An unconventional News Portal.

    ...
    1_Sisters-of-the-Valley
    ಸಮಾಚಾರ +

    ಮರಿಜುವಾನ ಅರ್ಥಾತ್ ಗಾಂಜಾದಿಂದ ಔಷಧಿ: ಇದು ಕ್ರೈಸ್ತ ಸನ್ಯಾಸಿನಿಯರ ಕೃಷಿ

      ಧರ್ಮಕ್ಕೂ, ಮಾದಕ ದ್ರವ್ಯಕ್ಕೂ ಹಾಗೂ ಮನುಷ್ಯನ ಸಂಕಷ್ಟಗಳಿಗೂ ಎಲ್ಲಿಂದೆಲ್ಲಿಯಾ ಸಂಬಂಧ? ಹೀಗೊಂದು ಪ್ರಶ್ನೆ ಹುಟ್ಟಲು ಕಾರಣ ಮೆರಿಜುವಾನ ಅರ್ಥಾತ್ ಗಾಂಜಾ ಸೊಪ್ಪಿನ ಮೂಲಕ ಕಾಯಿಲೆ ಗುಣಪಡಿಸುತ್ತೀವಿ ಅಂತ ಕ್ರೈಸ್ತ ಸನ್ಯಾಸಿನಿಯರು. ಕ್ಯಾಲಿಫೋರ್ನಿಯಾ ಮೂಲದ ಸಿಸ್ಟರ್ ಅಬೇ, ಸಿಸ್ಟರ್ ಕೇಟ್ ಅವರ ವಿಚಿತ್ರ ಕತೆ ಇದೆ. ಇವರು ಪಕ್ಕಾ ಧರ್ಮಿಷ್ಟರು. ಆದರೆ, ಧರ್ಮದ ಆಚೆಗಿನ ಜಗತ್ತನ್ನು ಕಂಡುಕೊಳ್ಳುವ ಮನಸ್ಥಿತಿಯವರು. ಬಹುಶಃ ಈ ಕಾರಣಕ್ಕೇ ಏನೋ, ಸಿಸ್ಟರ್ಸ್ ವೈದ್ಯ ಲೋಕಕ್ಕೆ ಸವಾಲೆಸೆಯಲು ಹೊರಟು ನಿಂತಿದ್ದಾರೆ. ಈ ಕತೆ ಆರಂಭವಾಗುವುದು ಅವರ ಮನೆಯಿಂದಲೇ…

    April 18, 2016
    ...
    Profile Of  Chairman UB Group And Kingfisher Airlines Vijay Mallya
    ಸುದ್ದಿ ಸಾರ

    ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್

    ಹಣ ದುರ್ಬಳಕೆ ಸಂಬಂಧ ವಿಚಾರಣೆಗಾಗಿ ಸ್ಥಾಪನೆಗೊಂಡಿರುವ ಮುಂಬೈ ವಿಶೇಷ ನ್ಯಾಯಾಲಯ ಸೋಮವಾರ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಇದೇ ವೇಳೆ, ಜಾರಿ ನಿರ್ದೇಶನಾಯಲ ಹೊರಿಸಿದ್ದ ಆರೋಪವನ್ನು ಕೈಬಿಡುವಂತೆ ಮಲ್ಯ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮಲ್ಯಗೆ ಸೇರಿದ್ದ ‘ಕಿಂಗ್ ಫಿಶರ್ ಏರ್‍ಲೈನ್’ ವಿಮಾನಯಾನ ಸಂಸ್ಥೆ ಐಡಿಬಿಐ ಬ್ಯಾಂಕ್‍ನಿಂದ 430 ಕೋಟಿ ಸಾಲ ಪಡೆದು, ವಿದೇಶದಲ್ಲಿ ಹೂಡಿಕೆ ಮಾಡಿದ ಗಂಭೀರ ಆರೋಪವನ್ನು ಜಾರಿ ನಿರ್ದೇಶನಾಲಯ (ಇಡಿ) ಹೊರಿಸಿತ್ತು. ಇದನ್ನು ಅಲ್ಲಗೆಳೆದ..

