An unconventional News Portal.

    ...
    2e
    ಮೀಡಿಯಾ 2.0

    ಜಾಹೀರಾತು: ಏನಿದರ ಹಿಂದಿನ ಹಕೀಕತ್ತು?

    ಜಾಹೀರಾತು ಎಲ್ಲಾ ಮಾಧ್ಯಮಗಳ ಬೆನ್ನೆಲುಬು. ಈ ಜಾಹೀರಾತುಗಳ ಪ್ರಸಾರದ ಹಿಂದಿನ ಲೆಕ್ಕಾಚಾರಗಳೇನು? ಒಂದು ಜಾಹೀರಾತು ನಿಮಗೆ ಇಷ್ಟವಾಗಲು ಕಾರಣಗಳೇನು? ಇದಕ್ಕಾಗಿ ಕಂಪೆನಿಯೊಂದು ಜನರ ಮನಸ್ಥಿತಿಯನ್ನು ಹೇಗೆ ಬಳಸಿಕೊಳ್ಳುತ್ತದೆ?  ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ. ಮಾಧ್ಯಮ ಜಾಹೀರಾತನ್ನು ಎಷ್ಟು ಅವಲಂಬಿಸಿದೆಯೋ, ಅಷ್ಟೇ ಜಾಹೀರಾತಿಗಳಿಗೂ ಮಾಧ್ಯಮ ಬೇಕು; ಒಂದನ್ನು ಬಿಟ್ಟು ಒಂದಿಲ್ಲ. ಜಾಹೀರಾತುಗಳ ರಚನೆಯ ಹಿಂದೆ ಅನೇಕ ಅಂಶಗಳು ಕೆಲಸ ಮಾಡುತ್ತವೆ. ಅವುಗಳಲ್ಲಿ ಅತೀ ಪ್ರಮುಖವಾದುದು ಜನರ ಯೋಚನೆಯನ್ನು ಬಳಸಿಕೊಂಡು ಉತ್ಪನ್ನವನ್ನು ಪ್ರಚಾರ ಮಾಡುವುದು. ಪ್ರತಿ ಜಾಹೀರಾತಿಗೂ..

    April 15, 2016
    ...
    4_Aspen-the-mountain-pup-copy
    ಫೋಕಸ್

    ಇವರ ಪ್ರವಾಸ ಕಥನದಲ್ಲಿ ಅವನು, ಅವಳು ಮತ್ತು ಇವನ್ನೊಬ್ಬ!

    ಮನುಷ್ಯ ಜೀವಿಯ ಉಗಮದ ಜತೆ ಜತೆಗೇ ಆತನಿಗೆ ಅಂಟಿಕೊಂಡ ಹವ್ಯಾಸಗಳ ಪೈಕಿ ಸುತ್ತಾಟ ಕೂಡ ಒಂದು. ಇವತ್ತಿಗೆ ಅದೇ ದೊಡ್ಡ ಉದ್ಯಮವಾಗಿ, ಪ್ರವಾಸ ಎಂಬುದು ಫ್ಯಾಷನ್ ಆಗಿರುವ ಕಾಲ. ಅಷ್ಟಕ್ಕೂ ಒಬ್ಬಂಟಿಯಾಗಿ ಪ್ರವಾಸ ಹೋಗುವುದರಲ್ಲಿ ಅಷ್ಟೇನು ಮಜಾ ಇರಲ್ಲ. ಜತೆಗೆ ಯಾರಾರದರು ಇದ್ದರೆ, ಪ್ರಯಾಣದ ಕಳೆಯೇ ಬೇರೆ ಇರುತ್ತದೆ. ಆ ಜತೆಗಾರರು ಸಂಗಾತಿಯೇ ಆಗಿರಬೇಕು ಎಂದು ಬಯಸುವವರು ನಾವು. ಆದರೆ ಮನೆಯಲ್ಲಿ ಸಾಕುವ ಮುದ್ದು ನಾಯಿಯನ್ನೂ ತಮ್ಮ ಪ್ರವಾಸದ ಜತೆಗಾತಿಯಾಗಿ ಮಾಡಿಕೊಂಡರೆ ಹೇಗಿರುತ್ತೆ? ಯೋಚನೆ ಬಿಡಿ, ಈಗಾಗಲೇ ಕೆನಡಾ..

