್ನೆ ಪತ್ರಿಕೆ ಜಾಲಕ್ಕೆ ‘ಕೋಕಾ’ ಬಿಸಿ: ಅಪರೂಪಕ್ಕೆ ಬಳಸುವ ಈ ಕಾಯ್ದೆ ಏನು- ಎತ್ತ?

  ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ಮೇಲೆ ಸಿಐಡಿ ಪೊಲೀಸರು ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000) ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗುವುದು ಕಷ್ಟವಾಗಲಿದೆ. “ದ್ವಿತೀಯ ಪಿಯುಸಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬಂಧಿತ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಸೆಕ್ಷನ್ 3ರ ಅಡಿ ಕೇಸು ದಾಖಲಿಸಲಾಗಿದೆ. ವಿಶೇಷ ಕಾಯ್ದೆ ಅಡಿ ಕೇಸು ದಾಖಲಿಸಿದ ಮಾಹಿತಿಯನ್ನು ಪ್ರಧಾನ ಸಿವಿಲ್ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ,” ಎಂದು ಸಿಐಡಿ ಡಿಜಿಪಿ […]

  April 20, 2016
  ...

  ಬರ ಪರಿಹಾರಕ್ಕೆ ಹಣ, ಮಕ್ಕಳಿಗೆ ರಜೆಯಲ್ಲೂ ಬಿಸಿಊಟ: ಸಂಪುಟ ಸಭೆಯ ತೀರ್ಮಾನಗಳು

  ಬರಪೀಡಿತ ಎಂದು ಘೋಷಿತವಾಗಿರುವ ಎಲ್ಲಾ 137 ತಾಲ್ಲೂಕುಗಳಲ್ಲಿ ಶಾಲಾ ಮಕ್ಕಳಿಗೆ ಬೇಸಿಗೆ ರಜಾ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ, “ಬೇಸಿಗೆ ರಜಾ ಅವಧಿಯ ಎಲ್ಲಾ 39 ದಿನಗಳಲ್ಲೂ ಸಂಬಂಧಿತ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಎಲ್ಲಾ […]

  April 20, 2016
  ...

  ನಿಜಕ್ಕೂ ಇದು ಬಿಜೆಪಿ ಪಾಲಿಗೆ ‘ಅಚ್ಚೆ ದಿನ್’!

  ದೇಶದಲ್ಲಿ ಪೂರ್ಣ ಪ್ರಮಾಣದ ಬಲದೊಂದಿಗೆ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷದ ಪಾಲಿಗೆ ಮಾತ್ರ ಇದು ‘ಆಚ್ಚೆ ದಿನ್’ ಎಂಬುದರಲ್ಲಿ ಎರಡು ಮಾತಿಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರ ಹಿಡಿದು ಬಂದ ಮೇಲೆ ಪಕ್ಷಕ್ಕೆ ಆದಾಯದ ಹರಿವು ಹೆಚ್ಚಾಗಿದೆ. ವಿವಿಧ ಮೂಲಗಳಿಂದ ಪಕ್ಷಕ್ಕೆ ಹತ್ತಿರ ಹತ್ತಿರ ಸಾವಿರ ಕೋಟಿ ಹಣ ಬಂದು ಬಿದ್ದಿದೆ. ಈ ಅಂಶಗಳು ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಡಿಟ್ ವಿವರದಲ್ಲಿ ಬಹಿರಂಗವಾಗಿವೆ. 2014 -15 ರಲ್ಲಿ ಬಿಜಿಪಿ ಖಜಾನೆಯಲ್ಲಿ 970.43 ಕೋಟಿ ರೂಪಾಯಿ ಇದೆ […]

  April 20, 2016
  ...

  ಜಾತಿ ಪ್ರಾಬಲ್ಯ ಮರೆಯಲು ‘ಪ್ರೈವೇಟ್ ಸಮೀಕ್ಷೆ’ಗಳಿದ ವೀರಶೈವ ವೇದಿಕೆ!

  ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಗಣತಿಯ ಮಾಹಿತಿ ಸೋರಿಕೆ ಸುದ್ದಿಯಾದ ಬೆನ್ನಲ್ಲೇ ವೀರಶೈವ ಲಿಂಗಾಯತ ಜಾತಿಯ ಸದಸ್ಯರು ಫೋನ್ ಮೂಲಕ ಜನಗಣತಿ ಶುರುಮಾಡಿದ್ದಾರೆ. “ಜಾತಿ ಜನಗಣತಿ ಎಣಿಕೆಯ ಸಂಖ್ಯೆಯಲ್ಲಿ ಲಿಂಗಾಯಿತರ ಗಮನಾರ್ಹ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಇದ್ದು, ಅದರಲ್ಲಾಗಿರುವ ತಪ್ಪನ್ನು ಸರಿಮಾಡಲು ಫೋನ್ ಮೂಲಕ ಜಾತಿ ಜನಗಣತಿ ಶುರುಮಾಡಲಾಗಿದೆ,” ಎಂದು ಲಿಂಗಾಯತ ಸಮುದಾಯದ ಸದದ್ಯರು ತಿಳಿಸಿದ್ದಾರೆ. “ರಾಜ್ಯದ ಜನಸಂಖ್ಯೆಯಲ್ಲಿ ಲಿಂಗಾಯತ ವೀರಶೈವ ಸಮುದಾಯದ ಜನಸಂಖ್ಯೆ ಶೇ. 15 ರಿಂದ 20 ಇದ್ದಾರೆ. ಈ ಸಮುದಾಯದಲ್ಲಿ ಎರಡು ಬೇರೆ ವಿಭಾಗಗಳನ್ನು […]

  April 20, 2016
  ...

  ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆ: ಕರ್ನಾಟಕ ಮಾಧ್ಯಮಗಳು ಎಡವಿದ್ದೆಲ್ಲಿ?

  ನಿರೀಕ್ಷೆಯಂತೆಯೇ ‘ಪಿಎಫ್’ ಹೆಸರಿನಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡ ಪ್ರತಿಭಟನೆ ಬೆಂಗಳೂರಿಗೆ ಸೀಮಿತಗೊಂಡು, ಬುಧವಾರದ ಹೊತ್ತಿಗೆ ಗರ್ಭಪಾತವಾಗಿ ಹೋಗಿದೆ. ಸೋಮವಾರ ಬೆಳಗ್ಗೆ ಬೊಮ್ಮನಹಳ್ಳಿಯಿಂದ ಶುರುವಾದ ಬೆಳವಣಿಗೆ, ಮುಂದಿನ 72 ಗಂಟೆಗಳಲ್ಲಿ ತೆಗೆದುಕೊಂಡ ತಿರುವುಗಳು ಹಾಗೂ ಅದನ್ನು ಕರ್ನಾಟಕದ ಮಾಧ್ಯಮಗಳು- ಪತ್ರಿಕೆ, ಟಿವಿ- ವೆಬ್- ಗ್ರಹಿಸಿದ ರೀತಿ ಈಗ ಚರ್ಚೆಯ ವಸ್ತುವಾಗಿವೆ. ರಾಜ್ಯದ ಇತಿಹಾಸದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಹಿಂದೆಂದೂ ನಡೆಯದ ಇಂತಹ ಘಟನೆಯನ್ನು ಅದರ ಅಂತರಾಳದಿಂದ ಅರ್ಥಮಾಡಿಕೊಳ್ಳುವಲ್ಲಿಯೇ ಬಹುತೇಕರು ಸೋತಿರುವುದು ಎದ್ದು ಕಾಣಿಸುತ್ತಿದೆ. ಹೀಗಾಗಿಯೇ, 2011ರಲ್ಲಿ ನಡೆದ ‘ಅರಬ್ ಸ್ಪಿಂಗ್’ ಎಂಬ ಬಂಡಾಯ ಸ್ವರೂಪದ ನಾಗರಿಕ ಪ್ರತಿಭಟನೆ […]

  April 20, 2016
  ...