    April 18, 2016
    ...
    munde-selfi-drought
    ಸುದ್ದಿ ಸಾರ

    ನೀರು ಸಿಕ್ತಾ ಪಂಕಜಾ?: ಬರದಲ್ಲೂ ಸೆಲ್ಫೀ ಹುಚ್ಚಿಗೆ ಬಿದ್ದ ಬಿಜೆಪಿ ಸಚಿವೆ

    ಮಹಾರಾಷ್ಟ್ರದ ಜಲ ಸಂರಕ್ಷಣಾ ಖಾತೆ ಸಚಿವೆ ಪಂಕಜಾ ಮುಂಡೆ ಬರ ಪೀಡಿತ ಸ್ಥಳದಲ್ಲಿ ಸೆಲ್ಫೀ ತೆಗಿಯಲು ಹೋಗಿ ವಿವಾದ ಮೈ ಮೇಲೆಳೆದುಕೊಂಡಿದ್ದಾರೆ. ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದ್ದ ಮಹರಾಷ್ಟ್ರದ ಲಾಥೋರ್ ಜಿಲ್ಲೆಗೆ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜ್ ಮುಂಡೆ ಸೋಮವಾರ ಭೇಟಿ ನೀಡಿದರು. ಆದರೆ ಈ ಬರ ಪರಿಶೀಲನೆ ತಮ್ಮ ಮೊಬೈಲ್ನಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. ಸಾಲದ್ದು ಅಂತ ಟ್ವೀಟ್ ಬೇರೆ ಮಾಡಿದ್ದಾರೆ. ಈ ಸೆಲ್ಫಿ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟೀಕೆಗಳಿಗೆ ಗುರಿಯಾಗಿದೆ. ‘ಸೆಲ್ಫಿ ತೆಗೆದುಕೊಳ್ಳಲು..

    April 18, 2016
    ...
    bommanahalli-1
    ರಾಜ್ಯ

    ನಾಯಕರಿಲ್ಲದೆ ಬೀದಿಗಿಳಿದ ಮಹಿಳೆಯರು: ನ್ಯಾಯೋಚಿತ ಬೇಡಿಕೆಯನ್ನು ದಿಕ್ಕು ತಪ್ಪಿಸಿದವರು ಯಾರು?

    ನಾಯಕತ್ವವೇ ಇಲ್ಲದೆ ಬೀದಿಗಳಿದ ಗಾರ್ಮೆಂಟ್ಸ್ ಫ್ಯಾಕ್ಟರಿ ನೌಕರರು, ಬೆಂಗಳೂರು- ಹೊಸೂರು ಹೆದ್ದಾರಿ ಬಂದ್, 20 ಕಿ. ಮೀಗೂ ಹೆಚ್ಚು ದೂರ ಟ್ರಾಫಿಕ್ ಜಾಮ್, ಮನವೊಲಿಸಲು ಪೊಲೀಸರ ಹರಸಾಹಸ, ತೂರಿ ಬಂದ ಕಲ್ಲುಗಳು, ಮನಬಂದಂತೆ ಲಾಠಿ ಬೀಸಿದ ಆರಕ್ಷಕರು, ಹಲವರ ಸ್ಥಿತಿ ಗಂಭೀರ, ವಾಹನಗಳು ಜಖಂ… ಇದು ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಬೆಂಗಳೂರಿನ ಬೊಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ನಡೆದ ಘಟನಾವಳಿಗಳು. ಕೇಂದ್ರ ಸರಕಾರ ತರಲು ಹೊರಟಿದ್ದ ಪಿಎಫ್ ನೀತಿಗಳ ಬದಲಾವಣೆಗೆ ವಿರೋಧಿಸಿ ಬೆಳಗ್ಗೆ 7 ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಂದ ಸುಮಾರು 15..

    April 18, 2016
    ...
    mandya-marriage-1
    ವಿಚಾರ

    ಮಂಡ್ಯ ಮದುವೆಯಲ್ಲಿ ಉಂಡೋರೆಲ್ಲಾ ಜಾಣರಲ್ಲ; ಒಕ್ಕಲಿಗರು ದಾರಿ ತಪ್ಪಿದರಲ್ಲಾ?