    April 15, 2016
    ...
    cid_bangalore_office_1
    ಸುದ್ದಿ ಸಾರ

    ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರತಿಷ್ಠಿತ ಕಾಲೇಜುಗಳ ಮೇಲೆ ದಾಳಿ

    ಪಿಯುಸಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಪ್ರತಿಷ್ಠಿತ ಕಾಲೇಜುಗಳ ಅಂಗಳಕ್ಕೆ ಬಂದು ನಿಂತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಹಿಂದೆ ಪ್ರತಿಷ್ಠಿತ ಕಾಲೇಜುಗಳು ಇರುವುದು ಅನುಮಾನದ ಮೇಲೆ ಸಿಐಡಿ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ. ಸಿಐಡಿ ಡಿಐಜಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ಬೆಂಗಳೂರು, ಮಂಗಳೂರು, ತುಮಕೂರು, ಬಳ್ಳಾರಿಗಳಲ್ಲಿ ಏಕಕಾಲಕ್ಕೆ ಸಿಐಡಿ ಪೊಲೀಸರ 11 ತಂಡಗಳು ದಾಳಿ ನಡೆಸಿವೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ನಾರಾಯಣ ಹಾಗೂ ಚೈತನ್ಯ ಪಿಯು ಕಾಲೇಜು, ಯಲಹಂಕದ ದೀಕ್ಷಾ ಕಾಲೇಜು, ಕೆಂಪಾಪುರದಲ್ಲಿರುವ ಪ್ರೆಸಿಡೆನ್ಸಿ ಕಾಲೇಜು, ಸಂಜಯನಗರದಲ್ಲಿರುವ..

    April 15, 2016
    ...
    siddaramaiah-ie
    ರಾಜ್ಯ

    ಹೈಕಮಾಂಡ್ ಬಾಲ್ ಎಸೆಯುವ ಮುನ್ನವೇ ಹಿಟ್ ವಿಕೆಟ್ ಆಗ್ತಾರಾ ಸಿದ್ದರಾಮಯ್ಯ?

    ಅಧಿಕಾರಕ್ಕೆ ಬಂದು ಮೂರು ವರ್ಷಗಳಲ್ಲಿ, ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಂದ ಎಚ್ಚರಿಕೆ ಸಂದೇಶವೊಂದು ಶುಕ್ರವಾರ ರವಾನೆಯಾಗಿದೆ. ದಿಲ್ಲಿಯಲ್ಲಿ ಗೃಹ ಸಚಿವ ಜಿ. ಪರಮೆಶ್ವರ್ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಹೊರಬಂದ ಬಳಿಕ ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆ, ಕಳೆದ ಎರಡು ದಿನಗಳಿಂದ ದಿಲ್ಲಿಯ ಆಂಗ್ಲ ದೈನಿಕಗಳಲ್ಲಿ ಸಿದ್ದರಾಮಯ್ಯ ಕುರಿತು ಬರುತ್ತಿರುವ ವರದಿಗಳು ಹಾಗೂ ದಿಲ್ಲಿ ಮಟ್ಟದಲ್ಲಿ ರಾಜ್ಯ ಸರಕಾರದ ಆಡಳಿತ ವೈಖರಿ ಕುರಿತು ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಹೀಗೊಂದು ಗುಮಾನಿಗೆ ಕಾರಣವಾಗಿವೆ. ಸಂದೇಶ ರವಾನೆ: ಎರಡು ದಿನಗಳಿಂದ ದಿಲ್ಲಿಯ ಪ್ರಮುಖ..

    April 15, 2016
    ...
    kimmane-education
    ರಾಜ್ಯ

    ಶುರುವಾಗದ ಪಿಯು ಮೌಲ್ಯಮಾಪನ: ಪರ್ಯಾಯ ನಿಜಕ್ಕೂ ಇದ್ಯಾ?

    ಪಿಯುಸಿ ಮೌಲ್ಯಮಾಪನ ಗೊಂದಲ ರಾಮನವಮಿಗೂ ಅಂತ್ಯಕಾಣುವ ಲಕ್ಷಣ ಶುಕ್ರವಾರ ಇಡೀ ದಿನ ಗೋಚರಿಸಲಿಲ್ಲ. ಗುರುವಾರ ಮೌಲ್ಯಮಾಪನ ಶುರುಮಾಡಿಯೇ ಬಿಡುತ್ತೀವಿ, ನಮ್ಮ ಬಳಿ ಪರ್ಯಾಯ ವ್ಯವಸ್ಥೆ ಇದೆ ಎಂದಿದ್ದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಮಾತುಗಳು ಹೇಳಿಕೆಯಾಗಿಯೇ ಉಳಿಯಿತು. ಅತ್ತ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ನಿರತ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಧರಣಿ, ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಹೇಗೇ ನೋಡಿದರೂ ಈ ವರ್ಷದ ಪಿಯುಸಿ ಫಲಿತಾಂಶ ಮೇ ಮೊದಲ ವಾರದಲ್ಲಿ ಪ್ರಕಟವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ಕಡೆ ಪ್ರಶ್ನೆ ಪತ್ರಿಕೆ..