  ಶುರುವಾದ ಪಿಯುಸಿ ಮೌಲ್ಯಮಾಪನ: ಮೇ ಮಧ್ಯದಲ್ಲಿ ಫಲಿತಾಂಶ ನಿರೀಕ್ಷೆ

  ಹಲವು ತೊಡಕುಗಳ ನಡುವೆ ಬುಧವಾರದಿಂದ ರಾಜ್ಯದ ಎಲ್ಲ ಕಡೆ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಮೌಲ್ಯಮಾಪನ ಅಧಿಕೃತವಾಗಿ ಆರಂಭಗೊಂಡಿದೆ. ಮಂಗಳವಾರ ಸಂಜೆ ಉಪನ್ಯಾಸಕರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡು, “ವಿದ್ಯಾರ್ಥಿಗಳ ಹಿತಕ್ಕೋಸ್ಕರ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದಾಗಿ,” ಹೇಳಿದ್ದರು. “ಬುಧವಾರ ಬೆಳಗ್ಗೆಯೇ ಬೆಂಗಳೂರು, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಾರಂಭಿಸಲಾಗಿದೆ,” ಎಂದು ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕ ರಾಮೇಗೌಡ ತಿಳಿಸಿದ್ದಾರೆ. “ಮೊದಲ ದಿನ ಪ್ರಶ್ನೆ ಪತ್ರಿಕೆಗಳ ಡಿಕೋಡಿಂಗ್ […]

  April 20, 2016
  ...

  ಪಿಎಫ್ ಪ್ರತಿಭಟನೆ: ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಕಿಡಿಕಾರಿರುವ ಹೈಕೋರ್ಟ್ ಜನಸಾಮಾನ್ಯರಿಗೆ ರಕ್ಷಣೆ ಕೊಡಲು ಸಾಧ್ಯವಾಗದಿದ್ದರೆ ಸರಕಾರ ಇರಬೇಕೇ ಎಂದು ತರಾಟೆಗೆ ತೆಗೆದುಕೊಂಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ, ಸೋಮವಾರ ಮತ್ತು ಮಂಗಳವಾರ ಪಿಎಫ್ ವಿಷಯಕ್ಕಾಗಿ ಕಾರ್ಮಿಕರು ನಡೆಸಿದ ಪ್ರತಿಭಟನೆ ವೇಳೆ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಸರಕಾರವನ್ನು ಕಠಿಣ ಪದಗಳಲ್ಲಿ ಟೀಕಿಸಿದರು. ಮೈಸೂರು, ಮಂಗಳೂರು ಮತ್ತು ಶಿವಮೊಗ್ಗ ಘಟನೆಗಳು ನಡೆದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಉದಾಸೀನ […]

  April 20, 2016
  ...

  ನಾನೇಕೆ ಗಾರ್ಮೆಂಟ್ಸ್ ಬಿಟ್ಟೆ?: ಸೆಕ್ಸ್ ವರ್ಕರ್ ಒಬ್ಬರ ಆತ್ಮಕತೆ!

  ವಕೀಲರು ಮಾತ್ರವಲ್ಲ, ಮನಸ್ಸು ಮಾಡಿದರೆ ಗಾರ್ಮೆಂಟ್ಸ್ ನೌಕರರೂ ವ್ಯವಸ್ಥೆಯನ್ನು ಅಕ್ಷರಶಃ ನಡುಬೀದಿಯಲ್ಲಿ ನಿಲ್ಲಿಸಬಲ್ಲರು ಎಂಬುದಕ್ಕೆ ಕಳೆದ 2 ದಿನಗಳ ಬೆಂಗಳೂರು ಬೆಳವಣಿಗೆ ಸ್ಪಷ್ಟ ನಿದರ್ಶನವೊಂದು ನೀಡಿದೆ. ಈ ಸಮಯದಲ್ಲಿ ‘ಸಮಾಚಾರ’ ಗಾರ್ಮೆಂಟ್ಸ್ ನೌಕರರ ಸಂಕಷ್ಟಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ.  ಬೆಂಗಳೂರು ಹಾಗೂ ರಾಜ್ಯ ಇತರೆ ಭಾಗಗಲ್ಲಿ ಕೆಲಸ ಮಾಡುವ ಗಾರ್ಮೆಂಟ್ಸ್ ನೌಕರರ ಅವರು ನಿತ್ಯ ಬದುಕಿನ ಕತೆಗಳಲ್ಲಿ ಭಿನ್ನತೆ ಇರಬಹುದು. ಆದರೆ ಅನುಭವಿಸುತ್ತಿರುವ ನೋವುಗಳಲ್ಲಿ ಸಾಮ್ಯತೆ ಇದೆ. ಸಾಮಾನ್ಯ ಗಾರ್ಮೆಂಟ್ ಹೆಣ್ಣು ಮಗಳೊಬ್ಬಳು ಬದುಕು ಕಟ್ಟಿಕೊಳ್ಳಲು ನಡೆಸಿದ ವಿಷಾಧಕರ ಕತೆಯೊಂದು ಇಲ್ಲಿದೆ. ಅದನ್ನು […]

  April 20, 2016
  ...