    ಕೆ. ಎನ್. ಮಂಗಳೂರು   ವಿವಾದ ಸೃಷ್ಠಿಸಿದ್ದ ಮಂಡ್ಯದ ಅಂತರ್ ಧರ್ಮೀಯ ವಿವಾಹ ಬಲಪಂಥೀಯರ ವಿರೋಧದ ಮಧ್ಯೆ ಸಾಂಗವಾಗಿಯೇನೋ ನಡೆದಿದೆ. ಮದುವೆಗೆ ಬೆಂಬಲ ನೀಡಿದ್ದ ಎಡಪಂಥೀಯರು, ಕೇವಲ ಬಲಪಂಥೀಯರ ವಿರೋಧವನ್ನು ಖಂಡಿಸುವ ನಡವಳಿಕೆ ತೋರಿಸಿದರು. ಆದರೆ, ಹಲವು ಭವಿಷ್ಯದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ವಿಫಲರಾದರು. ಇದನ್ನು ಪಕ್ಕಕ್ಕಿಟ್ಟು, ಮಂಡ್ಯದಲ್ಲಿ ಶಕೀಲ್ ಮತ್ತು ಅಶಿತಾ ವಿವಾಹದಲ್ಲಿ ಎದ್ದಿರುವ ವಿವಾದ, ರಾಜಕೀಯ ಚರ್ಚೆಗೆ ಕಾರಣವಾಗಬೇಕಿತ್ತು. ಮದುವೆಯನ್ನು ವಿರೋಧಿಸಿದವರು ಭಜರಂಗದಳವೋ, ವಿಶ್ವ ಹಿಂದೂ ಪರಿಷತ್ತೋ, ಹಿಂದೂಜಾಗರಣಾ ವೇದಿಕೆಯೋ ಅಲ್ಲ. ಬದಲಾಗಿ ‘ಒಕ್ಕಲಿಗರ..

    April 18, 2016
    ...
    china-toddler-chenguan-1
    ಫೋಕಸ್

    ಚೈನಾದ ಪುಟ್ಟ ಪೋರನ ಆಕ್ರೋಶದ ಹಿಂದಿರುವ ಅಸಲಿ ಕಾರಣ ಇಷ್ಟೆ!

    ಚೈನಾದ ಪುಟ್ಟ ಬಾಲಕ ಸ್ಥಳೀಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ವಿಡಿಯೋ ಜಗತ್ತಿನಾದ್ಯಂತ ಹರಿದಾಡಿದ ಬೆನ್ನಲ್ಲೇ, ಅಂತರ್ಜಾಲದಿಂದ ದೃಶ್ಯಾವಳಿಯನ್ನು ತೆಗೆಯುವಂತೆ ಸರಕಾರ ಸೂಚನೆ ನೀಡಿದೆ. “ನನ್ನ ಅಜ್ಜಿಯನ್ನು ಮುಟ್ಟಬೇಡಿ! ದೂರ ಹೋಗಿ!” ಎಂದು ಎರಡು ವರ್ಷದ ಬಾಲಕ ‘ಚೆಂಗುವಾನ್’ ಎಂದು ಕರೆಯುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದು ಕೂಗಾಡಿದ್ದ ದೃಶ್ಯಗಳನ್ನು ಎಲ್ಲರೂ ಕಣ್ತಿಂಬಿಕೊಂಡಿದ್ದರು. ಆದರೆ, ಅಷ್ಟು ಚಿಕ್ಕ ವಯಸ್ಸಿನಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹುಟ್ಟಲು ಕಾರಣಗಳೇನು? ಎಂಬುದು ಮಾತ್ರ ಚರ್ಚೆಗೆ ಬರಲೇ ಇಲ್ಲ. ಚೈನಾದಲ್ಲಿ ನಗರದ ಶುಚಿತ್ವವನ್ನು ಕಾಪಾಡಲು..

    April 18, 2016
    ...
    opec-oil-petrol-prices
    ವಿದೇಶ

    ಕಚ್ಚಾ ತೈಲ ದರ ಇನ್ನಷ್ಟು ಇಳಿಕೆ ಸಾಧ್ಯತೆ: ನಿಜಕ್ಕೂ ಪೆಟ್ರೋಲ್ ಬೆಲೆ ಎಷ್ಟಾಗಬೇಕು ಗೊತ್ತಾ?

    ಕತಾರ್ ರಾಜಧಾನಿ ದೋಹಾದಲ್ಲಿ ಭಾನುವಾರ ನಡೆದ ಒಪೆಕ್ (ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ) ಮಾತುಕತೆ ಮುರಿದು ಬಿದ್ದಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ಗೆ ಇನ್ನಷ್ಟು ಕುಸಿಯುವ ಲಕ್ಷಣಗಳು ಗೋಚರಿಸಿವೆ. ಕಚ್ಚಾ ತೈಲದ ಉತ್ಪಾದನೆಯ ಮೇಲೆ ಕಡಿವಾಣ ಹಾಕುವ ಕುರಿತು ಕಳೆದ ಹಲವು ತಿಂಗಳುಗಳಿಂದ ಕಸರತ್ತುಗಳು ಮುಂದುವರಿದಿವೆ. ಅಣ್ವಸ್ತ್ರ ನಿಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇರಾನ್ ಕಚ್ಚಾ ತೈಲ ಉತ್ಪಾದನೆಗೆ ಇದ್ದ ಕಡಿವಾಣಗಳು ಕಳಚಿಹೋಗಿವೆ. ಇದೇ ವೇಳೆ, ಸೌದಿ..