    April 15, 2016
    ...
    06
    ದೇಶ

    ಲಾತೂರಿಗೆ ಕೇಂದ್ರದಿಂದ ನೀರು: ಚಿತ್ರಗಳಲ್ಲಿ ಬರಗಾಲದ ಊರು

    ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ದಶಕದಲ್ಲಿಯೇ ಬೀಕರ ಬರಗಾರ ತಾಂಡವವಾಡುತ್ತಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ 400 ಕಿ. ಮೀ ದೂರದಲ್ಲಿರುವ ಈ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗುತ್ತಿಲ್ಲ. ನೀರನ್ನು ಯಥೇಚ್ಚವಾಗಿ ಬೇಡುವ ಕಬ್ಬು ಮತ್ತು ಹತ್ತಿ ಇಲ್ಲಿನ ಕೃಷಿ ಬೆಳೆಗಳಾಗಿದ್ದವು. ಮೂರು ವರ್ಷಗಳಿಂದ ಮಳೆ ಸರಿಯಾಗಿಲ್ಲ ಕಾರಣ, ರೈತರ ಕೃಷಿ ಚಟುವಟಿಗೆ ಹೆಚ್ಚುಕಡಿಮೆ ನಿಂತೇ ಹೋಗಿದೆ. 1972ರಲ್ಲಿ ಇಲ್ಲಿ ಕಾಣಿಸಿಕೊಂಡ ಬರಕ್ಕಿಂತಲೂ, ಈ ವರ್ಷದ ಬೇಸಿಕೆ, ನೀರಿನ ಅಭಾವ ಪ್ರಮಾಣದಲ್ಲಿ ಹೆಚ್ಚಿದೆ ಎಂದು ವರದಿಗಳು..

    April 15, 2016
    ...
    uk-2
    ರಾಜ್ಯ

    8 ಜಿಲ್ಲೆ; 40 ಗ್ರಾಮಗಳ ಬರ ಪರಿಸ್ಥಿತಿಯನ್ನು ಬಿಚ್ಚಿಟ್ಟ ರಿಲೀಫ್ ಸೊಸೈಟಿ

    ಬರ ಪೀಡಿತ ಉತ್ತರ ಕರ್ನಾಟಕದ 8 ಜಿಲ್ಲೆಗಳ 40 ಗ್ರಾಮಗಳಿಗೆ ಭೇಟಿ ನೀಡಿರುವ ‘ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ’  ಬರ ನಿರ್ವಹಣೆಯಲ್ಲಿ ಸರಕಾರ ತೋರಿಸುತ್ತಿರುವ ನಿರ್ಲಕ್ಷ್ಯತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಶುಕ್ರವಾರ ಸಂಘಟನೆ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, “ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲ್ಬುರ್ಗಿ, ಯಾದಗಿರಿ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಬರದ ಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಲಾಯಿತು. ಈ ಭಾಗಗಳಲ್ಲಿ ಜನರ ಸ್ಥಿತಿ ಶೋಚನೀಯವಾಗಿದೆ. ಬತ್ತಿರುವ ನದಿ, ನಾಲೆ, ಕೆರೆ ಮತ್ತು ಬರಡು ಗದ್ದೆಗಳು ನರಕ ಸದೃಶ ದೃಶ್ಯಗಳನ್ನು ಸೃಷ್ಟಿಸಿವೆ. ಸಂಕಷ್ಟ ಮತ್ತು..

    April 15, 2016
    ...
    summer-rounds-mejestic
    ರಾಜ್ಯ

    ಮಲ್ಲೇಶಪ್ಪ, ಚಾಂದನಿ ಮತ್ತು ವೀರಮಣಿ: ಬರ, ಬೇಸಿಗೆ ಹಾಗೂ ಮಧ್ಯಾಹ್ನದ ಸಮಾಚಾರ

    “ಊರಲ್ಲಿ ಸುಡು ಬಿಸಿಲು ಐತ್ರಿ. ಕೂಲಿ ಹುಡ್ಕೊಂಡು ಇಲ್ಲಿಗ್ ಬಂದ್ರ, ಇಲ್ಲೂ ಅದೇ ಪಾಡಾತು ನೋಡ್ರಿ,” ಎಂದ ಕೊಪ್ಪಳ ಮೂಲದ ಮಲ್ಲೇಶಪ್ಪ ತಲೆಗೆ ಸುತ್ತಿಕೊಂಡಿದ್ದ ಟವೆಲ್ ತೆಗೆದು ಒಮ್ಮೆ ಕೊಡವಿದರು. ಮಲ್ಲೇಶ್ವರದ 8ನೇ ತಿರುವಿನ ಬಿಸಿಲಿನಲ್ಲಿ ಅವರ ಟವೆಲ್ನಿಂದ ಸಿಡಿದ ದೂಳ ಕಣಗಳು ಆಟ ಆಡತೊಡಗಿವು. ಹದಿನೈದು ದಿನಗಳ ಹಿಂದೆ, ಮಲ್ಲೇಶಪ್ಪ ಮತ್ತವರ ಕುಟುಂಬ ಬೆಂಗಳೂರಿಗೆ ಗುಳೇ ಬಂದಿದೆ. ಇವರಿಗೆ ಗುಳೇ ಬರುವುದು ಹೊಸತಲ್ಲವಾದರೂ, ಅವರ ತಮ್ಮನ ಒಂದು ತಿಂಗಳ ಮೊಲೆಹಾಲು ಕುಡಿಯುವ ಮಗುವಿಗೆ ಇದು ಮೊದಲ..

    April 15, 2016

Top