  ಪಿಎಫ್ ಸಂಕಷ್ಟಗಳನ್ನು ಹಂಚಿಕೊಂಡವರು ಮತ್ತು ವರದಿಗಾರ ಕೇಳಿದ ಪ್ರಶ್ನೆಗಳು!

  ಗಾರ್ಮೆಂಟ್ಸ್ ಮಹಿಳೆಯರ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಬಳಸಿದ ಲಾಠಿ ಪ್ರಯೋಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪ್ರತಿಭಟನೆಯನ್ನು ಹತೋಟಿಗೆ ತರುವ ಭರಾಟೆಯಲ್ಲಿ ಮಹಿಳೆಯರ ಮೇಲೆ ಮಾತ್ರವಲ್ಲ, ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆದಿದೆ. ಈ ಸಮಯದಲ್ಲಿ ಹುಳಿಮಾವು ಠಾಣೆ ಪೊಲೀಸ್ ಎಸ್ಐ ಬಳಸಿದ ಭಾಷೆ, ಇಡೀ ಮಾಧ್ಯಮ ಸಮುದಾಯವೇ ಮುಟ್ಟಿ ನೋಡಿಕೊಳ್ಳುವಂತಿದೆ. ಮಂಗಳವಾರ ಬೆಳಗ್ಗೆ, ಪ್ರತಿಭಟನೆ ವರದಿಯನ್ನು ಮಾಡಲು ತೆರಳಿದ್ದ ಜನಶ್ರೀ ಸುದ್ದಿ ವಾಹಿನಿಯ ವರದಿಗಾರ ಶರಣ್ ಗುರಿಕಾರ್ ಹಲ್ಲೆಗೆ ಒಳಗಾಗಿದ್ದಾರೆ. ಕೊಪ್ಪಳ ಜಿಲ್ಲೆ ಚಿಕ್ಕಬೊಮ್ಮನಹಳ್ಳಿ ಗ್ರಾಮದಿಂದ ಬಂದ ಶರಣ್, ಮಿಡ್ […]

  April 20, 2016
  ...

  ಆರ್ಥಿಕ ಮುಗ್ಗಟ್ಟಿನಲ್ಲಿ ಶ್ರೀಮಂತ ಉಗ್ರ ಸಂಘಟನೆ ಐಸಿಲ್!

  ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆ ಎಂದು ಬಿಂಬಿಸಿದ್ದ  ಐಸಿಲ್, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಐಸಿಲ್ ಆದಾಯ ತೀವ್ರ ಕುಸಿತವಾಗಿದೆ. ಆದಾಯ ಹೆಚ್ಚಿಸಿಕೊಳ್ಳವ ನಿಟ್ಟಿನಲ್ಲಿ ತನ್ನ ನಿಯಂತ್ರಣ ಇರುವ ಪ್ರದೇಶಗಳಲ್ಲಿ ಕಂಡ ಕಂಡಿದ್ದಕ್ಕೆಲ್ಲಾ ಟ್ಯಾಕ್ಸ್ ಹಾಕುವ ಪರಿಪಾಠವನ್ನು ಸಂಘಟನೆ ಆರಂಭಿಸಿದ ಎಂದು ವರದಿಯಾಗಿದೆ. ತಾಲಿಬಾನ್, ಆಲ್ ಕೈದಾ ನಂತರ ಐಸಿಲ್ ಶ್ರೀಮಂತ ಉಗ್ರ ಸಂಘಟನೆಯಾಗಿ ಹೊರ ಹೊಮ್ಮಿತ್ತು. ಅದು ನೀಡುತ್ತಿದ್ದ ಭಾರೀ ವೇತನಕ್ಕಾಗಿಯೇ ಸಂಘಟನೆ ಸೇರುವವರ ಸಂಖ್ಯೆಯೂ ಹೆಚ್ಚಿತ್ತು. ಇರಾಕ್, ಸಿರಿಯಾ ಮೊದಲಾದ ಕಡೆಗಳಲ್ಲಿ ತೈಲೋತ್ಪನ್ನಗಳ ಮೇಲೆ ಹಿಡಿತ ಸಾಧಿಸಿದ್ದ […]

  April 20, 2016
 • 1
 • 2

Top