    April 18, 2016
    ...
    kimmane-rathnakar-education-puc
    ರಾಜ್ಯ

    ಪಿಯು ಮೌಲ್ಯಮಾಪನ ಪರ್ಯಾಯದ ಸುತ್ತ ಅಪಸ್ವರ: ಮುಂದುವರಿದ ಬಿಕ್ಕಟ್ಟು

    ಕಳೆದ 16 ದಿನಗಳಿಂದ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಪಿಯುಸಿ ಮೌಲ್ಯಮಾಪನ ಸುತ್ತ ಅತಂತ್ರ ಪರಿಸ್ಥಿತಿ ಮುಂದುವರಿದಿದೆ. ಒಂದೆಡೆ ಪ್ರತಿಭಟನಾಕಾರರ ಬೇಡಿಕೆಗೆ ಮಣಿಯದ ಸರಕಾರ ಪರ್ಯಾಯ ವ್ಯವಸ್ಥೆಯ ಮಾತುಗಳನ್ನು ಜಪಿಸಲು ಶುರುಮಾಡಿ ವಾರದ ಮೇಲಾಗಿದೆ. ಆದರೆ, ಈವರೆಗೂ ಪಿಯುಸಿ ಮೌಲ್ಯ ಮಾಪನ ಪ್ರಕ್ರಿಯೆಗೆ ಚಾಲನೆ ನೀಡಲು ಸಾಧ್ಯವಾಗಲಿಲ್ಲ. ಭಾನುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, “ಅನುದಾನ ರಹಿತ ಕಾಲೇಜುಗಳ 7 ಸಾವಿರ ಉಪನ್ಯಾಸಕರಿಗೆ ಮೌಲ್ಯಮಾಪನಕ್ಕೆ ಹಾಜರಾಗಿವಂತೆ ಆದೇಶ ನೀಡಲಾಗಿದೆ. 4 ಸಾವಿರ ಪ್ರೌಢಶಾಲೆ..

    April 18, 2016
    ...
    Janasri
    ಟಿವಿ

    ಜನಶ್ರೀಗೆ ಮರುಹುಟ್ಟು: ಹಳೇ ದೋಣಿಗೆ ಅನಂತ ಚಿನಿವಾರ್ ಹುಟ್ಟು!

    ಕನ್ನಡ ಪತ್ರಿಕೋದ್ಯಮದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಶನಿವಾರ ಜನಶ್ರೀ ಸುದ್ದಿ ವಾಹಿನಿಯ ಹಿರಿಯ ಸಂಪಾದಕರಾಗಿ ಅನಂತ ಚಿನಿವಾರ್ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಜನಶ್ರೀ ವಾಹಿನಿಯನ್ನು ಕಟ್ಟಿ, ಸುದ್ದಿ ವಾಹಿನಿಗಳ ಕಾರ್ಯಕ್ರಮಗಳ ವಿಚಾರದಲ್ಲಿ ಬ್ರಾಂಡ್ ಇಮೇಜ್ ತಂದಿದ್ದವರು ಅನಂತ ಚಿನಿವಾರ್. ನಂತರದ ದಿನಗಳಲ್ಲಿ ನಡೆದ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಾಹಿನಿಯಿಂದ ತಮ್ಮ ತಂಡದ ಜತೆ 2013ರ ಮಧ್ಯಭಾಗದಲ್ಲಿ ನಿರ್ಗಮಿಸಿದ್ದರು. ಇದೀಗ ಎರಡೂವರೆ ವರ್ಷಗಳ ನಂತರ, ಮತ್ತೆ ಜನಶ್ರೀ ಪರಿವಾರಕ್ಕೆ ಅನಂತ ಚಿನಿವಾರ್ ಮರಳಿದ್ದಾರೆ. ಪ್ರಬುದ್ಧ ಸಂಪಾದಕ: ..

    April 18, 2016

Top